ಭಾರತದ ಜಿಂಬಾಬ್ವೆ ಪ್ರವಾಸ ಅಂತ್ಯ; ಮುಂದಿನ ಪ್ರವಾಸ ಎಲ್ಲಿಗೆ? ಎದುರಾಳಿ ಯಾರು?
India tour of Sri Lanka 2024: ಪ್ರಸ್ತುತ ಜಿಂಬಾಬ್ವೆ ಪ್ರವಾಸ ಮುಗಿಸಿರುವ ಯುವ ಟೀಂ ಇಂಡಿಯಾ ಇದೇ ಜುಲೈ 27 ರಿಂದ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ತಂಡ ಮೂರು ಪಂದ್ಯಗಳ ಟಿ20 ಸರಣಿ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಅಷ್ಟೇ ಅಲ್ಲದೆ ಈ ಸರಣಿಯೊಂದಿಗೆ ಟಿ20 ವಿಶ್ವಕಪ್ ಗೆದ್ದ ಬಳಿಕ ಟೀಂ ಇಂಡಿಯಾದಿಂದ ವಿಶ್ರಾಂತಿ ಪಡೆದುಕೊಂಡಿದ್ದ ಆಟಗಾರರು ತಂಡಕ್ಕೆ ಮರಳಲಿದ್ದಾರೆ.
ಭಾರತ ಮತ್ತು ಜಿಂಬಾಬ್ವೆ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ತಂಡವನ್ನು 42 ರನ್ಗಳಿಂದ ಮಣಿಸಿದ ಶುಭ್ಮನ್ ಗಿಲ್ ಪಡೆ ಸರಣಿಯನ್ನು 4-1 ಅಂತರದಿಂದ ವಶಪಡಿಸಿಕೊಂಡಿದೆ. ಸರಣಿಯ ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಹೋರಾಟ ನೀಡಿ ಗೆಲುವು ದಾಖಲಿಸಿದ್ದನ್ನು ಬಿಟ್ಟರೆ ಉಳಿದ 4 ಪಂದ್ಯಗಳಲ್ಲಿ ಟೀಂ ಇಂಡಿಯಾವೇ ಪಾರುಪತ್ಯ ಸಾಧಿಸಿತು. ಮೊದಲ ಪಂದ್ಯವನ್ನು ಸೋತ ಬಳಿಕ ಎಚ್ಚೆತ್ತ ಯುವ ಪಡೆ ಮುಂದಿನ ನಾಲ್ಕು ಪಂದ್ಯಗಳನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿತು. ಇನ್ನು ಐದನೇ ಟಿ20 ಪಂದ್ಯದ ಬಗ್ಗೆ ಹೇಳುವುದಾದರೆ… ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ ಆರು ವಿಕೆಟ್‌ಗೆ 167 ರನ್ ಗಳಿಸಿತು. ಉತ್ತರವಾಗಿ ಜಿಂಬಾಬ್ವೆ 18.3 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 125 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯದೊಂದಿಗೆ ಟೀಂ ಇಂಡಿಯಾದ ಜಿಂಬಾಬ್ವೆ ಪ್ರವಾಸವೂ ಅಂತ್ಯಗೊಂಡಿದೆ. ಇದೀಗ ಟೀಂ ಇಂಡಿಯಾದ ಮುಂದಿನ ಪ್ರವಾಸ ಯಾವ ದೇಶಕ್ಕೆ? ಅಲ್ಲಿ ಯಾವ್ಯಾವ ಮಾದರಿಯ ಸರಣಿಯಗಳನ್ನು ಆಡುತ್ತದೆ ಎಂಬುದನ್ನು ತಿಳಿದುಕೊಳ್ಳುವ ಸಮಯವಾಗಿದೆ.
