ಅಫ್ಘಾನಿಸ್ತಾನದಲ್ಲಿ (Afghanistan Crisis) ತಾಲಿಬಾನ್ (Taliban) ಉಗ್ರರ ಅಟ್ಟಹಾಸ ಮುಂದುವರೆದಿದೆ. ಈಗಾಗಲೇ ಬಹುತೇಕ ಪ್ರದೇಶಗಳನ್ನು ವಶಪಡಿಸಿಕೊಂಡಿರುವ ತಾಲಿಬಾನಿಗಳು, ಇದೀಗ ತಮ್ಮ ಸರ್ಕಾರ ರಚಿಸುವತ್ತ ಹೊಸ ಹೆಜ್ಜೆಯನ್ನಿಟ್ಟಿದೆ. ಅಷ್ಟೇ ಅಲ್ಲದೆ ಅಫ್ಘಾನಿಸ್ತಾನದ ರಾಷ್ಟ್ರ ಧ್ವಜವನ್ನು ಕೆಳಗಿಸಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಅಫ್ಘಾನಿಸ್ತಾನ್ ಎಂಬ ಧ್ವಜಗಳನ್ನು ಸರ್ಕಾರಿ ಕಛೇರಿಗಳ ಮೇಲೆ ಹಾರಿಸಿದ್ದಾರೆ. ಇದರ ಬೆನ್ನಲ್ಲೇ ಅಫ್ಘಾನಿಸ್ತಾನ್ ಕ್ರಿಕೆಟ್ (Afghanistan Cricket team) ತಂಡದ ಭವಿಷ್ಯವೇನು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಈಗಾಗಲೇ ತಾಲಿಬಾನಿಗಳು ಕ್ರಿಕೆಟ್ ಸ್ಟೇಡಿಯಂಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಅದರ ಜೊತಗೆ ಅಫ್ಘಾನಿಸ್ತಾನ್ ಕ್ರಿಕೆಟ್ ಮಂಡಳಿಯ ಕಚೇರಿಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಎಕೆ -47 ರೈಫಲ್ ಜೊತೆ ಕ್ರಿಕೆಟ್ ಕಛೇರಿಗೆ ಆಗಮಿಸಿದ ತಂಡದಲ್ಲಿ ಅಫ್ಘಾನಿಸ್ತಾನ ತಂಡದ ಮಾಜಿ ಸ್ಪಿನ್ನರ್ ಅಬ್ದುಲ್ಲಾ ಮಜಾರಿ (Abdullah Mazari) ಇದ್ದಿದ್ದು ಕೂಡ ಅಚ್ಚರಿಗೆ ಕಾರಣವಾಗಿತ್ತು.
ಅಫ್ಘಾನಿಸ್ತಾನದ ಎಡಗೈ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದ ಅಬ್ದುಲ್ಲಾ ಮಜಾರಿ ಈ ಹಿಂದೆ 2 ಏಕದಿನ ಪಂದ್ಯಗಳನ್ನೂ ಆಡಿದ್ದರು. ಇದಲ್ಲದೇ, ಮಜಾರಿ 21 ಪ್ರಥಮ ದರ್ಜೆ ಪಂದ್ಯಗಳು, 16 ಲೀಸ್ಟ್ ಎ ಮತ್ತು 13 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇಷ್ಟೇ ಅಲ್ಲದೆ ಶಬಗಿಜಾ ಟಿ20 ಲೀಗ್‌ನ ಕಾಬೂಲ್ ಈಗಲ್ಸ್ ತಂಡದ ಪರ ಪ್ರಸ್ತುತ ಅಫ್ಘಾನಿಸ್ತಾನದ ಸ್ಟಾರ್ ಆಟಗಾರ ರಶೀದ್ ಖಾನ್ (Rashid Khan) ಕಣಕ್ಕಿಳಿದಿದ್ದರು.
ಇದನ್ನೂ ಓದಿ: Rashid Khan: ನಮ್ಮನ್ನು ಸಾಯಲು ಬಿಡಬೇಡಿ: ಕ್ರಿಕೆಟಿಗ ರಶೀದ್ ಖಾನ್ ಅಳಲು
ಇದೀಗ ಕ್ರಿಕೆಟ್ ಮೇಲೂ ಹಿಡಿತ ಸಾಧಿಸಲು ಹೊರಟಿರುವ ತಾಲಿಬಾನಿಗಳು ಮುಂದೆ ಅಫ್ಘಾನಿಸ್ತಾನದಲ್ಲಿ ಕ್ರಿಕೆಟ್ ಆಡಲು ಅವಕಾಶ ನೀಡಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಅಷ್ಟೇ ಅಲ್ಲದೆ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಅಫ್ಘಾನ್ ತಂಡವು ಅರ್ಹತೆ ಪಡೆದಿದ್ದು, ಇದಾಗ್ಯೂ ತಂಡದ ಭಾಗವಹಿಸುವಿಕೆ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ.
