Team India
ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿ ಪೂರ್ಣಗೊಂಡಿದೆ. 5 ಪಂದ್ಯಗಳ ಸರಣಿಯನ್ನು 2-2 ಅಂತರದಿಂದ ಸಮಗೊಳಿಸುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ. ಈ ಯಶಸ್ವಿ ಸರಣಿ ಬಳಿಕ ಟೀಮ್ ಇಂಡಿಯಾ ಆಡಲಿರುವುದು ಏಷ್ಯಾಕಪ್ ಎಂಬುದು ವಿಶೇಷ. ಅಂದರೆ ಆಗಸ್ಟ್ನಲ್ಲಿ ನಿಗದಿಯಾಗಿದ್ದ ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಸರಣಿಯನ್ನು ಈಗಾಗಲೇ ರದ್ದುಗೊಳಿಸಲಾಗಿದೆ. ಹೀಗಾಗಿ ಈ ತಿಂಗಳಲ್ಲಿ ಯಾವುದೇ ಪಂದ್ಯ ನಡೆಯುವ ಸಾಧ್ಯತೆಯಿಲ್ಲ.
ಅದರಂತೆ ಸೆಪ್ಟೆಂಬರ್ 9 ರಿಂದ ಶುರುವಾಗಲಿರುವ ಏಷ್ಯಾಕಪ್ ಮೂಲಕ ಟೀಮ್ ಇಂಡಿಯಾ ಮತ್ತೆ ಕಣಕ್ಕಿಳಿಯಲಿದೆ. ಏಷ್ಯಾಕಪ್ನಲ್ಲಿ ಭಾರತ ತಂಡವು ಸೆಪ್ಟೆಂಬರ್ 10 ರಂದು ಅಭಿಯಾನ ಆರಂಭಿಸಲಿದ್ದು, ಮೊದಲ ಪಂದ್ಯದಲ್ಲಿ ಯುಎಇ ತಂಡವನ್ನು ಎದುರಿಸಲಿದೆ. ಇದಾದ ಬಳಿಕ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಈ ಪಂದ್ಯವು ಸೆಪ್ಟೆಂಬರ್ 14 ರಂದು ನಡೆಯಲಿದೆ. ಭಾರತ ತಂಡದ ಮುಂದಿನ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…
ಭಾರತದ ಏಷ್ಯಾಕಪ್ ಸಂಪೂರ್ಣ ವೇಳಾಪಟ್ಟಿ:
- ಭಾರತ vs ಯುಎಇ – ಸೆಪ್ಟೆಂಬರ್ 10 | ಬುಧವಾರ
- ಭಾರತ vs ಪಾಕಿಸ್ತಾನ್ – ಸೆಪ್ಟೆಂಬರ್ 14 | ಭಾನುವಾರ
- ಭಾರತ vs ಒಮಾನ್ – ಸೆಪ್ಟೆಂಬರ್ 19 | ಶುಕ್ರವಾರ
ಏಷ್ಯಾಕಪ್ ಸೂಪರ್ ಫೋರ್ ಹಂತದ ವೇಳಾಪಟ್ಟಿ:
- ಬಿ1 vs ಬಿ2 – 20 ಸೆಪ್ಟೆಂಬರ್ | ಶನಿವಾರ
- A1 vs A2 – 21 ಸೆಪ್ಟೆಂಬರ್ | ಭಾನುವಾರ
- A2 vs B1 – 23 ಸೆಪ್ಟೆಂಬರ್ | ಮಂಗಳವಾರ
- A1 vs B2 – 24 ಸೆಪ್ಟೆಂಬರ್ | ಬುಧವಾರ
- A2 vs B2 – 25 ಸೆಪ್ಟೆಂಬರ್ | ಗುರುವಾರ
