IND vs PAK: ಪಾಕ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಬಳಗವನ್ನು ಕಾಡಲಿದೆ ಅದೊಂದು ನ್ಯೂನತೆ..!

IND vs PAK: ವಾಸ್ತವವಾಗಿ ಬುಮ್ರಾ ಆಗಮನದಿಂದ ಟೀಂ ಇಂಡಿಯಾದ ಬೌಲಿಂಗ್ ವಿಭಾಗ ಸಾಕಷ್ಟು ಬಲಿಷ್ಠವಾಗಿ ಕಾಣುತ್ತಿದೆ. ಅಲ್ಲದೆ ಬುಮ್ರಾ ಜೊತೆಗೆ ಶಮಿ ಹಾಗೂ ಸಿರಾಜ್​ ಕೂಡ ತಂಡದ ಬೌಲಿಂಗ್ ವಿಭಾಗದ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಆದರೆ ಕಳೆದ ವಿಶ್ವಕಪ್​ನಲ್ಲಿ ಪಾಕ್ ತಂಡಕ್ಕೆ ನಡುಕ ಹುಟ್ಟಿಸಿದ್ದ ಅದೊಬ್ಬ ವೇಗಿಯ ಕೊರತೆಯನ್ನು ಟೀಂ ಇಂಡಿಯಾ ಎದುರಿಸಲಿದೆ.

IND vs PAK: ಪಾಕ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಬಳಗವನ್ನು ಕಾಡಲಿದೆ ಅದೊಂದು ನ್ಯೂನತೆ..!
ಟೀಂ ಇಂಡಿಯಾ

Updated on: Sep 02, 2023 | 12:35 AM

2023ರ ಏಷ್ಯಾಕಪ್‌ನಲ್ಲಿ (Asia Cup 2023) ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ತನ್ನ ಅಭಿಯಾನ ಆರಂಭಿಸಲಿದೆ. ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಪಂದ್ಯವು ಸೆಪ್ಟೆಂಬರ್ 2 ರಂದು ಪಲ್ಲೆಕೆಲೆಯಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಎಲ್ಲರೂ ಕಾಯುತ್ತಿದ್ದು, ಕಳೆದ ಕೆಲವು ಪಂದ್ಯಗಳಲ್ಲಿ ಪಾಕಿಸ್ತಾನ ಟೀಂ ಇಂಡಿಯಾಗೆ (Team India) ಫೈಟ್ ನೀಡಿದ ರೀತಿ ಇದೀಗ ಈ ಪಂದ್ಯದ ರೋಚಕತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇತ್ತೀಚಿನ ದಿನಗಳಲ್ಲಿ ಎರಡೂ ತಂಡಗಳು ಪರಸ್ಪರ ಕಠಿಣ ಪೈಪೋಟಿ ನೀಡುತ್ತಿವೆ. ಇದಕ್ಕೆ ಪೂರಕವಾಗಿ ಉಭಯ ತಂಡದ ಆಟಗಾರರೂ ಕೂಡ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಹೀಗಾಗಿ ಎಲ್ಲರಿಗೂ ಪಲ್ಲಿಕೆಲೆಯಲ್ಲಿ ಯಾರ ಮೇಲುಗೈ ಸಾಧಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಆದರೆ ಸರ್ವ ವಿಭಾಗದಲ್ಲೂ ಬಲಿಷ್ಠವಾಗಿ ಕಾಣುತ್ತಿರುವ ಟೀಂ ಇಂಡಿಯಾಕ್ಕೆ ಅದೊಂದು ನ್ಯೂನತೆ ಇಡೀ ಏಷ್ಯಾಕಪ್​ನಲ್ಲಿ ಕಾಡಲಿದೆ.

