T20 World Cup 2021: ಯುಎಇನಲ್ಲಿ ಭಾರತಕ್ಕಿಂತ ಪಾಕಿಸ್ತಾನ್ ತಂಡ ಬಲಿಷ್ಠ

India vs Pakistan: ಟೀಮ್ ಇಂಡಿಯಾದಲ್ಲಿರುವ ಆಟಗಾರರು ಕಳೆದ ಸೀಸನ್​ ಐಪಿಎಲ್ ಹಾಗೂ ಈ ಬಾರಿಯ ಐಪಿಎಲ್​ನ ದ್ವಿತಿಯಾರ್ಧವನ್ನೂ ಯುಎಇನಲ್ಲಿ ಆಡಿದೆ. ಆದರೆ ಪ್ರಸ್ತುತ ತಂಡದಲ್ಲಿರುವ ಬಹುತೇಕ ಆಟಗಾರರು ಐಪಿಎಲ್​ ವೇಳೆ ವಿಫಲರಾಗಿದ್ದಾರೆ.

T20 World Cup 2021: ಯುಎಇನಲ್ಲಿ ಭಾರತಕ್ಕಿಂತ ಪಾಕಿಸ್ತಾನ್ ತಂಡ ಬಲಿಷ್ಠ
India vs Pakistan, T20 World cup 2021
Follow us
TV9 Web
| Updated By: ಝಾಹಿರ್ ಯೂಸುಫ್

Updated on:Oct 18, 2021 | 7:12 PM

ಟಿ20 ವಿಶ್ವಕಪ್ (T20 World Cup 2021)​ ಶುರುವಾಗಿದೆ. ಓಮಾನ್​ನಲ್ಲಿ ಅರ್ಹತಾ ಪಂದ್ಯಗಳು ನಡೆಯುತ್ತಿದ್ದರೆ, ಇತ್ತ ಯುಎಇನಲ್ಲಿ ಅಭ್ಯಾಸ ಪಂದ್ಯಗಳು ಜರುಗುತ್ತಿದೆ. ಇನ್ನು ಅಕ್ಟೋಬರ್ 23 ರಿಂದ ಟಿ20 ಸೂಪರ್ 12 ಪಂದ್ಯಗಳಿಗೆ ಚಾಲನೆ ಸಿಗಲಿದೆ. ಭಾರತ ತಂಡವು ಮೊದಲ ಪಂದ್ಯವನ್ನು ಅಕ್ಟೋಬರ್ 24 ರಂದು ಆಡಲಿದೆ. ಅದು ಕೂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ (India vs Pakistan) ವಿರುದ್ದ ಎಂಬುದು ವಿಶೇಷ. ಪಾಕಿಸ್ತಾನ್ ಹೊರತಾಗಿ ಭಾರತ ತಂಡವಿರುವ ಗ್ರೂಪ್​ನಲ್ಲಿ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ್ ತಂಡಗಳಿವೆ. ಹಾಗೆಯೇ ಅರ್ಹತಾ ಸುತ್ತಿನಿಂದ ಆಯ್ಕೆಯಾದ ಎರಡು ತಂಡಗಳನ್ನು ಟೀಮ್ ಇಂಡಿಯಾ ಎದುರಿಸಬೇಕಾಗಿದೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಟೀಮ್ ಇಂಡಿಯಾ ಇದುವರೆಗೆ ಯುಎಇಯಲ್ಲಿ ಒಂದೇ ಒಂದು ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ ಎಂಬುದು. ಆದರೆ ಯುಎಇ ಪಾಕಿಸ್ತಾನ್​ ತಂಡದ ಎರಡನೇ ಹೋಮ್​ ಗ್ರೌಂಡ್ ಎಂಬುದೇ ಇಲ್ಲಿ ವಿಶೇಷ​.

