ರಣಜಿಯಲ್ಲಿ (Ranji Trophy) ನಡೆದ ತಮಿಳುನಾಡು ಹಾಗೂ ಹೈದರಾಬಾದ್ (Hyderabad vs Tamil Nadu) ನಡುವಿನ ಮೊದಲ ಸುತ್ತಿನ ಮೊದಲ ಪಂದ್ಯದಲ್ಲಿ ತಮಿಳುನಾಡು ತಂಡ ಪಂದ್ಯವನ್ನು ರೋಚಕ ಡ್ರಾದೊಂದಿಗೆ ಅಂತ್ಯಗೊಳಿಸಿದೆ. ವಾಸ್ತವವಾಗಿ ಮಂದ ಬೆಳಕಿನ ಕಾರಣ ಅಂಪೈರ್ಗಳು ಪಂದ್ಯವನ್ನು ಡ್ರಾಗೊಳಿಸಲು ತೀರ್ಮಾನಿಸಿದರು. ಆದರೆ ಪಂದ್ಯ ಡ್ರಾಗೊಳ್ಳುವುದಕ್ಕೂ ಮುನ್ನ ತಮಿಳುನಾಡು ತಂಡದ ಆರಂಭಿಕರಿಬ್ಬರು ಮೈದಾನದಲ್ಲಿ ತಾಳಿದ ಉಗ್ರಾವತಾರದಿಂದ ಎದುರಾಳಿ ಬೌಲರ್ಗಳು ಕ್ಷಣಕಾಲ ಬೆವತು ಹೋಗಿದಂತೂ ನಿಜ. ಅಷ್ಟಕ್ಕೂ ಆಟದ ಅಂತಿಮ ದಿನದಂದು ತಮಿಳುನಾಡು ಗೆಲುವಿಗೆ 11 ಓವರ್‌ಗಳಲ್ಲಿ 144 ರನ್‌ಗಳ ಅಗತ್ಯವಿತ್ತು. ಹೀಗಾಗಿ ಪಂದ್ಯ ಡ್ರಾದಲ್ಲಿ ಅಂತ್ಯಗೊಳ್ಳುವುದು ಸ್ಪಷ್ಟವಾಗಿತ್ತು. ಆದರೆ ಗೆಲುವಿಗಾಗಿ ಹೋರಾಡಿದ ತಮಿಳುನಾಡು ತಂಡದ ಆರಂಭಿಕರಾದ ನಾರಾಯಣ ಜಗದೀಸನ್ ಮತ್ತು ಸಾಯಿ ಸುದರ್ಶನ್ (Narayan Jagdishan and Sai Sudarshan) ಕೇವಲ 7 ಓವರ್‌ಗಳಲ್ಲಿಯೇ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದ್ದರು. ಅದರಲ್ಲೂ ಈ ನೂರು ರನ್ಗಳಲ್ಲಿ ಹೆಚ್ಚಾಗಿ ಸಿಕ್ಸರ್ಗಳೇ ತುಂಪಿದ್ದವು ಎಂಬುದು ವಿಶೇಷ.
ಡಿಸೆಂಬರ್ 16 ರಂದು ಹೈದರಾಬಾದ್‌ನಲ್ಲಿ ನಡೆದ ಈ ರಣಜಿ ಟ್ರೋಫಿ ಪಂದ್ಯದಲ್ಲಿ ತಮಿಳುನಾಡು ತಂಡಕ್ಕೆ ಎರಡನೇ ಇನ್ನಿಂಗ್ಸ್‌ನಲ್ಲಿ ಗೆಲ್ಲಲು 11 ಓವರ್‌ಗಳಲ್ಲಿ 144 ರನ್‌ಗಳ ಅಗತ್ಯವಿತ್ತು. ಗುರಿ ನಿಸ್ಸಂಶಯವಾಗಿ ಕಷ್ಟಕರವಾಗಿತ್ತು, ಆದರೆ ತಮಿಳುನಾಡು ಪರ ಆರಂಭಿಕರಾಗಿ ಕಣಕ್ಕಿಳಿದ ಜಗದೀಸನ್ ಮತ್ತು ಸುದರ್ಶನ್ ತಮ್ಮ ಎಂದಿನ ಅದ್ಭುತ ಫಾರ್ಮ್ ಮುಂದುವರೆಸಿದರು.