ವಾಸ್ತವವಾಗಿ ಬುಮ್ರಾ ಆಗಮನದಿಂದ ಟೀಂ ಇಂಡಿಯಾದ ಬೌಲಿಂಗ್ ವಿಭಾಗ ಸಾಕಷ್ಟು ಬಲಿಷ್ಠವಾಗಿ ಕಾಣುತ್ತಿದೆ. ಅಲ್ಲದೆ ಬುಮ್ರಾ ಜೊತೆಗೆ ಶಮಿ ಹಾಗೂ ಸಿರಾಜ್​ ಕೂಡ ತಂಡದ ಬೌಲಿಂಗ್ ವಿಭಾಗದ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಆದರೆ ಕಳೆದ ವಿಶ್ವಕಪ್​ನಲ್ಲಿ ಪಾಕ್ ತಂಡಕ್ಕೆ ನಡುಕ ಹುಟ್ಟಿಸಿದ್ದ ಅದೊಬ್ಬ ವೇಗಿಯ ಕೊರತೆಯನ್ನು ಟೀಂ ಇಂಡಿಯಾ ಎದುರಿಸಲಿದೆ. ವಾಸ್ತವವಾಗಿ, ಟೀಂ ಇಂಡಿಯಾ ತನ್ನ ಏಷ್ಯಾಕಪ್ ತಂಡದಲ್ಲಿ ಎಡಗೈ ವೇಗದ ಬೌಲರ್‌ಗಳನ್ನು ಹೊಂದಿಲ್ಲ. ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್​​ ‘ನಂತಹ ವಿಶ್ವದ ಪ್ರತಿ ದೊಡ್ಡ ತಂಡವೂ ಎಡಗೈ ವೇಗಿಗಳಿಲ್ಲದೆ ಮೈದಾನಕ್ಕೆ ಇಳಿಯದಿರುವಾಗ, ಟೀಂ ಇಂಡಿಯಾ ಎಡಗೈ ವೇಗಿಗಳಿಲ್ಲದೆ ಚಾಂಪಿಯನ್ ಆಗುವ ಉದ್ದೇಶದಿಂದ ಮೈದಾನಕ್ಕೆ ಇಳಿಯುತ್ತಿದೆ. ಟೀಂ ಇಂಡಿಯಾದಲ್ಲಿ ಅರ್ಷದೀಪ್ ಸಿಂಗ್ ರೂಪದಲ್ಲಿ ಅದ್ಭುತ ಎಡಗೈ ವೇಗಿ ಇದ್ದಾರೆ, ಆದರೆ ಅವರು ಏಷ್ಯಾಕಪ್‌ಗೆ ಆಯ್ಕೆಯಾಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರೋಹಿತ್ ಅವರನ್ನು ಮಿಸ್ ಮಾಡಿಕೊಳ್ಳುವುದು ಖಚಿತ.

IND vs PAK: ಭಾರತ- ಪಾಕ್ ಪಂದ್ಯ ಯಾವ ಚಾನೆಲ್​ನಲ್ಲಿ ಎಷ್ಟು ಗಂಟೆಗೆ ಆರಂಭ? ಪಂದ್ಯದ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ.

ಅಗ್ರ ಕ್ರಮಾಂಕವನ್ನು ಬೇಟೆಯಾಡಿದ್ದ ಅರ್ಷದೀಪ್

ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿ ಅರ್ಷದೀಪ್ ಪಾಕಿಸ್ತಾನದ ಅಗ್ರ ಕ್ರಮಾಂಕವನ್ನು ಧೂಳಿಪಟ ಮಾಡಿದ್ದರು. ಇಡೀ ಪಾಕಿಸ್ತಾನಿ ತಂಡ ಯಾರ ಹೆಗಲ ಮೇಲೆ ನಿಂತಿದೆಯೋ ಆ ಬ್ಯಾಟ್ಸ್‌ಮನ್‌ಗಳನ್ನು ಬಲಿಪಶುಗಳನ್ನಾಗಿ ಮಾಡಿಕೊಂಡಿದ್ದರು. ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ಅವರನ್ನು 4 ರನ್ ಮತ್ತು ನಾಯಕ ಬಾಬರ್ ಆಝಂರನ್ನು ಅರ್ಷದೀಪ್ ಸಿಂಗ್ ಶೂನ್ಯಕ್ಕೆ ಔಟ್ ಮಾಡಿದ್ದರು. ಅಲ್ಲದೆ ತಮ್ಮ ಖೋಟಾದ 4 ಓವರ್​ಗಳಲ್ಲಿ 32 ರನ್ ನೀಡಿ 3 ವಿಕೆಟ್ ಪಡೆದರು. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ಪಲ್ಲಿಕೆಲೆಯಲ್ಲಿ ಅವರ ಅಲಭ್ಯತೆಯ ನಷ್ಟವನ್ನು ಎದುರಿಸುವ ಲಕ್ಷಣಗಳಿವೆ.

