ಗೆದ್ದ ಪಾಕಿಸ್ತಾನದ ಜತೆ ಟೀಂ ಇಂಡಿಯಾ ಮೆಂಟರ್​ ಧೋನಿ ಚರ್ಚೆ; ಫೋಟೋ ವೈರಲ್​

| Updated By: ರಾಜೇಶ್ ದುಗ್ಗುಮನೆ

Updated on: Oct 25, 2021 | 10:00 AM

ಪಂದ್ಯ ಮುಗಿದ ಬಳಿಕ ಟೀಂ ಇಂಡಿಯಾ ಮೆಂಟರ್​ ಎಂ.ಎಸ್​. ಧೋನಿ ಪಾಕಿಸ್ತಾನದ ಆಟಗಾರರ ಜತೆ ಮಾತುಕತೆ ನಡೆಸಿದ್ದಾರೆ. ಈ ಫೋಟೋಗಳು ಸಾಕಷ್ಟು ವೈರಲ್​ ಆಗುತ್ತಿವೆ

ಗೆದ್ದ ಪಾಕಿಸ್ತಾನದ ಜತೆ ಟೀಂ ಇಂಡಿಯಾ ಮೆಂಟರ್​ ಧೋನಿ ಚರ್ಚೆ; ಫೋಟೋ ವೈರಲ್​
ಧೋನಿ
Follow us on

ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದೆ. ಟೀಂ ಇಂಡಿಯಾ ವಿರುದ್ಧ ಗೆದ್ದ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. ಪಟಾಕಿ ಸಿಡಿಸಿ ಈ ಗೆಲುವನ್ನು ಸಂಭ್ರಿಮಿಸಲಾಗುತ್ತಿದೆ. ಮತ್ತೊಂದು ಕಡೆಗಳಲ್ಲಿ ಟೀಂ ಇಂಡಿಯಾವನ್ನು ಹೀಯಾಳಿಸುವ ಕೆಲಸವೂ ನಡೆದಿದೆ. ಆದರೆ, ಟೀಂ ಇಂಡಿಯಾ ಆಟಗಾರರು ಮಾತ್ರ ನಿಜವಾದ ಕ್ರೀಡಾಸ್ಫೂರ್ತಿ ಮೆರೆಯುತ್ತಿದ್ದಾರೆ. ಈ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುತ್ತಿವೆ.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಮೊದಲ ಓವರ್​ನಲ್ಲೇ ಸೋಲು ಉಂಟಾಗಿತ್ತು. ರೋಹಿತ್ ಶರ್ಮಾ ತಾನು ಎದುರಿಸಿದ ಮೊದಲ ಎಸೆತದಲ್ಲೇ ಶಾಹೀನ್ ಅಫ್ರಿದಿ ಬೌಲಿಂಗ್​ನಲ್ಲಿ ಎಲ್​ಬಿಗೆ ಔಟ್​ ಆದರು. ನಂತರ ಒಂದಾದಮೇಲೆ ಒಂದು ವಿಕೆಟ್​ಗಳು ಪತನವಾಗಲು ಶುರುವಾದವು. ಆದರೆ, ಕೊಹ್ಲಿ ಒಂದು ಕಡೆ ನಿಂತು ರನ್​ ಪೇರಿಸುತ್ತಿದ್ದರು. ಅಂತಿಮವಾಗಿ ಭಾರತ 151 ರನ್​ ಪೇರಿಸಲಷ್ಟೇ ಶಕ್ತವಾಯಿತು. ಗೆಲ್ಲಲು 152 ರನ್ ಗುರಿ ಪಡೆದ ಪಾಕಿಸ್ತಾನವು 17.5 ಓವರ್​​ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 152 ರನ್ ಗಳಿಸಿತು. ಬಾಬರ್ ಅಜಾಮ್ ಹಾಗೂ ರಿಝ್ವಾನ್ ಭಾರತ ವಿರುದ್ಧದ ಟ್ವೆಂಟಿ-20ಯಲ್ಲಿ ಗರಿಷ್ಠ ಜೊತೆಯಾಟ ನಡೆಸಿದರು. ಅಜಾಮ್ 40 ಎಸೆತಗಳಲ್ಲಿ (4 ಬೌಂಡರಿ, 2 ಸಿಕ್ಸರ್) ಹಾಗೂ ರಿಝ್ವಾನ್ 41 ಎಸೆತಗಳಲ್ಲಿ(3 ಬೌಂ., 2 ಸಿ.) ಅರ್ಧಶತಕಗಳನ್ನು ಪೂರೈಸಿದರು.

ಪಂದ್ಯ ಮುಗಿದ ಬಳಿಕ ಟೀಂ ಇಂಡಿಯಾ ಮೆಂಟರ್​ ಎಂ.ಎಸ್​. ಧೋನಿ ಪಾಕಿಸ್ತಾನದ ಆಟಗಾರರ ಜತೆ ಮಾತುಕತೆ ನಡೆಸಿದ್ದಾರೆ. ಈ ಫೋಟೋಗಳು ಸಾಕಷ್ಟು ವೈರಲ್​ ಆಗುತ್ತಿವೆ. ಇನ್ನು, ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಅವರು ಬಾಬರ್​ ಹಾಗೂ ರಿಝ್ವಾನ್​ ಅವರ ಆಟವನ್ನು ಶ್ಲಾಘಿಸಿದ್ದಾರೆ. ಈ ವಿಡಿಯೋಗಳು ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

ಇದನ್ನೂ ಓದಿ: ಪಂದ್ಯ ಸೋತರೂ ಪಾಕಿಸ್ತಾನ ಆಟಗಾರರ ಬೆನ್ನು ತಟ್ಟಿದ ವಿರಾಟ್ ಕೊಹ್ಲಿ; ವಿಡಿಯೋ ವೈರಲ್​

KL Rahul: ನೋಬಾಲ್​ಗೆ ಔಟಾದ ಕೆ.ಎಲ್. ರಾಹುಲ್; ಅಂಪೈರ್ ತಪ್ಪಿನಿಂದ ಭಾರತಕ್ಕೆ ದೊಡ್ಡ ಮೋಸ

Published On - 9:59 am, Mon, 25 October 21