Tamim Iqbal: ಕಣ್ಣೀರಿಡುತ್ತ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಾಂಗ್ಲಾ ತಂಡದ ನಾಯಕ..!
Tamim Iqbal Retires: ಬಾಂಗ್ಲಾದೇಶದ ಏಕದಿನ ತಂಡದ ನಾಯಕ ತಮೀಮ್ ಇಕ್ಬಾಲ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮೂಲಕ ಕ್ರಿಕೆಟ್ ಜಗತ್ತಿಗೆ ಆಘಾತ ನೀಡಿದ್ದಾರೆ.
ಏಕದಿನ ವಿಶ್ವಕಪ್‌ಗೆ (ODI World Cup) ಇನ್ನು ಕೇವಲ 3 ತಿಂಗಳು ಬಾಕಿ ಇರುವಾಗಲೇ ಬಾಂಗ್ಲಾ ಕ್ರಿಕೆಟ್ (Bangladesh Cricket) ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಬಾಂಗ್ಲಾದೇಶದ ಏಕದಿನ ತಂಡದ ನಾಯಕ ತಮೀಮ್ ಇಕ್ಬಾಲ್ (Bangladesh ODI captain Tamim Iqbal) ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್ ನಿವೃತ್ತಿ ಘೋಷಿಸುವ (Announces Retirement from International Cricket) ಮೂಲಕ ಕ್ರಿಕೆಟ್ ಜಗತ್ತಿಗೆ ಆಘಾತ ನೀಡಿದ್ದಾರೆ. ಪ್ರಸ್ತುತ ಅಫ್ಘಾನಿಸ್ತಾನ ವಿರುದ್ಧ ಬಾಂಗ್ಲಾ ತಂಡ ಏಕದಿನ ಸರಣಿ ಆಡುತ್ತಿದ್ದು, ಅಫ್ಘಾನ್ ವಿರುದ್ಧ ಮೊದಲ ಏಕದಿನ ಪಂದ್ಯ ಸೋತ ಬಳಿಕ ತಮೀಮ್ ತಮ್ಮ ನಿವೃತ್ತಿ ನಿರ್ಧಾರಕ್ಕೆ ಬಂದಿದ್ದಾರೆ. ಆರಂಭಿಕನಾಗಿ ತಮೀಮ್ ಫಿಟ್ ಇಲ್ಲ ಎಂಬ ವರದಿಗಳು ಕೇಳಿಬಂದ ಬಳಿಕವೂ ಅವರು ತಂಡದಲ್ಲಿ ಆಡಲು ನಿರ್ಧರಿಸಿದ್ದರು. ಆದರೆ ಅಫ್ಘಾನ್ ವಿರುದ್ಧದ ಮೊದಲ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ತಮೀಮ್ ಕೇವಲ 13 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದರು.
ಈ ಬಗ್ಗೆ ಭಾವನಾತ್ಮಕ ಹೇಳಿಕೆ ನೀಡಿರುವ ತಮೀಮ್, ‘‘ತಂಡದ ಯಶಸ್ಸಿಗೆ ನಾನು ನನ್ನ ಅತ್ಯುತ್ತಮವಾದದನ್ನು ನೀಡಿದ್ದೇನೆ. ನಾನು ಈ ಕ್ಷಣದಿಂದ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿದ್ದೇನೆ. ನನಗೆ ಸಹಕರಿಸಿದ ನನ್ನ ಎಲ್ಲಾ ತಂಡದ ಸಹ ಆಟಗಾರರು, ತರಬೇತುದಾರರು, ಬಿಸಿಬಿ ಅಧಿಕಾರಿಗಳು, ನನ್ನ ಕುಟುಂಬ ಸದಸ್ಯರು ಮತ್ತು ನನ್ನ ಎಲ್ಲ ಸದಸ್ಯರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಸುದೀರ್ಘ ಪ್ರಯಾಣದಲ್ಲಿ ನನ್ನೊಂದಿಗೆ ಇದ್ದವರಿಗೆ, ನನ್ನ ಮೇಲೆ ನಂಬಿಕೆ ಇಟ್ಟಿದ್ದವರಿಗೆ ಹಾಗೂ ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಿಮ್ಮ ಪ್ರೀತಿ ಮತ್ತು ನನ್ನ ಮೇಲೆ ನೀವು ಇಟ್ಟಿದ್ದ ನಂಬಿಕೆ ಬಾಂಗ್ಲಾದೇಶಕ್ಕಾಗಿ ನನ್ನ ಅತ್ಯುತ್ತಮವಾದದ್ದನ್ನು ನೀಡಲು ನನಗೆ ಸ್ಫೂರ್ತಿ ನೀಡಿದೆ’’ ಎಂದು ತಮೀಮ್ ಹೇಳಿಕೊಂಡಿದ್ದಾರೆ.
