AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೂಪರ್ ಸಂಡೆ: ಟೀಮ್ ಇಂಡಿಯಾಗೆ ಇಂದು ಎರಡು ಪಂದ್ಯಗಳು

ಡಿಸೆಂಬರ್ 14 ರಂದು ಎರಡು ಬಿಗ್ ಮ್ಯಾಚ್​ಗಳು ನಡೆಯಲಿವೆ. ಒಂದು ಭಾರತ ಮತ್ತು ಪಾಕಿಸ್ತಾನ್ ನಡುವೆಯಾದರೆ, ಮತ್ತೊಂದು ಭಾರತ ಮತ್ತು ಸೌತ್ ಆಫ್ರಿಕಾ ನಡುವೆ. ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯಕ್ಕೆ ದುಬೈ ಆತಿಥ್ಯವಹಿಸಿದರೆ, ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಮ್ಯಾಚ್ ಧರ್ಮಶಾಲಾದಲ್ಲಿ ಜರುಗಲಿದೆ.

ಸೂಪರ್ ಸಂಡೆ: ಟೀಮ್ ಇಂಡಿಯಾಗೆ ಇಂದು ಎರಡು ಪಂದ್ಯಗಳು
Team India
ಝಾಹಿರ್ ಯೂಸುಫ್
|

Updated on: Dec 14, 2025 | 9:40 AM

Share

ಭಾರತ ತಂಡ ಭಾನುವಾರ (ಡಿ.14) ಎರಡು ಪಂದ್ಯಗಳನ್ನಾಡಲಿದೆ. ಒಂದು ಮ್ಯಾಚ್​ನಲ್ಲಿ ಕಿರಿಯರು ಕಣಕ್ಕಿಳಿದರೆ, ಮತ್ತೊಂದು ಮ್ಯಾಚ್​ನಲ್ಲಿ ಹಿರಿಯರು ಆಡಲಿದ್ದಾರೆ. ಇಲ್ಲಿ ಹಿರಿಯರು ಸೌತ್ ಆಫ್ರಿಕಾ ವಿರುದ್ಧ ಮೂರನೇ ಟಿ20 ಪಂದ್ಯವನ್ನಾಡಲಿದೆ. ಹಾಗೆಯೇ ಕಿರಿಯರು ಏಷ್ಯಾಕಪ್​ ಟೂರ್ನಿಯಲ್ಲಿ ಎರಡನೇ ಮ್ಯಾಚ್​ನಲ್ಲಿ ಕಣಕ್ಕಿಳಿಯಲಿದ್ದಾರೆ.

ವಿಶೇಷ ಎಂದರೆ ಭಾರತ ಕಿರಿಯರ ತಂಡದ ಎದುರಾಳಿ ಪಾಕಿಸ್ತಾನ್. ಹೀಗಾಗಿ ಈ ಪಂದ್ಯವು ಅಂಡರ್-19 ಟೀಮ್ ಇಂಡಿಯಾ ಪಾಲಿಗೆ ಮಹತ್ವದ್ದಾಗಿ ಮಾರ್ಪಟ್ಟಿದೆ. ಇತ್ತ ಸೌತ್ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯ ಸೋತಿರುವ ಟೀಮ್ ಇಂಡಿಯಾ ಹಿರಿಯರ ತಂಡ ಇಂದಿನ ಮ್ಯಾಚ್​ನಲ್ಲಿ ಕಂಬ್ಯಾಕ್ ಮಾಡುವ ನಿರೀಕ್ಷೆಯಿದೆ.

ಎಷ್ಟು ಗಂಟೆಗೆ ಪಂದ್ಯ ಶುರು?

ಅಂಡರ್-19 ಏಷ್ಯಾಕಪ್ ಏಕದಿನ ಟೂರ್ನಿಯ 5ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಈ ಮ್ಯಾಚ್ ಭಾರತೀಯ ಕಾಲಮಾನ ಬೆಳಿಗ್ಗೆ 10.30 ರಿಂದ ಶುರುವಾಗಲಿದೆ.

ಇನ್ನು ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಮೂರನೇ ಟಿ20 ಪಂದ್ಯವು ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಶುರುವಾಗಲಿದೆ. ಇನ್ನು ಟಾಸ್ ಪ್ರಕ್ರಿಯೆಯು 6.30 ಕ್ಕೆ ನಡೆಯಲಿದೆ.

ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಮೂರನೇ ಟಿ20 ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್​ ಚಾನೆಲ್​ಗಳಲ್ಲಿ ವೀಕ್ಷಿಸಬಹುದು. ಇದರ ಜೊತೆಗೆ ಜಿಯೋ ಹಾಟ್​ ಸ್ಟಾರ್​ ವೆಬ್​ಸೈಟ್ ಹಾಗೂ ಆ್ಯಪ್​ನಲ್ಲಿ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು.

