AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs USA T20 WC Highlights: ಸೂರ್ಯ- ದುಬೆ ಜೊತೆಯಾಟ; ಸೂಪರ್ 8 ಸುತ್ತಿಗೆ ಭಾರತ

India vs USA, T20 world Cup 2024 Highlights Updates: ಆರಂಭಿಕ ಆಘಾತದ ಹೊರತಾಗಿಯೂ ಸೂರ್ಯಕುಮಾರ್ ಯಾದವ್ ಮತ್ತು ಶಿವಂ ದುಬೆ ಅವರ ಅದ್ಭುತ ಜೊತೆಯಾಟದ ನೆರವಿನಿಂದಾಗಿ ಟೀಂ ಇಂಡಿಯಾ ಟಿ20 ವಿಶ್ವಕಪ್‌ನ ‘ಎ’ ಗುಂಪಿನ ಪಂದ್ಯದಲ್ಲಿ ಅಮೆರಿಕವನ್ನು ಏಳು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಸೂಪರ್ ಎಂಟು ಹಂತಕ್ಕೆ ಅರ್ಹತೆ ಪಡೆದಿದೆ.

India vs USA T20 WC Highlights: ಸೂರ್ಯ- ದುಬೆ ಜೊತೆಯಾಟ; ಸೂಪರ್ 8 ಸುತ್ತಿಗೆ ಭಾರತ
ಸೂರ್ಯ- ದುಬೆ
ಪೃಥ್ವಿಶಂಕರ
|

Updated on:Jun 12, 2024 | 11:41 PM

Share

ಆರಂಭಿಕ ಆಘಾತದ ಹೊರತಾಗಿಯೂ ಸೂರ್ಯಕುಮಾರ್ ಯಾದವ್ ಮತ್ತು ಶಿವಂ ದುಬೆ ಅವರ ಅದ್ಭುತ ಜೊತೆಯಾಟದ ನೆರವಿನಿಂದಾಗಿ ಟೀಂ ಇಂಡಿಯಾ ಟಿ20 ವಿಶ್ವಕಪ್‌ನ ‘ಎ’ ಗುಂಪಿನ ಪಂದ್ಯದಲ್ಲಿ ಅಮೆರಿಕವನ್ನು ಏಳು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಸೂಪರ್ ಎಂಟು ಹಂತಕ್ಕೆ ಅರ್ಹತೆ ಪಡೆದಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಮೆರಿಕ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗೆ 110 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಭಾರತ 18.2 ಓವರ್​ಗಳಲ್ಲಿ ಮೂರು ವಿಕೆಟ್​ಗೆ 111 ರನ್ ಗಳಿಸಿ ಜಯಭೇರಿ ಬಾರಿಸಿತು.

LIVE NEWS & UPDATES

The liveblog has ended.
  • 12 Jun 2024 11:39 PM (IST)

    India vs USA Live Score: ಭಾರತಕ್ಕೆ 3ನೇ ಗೆಲುವು

    ಭಾರತ 7 ವಿಕೆಟ್‌ಗಳಿಂದ ಅಮೆರಿಕವನ್ನು ಸೋಲಿಸಿದೆ. ಸೂರ್ಯಕುಮಾರ್ ಯಾದವ್ ಮತ್ತು ಶಿವಂ ದುಬೆ ಅವರ ಅಜೇಯ ಜೊತೆಯಾಟದಿಂದ ಭಾರತ 111 ರನ್​ಗಳ ಕಠಿಣ ಗುರಿಯನ್ನು ಬೆನ್ನಟ್ಟಿತು.

  • 12 Jun 2024 11:38 PM (IST)

    India vs USA Live Score: ಸೂರ್ಯ 50 ರನ್

    ಸೂರ್ಯಕುಮಾರ್ ಯಾದವ್ 50 ರನ್ ಪೂರೈಸಿದ್ದಾರೆ. ಭಾರತಕ್ಕೆ ಗೆಲುವಿಗೆ ಇನ್ನು 3 ರನ್‌ಗಳ ಅಗತ್ಯವಿದೆ.

  • 12 Jun 2024 11:20 PM (IST)

    India vs USA Live Score: ಸೂರ್ಯ-ಶಿವಂ ಜೊತೆಯಾಟ

    ಸೂರ್ಯಕುಮಾರ್ ಯಾದವ್ ಮತ್ತು ಶಿವಂ ದುಬೆ ಭಾರತದ ಇನ್ನಿಂಗ್ಸ್ ನಿಭಾಯಿಸುತ್ತಿದ್ದಾರೆ. ಭಾರತ 15 ಓವರ್‌ಗಳ ಅಂತ್ಯಕ್ಕೆ ಮೂರು ವಿಕೆಟ್‌ಗೆ 76 ರನ್ ಗಳಿಸಿದೆ. ಈಗ ಗೆಲ್ಲಲು 30 ಎಸೆತಗಳಲ್ಲಿ 35 ರನ್ ಗಳಿಸಬೇಕಾಗಿದೆ.