ಏಕೆಂದರೆ ಪಾಕಿಸ್ತಾನ್ ತಂಡ ಯುಎಇನಲ್ಲಿ 36 ಪಂದ್ಯಗಳನ್ನು ಆಡಿದೆ. ಇದರಲ್ಲಿ 21 ಪಂದ್ಯಗಳನ್ನು ಪಾಕ್ ಗೆದ್ದುಕೊಂಡಿದೆ. ಅಂದರೆ ಶೇ. 70 ರಷ್ಟು ಗೆಲುವಿನ ಸರಾಸರಿ ಹೊಂದಿದೆ. ಇನ್ನು ಭಾರತ-ಪಾಕ್ ನಡುವಣ ಮೊದಲ ಪಂದ್ಯವು ದುಬೈನಲ್ಲಿ ನಡೆಯಲಿದೆ. ಈ ಮೈದಾನದಲ್ಲಿ ಪಾಕಿಸ್ತಾನ್ ಇದುವರೆಗೆ 25 ಟಿ20 ಪಂದ್ಯಗಳನ್ನು ಆಡಿದೆ. ಇದರಲ್ಲಿ 14 ಪಂದ್ಯಗಳಲ್ಲಿ ಗೆದ್ದರೆ, 10 ರಲ್ಲಿ ಸೋತಿದೆ. ಇನ್ನು ದುಬೈ ಪಿಚ್​ನಲ್ಲಿ ಅತಿಹೆಚ್ಚು ಅಂತಾರಾಷ್ಟ್ರೀಯ ಟಿ20 ಗಳನ್ನು ಆಡಿದ ತಂಡವೆಂದರೆ ಅದು ಪಾಕಿಸ್ತಾನ್. ಇದೇ ಕಾರಣದಿಂದ ಈ ಹಿಂದೆ ಪಾಕ್ ತಂಡದ ನಾಯಕ ಬಾಬರ್ ಆಜಂ ಯುಎಇ ನಮಗೆ ಎರಡನೇ ತವರು ಇದ್ದಂತೆ ಎಂಬ ಹೇಳಿಕೆ ನೀಡಿದ್ದರು. ಅಷ್ಟೇ ಅಲ್ಲದೆ ಇದೇ ಕಾರಣದಿಂದ ಟೀಮ್ ಇಂಡಿಯಾ ಒತ್ತಡದಲ್ಲಿರಲಿದೆ ಎಂದಿದ್ದರು.

ಇದಾಗ್ಯೂ ಟೀಮ್ ಇಂಡಿಯಾದಲ್ಲಿರುವ ಆಟಗಾರರು ಕಳೆದ ಸೀಸನ್​ ಐಪಿಎಲ್ ಹಾಗೂ ಈ ಬಾರಿಯ ಐಪಿಎಲ್​ನ ದ್ವಿತಿಯಾರ್ಧವನ್ನೂ ಯುಎಇನಲ್ಲಿ ಆಡಿದೆ. ಆದರೆ ಪ್ರಸ್ತುತ ತಂಡದಲ್ಲಿರುವ ಬಹುತೇಕ ಆಟಗಾರರು ಐಪಿಎಲ್​ ವೇಳೆ ವಿಫಲರಾಗಿದ್ದಾರೆ. ಈ ಚಿಂತೆ ಒಂದೆಡೆಯಾದರೆ, ಮತ್ತೊಂದೆಡೆ ಪಾಕಿಸ್ತಾನ್ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲೇ ಬಲಿಷ್ಠ ವೆಸ್ಟ್ ಇಂಡೀಸ್​ಗೆ ಸೋಲುಣಿಸಿದೆ. ಇದೇ ಆತ್ಮ ವಿಶ್ವಾಸದಲ್ಲಿ ಪಾಕ್​ ತಂಡ ಟೀಮ್ ಇಂಡಿಯಾ ವಿರುದ್ದ ಕಣಕ್ಕಿಳಿಯಲಿದೆ.

ಇದನ್ನೂ ಓದಿ: T20 World Cup 2021: ಕೆಎಲ್ ರಾಹುಲ್​ ಆರಂಭಿಕನಲ್ವಾ: ಕೊಹ್ಲಿ ಸಜ್ಜಾಗಿರಲು ಹೇಳಿದ್ದು ಯಾರಿಗೆ?

ಇದನ್ನೂ ಓದಿ:T20 World Cup 2021: ಟಿ20 ವಿಶ್ವಕಪ್ ಗೆದ್ದವರಿಗೆ ಸಿಗೋ ಹಣವೆಷ್ಟು? ಸೋತರೆ ಸಿಗೋದೆಷ್ಟು? 

ಇದನ್ನೂ ಓದಿ: T20 World Cup Winners: ಟಿ20 ವಿಶ್ವಕಪ್​ನಲ್ಲಿ ಯಾರು ವಿನ್ನರ್, ಯಾರು ರನ್ನರ್: ಇಲ್ಲಿದೆ ಸಂಪೂರ್ಣ ಪಟ್ಟಿ

(Why Pakistan toughest team in Uae)

Published On - 7:09 pm, Mon, 18 October 21

ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