ಬಲಿಷ್ಠ ತಂಡಗಳಲಿದ್ದಾರೆ ಎಡಗೈ ವೇಗದ ಬೌಲರ್‌ಗಳು

ಪ್ರಸ್ತುತ ಟೀಂ ಇಂಡಿಯಾದಲ್ಲಿ ಒಬ್ಬನೇ ಒಬ್ಬ ಎಡಗೈ ವೇಗದ ಬೌಲರ್ ಇಲ್ಲ. ಪಾಕಿಸ್ತಾನ ತಂಡದಲ್ಲಿ ಶಾಹೀನ್ ಶಾ ಆಫ್ರಿದಿ ರೂಪದಲ್ಲಿ ಒಬ್ಬ ಎಡಗೈ ವೇಗಿ ಇದ್ದಾರೆ. ಇನ್ನು ವಿಶ್ವ ಚಾಂಪಿಯನ್ ತಂಡಗಳ ಬಗ್ಗೆ ಮಾತನಾಡುವುದಾದರೆ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಂತಹ ತಂಡಗಳಿಗೆ ಎಡಗೈ ವೇಗದ ಬೌಲರ್ ಆಟದ ಫಲಿತಾಂಶವನ್ನು ಹೇಗೆ ಬದಲಾಯಿಸಬಹುದು ಎಂದು ತಿಳಿದಿದೆ. ಹೀಗಾಗಿ ತಮ್ಮ ತಮ್ಮ ತಂಡಗಳಲ್ಲಿ ಎಡಗೈ ವೇಗದ ಬೌಲರ್​ಗಳ ದಂಡನ್ನೇ ಹೊಂದಿವೆ.

ವಾಸ್ತವವಾಗಿ, ಬಲಗೈ ಬ್ಯಾಟ್ಸ್‌ಮನ್‌ಗಳಿಗೆ ಎಡಗೈ ವೇಗದ ಬೌಲರ್‌ಗಳನ್ನು ಎದುರಿಸುವುದು ಕೊಂಚ ಕಷ್ಟಕರ. ಅಲ್ಲದೆ ಬಲಗೈ ಬ್ಯಾಟ್ಸ್‌ಮನ್‌ಗಳು ತಮ್ಮ ಹೊರಹೋಗುವ ಎಸೆತಗಳನ್ನು ಎದುರಿಸುವುದಕ್ಕೆ ಕಷ್ಟ ಪಡುವುದನ್ನು ಅದರಲ್ಲೂ ಎಡಗೈ ವೇಗದ ಬೌಲರ್‌ಗಳ ಇನ್​ ಸ್ವಿಂಗ್ ಎಸೆತಗಳನ್ನು ಆಡುವುದು ಬಲಗೈ ದಾಂಡಿಗರಿಗೆ ಕಷ್ಟ ಸಾಧ್ಯ. ಇಂತಹ ಪರಿಸ್ಥಿತಿಯಲ್ಲಿ ಎಲ್ ಬಿಡಬ್ಲ್ಯು ಔಟ್ ಆಗುವ ಅಥವಾ ವಿಕೆಟ್ ಹಿಂದೆ ಕ್ಯಾಚ್ ನೀಡುವ ಸಾಧ್ಯತೆ ಹೆಚ್ಚು. ಬಾಬರ್ ಅವರನ್ನು ಈ ರೀತಿ ಬಲೆಗೆ ಬೀಳಿಸುವ ಮೂಲಕ ಅರ್ಷದೀಪ್ ಅವರನ್ನು ಬೇಟೆಯಾಡಿದ್ದರು. ಆದರೆ ಈಗ ಬಾಬರ್-ರಿಜ್ವಾನ್ ಅವರನ್ನು ಅದೇ ರೀತಿಯಲ್ಲಿ ಬಲೆಗೆ ಬೀಳಿಸುವ ಎಡಗೈ ವೇಗದ ಬೌಲರ್ ಟೀಂ ಇಂಡಿಯಾದಲ್ಲಿ ಸದ್ಯಕ್ಕೆ ಇಲ್ಲ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