  • 12 Jun 2024 11:13 PM (IST)

    India vs USA Live Score: 13 ಓವರ್‌ ಪೂರ್ಣ

    13 ಓವರ್‌ಗಳ ಆಟದಲ್ಲಿ ಟೀಂ ಇಂಡಿಯಾ 3 ವಿಕೆಟ್ ನಷ್ಟದಲ್ಲಿ 60 ರನ್ ಗಳಿಸಿದೆ. ಶಿವಂ ದುಬೆ 13 ರನ್ ಹಾಗೂ ಸೂರ್ಯಕುಮಾರ್ ಯಾದವ್ 23 ರನ್ ಗಳಿಸಿ ಆಡುತ್ತಿದ್ದಾರೆ. ಟೀಂ ಇಂಡಿಯಾ ಗೆಲುವಿಗೆ 42 ಎಸೆತಗಳಲ್ಲಿ 51 ರನ್ ಅಗತ್ಯವಿದೆ.

  • 12 Jun 2024 11:01 PM (IST)

    India vs USA Live Score: 50 ರನ್ ಪೂರ್ಣ

    ಭಾರತ ತಂಡ 11 ಓವರ್‌ಗಳ ಅಂತ್ಯಕ್ಕೆ 50 ರನ್ ಗಳಿಸಿದೆ. ಭಾರತ ತಂಡಕ್ಕೆ ಅಮೆರಿಕ ಆರಂಭಿಕ ಆಘಾತ ನೀಡಿದ ಕಾರಣ ಭಾರತದ ಬ್ಯಾಟಿಂಗ್ ನಿಧಾನವಾಗಿದೆ. ಸದ್ಯ ಸೂರ್ಯಕುಮಾರ್ ಯಾದವ್ 21 ರನ್ ಹಾಗೂ ಶಿವಂ ದುಬೆ ಒಂಬತ್ತು ರನ್‌ ಬಾರಿಸಿ ಕ್ರೀಸ್‌ನಲ್ಲಿ ಆಡುತ್ತಿದ್ದಾರೆ. 

  • 12 Jun 2024 10:48 PM (IST)

    India vs USA Live Score: ಪಂತ್ ಔಟ್

    ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಅವರನ್ನು ಔಟ್ ಮಾಡುವ ಮೂಲಕ ಅಲಿ ಖಾನ್ ಭಾರತಕ್ಕೆ ಮೂರನೇ ಹೊಡೆತ ನೀಡಿದರು.  ಪಂತ್ 20 ಎಸೆತಗಳಲ್ಲಿ 18 ರನ್ ಗಳಿಸಿ ಔಟಾದರು. 

  • 12 Jun 2024 10:37 PM (IST)

    India vs USA Live Score: ಪಂತ್- ಸೂರ್ಯ ಆಸರೆ

    ಸೌರಭ್ ನೇತ್ರವಾಲ್ಕರ್ ದಾಳಿಗೆ ತತ್ತರಿಸಿದ್ದ ಭಾರತಕ್ಕೆ ರಿಷಬ್ ಪಂತ್ ಮತ್ತು ಸೂರ್ಯು ಆಸರೆಯಾಗಿದ್ದಾರೆ.  ಪವರ್‌ಪ್ಲೇ ಅಂತ್ಯದ ನಂತರ ಭಾರತ ಎರಡು ವಿಕೆಟ್‌ಗಳಿಗೆ 33 ರನ್ ಗಳಿಸಿದೆ. 

  • 12 Jun 2024 10:10 PM (IST)

    India vs USA Live Score: ಆರಂಭಿಕರಿಬ್ಬರು ಔಟ್

    ಟೀಂ ಇಂಡಿಯಾದ ಆರಂಭಿಕರಿಬ್ಬರು ಪೆವಿಲಿಯನ್ ಸೇರಿಕೊಂಡಿದ್ದಾರೆ. ಕೊಹ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ರೋಹಿತ್ ಶರ್ಮಾ 3 ರನ್ ಬಾರಿಸಿ ಔಟಾದರು.

