T20 World Cup: ಟಿ20 ವಿಶ್ವಕಪ್​ಗಾಗಿ ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆ

| Updated By: ಝಾಹಿರ್ ಯೂಸುಫ್

Updated on: Oct 13, 2021 | 5:38 PM

T20 World Cup 2021 Team India: ಡೆಲ್ಲಿ ತಂಡದ ಲುಕ್ಮನ್ ಮೇರಿವಾಲಾ, ಕೆಕೆಆರ್​ನ ವೆಂಕಟೇಶ್ ಅಯ್ಯರ್, ಕರ್ನ್ ಶರ್ಮಾ, ಆರ್​ಸಿಬಿಯ ಶಹಬಾಜ್ ಅಹ್ಮದ್ ಮತ್ತು ಕೆ ಗೌತಮ್ ತಂಡಕ್ಕೆ ನೆರವಾಗಲು ಭಾರತೀಯ ಶಿಬಿರದೊಂದಿಗೆ ಯುಎಇಯಲ್ಲಿ ಉಳಿದಿದ್ದಾರೆ.

T20 World Cup:  ಟಿ20 ವಿಶ್ವಕಪ್​ಗಾಗಿ ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆ
ಟೀಂ ಇಂಡಿಯಾ
Follow us on

ಮುಂಬರುವ ಟಿ20 ವಿಶ್ವಕಪ್‌ಗಾಗಿ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಲಾಗಿದೆ. ಮೀಸಲು ಆಟಗಾರನಾಗಿದ್ದ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಅವರಿಗೆ 15 ಸದಸ್ಯರ ತಂಡದಲ್ಲಿ ಸ್ಥಾನ ನೀಡಲಾಗಿದೆ. ಹಾಗೆಯೇ ಅಕ್ಷರ್ ಪಟೇಲ್ ಅವರನ್ನು ಮೀಸಲು ಆಟಗಾರನ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಈ ಹಿಂದೆ ಅಕ್ಷರ್ ಪಟೇಲ್ 15 ಸದಸ್ಯರ ಬಳಗದಲ್ಲಿದ್ದರು. ಇದೀಗ ಪಟೇಲ್ ಅವರನ್ನು ಮೀಸಲು ಆಟಗಾರರ ಪಟ್ಟಿಗೆ ಸೇರ್ಪಡೆಗೊಳಿಸಿ ಶಾರ್ದೂಲ್​ಗೆ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.

ತಂಡದಲ್ಲಿ ಬದಲಾವಣೆಗೆ ನಿರ್ದಿಷ್ಟ ಕಾರಣವನ್ನು ಬಿಸಿಸಿಐ ಸ್ಪಷ್ಟಪಡಿಸಿಲ್ಲ. ಇದಾಗ್ಯೂ ಟೀಮ್ ಇಂಡಿಯಾ ತಂಡದಲ್ಲಿ ವೇಗದ ಬೌಲಿಂಗ್ ಆಲ್ರೌಂಡರ್ ಅವಶ್ಯಕತೆಯಿದೆ. ಏಕೆಂದರೆ ಹಾರ್ದಿಕ್ ಪಾಂಡ್ಯ ಟಿ 20 ವಿಶ್ವಕಪ್‌ನಲ್ಲಿ ಬೌಲ್ ಮಾಡುವ ಸಾಧ್ಯತೆಯಿಲ್ಲ. 2019 ರಲ್ಲಿ ಬೆನ್ನು ಶಸ್ತ್ರಚಿಕಿತ್ಸೆಯ ಬಳಿಕ ಪಾಂಡ್ಯ ನಿಯಮಿತವಾಗಿ ಬೌಲಿಂಗ್ ಮಾಡಿಲ್ಲ. ಹಾಗೆಯೇ ಐಪಿಎಲ್ 2021 ರ ಯುಎಇ ಲೆಗ್‌ನಲ್ಲೂ ಮುಂಬೈ ಇಂಡಿಯನ್ಸ್‌ ಪರ ಬೌಲಿಂಗ್ ಮಾಡಲಿಲ್ಲ. ಹೀಗಾಗಿ ಸ್ಪಿನ್ನರ್ ಒಬ್ಬರನ್ನು ಕೆಳಗಿಸಿ ವೇಗದ ಆಲ್​ರೌಂಡರ್​ಗೆ ಸ್ಥಾನ ನೀಡಲಾಗಿದೆ.

ಹಾಗೆಯೇ ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಅವೇಶ್ ಖಾನ್, ಸನ್ ರೈಸರ್ಸ್ ಹೈದರಾಬಾದ್ ಸ್ಪೀಡ್​ ಮಾಸ್ಟರ್ ಉಮ್ರಾನ್ ಮಲಿಕ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೌಲರ್​ ಹರ್ಷಲ್ ಪಟೇಲ್ ಅವರನ್ನು ಕೂಡ ಟೀಮ್ ಇಂಡಿಯಾ ನೆಟ್​ ಬೌಲರುಗಳನ್ನಾಡಿ ಆಯ್ಕೆ ಮಾಡಲಾಗಿದೆ.

ಇವರೊಂದಿಗೆ ಡೆಲ್ಲಿ ತಂಡದ ಲುಕ್ಮನ್ ಮೇರಿವಾಲಾ, ಕೆಕೆಆರ್​ನ ವೆಂಕಟೇಶ್ ಅಯ್ಯರ್, ಕರ್ನ್ ಶರ್ಮಾ, ಆರ್​ಸಿಬಿಯ ಶಹಬಾಜ್ ಅಹ್ಮದ್ ಮತ್ತು ಕೆ ಗೌತಮ್ ತಂಡಕ್ಕೆ ನೆರವಾಗಲು ಭಾರತೀಯ ಶಿಬಿರದೊಂದಿಗೆ ಯುಎಇಯಲ್ಲಿ ಉಳಿದಿದ್ದಾರೆ.

ಐಸಿಸಿ ಟಿ 20 ವಿಶ್ವಕಪ್‌ಗೆ ಭಾರತ ತಂಡ ಹೀಗಿದೆ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್ , ಶಾರ್ದೂಲ್ ಠಾಕೂರ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ

ಸ್ಟ್ಯಾಂಡ್ ಬೈ ಆಟಗಾರರು: ಶ್ರೇಯಸ್ ಅಯ್ಯರ್, ದೀಪಕ್ ಚಹರ್, ಅಕ್ಷರ್ ಪಟೇಲ್

ಇದನ್ನೂ ಓದಿ:  KL Rahul: ಸಿಡಿಲಬ್ಬರದ ಬ್ಯಾಟಿಂಗ್​ ಮೂಲಕ 7 ದಾಖಲೆ ಬರೆದ ಕೆಎಲ್ ರಾಹುಲ್

ಇದನ್ನೂ ಓದಿ:ಟಿ20 ವಿಶ್ವಕಪ್ ಪಾಕ್ ತಂಡದಲ್ಲಿ ಪ್ರಮುಖ ಬದಲಾವಣೆ: 39 ವರ್ಷದ ಆಲ್​ರೌಂಡರ್ ಆಯ್ಕೆ 

ಇದನ್ನೂ ಓದಿ: IPL 2021: ಅಚ್ಚರಿಯಾದರೂ ಇದು ಸತ್ಯ: 1 ವಿಕೆಟ್​ಗೆ 1 ಕೋಟಿ ಪಡೆದ ಕ್ರಿಸ್ ಮೋರಿಸ್..!

Published On - 5:29 pm, Wed, 13 October 21