T20 world cup: 5 ಎಸೆತಗಳಲ್ಲಿ 5 ಬೌಂಡರಿ! ಪೊಲಾರ್ಡ್​ ಅಬ್ಬರಕ್ಕೆ ಪಾಕ್ ಬೌಲರ್​ ಫುಲ್ ಸೈಲೆಂಟ್

T20 world cup: ಪಾಕಿಸ್ತಾನದ ವೇಗದ ಬೌಲರ್ ಹಾರಿಸ್ ರೌಫ್ ಅವರ ಕೊನೆಯ ಓವರ್‌ನಲ್ಲಿ ಕೀರನ್ ಪೊಲಾರ್ಡ್ 20 ರನ್ ಗಳಿಸಿದರು. ಹ್ಯಾರೀಸ್ ರೌಫ್​ರ ಐದು ಸತತ ಎಸೆತಗಳಲ್ಲಿ ಪೊಲಾರ್ಡ್ ಐದು ಬೌಂಡರಿಗಳನ್ನು ಹೊಡೆದರು.

T20 world cup: 5 ಎಸೆತಗಳಲ್ಲಿ 5 ಬೌಂಡರಿ! ಪೊಲಾರ್ಡ್​ ಅಬ್ಬರಕ್ಕೆ ಪಾಕ್ ಬೌಲರ್​ ಫುಲ್ ಸೈಲೆಂಟ್
ಪಾಕಿಸ್ತಾನ Vs ವೆಸ್ಟ್ ಇಂಡೀಸ್
Follow us
TV9 Web
| Updated By: ಪೃಥ್ವಿಶಂಕರ

Updated on:Oct 18, 2021 | 7:03 PM

2021 ಟಿ 20 ವಿಶ್ವಕಪ್‌ನ ಮೊದಲ ಸುತ್ತು ಆರಂಭವಾಗಿದೆ, ಮತ್ತೊಂದೆಡೆ ಈಗಾಗಲೇ ಅರ್ಹತೆ ಪಡೆದ ತಂಡಗಳು ಅಭ್ಯಾಸ ಪಂದ್ಯಗಳೊಂದಿಗೆ ತಮ್ಮ ಸಿದ್ಧತೆಗಳನ್ನು ಪರಿಶೀಲಿಸುತ್ತಿವೆ. ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ನಡುವಿನ ಅಭ್ಯಾಸ ಪಂದ್ಯದಲ್ಲಿ ವಿಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ಗಳನ್ನು ಪಾಕಿಸ್ತಾನದ ಬೌಲರ್‌ಗಳು ಮೌನವಾಗಿಸಿದ್ದರು. ದುಬೈನ ಐಸಿಸಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮೊದಲು ಬ್ಯಾಟ್ ಮಾಡಿ ಕೇವಲ 130 ರನ್ ಗಳಿಸಿತು. ವೆಸ್ಟ್ ಇಂಡೀಸ್ ಟಿ 20 ಸ್ಪೆಷಲಿಸ್ಟ್ ಬ್ಯಾಟ್ಸ್​ಮನ್​ಗಳು ಮತ್ತೊಮ್ಮೆ ಫ್ಲಾಪ್ ಆಗಿದ್ದಾರೆ. ಕ್ರಿಸ್ ಗೇಲ್​ 30 ಎಸೆತಗಳಲ್ಲಿ 20 ರನ್ ಗಳಿಸಿದರು. ಲೆಂಡ್ಲ್ ಸಿಮನ್ಸ್ ಕೂಡ 23 ಎಸೆತಗಳಲ್ಲಿ 18 ರನ್ ಗಳಿಸಿದರು. ರೋಸ್ಟನ್ ಚೇಸ್ 13 ಎಸೆತಗಳಲ್ಲಿ 9 ರನ್ ಗಳಿಸಿದರು. ಹೆಟ್ಮಿಯರ್ ಮತ್ತು ನಾಯಕ ಕೀರನ್ ಪೊಲಾರ್ಡ್ ವೆಸ್ಟ್ ಇಂಡೀಸ್ ಪರ ಕೆಲವು ಉಪಯುಕ್ತ ಇನ್ನಿಂಗ್ಸ್ ಆಡಿದರು. ಹೆಟ್ಮಿಯರ್ 28 ಹಾಗೂ ಪೊಲಾರ್ಡ್ 10 ಎಸೆತಗಳಲ್ಲಿ 23 ರನ್ ಗಳಿಸಿದರು. ವೆಸ್ಟ್ ಇಂಡೀಸ್‌ನ ಕೊನೆಯ ಓವರ್‌ನಲ್ಲಿ ಪೊಲಾರ್ಡ್ ಅದ್ಭುತವಾದ ಹೊಡೆತಗಳನ್ನು ಬಾರಿಸಿದರು.

