ಐಸಿಸಿ ವರ್ಷದ ಅತ್ಯುತ್ತಮ ಮಹಿಳಾ ಟಿ20 ಕ್ರಿಕೆಟರ್ ಆಗಿ ಇಂಗ್ಲೆಂಡ್‌ನ ಟಮ್ಮಿ ಬ್ಯೂಮಾಂಟ್ ಆಯ್ಕೆ..!

ಐಸಿಸಿ ವರ್ಷದ ಅತ್ಯುತ್ತಮ ಮಹಿಳಾ ಟಿ20 ಕ್ರಿಕೆಟರ್ ಆಗಿ ಇಂಗ್ಲೆಂಡ್‌ನ ಟಮ್ಮಿ ಬ್ಯೂಮಾಂಟ್ ಆಯ್ಕೆ..!
ಟಮ್ಮಿ ಬ್ಯೂಮಾಂಟ್

Best women's T20 cricketer of the year: ಇಂಗ್ಲೆಂಡಿನ ಅತ್ಯುತ್ತಮ ಆಟಗಾರ್ತಿ ಟಮ್ಮಿ ಬ್ಯೂಮಾಂಟ್ ಅವರನ್ನು ವರ್ಷದ ಅತ್ಯುತ್ತಮ ಟಿ20 ಕ್ರಿಕೆಟರ್ ಎಂದು ಐಸಿಸಿ ಆಯ್ಕೆ ಮಾಡಿದೆ.

TV9kannada Web Team

| Edited By: pruthvi Shankar

Jan 23, 2022 | 4:00 PM

ಇಂಗ್ಲೆಂಡಿನ ಅತ್ಯುತ್ತಮ ಆಟಗಾರ್ತಿ ಟಮ್ಮಿ ಬ್ಯೂಮಾಂಟ್ ಅವರನ್ನು ವರ್ಷದ ಅತ್ಯುತ್ತಮ ಟಿ20 ಕ್ರಿಕೆಟರ್ ಎಂದು ಐಸಿಸಿ ಆಯ್ಕೆ ಮಾಡಿದೆ. ಅವರು ಒಂಬತ್ತು ಪಂದ್ಯಗಳಲ್ಲಿ 303 ರನ್ ಗಳಿಸಿದರು. ಜೊತೆಗೆ ಮೂರು ಅರ್ಧ ಶತಕಗಳನ್ನು ಸಹ ಗಳಿಸಿದ್ದಾರೆ. ಬ್ಯೂಮಾಂಟ್ 2021 ರಲ್ಲಿ ಇಂಗ್ಲೆಂಡ್ ಪರ T20 ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ವಿದೇಶ ಸರಣಿಯಲ್ಲಿ ಅವರು ತಂಡದ ಅತಿ ಹೆಚ್ಚು ಸ್ಕೋರರ್ ಆಗಿದ್ದರು. ಈ ಸರಣಿಯ ಎರಡನೇ ಪಂದ್ಯದಲ್ಲಿ ಅವರು 53 ಎಸೆತಗಳಲ್ಲಿ 63 ರನ್ ಗಳಿಸಿದರು.

ನ್ಯೂಜಿಲೆಂಡ್ ತಂಡ ಇಂಗ್ಲೆಂಡ್‌ಗೆ ಬಂದಾಗ, ಈ ಆಟಗಾರ್ತಿ ಮತ್ತೆ ತನ್ನ ಪ್ರತಿಭೆಯನ್ನು ತೋರಿಸಿದರು. ಸೀಮಿತ ಓವರ್‌ಗಳ ಸರಣಿಯಲ್ಲಿ, ಅವರು ಮತ್ತೊಮ್ಮೆ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎನಿಸಿಕೊಂಡರು. ಸರಣಿಯ ಮೊದಲ ಪಂದ್ಯದಲ್ಲೇ ಅವರ ಬ್ಯಾಟ್‌ನಿಂದ 97 ರನ್‌ಗಳ ಇನ್ನಿಂಗ್ಸ್ ಬಂದಿತ್ತು.