ತಾಲಿಬಾನಿಗಳು ಕ್ರಿಕೆಟ್ ಅನ್ನು ಇಷ್ಟಪಡುತ್ತಾರೆ. ಹೀಗಾಗಿ ಅಫ್ಘಾನ್ ಕ್ರಿಕೆಟಿಗರು ಮತ್ತು ಅವರ ಕುಟುಂಬಗಳಿಗೆ ಯಾವುದೇ ಅಪಾಯವಿಲ್ಲ ಎಂದು ಅಫ್ಘಾನ್ ಕ್ರಿಕೆಟ್ ಮಂಡಳಿಯ ಸಿಇಒ ಹಮೀದ್ ಶೆನ್ವಾರಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅಫಘಾನಿಸ್ತಾನ್ ಕ್ರಿಕೆಟ್ ಮಂಡಳಿಯು ಶಪಗಿಜಾ ಕ್ರಿಕೆಟ್ ಲೀಗ್ ಅನ್ನು ಸೆಪ್ಟೆಂಬರ್ 10 ರಿಂದ 25 ರವರೆಗೆ ಆಯೋಜಿಸುವುದಾಗಿ ತಿಳಿಸಿದೆ. ಇದು ಅಫ್ಘಾನ್ ಕ್ರಿಕೆಟ್ ಮಂಡಳಿಯ ಹೇಳಿಕೆಯಾದರೂ ಈ ಬಗ್ಗೆ ಇನ್ನೂ ಕೂಡ ತಾಲಿಬಾನಿಗಳಿಂದ ಯಾವುದೇ ಉತ್ತರ ಬಂದಿಲ್ಲ.
ಇತ್ತ ತಾಲಿಬಾನ್ ಗ್ಯಾಂಗ್ನಲ್ಲೇ ಅಫ್ಘಾನಿಸ್ತಾನ್ ಕ್ರಿಕೆಟಿಗ ಕಾಣಿಸಿಕೊಂಡಿರುವುದು ಇದೀಗ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಅಲ್ಲದೇ ತಮ್ಮ ಬೆಂಬಲಿಗ ಅಬ್ದುಲ್ಲಾ ಮಜಾರಿ ಮುಖಾಂತರ ಅಫ್ಘಾನ್ ಕ್ರಿಕೆಟ್ ಮಂಡಳಿಯನ್ನು ಸಂಪೂರ್ಣವಾಗಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ತಾಲಿಬಾನಿಗಳು ಮುಂದಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಒಟ್ಟಿನಲ್ಲಿ ಅಫ್ಘಾನಿಸ್ತಾನದ ಕ್ರಿಕೆಟ್ ಭವಿಷ್ಯ ಏನಾಗಲಿದೆ ಎಂಬುದಕ್ಕೆ ಮುಂಬರುವ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಸ್ಪಷ್ಟ ಉತ್ತರ ದೊರೆಯಲಿದೆ.
ಇದನ್ನೂ ಓದಿ: ICC Test Rankings: ನೂತನ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ಟಾಪ್ 10 ರಲ್ಲಿ ಮೂವರು ಭಾರತೀಯರು
ಇದನ್ನೂ ಓದಿ: T20 World Cup: ಕೊಹ್ಲಿ ಹುಟ್ಟುಹಬ್ಬದಂದು ಟಿ20 ವಿಶ್ವಕಪ್‌ನಲ್ಲಿ ಭಾರತದ ಎದುರಾಳಿ ಯಾರು?
ಇದನ್ನೂ ಓದಿ: WTC Points Table: 12 ಅಂಕಗಳಿಸಿದ ತಂಡಕ್ಕೆ ಅಗ್ರಸ್ಥಾನ: 14 ಅಂಕ ಪಡೆದರೂ ಟೀಮ್ ಇಂಡಿಯಾಗಿಲ್ಲ ಪ್ರಥಮ ಸ್ಥಾನ
(Taliban enter Afghanistan Cricket Board headquarters with ex-cricketer Abdullah Mazari)