AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾರ್ವಕಾಲಿಕ ಟಿ20 ಇಲೆವೆನ್ ಹೆಸರಿಸಿದ ತಬ್ರೇಝ್ ಶಂಸಿ

ALL Time T20 XI: ಸೌತ್ ಆಫ್ರಿಕಾದ ಖ್ಯಾತ ಸ್ಪಿನ್ನರ್ ತಬ್ರೇಝ್ ಶಂಸಿ ಟಿ20 ಕ್ರಿಕೆಟ್​ನ ಆಲ್​ ಟೈಮ್ ಇಲೆವೆನ್ ಪ್ರಕಟಿಸಿದ್ದಾರೆ. ಹನ್ನೊಂದು ಸದಸ್ಯರ ಈ ತಂಡದಲ್ಲಿ ಪಾಕಿಸ್ತಾನ್, ಇಂಗ್ಲೆಂಡ್, ನ್ಯೂಝಿಲೆಂಡ್ ಹಾಗೂ ಶ್ರೀಲಂಕಾದ ಯಾವುದೇ ಆಟಗಾರರಿಗೆ ಸ್ಥಾನ ನೀಡಲಾಗಿಲ್ಲ ಎಂಬುದು ವಿಶೇಷ.

ಸಾರ್ವಕಾಲಿಕ ಟಿ20 ಇಲೆವೆನ್ ಹೆಸರಿಸಿದ ತಬ್ರೇಝ್ ಶಂಸಿ
Tabraiz Shamsi
ಝಾಹಿರ್ ಯೂಸುಫ್
|

Updated on:Aug 25, 2025 | 9:56 AM

Share

ಸೌತ್ ಆಫ್ರಿಕಾದ ಸ್ಪಿನ್ನರ್ ತಬ್ರೇಝ್ ಶಂಸಿ ಟಿ20 ಕ್ರಿಕೆಟ್​ನ ಸಾರ್ವಕಾಲಿಕ ಟಿ20 ಇಲೆವೆನ್ ಪ್ರಕಟಿಸಿದ್ದಾರೆ. ಸ್ಟಾರ್ ಆಟಗಾರರನ್ನು ಒಳಗೊಂಡಿರುವ ಈ ಬಳಗದಲ್ಲಿ ಟೀಮ್ ಇಂಡಿಯಾದ ಯಶಸ್ವಿ ನಾಯಕ ರೋಹಿತ್ ಶರ್ಮಾ ಇಲ್ಲ ಎಂಬುದು ವಿಶೇಷ. ಹಾಗೆಯೇ ಈ ಇಲೆವೆನ್​ನಲ್ಲಿ ಭಾರತದ ಮೂವರು ಆಟಗಾರರು ಕಾಣಿಸಿಕೊಂಡಿದ್ದಾರೆ.

ತಬ್ರೇಝ್ ಶಂಸಿ ಹೆಸರಿಸಿರುವ ಆಲ್​ ಟೈಮ್ 20 ಇಲೆವೆನ್​ನಲ್ಲಿ ಆರಂಭಿಕರಾಗಿ ಸ್ಥಾನ ಪಡೆದಿರುವುದು ವೆಸ್ಟ್ ಇಂಡೀಸ್​ನ ಕ್ರಿಸ್ ಗೇಲ್ ಹಾಗೂ ಸೌತ್ ಆಫ್ರಿಕಾದ ಕ್ವಿಂಟನ್ ಡಿಕಾಕ್. ಇನ್ನು ಮೂರನೇ ಕ್ರಮಾಂಕಕ್ಕೆ ಭಾರತದ ವಿರಾಟ್ ಕೊಹ್ಲಿಯನ್ನು ಹೆಸರಿಸಿದ್ದಾರೆ.

ಹಾಗೆಯೇ ನಾಲ್ಕನೇ ಕ್ರಮಾಂಕಕ್ಕೆ ಸ್ಫೋಟಕ ದಾಂಡಿಗ ಎಬಿ ಡಿವಿಲಿಯರ್ಸ್ ಅವರನ್ನು ಆಯ್ಕೆ ಮಾಡಿದ್ದಾರೆ. ಇದರ ಜೊತೆ ಫಾಫ್ ಡುಪ್ಲೆಸಿಸ್ ಅವರನ್ನು 5ನೇ ಕ್ರಮಾಂಕಕ್ಕೆ ಹೆಸರಿಸಿದ್ದಾರೆ. ಇನ್ನು ವಿಕೆಟ್ ಕೀಪರ್ ಬ್ಯಾಟರ್ ಆಗಿ ಮಹೇಂದ್ರ ಸಿಂಗ್ ಧೋನಿ ಅವರನ್ನು ಆಯ್ಕೆ ಮಾಡಿದ್ದಾರೆ.