ಭಾರತದ ಲಂಕಾ ಪ್ರವಾಸ
ಪ್ರಸ್ತುತ ಜಿಂಬಾಬ್ವೆ ಪ್ರವಾಸ ಮುಗಿಸಿರುವ ಯುವ ಟೀಂ ಇಂಡಿಯಾ ಇದೇ ಜುಲೈ 27 ರಿಂದ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ತಂಡ ಮೂರು ಪಂದ್ಯಗಳ ಟಿ20 ಸರಣಿ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಅಷ್ಟೇ ಅಲ್ಲದೆ ಈ ಸರಣಿಯೊಂದಿಗೆ ಟಿ20 ವಿಶ್ವಕಪ್ ಗೆದ್ದ ಬಳಿಕ ಟೀಂ ಇಂಡಿಯಾದಿಂದ ವಿಶ್ರಾಂತಿ ಪಡೆದುಕೊಂಡಿದ್ದ ಆಟಗಾರರು ತಂಡಕ್ಕೆ ಮರಳಲಿದ್ದಾರೆ. ಈ ಪ್ರವಾಸಕ್ಕೆ ಇನ್ನು ತಂಡವನ್ನು ಪ್ರಕಟಿಸದಿದ್ದರೂ, ಇಷ್ಟರಲ್ಲಿ ಬಿಸಿಸಿಐ ಎರಡು ಸರಣಿಗಳಿಗೆ ತಂಡವನ್ನು ಆಯ್ಕೆ ಮಾಡಲಿದೆ. ಸಿಕ್ಕಿರುವ ಮಾಹಿತಿ ಪ್ರಕಾರ ಟಿ20 ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಿದರೆ, ಏಕದಿನ ತಂಡದ ಸಾರಥ್ಯ ಕೆಎಲ್ ರಾಹುಲ್ ಕೈಗೆ ಸಿಗಲಿದೆ ಎಂದು ಹೇಳಲಾಗುತ್ತಿದೆ.
UPDATE 🚨
A look at the revised schedule for #TeamIndia‘s upcoming tour of Sri Lanka #SLvIND pic.twitter.com/HLoTTorOV7
— BCCI (@BCCI) July 13, 2024
ಭಾರತದ ಶ್ರೀಲಂಕಾ ಪ್ರವಾಸದ ವೇಳಾಪಟ್ಟಿ
- ಜುಲೈ 27 – ಮೊದಲನೇ ಟಿ20
- ಜುಲೈ 28 – ಎರಡನೇ ಟಿ20
- 30 ಜುಲೈ – ಮೂರನೇ ಟಿ20
- 2 ಆಗಸ್ಟ್ – ಮೊದಲನೇ ಏಕದಿನ
- 4 ಆಗಸ್ಟ್ – ಎರಡನೇ ಏಕದಿನ
- 7 ಆಗಸ್ಟ್ – ಮೂರನೇ ಏಕದಿನ
2021ರ ನಂತರ ಮೊದಲ ಶ್ರೀಲಂಕಾ ಪ್ರವಾಸ
2021 ರಲ್ಲಿ ದ್ವಿಪಕ್ಷೀಯ ಸರಣಿಗಾಗಿ ಟೀಂ ಇಂಡಿಯಾ ಕೊನೆಯದಾಗಿ ಶ್ರೀಲಂಕಾಕ್ಕೆ ಭೇಟಿ ನೀಡಿತ್ತು. ಆಗ ಶಿಖರ್ ಧವನ್ ಕೈಗೆ ಭಾರತ ತಂಡದ ಕಮಾಂಡ್ ನೀಡಲಾಗಿತ್ತು. ಟೀಂ ಇಂಡಿಯಾ ಏಕದಿನ ಸರಣಿಯನ್ನು ಗೆದ್ದುಕೊಂಡಿದ್ದರೆ, ಟಿ20 ಸರಣಿಯಲ್ಲಿ 1-2 ಅಂತರದಿಂದ ಸೋಲನುಭವಿಸಬೇಕಾಯಿತು. ಇಂತಹ ಪರಿಸ್ಥಿತಿಯಲ್ಲಿ ಈ ಬಾರಿ ಶ್ರೀಲಂಕಾ ಪ್ರವಾಸಕ್ಕೆ ಬಲಿಷ್ಠ ತಂಡವನ್ನು ಕಳುಹಿಸಲು ಬಿಸಿಸಿಐ ಬಯಸಿದೆ. ಆದಾಗ್ಯೂ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಈ ಪ್ರವಾಸದ ಭಾಗವಾಗುವುದಿಲ್ಲ ಎಂಬ ವರದಿಗಳಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