ಸೌತ್ ಆಫ್ರಿಕಾ ಟಿ20 ಲೀಗ್ (SA20) ಹಲವು ಕಾರಣಗಳಿಂದ ಎಲ್ಲರ ಗಮನ ಸೆಳೆಯುತ್ತಿದೆ. ಒಂದೆಡೆ ಅದ್ಭುತ ಬ್ಯಾಟಿಂಗ್ಗೆ ಪಂದ್ಯಗಳು ಸಾಕ್ಷಿಯಾದರೆ, ಮತ್ತೊಂದೆಡೆ ಬೌಲರ್ಗಳ ಪರಾಕ್ರಮ ಮೆರೆಯುತ್ತಿದ್ದಾರೆ. ಇನ್ನೊಂದೆಡೆ ಫೀಲ್ಡರ್ಗಳು ಅತ್ಯದ್ಭುತ ಕ್ಯಾಚ್ಗಳ ಮೂಲಕ ಪ್ರೇಕ್ಷಕರನ್ನು ನಿಬ್ಬೆರಗಾಗಿಸುತ್ತಿದ್ದಾರೆ. ಇದೀಗ ಮೈದಾನದಲ್ಲೇ ಮ್ಯಾಜಿಕ್ ತೋರಿಸುವ ಮೂಲಕ ತಬ್ರೇಝ್ ಶಂಸಿ ಕೂಡ ರಂಗ ಪ್ರವೇಶಿಸಿದ್ದಾರೆ.
ಬೋಲ್ಯಾಂಡ್ ಪಾರ್ಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಪಾರ್ಲ್ ರಾಯಲ್ಸ್ ಹಾಗೂ ಎಂಐ ಕೇಪ್ಟೌನ್ ತಂಡಗಳು ಮುಖಾಮುಖಿಯಾಗಿತ್ತು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಾರ್ಲ್ ರಾಯಲ್ಸ್ ತಂಡವು ಎಂಐ ಕೇಪ್ಟೌನ್ ತಂಡಕ್ಕೆ 164 ರನ್ಗಳ ಗುರಿ ನೀಡಿತ್ತು.
ಈ ಗುರಿಯನ್ನು ಬೆನ್ನತ್ತಿದ ಕೇಪ್ಟೌನ್ ಪಡೆಗೆ ಆರಂಭಿಕ ಆಘಾತ ನೀಡುವಲ್ಲಿ ರಾಯಲ್ಸ್ ಯಶಸ್ವಿಯಾಗಿತ್ತು. ಅಲ್ಲದೆ ಕೇವಲ 52 ಎಸೆತಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಎಂಐ ಕೇಪ್ಟೌನ್ ತಂಡಕ್ಕೆ 14ನೇ ಓವರ್ನಲ್ಲಿ ತಬ್ರೇಝ್ ಶಂಸಿ ಬ್ಯಾಕ್ ಟು ಬ್ಯಾಕ್ ಶಾಕ್ ನೀಡಿದರು. 4ನೇ ಎಸೆತಗಳಲ್ಲಿ ಸ್ಯಾಮ್ ಕರನ್ ವಿಕೆಟ್ ಕಬಳಿಸಿದ ಶಂಸಿ, 6ನೇ ಎಸೆತದಲ್ಲಿ ಡೇಂಜರಸ್ ಕೀರನ್ ಪೊಲಾರ್ಡ್ರನ್ನು ಶೂನ್ಯಕ್ಕೆ ಔಟ್ ಮಾಡಿದರು.
ವಿಶೇಷ ಎಂದರೆ ಈ ಎರಡು ವಿಕೆಟ್ಗಳನ್ನು ಕಬಳಿಸಿದ ಬಳಿಕ ತಬ್ರೇಝ್ ಶಂಸಿ ತಮ್ಮ ಕೈಚಳಕ ತೋರಿಸಿದ್ದಾರೆ. ಅದು ಕೂಡ ಮೈದಾನದಲ್ಲೇ ಮ್ಯಾಜಿಕ್ ಮಾಡುವ ಮೂಲಕ ಎಂಬುದು ವಿಶೇಷ.
