IND vs ENG: 19 ದಿನಗಳಲ್ಲಿ 8 ಪಂದ್ಯಗಳನ್ನಾಡಲಿದೆ ಭಾರತ-ಇಂಗ್ಲೆಂಡ್
Team India tour of England: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಮುಗಿಸಿರುವ ಭಾರತ ತಂಡವು ಮುಂದಿನ ವರ್ಷ ಏಕದಿನ ಹಾಗೂ ಟಿ20 ಸರಣಿ ಆಡಲು ಆಂಗ್ಲರ ನಾಡಿಗೆ ತೆರಳಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ 5 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನು ಆಡಲಿದ್ದು, ಮೂವರು ವಾರಗಳಲ್ಲಿ ಎಲ್ಲಾ ಪಂದ್ಯಗಳು ಮುಗಿಯಲಿದೆ.

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಣ ಟೆಸ್ಟ್ ಸರಣಿ ಮುಗಿದಿದೆ. ಐದು ಪಂದ್ಯಗಳ ಈ ಸರಣಿಯನ್ನು ಟೀಮ್ ಇಂಡಿಯಾ 2-2 ಅಂತರದಿಂದ ಕೊನೆಗೊಳಿಸುವಲ್ಲಿ ಯಶಸ್ವಿಯಾಗಿದೆ. ಈ ಸರಣಿ ಮುಕ್ತಾಯದ ಬೆನ್ನಲ್ಲೇ ಭಾರತ ಮತ್ತು ಇಂಗ್ಲೆಂಡ್ ನಡುವಣ ಸೀಮಿತ ಓವರ್ಗಳ ಸರಣಿಗೂ ಡೇಟ್ ಫಿಕ್ಸ್ ಆಗಿದೆ. ಆದರೆ ಈ ಸರಣಿ ನಡೆಯುವುದು ಮುಂದಿನ ವರ್ಷ.
ಅಂದರೆ 2026ರ ಟಿ20 ವಿಶ್ವಕಪ್ ಹಾಗೂ ಐಪಿಎಲ್ 2026ರ ಮುಕ್ತಾಯದ ಬಳಿಕ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ ಭಾರತ ತಂಡ 5 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನಾಡಲಿದೆ. ಈ ಸರಣಿಯಲ್ಲಿ ಮೊದಲಿಗೆ ಟಿ20 ಪಂದ್ಯಗಳು ನಡೆಯಲಿದ್ದು, ಇದಾದ ನಂತರ ಏಕದಿನ ಸರಣಿ ಶುರುವಾಗಲಿದೆ.
ಇನ್ನು ಜುಲೈ 1 ರಿಂದ ಶುರುವಾಗಲಿರುವ ಈ ಸರಣಿಯು ಜುಲೈ 19ರ ವೇಳೆಗೆ ಕೊನೆಗೊಳ್ಳಲಿದೆ. ಅಂದರೆ ಕೇವಲ 19 ದಿನಗಳಲ್ಲಿ 8 ಮ್ಯಾಚ್ಗಳನ್ನು ಆಡಲಿರುವುದು ವಿಶೇಷ. ಈ ಸರಣಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…
ಭಾರತ ಮತ್ತು ಇಂಗ್ಲೆಂಡ್ ಟಿ20 ಸರಣಿ ವೇಳಾಪಟ್ಟಿ:
- ಜುಲೈ 1, 2026: ಮೊದಲ ಟಿ20 ಪಂದ್ಯ– ಬ್ಯಾಂಕ್ಸ್ ಹೋಮ್ಸ್ ರಿವರ್‌ಸೈಡ್, ಡರ್ಹಾಮ್, ರಾತ್ರಿ 11 ಗಂಟೆಗೆ IST
- ಜುಲೈ 4, 2026: ಎರಡನೇ ಟಿ20 ಪಂದ್ಯ– ಎಮಿರೇಟ್ಸ್ ಓಲ್ಡ್ ಟ್ರಾಫೋರ್ಡ್, ಮ್ಯಾಂಚೆಸ್ಟರ್, ಸಂಜೆ 7 ಗಂಟೆಗೆ IST
- ಜುಲೈ 7, 2026: ಮೂರನೇ ಟಿ20 ಪಂದ್ಯ– ಟ್ರೆಂಟ್ ಬ್ರಿಡ್ಜ್, ನಾಟಿಂಗ್ಹ್ಯಾಮ್, ರಾತ್ರಿ 11 ಗಂಟೆಗೆ IST
- ಜುಲೈ 9, 2026: ನಾಲ್ಕನೇ ಟಿ20 ಪಂದ್ಯ– ಸೀಟ್ ಯೂನಿಕ್ ಕ್ರೀಡಾಂಗಣ, ಬ್ರಿಸ್ಟಲ್, ರಾತ್ರಿ 11 ಗಂಟೆಗೆ IST
- ಜುಲೈ 11, 2026: ಐದನೇ ಟಿ20 ಪಂದ್ಯ– ಯುಟಿಲಿಟಾ ಬೌಲ್, ಸೌತಾಂಪ್ಟನ್, ರಾತ್ರಿ 11 ಗಂಟೆಗೆ IST
ಇದನ್ನೂ ಓದಿ: ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ತಂಡಕ್ಕೆ RCB ಮಾಜಿ ಆಟಗಾರ ಕ್ಯಾಪ್ಟನ್..!
ಭಾರತ ಮತ್ತು ಇಂಗ್ಲೆಂಡ್ ಏಕದಿನ ಸರಣಿ ವೇಳಾಪಟ್ಟಿ:
- ಜುಲೈ 14, 2026: ಮೊದಲ ಏಕದಿನ ಪಂದ್ಯ – ಎಡ್ಜ್‌ಬಾಸ್ಟನ್, ಬರ್ಮಿಂಗ್ಹ್ಯಾಮ್, ಸಂಜೆ 5:30 IST
- ಜುಲೈ 16, 2026: ಎರಡನೇ ಏಕದಿನ ಪಂದ್ಯ – ಸೋಫಿಯಾ ಗಾರ್ಡನ್ಸ್, ಕಾರ್ಡಿಫ್, ಸಂಜೆ 5:30 IST
- ಜುಲೈ 19, 2026: 3ನೇ ಏಕದಿನ ಪಂದ್ಯ – ಲಾರ್ಡ್ಸ್, ಲಂಡನ್, ಮಧ್ಯಾಹ್ನ 3:30 IST