  • 12 Jun 2024 09:57 PM (IST)

    India vs USA Live Score: ಶೂನ್ಯಕ್ಕೆ ಕೊಹ್ಲಿ ಔಟ್

    ಟಿ20 ವಿಶ್ವಕಪ್​ನಲ್ಲಿ ಕೊಹ್ಲಿ ಮತ್ತೊಮ್ಮೆ ವಿಫಲರಾಗಿದ್ದಾರೆ. ಅಮೆರಿಕ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಮೊದಲ ಎಸೆತದಲ್ಲೇ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

  • 12 Jun 2024 09:34 PM (IST)

    India vs USA Live Score: ಅರ್ಷದೀಪ್​ಗೆ 4ನೇ ವಿಕೆಟ್

    ಹರ್ಮೀತ್ ಸಿಂಗ್ ಅವರನ್ನು ಔಟ್ ಮಾಡುವ ಮೂಲಕ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅಮೆರಿಕದ ಏಳನೇ ವಿಕೆಟ್  ಉರುಳಿಸಿದರು. ಇದು ಈ ಪಂದ್ಯದಲ್ಲಿ ಅರ್ಷದೀಪ್ ಅವರ ನಾಲ್ಕನೇ ವಿಕೆಟ್ ಆಗಿದೆ. ಹ

  • 12 Jun 2024 09:33 PM (IST)

    India vs USA Live Score: ಕೋರಿ ಆಂಡರ್ಸನ್ ಔಟ್

    ಕೋರಿ ಆಂಡರ್ಸನ್ ಅವರನ್ನು ಔಟ್ ಮಾಡುವ ಮೂಲಕ ಹಾರ್ದಿಕ್ ಪಾಂಡ್ಯ ಅಮೆರಿಕಕ್ಕೆ ಆರನೇ ಹೊಡೆತ ನೀಡಿದರು. ಆಂಡರ್ಸನ್ 12 ಎಸೆತಗಳಲ್ಲಿ 14 ರನ್ ಗಳಿಸಿ ಆರನೇ ಬ್ಯಾಟ್ಸ್‌ಮನ್ ಆಗಿ ಔಟಾದರು. 

  • 12 Jun 2024 09:21 PM (IST)

    India vs USA Live Score: ನಿತೀಶ್ ಔಟ್

    ವೇಗಿ ಅರ್ಷದೀಪ್ ಸಿಂಗ್ ಮತ್ತೊಮ್ಮೆ ಅದ್ಭುತವಾಗಿ ಬೌಲಿಂಗ್ ಮಾಡಿ ಫಾರ್ಮ್ ನಲ್ಲಿದ್ದ ನಿತೀಶ್ ಕುಮಾರ್ ಅವರನ್ನು ಪೆವಿಲಿಯನ್ ಗೆ ಕಳುಹಿಸುವ ಮೂಲಕ ಅಮೆರಿಕಕ್ಕೆ ಐದನೇ ಹೊಡೆತ ನೀಡಿದರು. ಈ ಮೂಲಕ ಅಮೆರಿಕ 81 ರನ್‌ಗಳಿಗೆ ಐದನೇ ವಿಕೆಟ್‌ ಕಳೆದುಕೊಂಡಿದೆ. 

  • 12 Jun 2024 09:07 PM (IST)

    India vs USA Live Score: ಟೇಲರ್ ಪೆವಿಲಿಯನ್‌ಗೆ

    ಸ್ಪಿನ್ನರ್ ಅಕ್ಷರ್ ಪಟೇಲ್ ಸ್ಟೀವನ್ ಟೇಲರ್ ಅವರನ್ನು ಬೌಲ್ಡ್ ಮಾಡುವ ಮೂಲಕ ಅಮೆರಿಕಕ್ಕೆ ನಾಲ್ಕನೇ ಹೊಡೆತ ನೀಡಿದರು. ಟೇಲರ್ 30 ಎಸೆತಗಳಲ್ಲಿ 24 ರನ್ ಗಳಿಸಿ ಪೆವಿಲಿಯನ್​ಗೆ ಮರಳಿದರು.

  • 12 Jun 2024 08:35 PM (IST)

    India vs USA Live Score: ನಿಧಾನಗತಿಯ ಬ್ಯಾಟಿಂಗ್

    ಆರಂಭಿಕ ಆಘಾತದ ನಂತರ, ಅಮೆರಿಕದ ಇನ್ನಿಂಗ್ಸ್ ನಿಧಾನಗೊಂಡಿದೆ. ಪವರ್‌ಪ್ಲೇ ಅಂತ್ಯದ ವೇಳೆಗೆ, ತಂಡವು ಆರು ಓವರ್‌ಗಳಲ್ಲಿ ಎರಡು ವಿಕೆಟ್‌ಗೆ 18 ರನ್ ಗಳಿಸಿದೆ. ಆರನ್ ಜೋನ್ಸ್ ಮತ್ತು ಸ್ಟೀವನ್ ಟೇಲರ್ ಪ್ರಸ್ತುತ ಕ್ರೀಸ್‌ನಲ್ಲಿದ್ದಾರೆ.

