Virat Kohli: ಬಿಟ್ಟಿ ಸಲಹೆ ನೀಡಲು ಬಂದ ವಿರಾಟ್ ಕೊಹ್ಲಿ…ಬೆಂಡೆತ್ತಿದ ನೆಟ್ಟಿಗರು

Virat Kohli trolled: ವಿರಾಟ್ ಕೊಹ್ಲಿ ಈ ಹಿಂದೆಯೂ ಪಟಾಕಿ ರಹಿತ ದೀಪಾವಳಿ ಹಬ್ಬಕ್ಕೆ ಕರೆ ನೀಡಿದ್ದರು. ಅಲ್ಲದೆ ಮಾಲಿನ್ಯ ಮುಕ್ತ ದೀಪಾವಳಿಗೆ ಬೆಂಬಲ ವ್ಯಕ್ತಪಡಿಸಿದ್ದರು.

Virat Kohli: ಬಿಟ್ಟಿ ಸಲಹೆ ನೀಡಲು ಬಂದ ವಿರಾಟ್ ಕೊಹ್ಲಿ...ಬೆಂಡೆತ್ತಿದ ನೆಟ್ಟಿಗರು
Virat Kohli
Follow us
TV9 Web
| Updated By: ಝಾಹಿರ್ ಯೂಸುಫ್

Updated on: Oct 18, 2021 | 6:41 PM

ಟೀಮ್ ಇಂಡಿಯಾ (Team India) ನಾಯಕ ವಿರಾಟ್ ಕೊಹ್ಲಿ (Virat Kohli) ದೀಪಾವಳಿ (Deepawali) ಹಬ್ಬದ ಆಚರಣೆ  ಬಗ್ಗೆ ಸಲಹೆ ನೀಡಲು ಮುಂದಾಗಿ ಫಜೀತಿಗೆ ಸಿಲುಕಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ಇನ್ನೊಂದು ವಾರ ದೀಪಾವಳಿ ಆಚರಿಸುವ ಬಗ್ಗೆ ಟಿಪ್ಸ್​ ನೀಡಲಿದ್ದೇನೆ ಎಂದು ಕೊಹ್ಲಿ ತಿಳಿಸಿದ್ದರು. ಇದರ ಬೆನ್ನಲ್ಲೇ ದೀಪಾವಳಿ ಆಚರಿಸುವುದನ್ನು ನಾವು ಸೆಲೆಬ್ರಿಟಿಗಳಿಂದ ಕಲಿಯುವ ಅಗತ್ಯವಿಲ್ಲ. ನೀವು ನೀಡಲಿರುವ ಉಪದೇಶ ಏನೆಂದು ನಮಗೆ ಗೊತ್ತಿದೆ ಎಂದು ಅನೇಕರು ಪ್ರತ್ಯುತ್ತರ ನೀಡಿದ್ದಾರೆ.

ಮುಂಬರುವ ಹಬ್ಬ ದೀಪಾವಳಿಗೆ ಸಂಬಂಧಿಸಿದಂತೆ ವಿರಾಟ್ ಕೊಹ್ಲಿ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ವೀಡಿಯೊವನ್ನು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಈ ವರ್ಷ ಪ್ರಪಂಚದಾದ್ಯಂತ ಜನರಿಗೆ, ವಿಶೇಷವಾಗಿ ಭಾರತೀಯರಿಗೆ ಕಷ್ಟಕರವಾಗಿದೆ. ಇದಾಗ್ಯೂ ನಾವೆಲ್ಲರೂ ದೀಪಾವಳಿಗಾಗಿ ಕಾತರದಿಂದ ಕಾಯುತ್ತಿದ್ದೇವೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಅರ್ಥಪೂರ್ಣವಾಗಿ ದೀಪಾವಳಿ ಹಬ್ಬವನ್ನು ಹೇಗೆ ಆಚರಿಸಬೇಕು ಎಂಬುದರ ಕುರಿತು ಸಲಹೆಗಳನ್ನು ಹಂಚಿಕೊಳ್ಳಲಿದ್ದೇನೆ ಎಂದು ಕೊಹ್ಲಿ ತಿಳಿಸಿದ್ದಾರೆ. ಈ ವಿಡಿಯೋದಲ್ಲಿ ಯಾವುದೇ ಉಪದೇಶ ನೀಡಲಿಲ್ಲದಿದ್ದರೂ ಅನೇಕರು ವಿರಾಟ್ ಕೊಹ್ಲಿ ವಿರುದ್ದ ತಿರುಗಿ ಬಿದ್ದಿದ್ದಾರೆ.