ಪಾಕಿಸ್ತಾನದ ವೇಗದ ಬೌಲರ್ ಹಾರಿಸ್ ರೌಫ್ ಅವರ ಕೊನೆಯ ಓವರ್‌ನಲ್ಲಿ ಕೀರನ್ ಪೊಲಾರ್ಡ್ 20 ರನ್ ಗಳಿಸಿದರು. ಹ್ಯಾರೀಸ್ ರೌಫ್​ರ ಐದು ಸತತ ಎಸೆತಗಳಲ್ಲಿ ಪೊಲಾರ್ಡ್ ಐದು ಬೌಂಡರಿಗಳನ್ನು ಹೊಡೆದರು. ಪೊಲಾರ್ಡ್ ಅವರ ಹೊಡೆತಗಳು ಎಷ್ಟು ವೇಗವಾಗಿದ್ದವು ಎಂದರೆ ಪಂದ್ಯದಲ್ಲಿ ಕಾಮೆಂಟೆಟರ್​ಗಳಾಗಿ ಕಾರ್ಯನಿರ್ವಹಿಸುತ್ತಿದ್ದ ದೀಪ್ ದಾಸ್ ಗುಪ್ತಾ, ಹರೀಸ್ ರೌಫ್ ಅವರನ್ನು ಸರಿಯಾದ ಲೆಂಥ್​ನಲ್ಲಿ ಬೌಲಿಂಗ್ ಮಾಡಲು ವಿನಂತಿಸಿದರು.

ಶಾಹೀನ್ ಅಫ್ರಿದಿ, ರೌಫ್ ದುಬಾರಿಯಾದರು ವೆಸ್ಟ್ ಇಂಡೀಸ್ ಕೇವಲ 130 ರನ್ ಗಳಿಸಿದರೂ ಪಾಕಿಸ್ತಾನದ ವೇಗದ ಬೌಲರ್‌ಗಳು ತುಂಬಾ ದುಬಾರಿ ಎಂದು ಸಾಬೀತಾಯಿತು. ವಿಶೇಷವಾಗಿ ಶಾಹೀನ್ ಅಫ್ರಿದಿ 4 ಓವರ್​ಗಳಲ್ಲಿ 2 ವಿಕೆಟ್ ಪಡೆದರು ಆದರೆ ಅದಕ್ಕಾಗಿ ಅವರು 41 ರನ್ ನೀಡಿದರು. ಹಾರಿಸ್ ರೌಫ್ ಮೊದಲ 3 ಓವರ್​ಗಳಲ್ಲಿ ಕೇವಲ 12 ರನ್ ನೀಡಿದರು ಆದರೆ ಕೊನೆಯ ಓವರ್​ನಲ್ಲಿ ಅವರು 20 ರನ್ ನೀಡಿದರು. ಪಾಕಿಸ್ತಾನದ ಸ್ಪಿನ್ನರ್‌ಗಳು ಅದ್ಭುತವಾಗಿ ಬೌಲಿಂಗ್ ಮಾಡಿದರು. ಇಮಾಡ್ ವಾಸಿಂ 3 ಓವರ್​ಗಳಲ್ಲಿ 6 ರನ್ ನೀಡಿ 1 ವಿಕೆಟ್ ಪಡೆದರು. ಶದಬ್ ಖಾನ್ 2 ಓವರ್​ಗಳಲ್ಲಿ ಕೇವಲ 7 ರನ್ ಬಿಟ್ಟುಕೊಟ್ಟರು. ಮೊಹಮ್ಮದ್ ಹಫೀಜ್ 3 ಓವರ್​ಗಳಲ್ಲಿ 13 ರನ್ ಬಿಟ್ಟುಕೊಟ್ಟರು. ವೇಗದ ಬೌಲರ್ ಹಸನ್ ಅಲಿ ಅತ್ಯಂತ ಪರಿಣಾಮಕಾರಿಯಾಗಿ ಕಾಣುತ್ತಿದ್ದರು ಮತ್ತು 4 ಓವರ್​ಗಳಲ್ಲಿ 21 ರನ್ ನೀಡಿ 2 ವಿಕೆಟ್ ಪಡೆದರು.

Published On - 7:02 pm, Mon, 18 October 21

ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್