- A1 vs B1 – 26 ಸೆಪ್ಟೆಂಬರ್ | ಶುಕ್ರವಾರ
- (ಭಾರತವು A1 ಅಥವಾ A2 ಆಗಿರುತ್ತದೆ)
ಭಾರತ vs ವೆಸ್ಟ್ ಇಂಡೀಸ್ ಸರಣಿ ವೇಳಾಪಟ್ಟಿ:
- ಅಕ್ಟೋಬರ್ 2: ಮೊದಲ ಟೆಸ್ಟ್ ಪಂದ್ಯ – ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್
- ಅಕ್ಟೋಬರ್ 10: ಎರಡನೇ ಟೆಸ್ಟ್ ಪಂದ್ಯ – ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ
ಭಾರತ vs ಆಸ್ಟ್ರೇಲಿಯಾ ಸರಣಿ ವೇಳಾಪಟ್ಟಿ:
- ಅಕ್ಟೋಬರ್ 19: ಮೊದಲ ಏಕದಿನ ಪಂದ್ಯ – ಪರ್ತ್ ಕ್ರೀಡಾಂಗಣ, ಪರ್ತ್
- ಅಕ್ಟೋಬರ್ 23: ಎರಡನೇ ಏಕದಿನ ಪಂದ್ಯ – ಅಡಿಲೇಡ್ ಓವಲ್
- ಅಕ್ಟೋಬರ್ 25: ಮೂರನೇ ಏಕದಿನ ಪಂದ್ಯ – ಸಿಡ್ನಿ ಕ್ರಿಕೆಟ್ ಮೈದಾನ, ಸಿಡ್ನಿ
- ಅಕ್ಟೋಬರ್ 29: ಮೊದಲ ಟಿ20 ಪಂದ್ಯ – ಮನುಕಾ ಓವಲ್, ಕ್ಯಾನ್‌ಬೆರಾ
- ಅಕ್ಟೋಬರ್ 31: ಎರಡನೇ ಟಿ20 ಪಂದ್ಯ– ಮೆಲ್ಬೋರ್ನ್ ಕ್ರಿಕೆಟ್ ಮೈದಾನ
- ನವೆಂಬರ್ 2,: ಮೂರನೇ ಟಿ20 ಪಂದ್ಯ– ಬೆಲ್ಲೆರಿವ್ ಓವಲ್, ಹೋಬಾರ್ಟ್
- ನವೆಂಬರ್ 6: ನಾಲ್ಕನೇ ಟಿ20 ಪಂದ್ಯ – ಗೋಲ್ಡ್ ಕೋಸ್ಟ್ ಕ್ರೀಡಾಂಗಣ, ಕ್ಯಾರಾರಾ
- ನವೆಂಬರ್ 8: ಐದನೇ ಟಿ20 ಪಂದ್ಯ– ದಿ ಗಬ್ಬಾ, ಬ್ರಿಸ್ಬೇನ್
ಭಾರತ vs ಸೌತ್ ಆಫ್ರಿಕಾ ಸರಣಿ ವೇಳಾಪಟ್ಟಿ:
- ನವೆಂಬರ್ 14: ಮೊದಲ ಟೆಸ್ಟ್ – ಈಡನ್ ಗಾರ್ಡನ್ಸ್, ಕೋಲ್ಕತ್ತಾ
- ನವೆಂಬರ್ 22: ಎರಡನೇ 2ನೇ ಟೆಸ್ಟ್ – ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂ, ಗುವಾಹಟಿ
- ನವೆಂಬರ್ 30: ಮೊದಲ ಏಕದಿನ ಪಂದ್ಯ – ಜೆಎಸ್‌ಸಿಎ ಅಂತರಾಷ್ಟ್ರೀಯ ಕ್ರೀಡಾಂಗಣ, ರಾಂಚಿ
- ಡಿಸೆಂಬರ್ 3: ಎರಡನೇ ಏಕದಿನ ಪಂದ್ಯ – ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣ, ರಾಯ್‌ಪುರ
