T20 World Cup: ವಿದಾಯಕ್ಕೂ ಮುನ್ನ ಭಾವನಾತ್ಮಕ ಸಂದೇಶ ಬರೆದ ಟೀಂ ಇಂಡಿಯಾ ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್
T20 World Cup: ತಂಡದ ಮುಖ್ಯ ಕೋಚ್ ಮತ್ತು ಮಾರ್ಗದರ್ಶಕ ರವಿಶಾಸ್ತ್ರಿ ಅವರಿಗೆ ನಾನು ಋಣಿಯಾಗಿದ್ದೇನೆ. ನನ್ನ ಮೇಲೆ ನಂಬಿಕೆ ತೋರಿಸಿದ ನಾಯಕ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಇಬ್ಬರಿಗೂ ನಾನು ತುಂಬಾ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ.
ಭಾರತ ತಂಡ ಪ್ರಸ್ತುತ ಟಿ 20 ವಿಶ್ವಕಪ್‌ಗಾಗಿ ಯುಎಇಯಲ್ಲಿದೆ. ಬಿಸಿಸಿಐ ಆಯೋಜಿಸಿರುವ ಈ ವಿಶ್ವಕಪ್ ಅನ್ನು ಓಮನ್ ಮತ್ತು ಯುಎಇಯಲ್ಲಿ ಆಯೋಜಿಸಲಾಗಿದೆ. ಮತ್ತೊಮ್ಮೆ ಟೀಂ ಇಂಡಿಯಾ ಚಾಂಪಿಯನ್ ಆಗಬೇಕು ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. ಈ ಪಂದ್ಯಾವಳಿಯ ನಂತರ, ಟೀಮ್ ಇಂಡಿಯಾದ ಕೋಚಿಂಗ್ ಸಿಬ್ಬಂದಿಯಲ್ಲಿ ಸಾಕಷ್ಟು ಬದಲಾವಣೆಗಳಾಗಲಿವೆ. ಬಿಸಿಸಿಐ ಹೊಸ ಮುಖ್ಯ ಕೋಚ್‌ಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಮುಖ್ಯ ಕೋಚ್ ಹೊರತುಪಡಿಸಿ, ಉಳಿದ ಕೋಚಿಂಗ್ ಸಿಬ್ಬಂದಿಯಲ್ಲಿ ಬದಲಾವಣೆಯಾಗಲಿದೆ.
ಇದು ಟಿ 20 ವಿಶ್ವಕಪ್ ಫೀಲ್ಡಿಂಗ್ ಕೋಚ್ ಶ್ರೀಧರ್ಗೆ ಟೀಮ್ ಇಂಡಿಯಾ ಜೊತೆಗಿನ ಕೊನೆಯ ಪಂದ್ಯಾವಳಿಯಾಗಬಹುದು. ವಿಶ್ವಕಪ್ ಆರಂಭಕ್ಕೂ ಮುನ್ನ, ಶ್ರೀಧರ್ ಅವರು ಭಾವನಾತ್ಮಕ ಪೋಸ್ಟ್ ಬರೆದಿದ್ದಾರೆ, ಅದರಲ್ಲಿ ಅವರು ಟೀಮ್ ಇಂಡಿಯಾದೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಸಮಯದಲ್ಲಿ ಅವರು ತಂಡದ ಕೋಚ್ ಮತ್ತು ನಾಯಕನಿಗೆ ಧನ್ಯವಾದ ಅರ್ಪಿಸಿದರು.