ಸ್ಯಾಮ್ ಕರನ್ ವಿಕೆಟ್ ಸಿಗುತ್ತಿದ್ದಂತೆ ಸಂಭ್ರಮಿಸಿದ ಶಂಸಿ ತಮ್ಮ ಕೈಯಲ್ಲಿದ್ದ ಬಟ್ಟೆ ಬಣ್ಣವನ್ನು ಬದಲಿಸಿ ಪ್ರೇಕ್ಷಕರನ್ನು ರಂಜಿಸಿದರು. ಇದೀಗ ತಬ್ರೇಝ್ ಶಂಸಿ ಅವರ ಮ್ಯಾಜಿಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Admin is speechless. 😮#Betway #SA20 #WelcomeToIncredible #PRvMICT pic.twitter.com/wGFAc2Ma0A
— Betway SA20 (@SA20_League) January 21, 2024
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾರ್ಲ್ ರಾಯಲ್ಸ್ ತಂಡವು 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 162 ರನ್ ಕಲೆಹಾಕಿತು. ಇದನ್ನು ಬೆನ್ನತ್ತಿದ ಎಂಐ ಕೇಪ್ಟೌನ್ ತಂಡವು 18.2 ಓವರ್ಗಳಲ್ಲಿ 103 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಪಾರ್ಲ್ ರಾಯಲ್ಸ್ ತಂಡ 59 ರನ್ಗಳ ಭರ್ಜರಿ ಜಯ ಸಾಧಿಸಿತು.
ಪಾರ್ಲ್ ರಾಯಲ್ಸ್ ಪ್ಲೇಯಿಂಗ್ 11: ಜೇಸನ್ ರಾಯ್ , ಜೋಸ್ ಬಟ್ಲರ್ (ವಿಕೆಟ್ ಕೀಪರ್) , ವಿಹಾನ್ ಲುಬ್ಬೆ , ಡೇವಿಡ್ ಮಿಲ್ಲರ್ (ನಾಯಕ) , ಮಿಚೆಲ್ ವ್ಯಾನ್ ಬ್ಯೂರೆನ್ , ಫ್ಯಾಬಿಯನ್ ಅಲೆನ್ , ಆಂಡಿಲ್ ಫೆಹ್ಲುಕ್ವಾಯೊ , ಜೋರ್ನ್ ಫಾರ್ಚುಯಿನ್ , ಲುಂಗಿ ಎನ್ಗಿಡಿ , ತಬ್ರೇಝ್ ಶಂಸಿ, ಒಬೆಡ್ ಮೆಕಾಯ್.
ಇದನ್ನೂ ಓದಿ: ಅಫ್ಘಾನಿಸ್ತಾನ್ ವಿರುದ್ಧ ಗೆದ್ದು ಪಾಕಿಸ್ತಾನ್ ತಂಡದ ವಿಶ್ವ ದಾಖಲೆ ಮುರಿದ ಟೀಮ್ ಇಂಡಿಯಾ
ಎಂಐ ಕೇಪ್ಟೌನ್ ಪ್ಲೇಯಿಂಗ್ 11: ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ , ರಿಯಾನ್ ರಿಕೆಲ್ಟನ್ (ವಿಕೆಟ್ ಕೀಪರ್) , ಡೆವಾಲ್ಡ್ ಬ್ರೆವಿಸ್ , ಲಿಯಾಮ್ ಲಿವಿಂಗ್ಸ್ಟೋನ್ , ಸ್ಯಾಮ್ ಕರನ್ , ಕಾನರ್ ಎಸ್ಟರ್ಹ್ಯೂಜೆನ್ , ಕೀರಾನ್ ಪೊಲಾರ್ಡ್ (ನಾಯಕ) , ಜಾರ್ಜ್ ಲಿಂಡೆ , ಕಗಿಸೊ ರಬಾಡಾ , ಥಾಮಸ್ ಕಬರ್ , ನುವಾನ್ ತುಷಾರಾ.