T20 World Cup 2021: ಟೀಮ್ ಇಂಡಿಯಾ ಆರಂಭಿಕರು ಯಾರೆಂಬುದನ್ನು ಬಹಿರಂಗಪಡಿಸಿದ ಕೊಹ್ಲಿ

Team India: ಈ ಹಿಂದೆ ಇಂಗ್ಲೆಂಡ್​ ವಿರುದ್ದದ ಟಿ20 ಸರಣಿ ವೇಳೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಇದೇ ವೇಳೆ ಟಿ20 ವಿಶ್ವಕಪ್​ನಲ್ಲೂ ನಾನು ಓಪನರ್​ ಆಗಿ ಆಡಲಿದ್ದೇನೆ ಎಂದಿದ್ದರು.

T20 World Cup 2021: ಟೀಮ್ ಇಂಡಿಯಾ ಆರಂಭಿಕರು ಯಾರೆಂಬುದನ್ನು ಬಹಿರಂಗಪಡಿಸಿದ ಕೊಹ್ಲಿ
Virat Kohli

ಟಿ20 ವಿಶ್ವಕಪ್​ (T20 World Cup 2021) ಶುರುವಾಗಿದೆ. ಅಕ್ಟೋಬರ್ 17 ರಿಂದ ಚಾಲನೆ ಸಿಕ್ಕಿರುವ ಚುಟುಕು ಕ್ರಿಕೆಟ್​ ಕದನದ ಅರ್ಹತಾ ಸುತ್ತಿನ ಪಂದ್ಯಗಳು ಓಮಾನ್​ನಲ್ಲಿ ನಡೆಯುತ್ತಿದ್ದರೆ, ಇತ್ತ ಯುಎಇನಲ್ಲಿ ಟೀಮ್ ಇಂಡಿಯಾ (Team India) ಸೇರಿದಂತೆ ಸೂಪರ್ 12 ಹಂತದಲ್ಲಿರುವ ತಂಡಗಳು ಅಭ್ಯಾಸ ಪಂದ್ಯಗಳಲ್ಲಿ ತೊಡಗಿಸಿಕೊಂಡಿದೆ. ಅದರಂತೆ ಭಾರತ ತಂಡವು ಮೊದಲ ಅಭ್ಯಾಸ ಪಂದ್ಯವನ್ನು ಇಂಗ್ಲೆಂಡ್ ವಿರುದ್ದ ಆಡಲಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ದುಕೊಂಡರು. ಇದೇ ವೇಳೆ ಟೀಮ್ ಕಾಂಬಿನೇಷನ್​ ಬಗ್ಗೆ ಮನಬಿಚ್ಚಿ ಮಾತನಾಡಿದರು. ಅದರಲ್ಲೂ ಟಿ20 ವಿಶ್ವಕಪ್​​ನಲ್ಲಿ ಭಾರತ ತಂಡದ ಆರಂಭಿಕರಾಗಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದನ್ನು ಬಹಿರಂಗಪಡಿಸಿದರು.

ಈ ಹಿಂದೆ ಇಂಗ್ಲೆಂಡ್​ ವಿರುದ್ದದ ಟಿ20 ಸರಣಿ ವೇಳೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಇದೇ ವೇಳೆ ಟಿ20 ವಿಶ್ವಕಪ್​ನಲ್ಲೂ ನಾನು ಓಪನರ್​ ಆಗಿ ಆಡಲಿದ್ದೇನೆ ಎಂದಿದ್ದರು. ಅದರಂತೆ ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿ ಆರ್​ಸಿಬಿ ಪರ ಆರಂಭಿಕರಾಗಿ ಆಡಿದ್ದರು. ಹೀಗಾಗಿ ಟಿ20 ವಿಶ್ವಕಪ್​ನಲ್ಲೂ ಕೊಹ್ಲಿ ಆರಂಭಿಕರಾಗಿ ಆಡಲಿದ್ದಾರೆ ಎನ್ನಲಾಗಿತ್ತು.

