AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತದ ಮುಂದಿರುವುದು ಕೇವಲ 3 ಏಕದಿನ ಪಂದ್ಯಗಳು

Champions Trophy 2025: ಚಾಂಪಿಯನ್ಸ್​ ಟ್ರೋಫಿಯ ಪೂರ್ವ ಸಿದ್ಧತೆಗಾಗಿ ಬಿಸಿಸಿಐ ಕೇವಲ 3 ಪಂದ್ಯಗಳ ಏಕದಿನ ಸರಣಿಯನ್ನು ನಿಗದಿ ಮಾಡಿದೆ. ಅಂದರೆ ಸೆಪ್ಟೆಂಬರ್​ನಿಂದ ಮುಂದಿನ ಫೆಬ್ರವರಿ ನಡುವೆ ಟೀಮ್ ಇಂಡಿಯಾ ಆಡಲಿರುವುದು ಕೇವಲ ಮೂರು ಏಕದಿನ ಪಂದ್ಯಗಳನ್ನು ಮಾತ್ರ. ಅತ್ತ ಚಾಂಪಿಯನ್ಸ್ ಟ್ರೋಫಿ ಏಕದಿನ ಮಾದರಿಯಲ್ಲಿ ಜರುಗಲಿದೆ.

ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತದ ಮುಂದಿರುವುದು ಕೇವಲ 3 ಏಕದಿನ ಪಂದ್ಯಗಳು
Team India
ಝಾಹಿರ್ ಯೂಸುಫ್
|

Updated on: Aug 11, 2024 | 7:57 AM

Share

ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಟೀಮ್ ಇಂಡಿಯಾ ಕೇವಲ ಮೂರು ಏಕದಿನ ಪಂದ್ಯಗಳನ್ನಾಡಲಿದೆ. ಅಚ್ಚರಿ ಎನಿಸಿದರೂ ಇದು ಸತ್ಯ. ಬಿಸಿಸಿಐ ರೂಪಿಸಿರುವ ವೇಳಾಪಟ್ಟಿ ಪ್ರಕಾರ ಈ ಟೂರ್ನಿಗೂ ಮುಂದಿನ ಚಾಂಪಿಯನ್ಸ್​ ಟ್ರೋಫಿಯವರೆಗೆ ಭಾರತ ಆಡಲಿರುವುದು ಕೇವಲ ಮೂರು ಏಕದಿನ ಪಂದ್ಯಗಳನ್ನು ಮಾತ್ರ.

ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಚಾಂಪಿಯನ್ಸ್​ ಟ್ರೋಫಿ ನಡೆಯುತ್ತಿರುವುದು ಏಕದಿನ ಸ್ವರೂಪದಲ್ಲಿ ಎಂಬುದು. ಇದಾಗ್ಯೂ ಬಿಸಿಸಿಐ ತನ್ನ ವೇಳಾಪಟ್ಟಿಯಲ್ಲಿ ಟಿ20 ಹಾಗೂ ಟೆಸ್ಟ್ ಪಂದ್ಯಗಳಿಗೆ ಆದ್ಯತೆ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.

ಏಕೆಂದರೆ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಬಲಿಷ್ಠ ಪಡೆಯನ್ನು ರೂಪಿಸಿಕೊಳ್ಳಬೇಕಾದ ಅನಿವಾರ್ಯತೆ ಭಾರತದ ಮುಂದಿದೆ. ಇದೇ ಕಾರಣದಿಂದಾಗಿ ಇತ್ತೀಚೆಗೆ ಮುಗಿದ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಕೋಚ್ ಹಲವು ಪ್ರಯೋಗಗಳನ್ನು ಮಾಡಿದ್ದರು. ಆದರೆ ಈ ಪ್ರಯೋಗಗಳು ಕೈ ಕೊಟ್ಟಿದೆ.

ಇದರ ಬೆನ್ನಲ್ಲೇ ಚಾಂಪಿಯನ್ಸ್ ಟ್ರೋಫಿಗೆ ಬಲಿಷ್ಠ ಭಾರತ ಪಡೆಯನ್ನು ರೂಪಿಸಬೇಕಾದ ಅನಿವಾರ್ಯತೆ ಇರುವುದು ಕೂಡ ಬಹಿರಂಗವಾಗಿದೆ. ಆದರೆ ಇದಕ್ಕಾಗಿ ಟೀಮ್ ಇಂಡಿಯಾ ಮುಂದೆ ಉಳಿದಿರುವುದು ಕೇವಲ ಏಕದಿನ ಪಂದ್ಯಗಳು ಮಾತ್ರ. ಅದು ಸಹ ಮುಂದಿನ ವರ್ಷ.