ಇದಕ್ಕೆ ಕಾರಣ ಈ ಹಿಂದೆ ಯಾವುದೇ ಪಟಾಕಿ ಸಿಡಿಸದೇ ಅರ್ಥಪೂರ್ಣ ದೀಪಾವಳಿ ಆಚರಿಸಿ ಎಂದು ವಿರಾಟ್ ಕೊಹ್ಲಿ ಮನವಿ ಮಾಡಿದ್ದರು. ಈ ಬಾರಿ ಕೂಡ ಅಂತಹದ್ದೇ ಸಲಹೆ ನೀಡಲಿದ್ದಾರೆ ಎಂದು ಅನೇಕರು ಕಿಡಿಕಾರಿದ್ದಾರೆ. ಅದರಲ್ಲೂ ಕೆಲವರು ಪಟಾಕಿ ಹೊಡಿಯಬೇಡಿ ಎಂಬ ಸಂದೇಶ ನೀಡುವ ಸೆಲೆಬ್ರಿಟಿಗಳು ಐಷಾರಾಮಿ ಕಾರು, ವಿಮಾನ ಪ್ರಯಾಣಗಳ ಮೂಲಕ ಅತಿಹೆಚ್ಚು ಪರಿಸರ ಮಾಲಿನ್ಯ ಮಾಡುತ್ತಿದ್ದಾರೆ. ನೀವು ದೀಪಾವಳಿ ಬಂದಾಗ ಮಾತ್ರ ಉಪದೇಶ ನೀಡುವುದನ್ನು ನಿಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಿ ಎಂಬಿತ್ಯಾದಿಯಾಗಿ ಪ್ರತಿಕ್ರಿಯಿಸಿದ್ದಾರೆ.

ವಿರಾಟ್ ಕೊಹ್ಲಿ ಈ ಹಿಂದೆಯೂ ಪಟಾಕಿ ರಹಿತ ದೀಪಾವಳಿ ಹಬ್ಬಕ್ಕೆ ಕರೆ ನೀಡಿದ್ದರು. ಅಲ್ಲದೆ ಮಾಲಿನ್ಯ ಮುಕ್ತ ದೀಪಾವಳಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಇದೇ ವೇಳೆ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಅವರನ್ನು ಅನೇಕರು ಟ್ರೋಲ್ ಮಾಡಿದ್ದರು. ಇದೀಗ ಮತ್ತೊಮ್ಮೆ ಕೊಹ್ಲಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆದರೆ ಈ ಬಾರಿ ಯಾವುದೇ ಉಪದೇಶ ನೀಡದೇ ಗುರಿಯಾಗಿದ್ದು ವಿಶೇಷ.

ಇದನ್ನೂ ಓದಿ: T20 World Cup 2021: ಕೆಎಲ್ ರಾಹುಲ್​ ಆರಂಭಿಕನಲ್ವಾ: ಕೊಹ್ಲಿ ಸಜ್ಜಾಗಿರಲು ಹೇಳಿದ್ದು ಯಾರಿಗೆ?

ಇದನ್ನೂ ಓದಿ:T20 World Cup 2021: ಟಿ20 ವಿಶ್ವಕಪ್ ಗೆದ್ದವರಿಗೆ ಸಿಗೋ ಹಣವೆಷ್ಟು? ಸೋತರೆ ಸಿಗೋದೆಷ್ಟು? 

ಇದನ್ನೂ ಓದಿ: T20 World Cup Winners: ಟಿ20 ವಿಶ್ವಕಪ್​ನಲ್ಲಿ ಯಾರು ವಿನ್ನರ್, ಯಾರು ರನ್ನರ್: ಇಲ್ಲಿದೆ ಸಂಪೂರ್ಣ ಪಟ್ಟಿ

(Virat Kohli trolled for offering ‘tips on Diwali’)

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