ಇನ್ನೊಂದೆಡೆ ಕೊಹ್ಲಿ ಐಪಿಎಲ್​ ವೇಳೆ  ಟಿ20 ವಿಶ್ವಕಪ್​ ಆರಂಭಿಕನಾಗಿ ನೀನು ಕಣಕ್ಕಿಳಿಯಬೇಕು. ಅದಕ್ಕಾಗಿ ಈಗಾಗಲೇ ಸಿದ್ಧತೆಗಳನ್ನು ಆರಂಭಿಸು ಇಶಾನ್ ಕಿಶನ್​ಗೆ ಸೂಚಿಸಿದ್ದರು. ಅದರಂತೆ ಮುಂಬೈ ಇಂಡಿಯನ್ಸ್​ ತಂಡದ ಕೊನೆಯ 2 ಪಂದ್ಯಗಳಲ್ಲಿ ಕಿಶನ್ ಓಪನರ್​ ಆಗಿ ಬ್ಯಾಟ್ ಬೀಸಿದ್ದರು. ರಾಜಸ್ತಾನ್ ರಾಯಲ್ಸ್​ ವಿರುದ್ದ ಕಿಶನ್ ಕೇವಲ 25 ಎಸೆತಗಳಿಗೆ 50 ರನ್ ಬಾರಿಸಿ ಮಿಂಚಿದರು. ಅಷ್ಟೇ ಅಲ್ಲದೆ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 32 ಎಸೆತಗಳಿಗೆ 11 ಬೌಂಡರಿ ಮತ್ತು 4 ಸಿಕ್ಸರ್​ನೊಂದಿಗೆ 84 ರನ್ ಚಚ್ಚಿದ್ದಾರೆ. ಹೀಗಾಗಿ ಕಿಶನ್ ಹಾಗೂ ರೋಹಿತ್ ಶರ್ಮಾ ಆರಂಭಿಕರಾಗಲಿದ್ದಾರೆ ಎನ್ನಲಾಗಿತ್ತು.

ಆದರೆ ಇಡೀ ಟೂರ್ನಿಯಲ್ಲಿ ಅಬ್ಬರಿಸಿ ಬೊಬ್ಬಿರಿಯುವ ಮೂಲಕ ಪಂಜಾಬ್ ಕಿಂಗ್ಸ್​ ತಂಡದ ನಾಯಕ ಕೆಎಲ್ ರಾಹುಲ್ 13 ಪಂದ್ಯಗಳಿಂದ 626 ರನ್ ಬಾರಿಸಿದ್ದರು. ಇದೇ ಕಾರಣದಿಂದ ಇದೀಗ ವಿರಾಟ್ ಕೊಹ್ಲಿ ಮನಸು ಬದಲಿಸಿದ್ದಾರೆ. ಇಂಗ್ಲೆಂಡ್​ ವಿರುದ್ದದ ಅಭ್ಯಾಸ ಪಂದ್ಯದ ವೇಳೆ ಮಾತನಾಡಿದ ಕೊಹ್ಲಿ, ಟಿ20 ವಿಶ್ವಕಪ್​ನಲ್ಲಿ ನಾನು 3ನೇ ಕ್ರಮಾಂಕದಲ್ಲಿ ಆಡಲಿದ್ದೇನೆ. ಹಾಗಾಗಿ ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಇನಿಂಗ್ಸ್​ ಆರಂಭಿಸಲಿದ್ದಾರೆ ಎಂದಿದ್ದಾರೆ. ಇದರೊಂದಿಗೆ ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಆರಂಭಿಕರು ಯಾರು ಎಂಬ ಗೊಂದಲಕ್ಕೆ ತೆರೆಬಿದ್ದಂತಾಗಿದೆ.

ಇದನ್ನೂ ಓದಿ: T20 World Cup 2021: ಕೆಎಲ್ ರಾಹುಲ್​ ಆರಂಭಿಕನಲ್ವಾ: ಕೊಹ್ಲಿ ಸಜ್ಜಾಗಿರಲು ಹೇಳಿದ್ದು ಯಾರಿಗೆ?

ಇದನ್ನೂ ಓದಿ:T20 World Cup 2021: ಟಿ20 ವಿಶ್ವಕಪ್ ಗೆದ್ದವರಿಗೆ ಸಿಗೋ ಹಣವೆಷ್ಟು? ಸೋತರೆ ಸಿಗೋದೆಷ್ಟು? 

ಇದನ್ನೂ ಓದಿ: T20 World Cup Winners: ಟಿ20 ವಿಶ್ವಕಪ್​ನಲ್ಲಿ ಯಾರು ವಿನ್ನರ್, ಯಾರು ರನ್ನರ್: ಇಲ್ಲಿದೆ ಸಂಪೂರ್ಣ ಪಟ್ಟಿ

(T20 World Cup 2021: I will be batting at 3 Says Virat Kohli)

Click on your DTH Provider to Add TV9 Kannada