ಸೆಮಿಫೈನಲ್ನಲ್ಲಿ ಸೋತ ಪಾಕ್! ಏಷ್ಯಾಕಪ್ ಫೈನಲ್ನಲ್ಲಿ ಭಾರತ- ಬಾಂಗ್ಲಾ ಮುಖಾಮುಖಿ
12 ಗಂಟೆಗೆ ಹಠಾತ್ ಪತ್ರಿಕಾಗೋಷ್ಠಿ
ಲಭ್ಯವಿರುವ ಮಾಹಿತಿ ಪ್ರಕಾರ ಸ್ಥಳೀಯ ಕಾಲಮಾನ ಮಧ್ಯಾಹ್ನ 12 ಗಂಟೆಗೆ ಹಠಾತ್ ಪತ್ರಿಕಾಗೋಷ್ಠಿ ಕರೆದ ತಮೀಮ್ ಇಕ್ಬಾಲ್ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ. ವೃತ್ತಿ ಬದುಕಿಗೆ ವಿದಾಯ ಹೇಳುವ ವೇಳೆ ತಮೀಮ್ ಇಕ್ಬಾಲ್ ಅತ್ಯಂತ ಭಾವುಕರಾಗಿದ್ದರು ಎಂದು ವರದಿಯಾಗಿದೆ. ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಕೇವಲ ಮೂರು ತಿಂಗಳು ಬಾಕಿ ಇರುವಾಗ ತಮೀಮ್ ಅವರು ತೆಗೆದುಕೊಂಡಿರುವ ಈ ನಿರ್ಧಾರ ಬಾಂಗ್ಲಾದೇಶ ಕ್ರಿಕೆಟ್‌ಗೆ ಭಾರಿ ಆಘಾತ ತಂದಿದೆ. ಬಾಂಗ್ಲಾ ತಂಡ ಈಗಾಗಲೇ ವಿಶ್ವಕಪ್‌ಗೆ ಅರ್ಹತೆ ಪಡೆದಿದ್ದು, ವೇಳಾಪಟ್ಟಿಯ ಪ್ರಕಾರ ಅಕ್ಟೋಬರ್ 7 ರಂದು ಬಾಂಗ್ಲಾ ತಂಡ ತನ್ನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ.
Tamim Iqbal retires from international cricket.#TamimIqbal #BANvAFG pic.twitter.com/MtGkgpwRAv
— Syed Sami (@SamisDaily) July 6, 2023
ಇದೀಗ ಏಕದಿನ ಸ್ವರೂಪದಲ್ಲಿ ಬಾಂಗ್ಲಾ ತಂಡದ ನಾಯಕತ್ವವಹಿಸಿದ್ದ ತಮೀಮ್ ಇಕ್ಬಾಲ್ ವೃತ್ತಿ ಬದುಕಿಗೆ ವಿದಾಯ ಹೇಳಿರುವುದರಿಂದ ವಿಶ್ವಕಪ್ ವೇಳೆಗೆ ಬಾಂಗ್ಲಾ ತಂಡಕ್ಕೆ ನೂತನ ಹಾಗೂ ಸಮರ್ಥ ನಾಯಕನನ್ನು ಆಯ್ಕೆ ಮಾಡುವುದು ಬಾಂಗ್ಲಾ ಮಂಡಳಿಗೆ ಎದುರಾಗಿರುವ ಪ್ರಮುಖ ಸವಾಲಾಗಿದೆ. ಶಕೀಬ್ ಅಲ್ ಹಸನ್ ಸದ್ಯಕ್ಕೆ ಟಿ20 ತಂಡದ ನಾಯಕನಾಗಿದ್ದು, ಲಿಟ್ಟನ್ ದಾಸ್ ಬಾಂಗ್ಲಾ ಟೆಸ್ಟ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹೀಗಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಈ ಇಬ್ಬರಲ್ಲಿ ಒಬ್ಬರನ್ನು ಏಕದಿನ ವಿಶ್ವಕಪ್‌ವರೆಗೆ ಏಕದಿನ ತಂಡದ ನಾಯಕನನ್ನಾಗಿ ನೇಮಿಸುವ ಸಾಧ್ಯತೆ ಇದೆ.
ಬಾಂಗ್ಲಾದೇಶ ಪರ ಇದುವರೆಗೆ 70 ಟೆಸ್ಟ್ ಪಂದ್ಯಗಳನ್ನು ಆಡಿರುವ ತಮೀಮ್ ಇಕ್ಬಾಲ್ ಈ ಮಾದರಿಯಲ್ಲಿ 38.89 ಸರಾಸರಿಯಲ್ಲಿ 5134 ರನ್ ಕಲೆಹಾಕಿದ್ದಾರೆ. ಇದರಲ್ಲಿ 10 ಶತಕಗಳು ಸೇರಿವೆ. ಅವರು ಕೊನೆಯದಾಗಿ ಈ ಸ್ವರೂಪದಲ್ಲಿ ಐರ್ಲೆಂಡ್ ವಿರುದ್ಧ ಏಪ್ರಿಲ್‌ನಲ್ಲಿ ಆಡಿದ್ದರು. ಆ ನಂತರ ತಮೀಮ್ ಟೆಸ್ಟ್ ತಂಡದಲ್ಲಿ ಕಾಣಿಸಿಕೊಂಡಿರಲಿಲ್ಲ.
ಭಾರತಕ್ಕೆ ಸೋಲಿನ ಶಾಕ್ ನೀಡಿದ್ದ ತಮೀಮ್
ಇನ್ನು ಏಕದಿನ ಮಾದರಿಯಲ್ಲಿ 241 ಪಂದ್ಯಗಳನ್ನು ಆಡಿರುವ ತಮೀಮ್, 36.62 ಸರಾಸರಿಯಲ್ಲಿ 14 ಶತಕಗಳು ಮತ್ತು 56 ಅರ್ಧ ಶತಕಗಳು ಸೇರಿದಂತೆ ಇಟ್ಟು 8313 ರನ್ ಕಲೆ ಹಾಕಿದ್ದಾರೆ. ಈ ಮೂಲಕ ಬಾಂಗ್ಲಾದೇಶ ಪರ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಆಟಗಾರನಾಗಿ ತಮೀಮ್ ತನ್ನ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ. 2007 ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾವನ್ನು ಬಾಂಗ್ಲಾ ತಂಡ ಸೋಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ತಮೀಮ್, ತನ್ನ ಅರ್ಧಶತಕದ ಇನ್ನಿಂಗ್ಸ್ಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಪಡೆದಿದ್ದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:23 pm, Thu, 6 July 23