2. 7 ಓವರ್‌ಗಳಲ್ಲಿ 108 ರನ್
ಕೊನೆಯ ದಿನದ ಆಟವಾಗಿದ್ದರಿಂದ ಬಾಕಿ ಇರುವ 11 ಓವರ್‌ಗಳಲ್ಲಿಯೇ ತಮಿಳುನಾಡು ತಂಡ ಗೆಲುವಿನ ದಡ ಸೇರಲು ಹೋರಾಡಬೇಕಿತ್ತು. ಹೀಗಾಗಿ ತಂಡಕ್ಕೆ ಬಿಗ್ ಶಾಟ್ಗಳ ಅಗತ್ಯತೆ ಇತ್ತು. ಜಗದೀಶ್ ಮತ್ತು ಸುದರ್ಶನ್ ಇದೇ ರೀತಿಯ ಆರಂಭವನ್ನು ಮಾಡಿದರು. ಮೊದಲ ಓವರ್‌ನಲ್ಲಿ ಸಿಕ್ಸರ್ ಸೇರಿದಂತೆ 13 ರನ್ ಕಲೆಹಾಕಿದರು. ಎರಡನೇ ಓವರ್‌ನಲ್ಲಿ ಕೇವಲ 3 ರನ್‌ಗಳು ಬಂದವು. ಇದರ ನಂತರ ಚೆಂಡು ಮುಂದಿನ 5 ಓವರ್‌ಗಳಲ್ಲಿ ನೇರವಾಗಿ ಬೌಂಡರಿ ದಾಟಿ ಆಚೆ ಬೀಳುತ್ತಿತ್ತು. ಸುದರ್ಶನ್ ಮತ್ತು ಜಗದೀಸನ್ ಕೇವಲ ಸಿಕ್ಸರ್‌ಗಳಲ್ಲಿ ಮಾತನಾಡಲು ಪ್ರಾರಂಭಿಸಿದರು. ಹೀಗಾಗಿ ಪ್ರತಿ ಓವರ್‌ನಲ್ಲಿ ಕನಿಷ್ಠ 2 ಸಿಕ್ಸರ್‌ಗಳು ಬರಲಾರಂಭಿಸಿದವು. ಹೀಗಾಗಿ ಎದುರಾಳಿ ಆಟಗಾರರಿಗೆ ಆಗಸದತ್ತ ನೋಡುವುದನ್ನು ಬಿಟ್ಟು ಬೇರೆ ಕೆಲಸವೇ ಇಲ್ಲದಂತ್ತಾಯಿತು.
ಚೊಚ್ಚಲ ರಣಜಿ ಪಂದ್ಯದಲ್ಲಿ ಶತಕ ಸಿಡಿಸಿದಲ್ಲದೆ ಬೌಲಿಂಗ್ನಲ್ಲೂ ಮಿಂಚಿದ ಅರ್ಜುನ್ ತೆಂಡೂಲ್ಕರ್..!
ಇವರಿಬ್ಬರ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ತಮಿಳುನಾಡು ಕೇವಲ 7ನೇ ಓವರ್ನಲ್ಲಿಯೇ 100 ರನ್ ಪೂರೈಸಿತ್ತು. ಈ ವೇಳೆ ಜಗದೀಸನ್ ಕೂಡ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ ಈ ನಂತರ ಮಂದ ಬೆಳಕಿನಿಂದಾಗಿ ಪಂದ್ಯವನ್ನು ನಿಲ್ಲಿಸಬೇಕಾಯಿತು.
3. ತಮಿಳುನಾಡಿಗೆ ಕೇವಲ 36 ರನ್‌ಗಳ ಅಗತ್ಯವಿತ್ತು
ಪಂದ್ಯ ಸ್ಥಗಿತಗೊಂಡಾಗ 4 ಓವರ್‌ಗಳು ಉಳಿದಿದ್ದು, ತಮಿಳುನಾಡಿಗೆ ಕೇವಲ 36 ರನ್‌ಗಳ ಅಗತ್ಯವಿತ್ತು. ಜಗದೀಸನ್ ಮತ್ತು ಸುದರ್ಶನ್ ಅವರ ಅಬ್ಬರದ ಬ್ಯಾಟಿಂಗ್ ಹೈದರಾಬಾದ್ ಬೌಲರ್‌ಗಳನ್ನು ದಂಗುಬಡಿಸಿತು. ಹೀಗಾಗಿ ಎದುರಾಳಿ ತಂಡದ ನಾಯಕನೂ ಸೇರಿದಂತೆ ಅನೇಕ ಆಟಗಾರರು ಪಂದ್ಯವನ್ನು ನಿಧಾನಗೊಳಿಸಲು ಪ್ರಯತ್ನಿಸಿದರು. ಇದರಿಂದಾಗಿ ಮಂದ ಬೆಳಕಿನಿಂದ ಪಂದ್ಯವನ್ನು ನಿಲ್ಲಿಸಲಾಯಿತು.