ಅಂದರೆ 2025ರ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಸರಣಿಯಲ್ಲಿ ಟೀಮ್ ಇಂಡಿಯಾ ಮೂರು ಏಕದಿನ ಪಂದ್ಯಗಳನ್ನಾಡಲಿದೆ. ಈ ಪಂದ್ಯಗಳ ಮೂಲಕ ಭಾರತವು ಬಲಿಷ್ಠ ಪ್ಲೇಯಿಂಗ್ ಇಲೆವೆನ್ ರೂಪಿಸಿಕೊಳ್ಳಬೇಕಾಗಿದೆ.

ಇತ್ತ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪೂರ್ವ ಸಿದ್ಧತೆಗಾಗಿ ಬಿಸಿಸಿಐ ಯಾವುದೇ ಪ್ಲ್ಯಾನ್ ರೂಪಿಸದೇ ಇರುವುದು ಅಚ್ಚರಿಗೆ ಕಾರಣವಾಗಿದ್ದು, ಹೀಗಾಗಿ ಮುಂದಿನ ವರ್ಷ ನಡೆಯಲಿರುವ ಮೂರು ಪಂದ್ಯಗಳ ಮೂಲಕ ಭಾರತ ತಂಡವನ್ನು ಹೇಗೆ ಆಯ್ಕೆ ಮಾಡುತ್ತಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಭಾರತ vs ಇಂಗ್ಲೆಂಡ್ ಸರಣಿ ಯಾವಾಗ ಶುರು?

2025 ರಲ್ಲಿ ಟೀಮ್ ಇಂಡಿಯಾ ತನ್ನ ಮೊದಲ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಭಾರತದಲ್ಲಿ ಜರುಗಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ 5 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನಾಡಲಿದೆ.

ತಂಡಗಳು ದಿನಾಂಕ ಸಮಯ ಸ್ಥಳ
1ನೇ ಟಿ20, ಭಾರತ vs ಇಂಗ್ಲೆಂಡ್ ಬುಧವಾರ, 22 ಜನವರಿ 2025 7 PM ಚೆನ್ನೈ
2ನೇ ಟಿ20, ಭಾರತ vs ಇಂಗ್ಲೆಂಡ್ ಶನಿವಾರ, 25 ಜನವರಿ 2025 7 PM ಕೋಲ್ಕತ್ತಾ
3ನೇ ಟಿ20, ಭಾರತ vs ಇಂಗ್ಲೆಂಡ್ ಮಂಗಳವಾರ, 28 ಜನವರಿ 2025 7 PM ರಾಜ್ಕೋಟ್
4ನೇ ಟಿ20, ಭಾರತ vs ಇಂಗ್ಲೆಂಡ್ ಶುಕ್ರವಾರ, 31 ಜನವರಿ 2025 7 PM ಪುಣೆ
5ನೇ ಟಿ20, ಭಾರತ vs ಇಂಗ್ಲೆಂಡ್ ಭಾನುವಾರ, 2 ಫೆಬ್ರವರಿ 2025 7 PM ಮುಂಬೈ
1ನೇ ಏಕದಿನ, ಭಾರತ vs ಇಂಗ್ಲೆಂಡ್ ಗುರುವಾರ, 6 ಫೆಬ್ರವರಿ 2025 1:30 PM ನಾಗ್ಪುರ
2ನೇ ಏಕದಿನ, ಭಾರತ vs ಇಂಗ್ಲೆಂಡ್ ಭಾನುವಾರ, 9 ಫೆಬ್ರವರಿ 2025 1:30 PM ಕಟಕ್
3ನೇ ಏಕದಿನ, ಭಾರತ vs ಇಂಗ್ಲೆಂಡ್ ಬುಧವಾರ, 12 ಫೆಬ್ರವರಿ 2025 1:30 PM ಅಹಮದಾಬಾದ್

ಚಾಂಪಿಯನ್ಸ್ ಟ್ರೋಫಿ ಯಾವಾಗ?

ಚಾಂಪಿಯನ್ಸ್​ ಟ್ರೋಫಿ ಟೂರ್ನಿಗಾಗಿ ತಾತ್ಕಾಲಿಕ ದಿನಾಂಕ ನಿಗದಿ ಮಾಡಲಾಗಿದೆ. ಅದರಂತೆ ಮುಂದಿನ ವರ್ಷ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಆದರೆ ಈ ಟೂರ್ನಿಯಲ್ಲಿ ಭಾರತ ತಂಡ ಪಾಲ್ಗೊಳ್ಳಲಿದೆಯಾ ಎಂಬುದೇ ಪ್ರಶ್ನೆ. ಏಕೆಂದರೆ ಈ ಟೂರ್ನಿ ಪಾಕಿಸ್ತಾನದಲ್ಲಿ ನಡೆಯಲಿದ್ದು, ಪಾಕ್​ನಲ್ಲಿ ಟೂರ್ನಿ ಆಯೋಜನೆಗೊಳ್ಳುವುದಾದರೆ ಭಾರತ ತಂಡವು ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಲು ಮನವಿ ಮಾಡಬಹುದು.