T20 World Cup 2024: ನ್ಯೂಯಾರ್ಕ್ ಪಿಚ್‌ನಲ್ಲಿ ಇದುವರೆಗೆ ಮುರಿದ ಬ್ಯಾಟ್ಗಳೆಷ್ಟು? ಲೆಕ್ಕ ಕೊಟ್ಟ ಐಸಿಸಿ
T20 World Cup 2024: ಮಂಗಳವಾರ ಮತ್ತು ಬುಧವಾರ ನಡೆದ ಎರಡು ಪ್ರತ್ಯೇಕ ಪಂದ್ಯಗಳಲ್ಲಿ ಬ್ಯಾಟರ್‌ಗಳ ಬ್ಯಾಟ್ ಮುರಿದಿರುವುದು ಕಂಡುಬಂದಿದೆ. ಬಾಂಗ್ಲಾದೇಶದ ಬ್ಯಾಟ್ಸ್‌ಮನ್ ಜೈಕರ್ ಅಲಿ ಅವರ ಬ್ಯಾಟ್ ಹಿಡಿಕೆ ಮುರಿದಿದ್ದರೆ, ಮರುದಿನ ಪಾಕಿಸ್ತಾನದ ಕ್ರಿಕೆಟಿಗ ಮೊಹಮ್ಮದ್ ರಿಜ್ವಾನ್ ಅವರ ಬ್ಯಾಟ್ಗ ಕೆಳಭಾಗ ಮುರಿದಿತ್ತು.

ಟಿ20 ಪಂದ್ಯಾವಳಿಯೆಂದರೆ ಅಲ್ಲಿ ಹೆಚ್ಚಾಗಿ ಬ್ಯಾಟರ್‌ಗಳ ಬೌಂಡರಿ ಸಿಕ್ಸರ್ಗಳ ಸುರಿಮಳೆ ಕಂಡುಬರುತ್ತದೆ. ಆದರೆ ಸದ್ಯಕ್ಕೆ ನಡೆಯುತ್ತಿರುವ ಟಿ20 ವಿಶ್ವಕಪ್ನಲ್ಲಿ (T20 World Cup 2024) ಅಂತಹ ಘಟನೆಗಳು ನಡೆದಿದ್ದು ತುಂಬಾ ಕಡಿಮೆ. ಅದಕ್ಕೆ ಪ್ರಮುಖ ಕಾರಣ, ಪಂದ್ಯಾವಳಿಯನ್ನು ಆಡಲಾಗುತ್ತಿರುವ ಕ್ರೀಡಾಂಗಣ ಪಿಚ್ಗಳು. ಅದರಲ್ಲೂ ನ್ಯೂಯಾರ್ಕ್ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನ (Nassau County International Cricket Stadium) ಪಿಚ್‌ನಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ರನ್ ಗಳಿಸುವುದು ಕಷ್ಟಕರವಾಗಿದೆ. ಹೀಗಾಗಿ ರನ್‌ಗಳಿಸುವ ಬರದಲ್ಲಿ ಬ್ಯಾಟರ್ಸ್ಗಳು ಸುಲಭವಾಗಿ ವಿಕೆಟ್ ಕೈಚೆಲ್ಲುತ್ತಿದ್ದಾರೆ. ಆದರೆ, ಈ ನಡುವೆ ಐಸಿಸಿ (ICC) ವಿಡಿಯೋವೊಂದನ್ನು ಶೇರ್ ಮಾಡಿದ್ದು ಈ ವಿಡಿಯೋದಲ್ಲಿ, ರನ್ ಗಳಿಸಲು ಸಾಕಷ್ಟು ಕಷ್ಟವಾಗಿರುವ ನ್ಯೂಯಾರ್ಕ್ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಬ್ಯಾಟರ್ಸ್ಗಳು ಬ್ಯಾಟ್‌ಗಳು ಮುರಿದುಹೋಗಿರುವ ಬಗ್ಗೆ ಮಾಹಿತಿ ನೀಡಿದೆ.
ಐಸಿಸಿ ಹಂಚಿಕೊಂಡಿರುವ ವೀಡಿಯೊದಲ್ಲಿ ಎರಡು ದಿನದಲ್ಲಿ ಇಬ್ಬರು ಬ್ಯಾಟರ್‌ಗಳ ಬ್ಯಾಟ್‌ಗಳು ಮುರಿದುಹೋಗಿವೆ. ಒಂದು ವಿಷಯವೆಂದರೆ, ಮೇಲೆ ಹೇಳಿದಂತೆ ನ್ಯೂಯಾರ್ಕ್‌ನಲ್ಲಿ ಸರಾಗವಾಗಿ ರನ್‌ಗಳು ಹೊರಬರುತ್ತಿಲ್ಲ, ಈ ನಡುವೆ ಈ ಪಿಚ್‌ನಲ್ಲಿ ಬ್ಯಾಟರ್‌ಗಳ ಬ್ಯಾಟ್‌ಗಳು ಮುರಿದು ಹೋಗುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ. ಆಜ್ ಭೀ ಕಲ್ ಭಿ ಕಲ್ ಭಿ ಎಂದು ಬರೆಯುವ ಮೂಲಕ ಐಸಿಸಿ ಹಿಂದಿ ಅಧಿಕೃತ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ.
ವಿಡಿಯೋ ಹಂಚಿಕೊಂಡ ಐಸಿಸಿ
ಮಂಗಳವಾರ ಮತ್ತು ಬುಧವಾರ ನಡೆದ ಎರಡು ಪ್ರತ್ಯೇಕ ಪಂದ್ಯಗಳಲ್ಲಿ ಬ್ಯಾಟರ್‌ಗಳ ಬ್ಯಾಟ್ ಮುರಿದಿರುವುದು ಕಂಡುಬಂದಿದೆ. ಬಾಂಗ್ಲಾದೇಶದ ಬ್ಯಾಟ್ಸ್‌ಮನ್ ಜೈಕರ್ ಅಲಿ ಅವರ ಬ್ಯಾಟ್ ಹಿಡಿಕೆ ಮುರಿದಿದ್ದರೆ, ಮರುದಿನ ಪಾಕಿಸ್ತಾನದ ಕ್ರಿಕೆಟಿಗ ಮೊಹಮ್ಮದ್ ರಿಜ್ವಾನ್ ಅವರ ಬ್ಯಾಟ್ಗ ಕೆಳಭಾಗ ಮುರಿದಿತ್ತು.
View this post on Instagram
ಪಿಚ್ ಬಗ್ಗೆ ಸಾಕಷ್ಟು ಚರ್ಚೆಗಳು
ವಿಶ್ವಕಪ್ ಆರಂಭದಿಂದಲೂ ನ್ಯೂಯಾರ್ಕ್ ಪಿಚ್ ಬಗ್ಗೆ ಪ್ರಶ್ನೆಗಳು ಏಳುತ್ತಿವೆ. ಇಲ್ಲಿನ ಪಿಚ್ ಅಸಮ ಬೌನ್ಸ್ ಹೊಂದಿದೆ. ಹೀಗಾಗಿ ಬ್ಯಾಟರ್‌ಗಳಿಗೆ ಸರಿಯಾಗಿ ಆಡಲು ಸಾಧ್ಯವಾಗುತ್ತಿಲ್ಲ. ಕೆಲವೊಮ್ಮೆ ಚೆಂಡು ನಿಂತು ಬಂದರೆ, ಕೆಲವೊಮ್ಮೆ ಚೆಂಡು ವೇಗವಾಗಿ ಬರುತ್ತದೆ. ಇದರಿಂದಾಗಿ ಇಲ್ಲಿನ ಪಿಚ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಆಡುವುದು ಮತ್ತು ರನ್ ಗಳಿಸುವುದು ಕಷ್ಟಕರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜೋರಾಗಿ ಹೊಡೆಯುವ ಯತ್ನದಲ್ಲಿ ಬ್ಯಾಟರ್‌ಗಳ ಬ್ಯಾಟ್ಗಳೂ ಮುರಿಯುತ್ತಿವೆ.
ಇನ್ನು ಸ್ಟೇಡಿಯಂ ಬಗ್ಗೆ ಹೇಳುವುದಾದರೆ ಐಸಿಸಿ ಸುಮಾರು ಇನ್ನೂರೈವತ್ತು ಕೋಟಿ ರೂ. ವೆಚ್ಚದಲ್ಲಿ ನ್ಯೂಯಾರ್ಕ್ನಲ್ಲಿ ಈ ಸ್ಟೇಡಿಯಂ ನಿರ್ಮಿಸಿದೆ. ಆದಾಗ್ಯೂ, ಕ್ರೀಡಾಂಗಣವು ತಾತ್ಕಾಲಿಕವಾಗಿದ್ದು, ಪಂದ್ಯಾವಳಿಯ ನಂತರ ಈ ಕ್ರೀಡಾಂಗಣವನ್ನು ತೆರವುಗೊಳಿಸಲಾಗುತ್ತದೆ. ಈ ಕ್ರೀಡಾಂಗಣದಲ್ಲಿ ನಾಲ್ಕು ಡ್ರಾಪ್-ಇನ್ ಪಿಚ್‌ಗಳನ್ನು ಬಳಸಲಾಗುತ್ತಿದೆ. ಆಸ್ಟ್ರೇಲಿಯಾದ ಅಡಿಲೇಡ್‌ನಿಂದ ಈ ಪಿಚ್‌ಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಇಲ್ಲಿ ಯಾವುದೇ ತಂಡ 140ಕ್ಕಿಂತ ಹೆಚ್ಚು ರನ್ ದಾಟಲು ಸಾಧ್ಯವಾಗಲಿಲ್ಲ. ಮೊದಲಿನಿಂದಲೂ ಈ ಪಿಚ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಐಸಿಸಿ ಮಾತ್ರ ಈ ಬಗ್ಗೆ ಮೌನ ವಹಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:03 pm, Wed, 12 June 24