  • 12 Jun 2024 08:07 PM (IST)

    India vs USA Live Score: 2ನೇ ವಿಕೆಟ್

    ಅಮೆರಿಕ ಮೊದಲ ಓವರ್​ನ ಕೊನೆಯ ಎಸೆತದಲ್ಲಿ ಮತ್ತೊಂದು ವಿಕೆಟ್ ಕಳೆದುಕೊಂಡಿದೆ.ಗೌಸ್ 2 ರನ್ ಬಾರಿಸಿ ಔಟಾದರು. ಅರ್ಷದೀಪ್​ಗೆ 2 ವಿಕೆಟ್ .

    ಅಮೆರಿಕ 3/2

  • 12 Jun 2024 08:02 PM (IST)

    India vs USA Live Score: ಮೊದಲ ಎಸೆತದಲ್ಲೇ ವಿಕೆಟ್

    ಅಮೆರಿಕ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡಿದೆ. ಆರಂಭಿಕ ಶಯನ್ ಜಹಾಂಗೀರ್ ಶೂನ್ಯಕ್ಕೆ ಅರ್ಷದೀಪ್​ಗೆ ಬಲಿಯಾದರು.

  • 12 Jun 2024 07:45 PM (IST)

    India vs USA Live Score: ಯುಎಸ್ಎ ತಂಡ

    ಸ್ಟೀವನ್ ಟೇಲರ್, ಶಯಾನ್ ಜಹಾಂಗೀರ್, ಆಂಡ್ರಿಯಾಸ್ ಗೌಸ್ (ವಿಕೆಟ್ ಕೀಪರ್), ಆರನ್ ಜೋನ್ಸ್ (ನಾಯಕ), ನಿತೀಶ್ ಕುಮಾರ್, ಕೋರಿ ಆಂಡರ್ಸನ್, ಹರ್ಮೀತ್ ಸಿಂಗ್, ಶಾಡ್ಲಿ ವ್ಯಾನ್ ಸಾಲ್ವಿಕ್, ಜಸ್ದೀಪ್ ಸಿಂಗ್, ಸೌರವ್ ನೇತ್ರವಾಲ್ಕರ್, ಅಲಿ ಖಾನ್.

  • 12 Jun 2024 07:44 PM (IST)

    India vs USA Live Score: ಭಾರತ ತಂಡ

    ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಶ್ದೀಪ್ ಸಿಂಗ್, ಮೊಹಮ್ಮದ್ ಸಿರಾಜ್.

  • 12 Jun 2024 07:37 PM (IST)

    India vs USA Live Score: ಟಾಸ್ ಗೆದ್ದ ಭಾರತ

    ಈ ಪಂದ್ಯದ ಟಾಸ್ ಕೂಡ ಮುಗಿದಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

  • 12 Jun 2024 07:06 PM (IST)

    India vs USA Live Score: ನ್ಯೂಯಾರ್ಕ್‌ ಹವಾಮಾನ

    ಭಾರತ-ಪಾಕ್ ಪಂದ್ಯಕ್ಕೂ ಮುನ್ನ ಮಳೆ ಸುರಿದಿದ್ದರಿಂದ ನಿಗದಿತ ಸಮಯಕ್ಕೆ ಪಂದ್ಯ ಆರಂಭವಾಗಲಿಲ್ಲ. ಇಂದು ನಾಸೊ ಕೌಂಟಿಯಲ್ಲಿ ಬಿಸಿಲು ಇದೆ ಆದರೆ ಹವಾಮಾನ ಇಲಾಖೆಯು ಸಂಜೆ 7.30 ರ ನಂತರ (ಭಾರತದಲ್ಲಿ) ಲಘು ಮಳೆಯಾಗಬಹುದು ಎಂದು ಅಂದಾಜಿಸಿದೆ.

  • 12 Jun 2024 07:05 PM (IST)

    ನ್ಯೂಯಾರ್ಕ್‌ನಲ್ಲಿ ಕೊನೆಯ ಪಂದ್ಯ

    ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಕಪ್‌ನ ಕೊನೆಯ ಪಂದ್ಯ ಇದಾಗಿದೆ ಆದರೆ ಅಮೆರಿಕ ತಂಡ ಇದೇ ಮೊದಲ ಬಾರಿಗೆ ಈ ಮೈದಾನದಲ್ಲಿ ಆಡಲು ಬಂದಿದೆ.

Published On - Jun 12,2024 7:05 PM