ಇನ್ನು ಭಾರತ ಮತ್ತು ಪಾಕಿಸ್ತಾನ್ ಅಂಡರ್-19 ತಂಡಗಳ ಕದನವನ್ನು ಸೋನಿ ಸ್ಪೋರ್ಟ್ಸ್ ಟೆನ್-1 ಚಾನೆಲ್‌ನಲ್ಲಿ ವೀಕ್ಷಿಸಬಹುದು. ಹಾಗೆಯೇ ಸೋನಿ ಲೈವ್ ಆ್ಯಪ್​ನಲ್ಲೂ ಈ ಪಂದ್ಯದ ಲೈವ್ ಸ್ಟ್ರೀಮಿಂಗ್ ಇರಲಿದೆ.

ನಾಲ್ಕು ತಂಡಗಳು:

ಭಾರತ ಅಂಡರ್​-19 ತಂಡ: ವೈಭವ್ ಸೂರ್ಯವಂಶಿ, ಆಯುಷ್ ಮ್ಹಾತ್ರೆ (ನಾಯಕ), ವಿಹಾನ್ ಮಲ್ಹೋತ್ರಾ, ಕನಿಷ್ಕ್ ಚೌಹಾಣ್, ಅಭಿಗ್ಯಾನ್ ಕುಂದು(ವಿಕೆಟ್ ಕೀಪರ್), ಹರ್ವಂಶ್ ಪಂಗಾಲಿಯಾ, ಖಿಲಾನ್ ಪಟೇಲ್, ಹೆನಿಲ್ ಪಟೇಲ್, ದೀಪೇಶ್ ದೇವೇಂದ್ರನ್, ಉಧವ್ ಮೋಹನ್, ನಮನ್ ಪುಷ್ಪಕ್, ವೇದಾಂತ್ ತ್ರಿವೇದಿ, ಕಿಶನ್ ಕುಮಾರ್ ಸಿಂಗ್, ಆರನ್ ಜಾರ್ಜ್, ಯುವರಾಜ್ ಗೋಹಿಲ್.

ಪಾಕಿಸ್ತಾನ್ ಅಂಡರ್-19 ತಂಡ: ಉಸ್ಮಾನ್ ಖಾನ್, ಫರ್ಹಾನ್ ಯೂಸುಫ್(ನಾಯಕ), ಹುಝೈಫಾ ಅಹ್ಸಾನ್, ಹಮ್ಝ ಜಹೂರ್(ವಿಕೆಟ್ ಕೀಪರ್), ಮೊಹಮ್ಮದ್ ಸಯ್ಯಮ್, ಅಲಿ ಹಸನ್ ಬಲೋಚ್, ಡ್ಯಾನಿಯಾಲ್ ಅಲಿ ಖಾನ್, ಸಮೀರ್ ಮಿನ್​ಹಾಸ್, ಅಲಿ ರಜಾ, ಮೊಮಿನ್ ಕಮರ್, ಅಬ್ದುಲ್ ಸುಭಾನ್, ಮೊಹಮ್ಮದ್ ಹುಝೈಫಾ, ಮೊಹಮ್ಮದ್ ಶಯಾನ್, ನಿಕಾಬ್ ಶಫೀಕ್, ಅಹ್ಮದ್ ಹುಸೇನ್.

ಸೌತ್ ಆಫ್ರಿಕಾ ಟಿ20 ತಂಡ: ಐಡನ್ ಮಾರ್ಕ್ರಾಮ್ (ನಾಯಕ), ಓಟ್ನಿಲ್ ಬಾರ್ಟ್‌ಮನ್, ಕಾರ್ಬಿನ್ ಬಾಷ್, ಡೆವಾಲ್ಡ್ ಬ್ರೆವಿಸ್, ಕ್ವಿಂಟನ್ ಡಿ ಕಾಕ್ (ವಿಕೆಟ್‌ಕೀಪರ್), ಡೊನೊವನ್ ಫೆರೇರಾ, ರೀಝ ಹೆಂಡ್ರಿಕ್ಸ್, ಮಾರ್ಕೋ ಯಾನ್ಸೆನ್, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಜಾರ್ಜ್ ಲಿಂಡೆ, ಲುಂಗಿ ಎನ್‌ಗಿಡಿ, ಅನ್ರಿಕ್ ನೋಕಿಯ, ಲುಥೋ ಸಿಪಮ್ಲಾ, ಟ್ರಿಸ್ಟನ್ ಸ್ಟಬ್ಸ್.

ಇದನ್ನೂ ಓದಿ: ಕೇವಲ ೧ ರನ್​ನಿಂದ ವಿಶ್ವ ದಾಖಲೆ ತಪ್ಪಿಸಿಕೊಂಡ ಟೀಮ್ ಇಂಡಿಯಾ

ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭ್​ಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್.