ಸ್ಮೃತಿ ಮಂಧಾನಗೆ ಕೈತಪ್ಪಿದ ಅವಕಾಶ ಈ ಪ್ರಶಸ್ತಿ ರೇಸ್​ನಲ್ಲಿ ಬ್ಯೂಮಾಂಟ್ ಮೂವರು ಆಟಗಾರರ್ತಿಯರನ್ನು ಹಿಂದಿಕ್ಕಿದ್ದಾರೆ. ಈ ಪ್ರಶಸ್ತಿಯ ರೇಸ್‌ನಲ್ಲಿ ಗ್ಯಾಬಿ ಲೆವಿಸ್, ಸ್ಮೃತಿ ಮಂಧಾನ ಮತ್ತು ಅವರ ದೇಶವಾಸಿ ನಟಾಲಿ ಸ್ರೈಬರ್ ಅವರು ಸಹ ಸ್ಪರ್ಧೆಯಲ್ಲಿದ್ದರು. ಆದರೆ ಈ ಮೂವರು ಆಟಗಾರ್ತಿಯರು ಬ್ಯೂಮಾಂಟ್‌ಗಿಂತ ಕಡಿಮೆ ಮತಗಳನ್ನು ಗಳಿಸಿ ಪ್ರಶಸ್ತಿ ರೇಸ್​ನಿಂದ ಹೊರಬಿದ್ದರು.

ವೃತ್ತಿ ಬದುಕು ಹೀಗಿದೆ ಬ್ಯೂಮಾಂಟ್ ಅವರ ವೃತ್ತಿಜೀವನವನ್ನು ನೋಡಿದರೆ, ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಟಿ20 ಪಂದ್ಯಗಳಲ್ಲಿ ಶತಕ ಗಳಿಸಲು ಕೇವಲ ಒಂದು ಪಂದ್ಯದ ಅಂತರದಲ್ಲಿದ್ದಾರೆ. ಅವರು ಇದುವರೆಗೆ 99 ಪಂದ್ಯಗಳನ್ನು ಆಡಿದ್ದಾರೆ. ಇಷ್ಟು ಪಂದ್ಯಗಳಲ್ಲಿ ಅವರ ಬ್ಯಾಟ್‌ನಿಂದ 1721 ರನ್ ಗಳಿಸಿದ್ದಾರೆ. ಮತ್ತೊಂದೆಡೆ, ಏಕದಿನ ಪಂದ್ಯಗಳ ವಿಷಯಕ್ಕೆ ಬಂದರೆ, ಬ್ಯೂಮಾಂಟ್ 82 ಪಂದ್ಯಗಳನ್ನು ಆಡಿದ್ದು 2890 ರನ್ ಗಳಿಸಿದ್ದಾರೆ. ಅವರು ಟೆಸ್ಟ್‌ನಲ್ಲಿ ಐದು ಪಂದ್ಯಗಳಲ್ಲಿ ಇಂಗ್ಲೆಂಡ್ ಅನ್ನು ಪ್ರತಿನಿಧಿಸಿದ್ದಾರೆ. ಇಷ್ಟು ಪಂದ್ಯಗಳಲ್ಲಿ ಅವರ ಬ್ಯಾಟ್ 198 ರನ್ ಗಳಿಸಿದೆ. ಅವರು T20I ಗಳಲ್ಲಿ 23.90 ಸರಾಸರಿ ಹೊಂದಿದ್ದಾರೆ ಮತ್ತು ಈ ಸ್ವರೂಪದಲ್ಲಿ ಒಂದು ಶತಕ ಮತ್ತು 10 ಅರ್ಧ ಶತಕಗಳನ್ನು ಗಳಿಸಿದ್ದಾರೆ. ODIಗಳಲ್ಲಿ ಅವರ ಸರಾಸರಿ 44.46 ಆಗಿದೆ. ಇಲ್ಲಿ ಅವರು ಎಂಟು ಶತಕ ಮತ್ತು 13 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅವರು ಟೆಸ್ಟ್‌ನಲ್ಲಿ ಎರಡು ಅರ್ಧಶತಕಗಳನ್ನು ಗಳಿಸಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada