Team India: ಟಿ20 ವಿಶ್ವಕಪ್​ಗೂ ಮುನ್ನ ಟೀಮ್ ಇಂಡಿಯಾ ಎಷ್ಟು ಪಂದ್ಯಗಳನ್ನಾಡಲಿದೆ?

India vs South Africa: ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಟೆಸ್ಟ್ ಸರಣಿಯು ನವೆಂಬರ್ 14 ರಿಂದ ಶುರುವಾಗಲಿದೆ. 2 ಪಂದ್ಯಗಳ ಈ ಸರಣಿಯ ಬಳಿಕ ಮೂರು ಮ್ಯಾಚ್​ಗಳ ಏಕದಿನ ಸರಣಿ ಜರುಗಲಿದೆ. ಇದಾದ ಬಳಿಕ ಭಾರತ ಮತ್ತು ಸೌತ್ ಆಫ್ರಿಕಾ ನಡುವಣ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ.

Team India: ಟಿ20 ವಿಶ್ವಕಪ್​ಗೂ ಮುನ್ನ ಟೀಮ್ ಇಂಡಿಯಾ ಎಷ್ಟು ಪಂದ್ಯಗಳನ್ನಾಡಲಿದೆ?
Team India
Updated By: Digi Tech Desk

Updated on: Nov 11, 2025 | 11:58 AM

ಬಹುನಿರೀಕ್ಷಿತ ಟಿ20 ವಿಶ್ವಕಪ್​ಗೆ ದಿನಗಣನೆ ಶುರುವಾಗಿದೆ. ಫೆಬ್ರವರಿ 7 ರಿಂದ ಆರಂಭವಾಗಲಿರುವ ಈ ಬಾರಿಯ ಚುಟುಕು ವಿಶ್ವಕಪ್​ಗೆ ಭಾರತ ಮತ್ತು ಶ್ರೀಲಂಕಾ ಆತಿಥ್ಯವಹಿಸಲಿದೆ. ಹಾಲಿ ಚಾಂಪಿಯನ್ ಎನಿಸಿಕೊಂಡಿರುವ ಟೀಮ್ ಇಂಡಿಯಾ ಮತ್ತೊಮ್ಮೆ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ಇರಾದೆಯಲ್ಲಿದೆ. ಅದಕ್ಕಾಗಿ ಮುಂದಿನ 10 ಪಂದ್ಯಗಳ ಮೂಲಕ ಸಂಪೂರ್ಣ ತಯಾರಿ ನಡೆಸಲಿದೆ.

ಅಂದರೆ ಟಿ20 ವಿಶ್ವಕಪ್​ಗೂ ಮುನ್ನ ಭಾರತ ತಂಡವು ತವರಿನಲ್ಲಿ 10 ಟಿ20 ಪಂದ್ಯಗಳನ್ನಾಡಲಿದೆ. ಇದಾದ ಬಳಿಕ ನೇರವಾಗಿ ಚುಟುಕು ವಿಶ್ವಕಪ್​ನಲ್ಲಿ ಕಣಕ್ಕಿಳಿಯಲಿದೆ. ಚುಟುಕು ವಿಶ್ವಕಪ್​ನಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿದ್ದು, ಇದರಲ್ಲಿ ಲೀಗ್ ಹಂತದಲ್ಲಿ ಭಾರತ ತಂಡವು 3 ಪಂದ್ಯಗಳನ್ನಾಡುವುದು ಖಚಿತ.

ಅಲ್ಲದೆ ಮುಂದಿನ ಹಂತಕ್ಕೇರಿದರೆ ಮತ್ತೆ ನಾಲ್ಕು ಪಂದ್ಯಗಳನ್ನಾಡುವ ಸಾಧ್ಯತೆಯಿದೆ.  ಏಕೆಂದರೆ ಮುಂಬರುವ ಟಿ20 ವಿಶ್ವಕಪ್ ಗ್ರೂಪ್ ಸ್ವರೂಪಗಳಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ ಗ್ರೂಪ್ ಮ್ಯಾಚ್​ಗಳು ನಡೆಯಲಿದೆ. ಇದಾದ ಬಳಿಕ ಸೂಪರ್-10 ಪಂದ್ಯಗಳು ಜರುಗಲಿದೆ.

ಈ ಎಲ್ಲಾ ಪಂದ್ಯಗಳಿಗೂ ಮುನ್ನ ಟೀಮ್ ಇಂಡಿಯಾ ಸೌತ್ ಆಫ್ರಿಕಾ ಹಾಗೂ ನ್ಯೂಝಿಲೆಂಡ್ ತಂಡಗಳ ವಿರುದ್ಧದ ಕಣಕ್ಕಿಳಿಯಲಿದೆ. ಅಂದರೆ ಭಾರತ ತಂಡವು ಡಿಸೆಂಬರ್​ನಲ್ಲಿ ಸೌತ್ ಆಫ್ರಿಕಾ ವಿರುದ್ಧ 5 ಟಿ20 ಪಂದ್ಯಗಳನ್ನಾಡಲಿದೆ. ಇದಾದ ಬಳಿಕ ಜನವರಿಯಲ್ಲಿ ನ್ಯೂಝಿಲೆಂಡ್ ಮತ್ತು ಭಾರತ 5 ಪಂದ್ಯಗಳ ಟಿ20 ಸರಣಿಯಲ್ಲಿ ಮುಖಾಮುಖಿಯಾಗಲಿದೆ.

ಈ ಪಂದ್ಯಗಳ ಮೂಲಕ ಟೀಮ್ ಇಂಡಿಯಾ ಟಿ20 ವಿಶ್ವಕಪ್​ಗೆ ತಯಾರಿ ನಡೆಸಲಿದೆ. ಈ ತಯಾರಿಯೊಂದಿಗೆ ಚುಟಕು ವಿಶ್ವಕಪ್​ಗೆ ಸಜ್ಜಾಗಲು ಭಾರತ ತಂಡವು ಯೋಜನೆ ರೂಪಿಸುತ್ತಿರುವುದಾಗಿ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ತಿಳಿಸಿದ್ದಾರೆ. ಅದರಂತೆ ಭಾರತ ತಂಡವು ಟಿ20 ವಿಶ್ವಕಪ್​ಗೂ ಮುನ್ನ  ಆಡಲಿರುವ ಟಿ20 ಪಂದ್ಯಗಳ ಸಂಪೂರ್ಣ ವಿವರಗಳು ಈ ಕೆಳಗಿನಂತಿದೆ…

ಭಾರತ vs ಸೌತ್ ಆಫ್ರಿಕಾ ಟಿ20 ಸರಣಿ ವೇಳಾಪಟ್ಟಿ:

  1. ಭಾರತ vs ಸೌತ್ ಆಫ್ರಿಕಾ ಮೊದಲ ಟಿ20: ಡಿಸೆಂಬರ್ 9 – ಕಟಕ್, ಬಾರಾಬತಿ ಕ್ರೀಡಾಂಗಣ
  2. ಭಾರತ vs ಸೌತ್ ಆಫ್ರಿಕಾ ಎರಡನೇ ಟಿ20: ಡಿಸೆಂಬರ್ 11 – ಮುಲ್ಲನ್‌ಪುರ, ಎಂವೈಸಿ ಕ್ರೀಡಾಂಗಣ
  3. ಭಾರತ vs ಸೌತ್ ಆಫ್ರಿಕಾ ಮೂರನೇ ಟಿ20: ಡಿಸೆಂಬರ್ 14 – ಧರ್ಮಶಾಲಾ, ಎಚ್‌ಪಿಸಿಎ ಕ್ರೀಡಾಂಗಣ
  4. ಭಾರತ vs ಸೌತ್ ಆಫ್ರಿಕಾ ನಾಲ್ಕನೇ ಟಿ20: ಡಿಸೆಂಬರ್ 17 – ಲಕ್ನೋ, ಏಕಾನಾ ಕ್ರೀಡಾಂಗಣ
  5. ಭಾರತ vs ಸೌತ್ ಆಫ್ರಿಕಾ ಐದನೇ ಟಿ20: ಡಿಸೆಂಬರ್ 19 – ಅಹಮದಾಬಾದ್, ನರೇಂದ್ರ ಮೋದಿ ಕ್ರೀಡಾಂಗಣ.

ಇದನ್ನೂ ಓದಿ: IPL 2026: ಲೈಂಗಿನ ದೌರ್ಜನ್ಯ ಪ್ರಕರಣ: RCB ಆಟಗಾರ ಕಿಕ್ ಔಟ್ ಖಚಿತ

ಭಾರತ vs ನ್ಯೂಝಿಲೆಂಡ್ ಟಿ20 ಸರಣಿ ವೇಳಾಪಟ್ಟಿ:

  1. ಭಾರತ vs ನ್ಯೂಝಿಲೆಂಡ್ ಮೊದಲ ಟಿ20: ಜನವರಿ 21 – ನಾಗ್ಪುರ, ವಿಸಿಎ ಕ್ರೀಡಾಂಗಣ
  2. ಭಾರತ vs ನ್ಯೂಝಿಲೆಂಡ್ ಎರಡನೇ ಟಿ20: ಜನವರಿ 23 – ರಾಯ್‌ಪುರ, ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣ
  3. ಭಾರತ vs ನ್ಯೂಝಿಲೆಂಡ್ ಮೂರನೇ ಟಿ20: ಜನವರಿ 25 – ಗುವಾಹಟಿ, ಎಸಿಎ ಕ್ರೀಡಾಂಗಣ
  4. ಭಾರತ vs ನ್ಯೂಝಿಲೆಂಡ್ ನಾಲ್ಕನೇ ಟಿ20: ಜನವರಿ 28 – ವಿಶಾಖಪಟ್ಟಣಂ, ಡಾ. ವೈಎಸ್ಆರ್ ಕ್ರೀಡಾಂಗಣ
  5. ಭಾರತ vs ನ್ಯೂಝಿಲೆಂಡ್ ಐದನೇ ಟಿ20: ಜನವರಿ 31 – ತಿರುವನಂತಪುರಂ, ಗ್ರೀನ್‌ಫೀಲ್ಡ್ ಕ್ರೀಡಾಂಗಣ.

 

 

Published On - 10:55 am, Tue, 11 November 25