AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs USA Playing XI: ಟಾಸ್ ಗೆದ್ದ ರೋಹಿತ್; ಗೆಲ್ಲಲೇಬೇಕಾದ ಪಂದ್ಯಕ್ಕೆ 2 ತಂಡಗಳು ಹೀಗಿವೆ

ICC T20 World Cup India vs USA Playing XI: 2024ರ ಟಿ20 ವಿಶ್ವಕಪ್‌ನ 25ನೇ ಪಂದ್ಯ ಇಂದು ಭಾರತ ಮತ್ತು ಅಮೆರಿಕ ನಡುವೆ ನಡೆಯುತ್ತಿದೆ. ಈ ಪಂದ್ಯ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯವನ್ನು ಗೆಲ್ಲುವ ತಂಡವು ಎ ಗುಂಪಿನಿಂದ ಸೂಪರ್-8 ಗೆ ಅರ್ಹತೆ ಪಡೆದ ಮೊದಲ ತಂಡವಾಗಲಿದೆ.

IND vs USA Playing XI: ಟಾಸ್ ಗೆದ್ದ ರೋಹಿತ್; ಗೆಲ್ಲಲೇಬೇಕಾದ ಪಂದ್ಯಕ್ಕೆ 2 ತಂಡಗಳು ಹೀಗಿವೆ
ಭಾರತ- ಅಮೆರಿಕ
ಪೃಥ್ವಿಶಂಕರ
|

Updated on:Jun 12, 2024 | 7:44 PM

Share

2024ರ ಟಿ20 ವಿಶ್ವಕಪ್‌ನ (T20 world Cup 2024) 25ನೇ ಪಂದ್ಯ ಇಂದು ಭಾರತ ಮತ್ತು ಅಮೆರಿಕ (India vs USA) ನಡುವೆ ನಡೆಯುತ್ತಿದೆ. ಈ ಪಂದ್ಯ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯವನ್ನು ಗೆಲ್ಲುವ ತಂಡವು ಎ ಗುಂಪಿನಿಂದ ಸೂಪರ್-8 ಗೆ ಅರ್ಹತೆ ಪಡೆದ ಮೊದಲ ತಂಡವಾಗಲಿದೆ. ಹೀಗಾಗಿ ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯಲಿದೆ. ಇದರ ಜೊತೆಗೆ ಈ ಕ್ರೀಡಾಂಗಣದಲ್ಲಿ ನಡೆಯಲ್ಲಿರುವ ಟೂರ್ನಿಯ ಕೊನೆಯ ಪಂದ್ಯ ಇದಾಗಿರುವುದರಿಂದ ಪಂದ್ಯದ ರೋಚಕತೆ ಇನ್ನಷ್ಟು ಹೆಚ್ಚಿದೆ. ಉಭಯ ತಂಡಗಳು ಮೊದಲೆರಡು ಪಂದ್ಯಗಳನ್ನು ಗೆಲ್ಲುವ ಮೂಲಕ ತಲಾ 4 ಅಂಕಗಳನ್ನು ಗಳಿಸಿದ್ದು, ಇಂದು ಗೆದ್ದರೆ ಸೂಪರ್-8 ತಲುಪಲಿವೆ. ಕಾಕತಾಳೀಯವೆಂಬಂತೆ ಎರಡೂ ತಂಡಗಳು ತಮ್ಮ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದ್ದವು. ಇನ್ನು ಈ ಪಂದ್ಯದ ಟಾಸ್ ಕೂಡ ಮುಗಿದಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಎರಡೂ ತಂಡಗಳ ಆಡುವ ಹನ್ನೊಂದರ ಬಳಗವೂ ಖಚಿತವಾಗಿದೆ.

ಉಭಯ ತಂಡಗಳು

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಶ್ದೀಪ್ ಸಿಂಗ್, ಮೊಹಮ್ಮದ್ ಸಿರಾಜ್.

ಯುಎಸ್ಎ ತಂಡ: ಸ್ಟೀವನ್ ಟೇಲರ್, ಶಯಾನ್ ಜಹಾಂಗೀರ್, ಆಂಡ್ರಿಯಾಸ್ ಗೌಸ್ (ವಿಕೆಟ್ ಕೀಪರ್), ಆರನ್ ಜೋನ್ಸ್ (ನಾಯಕ), ನಿತೀಶ್ ಕುಮಾರ್, ಕೋರಿ ಆಂಡರ್ಸನ್, ಹರ್ಮೀತ್ ಸಿಂಗ್, ಶಾಡ್ಲಿ ವ್ಯಾನ್ ಸಾಲ್ವಿಕ್, ಜಸ್ದೀಪ್ ಸಿಂಗ್, ಸೌರವ್ ನೇತ್ರವಾಲ್ಕರ್, ಅಲಿ ಖಾನ್.

India vs USA T20 WC Live Score: ಟಾಸ್ ಗೆದ್ದ ಭಾರತ; ಅಮೆರಿಕ ಬ್ಯಾಟಿಂಗ್

ಹೆಡ್ ಟು ಹೆಡ್ ರೆಕಾರ್ಡ್

ಉಭಯ ತಂಡಗಳ ನಡುವಿನ ಪಂದ್ಯಗಳ ಬಗ್ಗೆ ಮಾತನಾಡುವುದಾದರೆ, ಎರಡೂ ತಂಡಗಳು ಇನ್ನೂ ಟಿ20ಯಲ್ಲಿ ಪರಸ್ಪರ ಮುಖಾಮುಖಿಯಾಗಿಲ್ಲ. ಆದರೆ, ಅಮೆರಿಕದ ಪಿಚ್‌ಗಳಲ್ಲಿ ಭಾರತ ತಂಡ ಬ್ಯಾಟಿಂಗ್ ವಿಭಾಗದಲ್ಲಿ ರನ್ ಕಲೆಹಾಕಲು ಕಷ್ಟಪಡುತ್ತಿದೆ. ಅದೇ ಸಮಯದಲ್ಲಿ, ಅಮೆರಿಕ ತಂಡ ದೇಶೀಯ ಪರಿಸರದಿಂದ ಪ್ರಯೋಜನ ಪಡೆಯುತ್ತಿದೆ. ಪಿಚ್ ಬಗ್ಗೆ ಮಾತನಾಡುತ್ತಾ, ಇಲ್ಲಿಯವರೆಗೆ ವೇಗದ ಬೌಲರ್‌ಗಳು ಮೇಲುಗೈ ಸಾಧಿಸಿರುವುದನ್ನು ಕಾಣಬಹುದಾಗಿದೆ. ಕಳೆದ ಪಂದ್ಯದಲ್ಲಿ ಭಾರತದ ಬೌಲರ್‌ಗಳು ಪಾಕಿಸ್ತಾನವನ್ನು 113 ರನ್‌ಗಳಿಗೆ ಆಲೌಟ್ ಮಾಡಿದ್ದರು. ಇನ್ನು ಈ ಪಂದ್ಯದಲ್ಲಿ ಯಾವ ತಂಡದ ಮೇಲುಗೈ ಎಂಬುದನ್ನು ಕಾದು ನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:35 pm, Wed, 12 June 24