ಆಲ್​ರೌಂಡರ್​ಗಳಾಗಿ ವೆಸ್ಟ್ ಇಂಡೀಸ್​ನ ಆ್ಯಂಡ್ರೆ ರಸೆಲ್ ಹಾಗೂ ಅಫ್ಘಾನಿಸ್ತಾನದ ರಶೀದ್ ಖಾನ್ ಅವರಿಗೆ ಸ್ಥಾನ ನೀಡಲಾಗಿದೆ. ಇನ್ನು ಬೌಲರ್​ಗಳಾಗಿ ಸ್ಥಾನ ಪಡೆದಿರುವುದು ಸೌತ್ ಆಫ್ರಿಕಾದ ಇಮ್ರಾನ್ ತಾಹಿರ್, ಭಾರತದ ಜಸ್​ಪ್ರೀತ್ ಬುಮ್ರಾ ಹಾಗೂ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್​.

ಇನ್ನು ಈ ತಂಡದ ನಾಯಕನಾಗಿ ಮಹೇಂದ್ರ ಸಿಂಗ್ ಧೋನಿಯನ್ನು ಹೆಸರಿಸಿದ್ದಾರೆ. ಅದರಂತೆ ತಬ್ರೇಝ್ ಶಂಸಿ ಅವರ ಸಾರ್ವಕಾಲಿಕ ಟಿ20 ಇಲೆವೆನ್ ಈ ಕೆಳಗಿನಂತಿದೆ…

  1. ಕ್ರೀಸ್ ಗೇಲ್ (ವೆಸ್ಟ್ ಇಂಡೀಸ್)
  2. ಕ್ವಿಂಟನ್ ಡಿಕಾಕ್ (ಸೌತ್ ಆಫ್ರಿಕಾ)
  3. ವಿರಾಟ್ ಕೊಹ್ಲಿ (ಭಾರತ)
  4. ಎಬಿ ಡಿವಿಲಿಯರ್ಸ್ (ಸೌತ್ ಆಫ್ರಿಕಾ)
  5. ಫಾಫ್ ಡುಪ್ಲೆಸಿಸ್ (ಸೌತ್ ಆಫ್ರಿಕಾ)
  6. ಮಹೇಂದ್ರ ಸಿಂಗ್ ಧೋನಿ (ಭಾರತ, ನಾಯಕ)
  7. ಆ್ಯಂಡ್ರೆ ರಸೆಲ್ (ವೆಸ್ಟ್ ಇಂಡೀಸ್)
  8. ರಶೀದ್ ಖಾನ್ (ಅಫ್ಘಾನಿಸ್ತಾನ್)
  9. ಇಮ್ರಾನ್ ತಾಹಿರ್ (ಸೌತ್ ಆಫ್ರಿಕಾ)
  10. ಜಸ್​ಪ್ರೀತ್ ಬುಮ್ರಾ (ಭಾರತ)
  11. ಮಿಚೆಲ್ ಸ್ಟಾರ್ಕ್​ (ಆಸ್ಟ್ರೇಲಿಯಾ)

ಇದನ್ನೂ ಓದಿ: ವಿಶ್ವ ದಾಖಲೆಯಾಟ… 378 ರನ್​​ಗಳೊಂದಿಗೆ ಇತಿಹಾಸ ನಿರ್ಮಿಸಿದ ಮ್ಯಾಥ್ಯೂ ಬ್ರೀಟ್ಝ್​ಕೆ

ಕುತೂಹಲಕಾರಿ ವಿಷಯ ಎಂದರೆ ತಬ್ರೇಝ್ ಶಂಸಿ ಹೆಸರಿಸಿರುವ ಆಲ್ ​ಟೈಮ್ ಟಿ20 ಇಲೆವೆನ್​ನಲ್ಲಿ ಪಾಕಿಸ್ತಾನದ ಯಾವುದೇ ಆಟಗಾರನಿಗೆ ಸ್ಥಾನ ನೀಡಲಾಗಿಲ್ಲ ಎಂಬುದು. ಹಾಗೆಯೇ ಶಂಸಿ ಅವರ ಟಿ20 ಇಲೆವೆನ್​ನಲ್ಲಿ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ಆಟಗಾರರು ಕೂಡ ಕಾಣಿಸಿಕೊಂಡಿಲ್ಲ.

Published On - 9:55 am, Mon, 25 August 25

ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