4. ಜಗದೀಸನ್-ಸುದರ್ಶನ್ ರನ್ ಲೂಟಿ
ಅಂತಿಮವಾಗಿ ಜಗದೀಸನ್ ಮತ್ತು ಸುದರ್ಶನ್ಗೆ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗದೆ ಇರಬಹುದು. ಆದರೆ ಇಬ್ಬರೂ ಖಂಡಿತವಾಗಿಯೂ ತಮ್ಮ ನಿರ್ಭೀತ ಬ್ಯಾಟಿಂಗ್‌ನಿಂದಾಗಿ ಎದುರಾಳಿ ಎದೆಯಲ್ಲಿ ನಡುಕ ಹುಟ್ಟಿಸಿದರು. ಒಟ್ಟು 43 ಎಸೆತಗಳಲ್ಲಿ ಬ್ಯಾಟಿಂಗ್ ಮಾಡಿದ ತಮಿಳುನಾಡು ತಂಡದ ಬ್ಯಾಟ್ಸ್‌ಮನ್‌ಗಳು ಒಟ್ಟು 13 ಸಿಕ್ಸರ್‌ಗಳನ್ನು ಬಾರಿಸಿದರು. ಜಗದೀಸನ್ 22 ಎಸೆತಗಳಲ್ಲಿ 59 ರನ್ ಗಳಿಸಿ ಅಜೇಯರಾಗಿ ಉಳಿದರು. ಇದರಲ್ಲಿ ಅವರ ಬ್ಯಾಟ್‌ನಿಂದ 8 ಸಿಕ್ಸರ್‌ಗಳು ಹೊರಬಂದವು. ಅದೇ ಸಮಯದಲ್ಲಿ, ಏಳನೇ ಓವರ್‌ನ ಮೊದಲ ಎಸೆತದಲ್ಲಿ ಔಟಾದ ಸುದರ್ಶನ್ 20 ಎಸೆತಗಳಲ್ಲಿ 42 ರನ್ ಗಳಿಸಿದಲ್ಲದೆ ಭರ್ಜರಿ 5 ಸಿಕ್ಸರ್‌ಗಳನ್ನು ಬಾರಿಸಿದರು.
5. ಐಪಿಎಲ್ ಹರಾಜಿಗೂ ಮುನ್ನ ಜಗದೀಸನ್ ಸೂಪರ್ ಶೋ
ತಮಿಳುನಾಡು ತಂಡ ಗೆಲ್ಲದೇ ಇರಬಹುದು, ಆದರೆ ಮೊದಲ ಇನಿಂಗ್ಸ್‌ನಲ್ಲಿ 510 ರನ್ ಗಳಿಸುವ ಮೂಲಕ 115 ರನ್ ಮುನ್ನಡೆಯಿಂದಾಗಿ 3 ಅಂಕಗಳನ್ನು ಗಳಿಸಿತು, ಆದರೆ ಹೈದರಾಬಾದ್ ಕೇವಲ 1 ಅಂಕ ಗಳಿಸಿತು. ಡಿ.23ರಂದು ನಡೆಯಲಿರುವ ಐಪಿಎಲ್ ಹರಾಜಿಗೂ ಮುನ್ನವೇ ಜಗದೀಸನ್ ಅವರ ಈ ಇನ್ನಿಂಗ್ಸ್ ಬಂದಿರುವುದು ಅತ್ಯಂತ ಮಹತ್ವದ ಸಂಗತಿ. ಕಳೆದ ತಿಂಗಳಷ್ಟೇ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಬಿಡುಗಡೆಗೊಳಿಸಿತ್ತು. ಆದರೆ ಆ ಬಳಿಕ ದೇಶೀ ಟೂರ್ನಿಯಲ್ಲಿ ಶತಕಗಳ ಮೇಲೆ ಶತಕ ಬಾರಿಸಿರುವ ಜಗದೀಸನ್ಗೆ ಮಿನಿ ಹರಾಜಿನಲ್ಲಿ ಸಾಕಷ್ಟು ಹಣ ಸಿಗುವ ಸಾಧ್ಯತೆಗಳು ಹೆಚ್ಚಿವೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