ಶ್ರೀಧರ್ ಭಾವನಾತ್ಮಕ ಪೋಸ್ಟ್ ಶ್ರೀಧರ್ 2014 ರಲ್ಲಿ ಕೋಚ್ ಆಗಿ ಟೀಂ ಇಂಡಿಯಾದೊಂದಿಗಿದ್ದರು. ಅಂದಿನಿಂದ ಅವರು ತಂಡದ ಪ್ರಮುಖ ಭಾಗವಾಗಿದ್ದಾರೆ. ಶ್ರೀಧರ್ ಅವರು ತಮ್ಮ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಅವರು ಕ್ರಿಕೆಟ್ ಕಿಟ್ ಅನ್ನು ಮೈದಾನದಲ್ಲಿ ತೆಗೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಇದರೊಂದಿಗೆ, ಅವರು ಭಾವನಾತ್ಮಕ ಸಂದೇಶವನ್ನು ಬರೆದಿದ್ದಾರೆ. ‘2014 ರಿಂದ 2021 ರವರೆಗೆ ಟೀಮ್ ಇಂಡಿಯಾಕ್ಕೆ ಸೇವೆ ಸಲ್ಲಿಸಲು ನನಗೆ ಅವಕಾಶ ನೀಡಿದ್ದಕ್ಕಾಗಿ ನಾನು ಬಿಸಿಸಿಐಗೆ ಧನ್ಯವಾದ ಹೇಳುತ್ತೇನೆ. ನಾನು ನನ್ನ ಕೆಲಸವನ್ನು ಪೂರ್ಣ ಉತ್ಸಾಹ, ಬದ್ಧತೆ ಮತ್ತು ನನ್ನ ಅತ್ಯುತ್ತಮ ಸಾಮರ್ಥ್ಯದಿಂದ ಮಾಡಿದ್ದೇನೆ ಎಂದು ನನಗೆ ಖಾತ್ರಿಯಿದೆ. ಖಂಡಿತವಾಗಿಯೂ ನಾನು ಕೆಲವು ತಪ್ಪುಗಳನ್ನು ಮಾಡಿದ್ದೇನೆ, ಆದರೆ ಈ ತಪ್ಪುಗಳ ಹೊರತಾಗಿಯೂ, ತಂಡವು ಇಂದು ಉತ್ತಮ ಸ್ಥಾನವನ್ನು ತಲುಪಿದೆ.
ತಂಡದ ಮುಖ್ಯ ಕೋಚ್ ಮತ್ತು ಮಾರ್ಗದರ್ಶಕ ರವಿಶಾಸ್ತ್ರಿ ಅವರಿಗೆ ನಾನು ಋಣಿಯಾಗಿದ್ದೇನೆ. ನನ್ನ ಮೇಲೆ ನಂಬಿಕೆ ತೋರಿಸಿದ ನಾಯಕ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಇಬ್ಬರಿಗೂ ನಾನು ತುಂಬಾ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಸ್ಟ್ಯಾಂಡ್-ಇನ್ ನಾಯಕರಾದ ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ಎಲ್ಲಾ ಆಟಗಾರರು, ತರಬೇತುದಾರರಾದ ಅನಿಲ್ ಕುಂಬ್ಳೆ, ಸಂಜಯ್ ಬಂಗಾರ್, ವಿಕ್ರಮ್ ರಾಥೋರ್, ವಿಶೇಷವಾಗಿ ಹಿರಿಯ ತರಬೇತುದಾರ ಭರತ್ ಅರುಣ್ ಅವರ ಬೆಂಬಲಕ್ಕಾಗಿ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಾನು ಎಲ್ಲರಿಂದ ಸಾಕಷ್ಟು ಕಲಿತಿದ್ದೇನೆ. ಇದಕ್ಕಾಗಿ ಇತರ ಎಲ್ಲ ಸಹಾಯಕ ಸಿಬ್ಬಂದಿಗೆ ನಾನು ಧನ್ಯವಾದ ಹೇಳುತ್ತೇನೆ. ಇದೊಂದು ಅದ್ಭುತ ಪ್ರಯಾಣ ಎಂದು ಬರೆದುಕೊಂಡಿದ್ದಾರೆ.
ಕೊನೆಯಲ್ಲಿ, ಅವರು ತಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ನಾನು ಶಾಶ್ವತವಾದ ಸಂಬಂಧಗಳನ್ನು ಬೆಳೆಸಿದ್ದೇನೆ ಮತ್ತು ನನ್ನ ಜೀವನದುದ್ದಕ್ಕೂ ನಾನು ನೆನೆಯುವಂತಹ ನೆನಪುಗಳನ್ನು ಸೃಷ್ಟಿಸಿದೆ. ಕೊನೆಯದಾಗಿ ಆದರೆ ಮುಖ್ಯವಾಗಿ, ನಾನು ಯಾವಾಗಲೂ ನನ್ನ ಕುಟುಂಬಕ್ಕೆ, ನನ್ನ ಸ್ನೇಹಿತರಿಗೆ, ಮಾಧ್ಯಮಗಳಿಗೆ ಮತ್ತು ಎಲ್ಲಾ ಬೆಂಬಲ ಮತ್ತು ಪ್ರೋತ್ಸಾಹಕ್ಕಾಗಿ ಭಾರತೀಯ ಕ್ರಿಕೆಟ್ನ ಅಸಂಖ್ಯಾತ ಅಭಿಮಾನಿಗಳಿಗೆ ಮತ್ತು ಪಾಲುದಾರರಿಗೆ ನನ್ನ ಧನ್ಯವಾದಗಳನ್ನು ಮತ್ತು ಪ್ರೀತಿಯನ್ನು ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.