- ಡಿಸೆಂಬರ್ 6: ಮೂರನೇ ಏಕದಿನ ಪಂದ್ಯ – ಡಾ. ವೈಎಸ್ ರಾಜಶೇಖರ ರೆಡ್ಡಿ ಸ್ಟೇಡಿಯಂ, ವಿಶಾಖಪಟ್ಟಣಂ
- ಡಿಸೆಂಬರ್ 9: ಮೊದಲ ಟಿ20 ಪಂದ್ಯ– ಬಾರಾಬತಿ ಕ್ರೀಡಾಂಗಣ, ಕಟಕ್
- ಡಿಸೆಂಬರ್ 11: ಎರಡನೇ ಟಿ20 ಪಂದ್ಯ– ಮಹಾರಾಜ ಯಾದವೀಂದ್ರ ಸಿಂಗ್ ಸ್ಟೇಡಿಯಂ, ನ್ಯೂ ಚಂಡೀಗಢ
- ಡಿಸೆಂಬರ್ 14: ಮೂರನೇ ಟಿ20 ಪಂದ್ಯ- HPCA ಸ್ಟೇಡಿಯಂ, ಧರ್ಮಶಾಲಾ
- ಡಿಸೆಂಬರ್ 17: ನಾಲ್ಕನೇ ಟಿ20 ಪಂದ್ಯ– ಏಕಾನಾ ಕ್ರಿಕೆಟ್ ಕ್ರೀಡಾಂಗಣ, ಲಕ್ನೋ
- ಡಿಸೆಂಬರ್ 19: ಐದನೇ ಟಿ20 ಪಂದ್ಯ– ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್
ಭಾರತ vs ನ್ಯೂಝಿಲೆಂಡ್ ಸರಣಿ ವೇಳಾಪಟ್ಟಿ:
- ಜನವರಿ 11, 2026 – ಮೊದಲ ಟಿ20 ಪಂದ್ಯ – ನಾಗ್ಪುರ
- ಜನವರಿ 13, 2026 – ಎರಡನೇ ಟಿ20 ಪಂದ್ಯ – ರಾಯಪುರ
- ಜನವರಿ 16, 2026 – ಮೂರನೇ ಟಿ20 ಪಂದ್ಯ – ಗುವಾಹಟಿ
- ಜನವರಿ 19, 2026 – ನಾಲ್ಕನೇ ಟಿ20 ಪಂದ್ಯ – ವಿಶಾಖಪಟ್ಟಣಂ
- ಜನವರಿ 22, 2026 – ಐದನೇ ಟಿ20 ಪಂದ್ಯ– ತಿರುವನಂತಪುರಂ
- ಜನವರಿ 25, 2026 – ಮೊದಲ ಏಕದಿನ ಪಂದ್ಯ– ಬರೋಡಾ
- ಜನವರಿ 28, 2026 – ಎರಡನೇ ಏಕದಿನ ಪಂದ್ಯ – ರಾಜ್‌ಕೋಟ್
- ಜನವರಿ 31, 2026 – ಮೂರನೇ ಏಕದಿನ ಪಂದ್ಯ– ಇಂದೋರ್
ಇದನ್ನೂ ಓದಿ: Mohammed Siraj: ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು ಭಯ್ಯಾ..!
ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿಯ ಬಳಿಕ ಭಾರತ ತಂಡವು ಟಿ20 ವಿಶ್ವಕಪ್ಗೆ ಸಜ್ಜಾಗಲಿದೆ. ಶ್ರೀಲಂಕಾ-ಭಾರತದಲ್ಲಿ ನಡೆಯಲಿರುವ 2026ರ ಟಿ20 ವಿಶ್ವಕಪ್ ಫೆಬ್ರವರಿ ಮತ್ತು ಮಾರ್ಚ್ ನಡುವೆ ನಡೆಯುವ ಸಾಧ್ಯತೆಯಿದೆ. ಇದಾದ ಬಳಿಕ ಟೀಮ್ ಇಂಡಿಯಾ ಆಟಗಾರರು ಐಪಿಎಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.