ಹೈವೋಲ್ಟೇಜ್ ಕದನಕ್ಕೂ ಮುನ್ನ ಪಾಕ್ ಬೌಲರ್ಗಳ ಜೊತೆ ಸಮಯ ಕಳೆದ ಕಿಂಗ್ ಕೊಹ್ಲಿ; ವಿಡಿಯೋ ನೋಡಿ
IND vs PAK: ಪಂದ್ಯಕ್ಕೆ ಒಂದು ದಿನ ಮುಂಚಿತವಾಗಿ, ಸೆಪ್ಟೆಂಬರ್ 1 ಶುಕ್ರವಾರ, ಕ್ಯಾಂಡಿಯ ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಂದೇ ಸಮಯದಲ್ಲಿ ಅಭ್ಯಾಸ ನಡೆಸಿದವು. ಈ ಅಭ್ಯಾಸವು ಬಹಳ ಸಮಯದವರೆಗೆ ನಡೆಯಿತ್ತಾದರೂ ಸಣ್ಣ ಮಳೆಯಿಂದಾಗಿ ಅಭ್ಯಾಸದ ಅವಧಿಯನ್ನು ಮಧ್ಯದಲ್ಲಿಯೇ ನಿಲ್ಲಿಸಬೇಕಾಯಿತು. ಆ ನಡುವೆ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಪಾಕ್ ಆಟಗಾರರ ಜೊತೆ ಕಾಲಕಳೆದರು.

ಇಂದು ಏಷ್ಯಾಕಪ್‌ನಲ್ಲಿ (Asia Cup 2023) ಮಹತ್ವದ ಪಂದ್ಯ ನಡೆಯುತ್ತಿದೆ. ಶ್ರೀಲಂಕಾದ ಕ್ಯಾಂಡಿ ಮೈದಾನ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಕ್ರಿಕೆಟ್ ಕದನಕ್ಕೆ ಸಾಕ್ಷಿಯಾಗಲಿದೆ. ವಿಶ್ವಕಪ್‌ಗೂ ಮುನ್ನ ಈ ಉಭಯ ತಂಡಗಳು ಏಷ್ಯಾಕಪ್‌ನಲ್ಲಿ ಮುಖಾಮುಖಿಯಾಗಲು ಸಜ್ಜಾಗಿವೆ. ಹೀಗಾಗಿ ಉಭಯ ತಂಡಗಳು ಈಗಾಗಲೇ ಕ್ಯಾಂಡಿ ಮೈದಾನವು ತಲುಪಿದ್ದು, ನಿನ್ನೆ ಅಂದರೆ ಸೆಪ್ಟಂಬರ್ 2 ರಂದು ಒಟ್ಟಾಗಿ ಅಭ್ಯಾಸ ನಡೆಸಿದವು. ಈ ವೇಳೆ ಎರಡೂ ತಂಡದ ಆಟಗಾರರು ಪರಸ್ಪರ ಬೇಟಿಯಾಗಿ ಉಭಯ ಕುಶಲೋಪರಿ ಕೇಳಿದಲ್ಲದೆ, ಕೆಲಸಮಯ ತಮಾಷೆ ಮಾಡುತ್ತ ಕಾಲಕಳೆದರು. ಅದರಲ್ಲೂ ಟೀಂ ಇಂಡಿಯಾದ (Team India) ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli), ಪಾಕಿಸ್ತಾನದ ಬೌಲರ್‌ಗಳೊಂದಿಗೆ ಹೆಚ್ಚು ಹೊತ್ತು ಮಾತನಾಡಿದ್ದು, ಈ ವೇಳೆ ನಗುತ್ತಾ ತಮಾಷೆ ಮಾಡಿದ್ದು ಕಂಡುಬಂತು.
ಪಂದ್ಯಕ್ಕೆ ಒಂದು ದಿನ ಮುಂಚಿತವಾಗಿ, ಸೆಪ್ಟೆಂಬರ್ 1 ಶುಕ್ರವಾರ, ಕ್ಯಾಂಡಿಯ ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಂದೇ ಸಮಯದಲ್ಲಿ ಅಭ್ಯಾಸ ನಡೆಸಿದವು. ಈ ಅಭ್ಯಾಸವು ಬಹಳ ಸಮಯದವರೆಗೆ ನಡೆಯಿತ್ತಾದರೂ ಸಣ್ಣ ಮಳೆಯಿಂದಾಗಿ ಅಭ್ಯಾಸದ ಅವಧಿಯನ್ನು ಮಧ್ಯದಲ್ಲಿಯೇ ನಿಲ್ಲಿಸಬೇಕಾಯಿತು.
IND vs PAK: ಪಾಕ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಬಳಗವನ್ನು ಕಾಡಲಿದೆ ಅದೊಂದು ನ್ಯೂನತೆ..!
ರೌಫ್ ಅವರನ್ನು ತಬ್ಬಿಕೊಂಡ ಕೊಹ್ಲಿ
ಟೀಂ ಇಂಡಿಯಾದ ಸ್ಟಾರ್ ಮತ್ತು ಮಾಜಿ ನಾಯಕ ಕೊಹ್ಲಿ ಕೂಡ ನೆಟ್ಸ್‌ನಲ್ಲಿ ದೀರ್ಘಕಾಲ ಬ್ಯಾಟಿಂಗ್ ಅಭ್ಯಾಸ ಮಾಡಿದರು. ಆದರೆ ಅದಕ್ಕೂ ಮೊದಲು ಅವರು ಪಾಕಿಸ್ತಾನದ ಬಿರುಗಾಳಿ ವೇಗದ ಬೌಲರ್ ಹ್ಯಾರಿಸ್ ರೌಫ್ ಅವರನ್ನು ಭೇಟಿಯಾದರು. ಮೊದಲು ರೌಫ್‌ಗೆ ಹಸ್ತಲಾಘವ ಮಾಡಿದ ಕೊಹ್ಲಿ, ನಂತರ ಇಬ್ಬರೂ ಆಟಗಾರರು ಪರಸ್ಪರ ತಬ್ಬಿಕೊಂಡರು. ಇಬ್ಬರೂ ಕೂಡ ಸ್ವಲ್ಪ ಹೊತ್ತು ಮಾತಾಡಿದರು. ಕಳೆದ ವರ್ಷದ ಟಿ20 ವಿಶ್ವಕಪ್ ಬಳಿಕ ಕೊಹ್ಲಿ ಮತ್ತು ರೌಫ್‌ರ ಮೊದಲ ಭೇಟಿ ಇದಾಗಿತ್ತು. ಅಕ್ಟೋಬರ್ 23 ರಂದು ಮೆಲ್ಬೋರ್ನ್‌ನಲ್ಲಿ ನಡೆದ ಆ ಪಂದ್ಯದಲ್ಲಿ, ಕೊಹ್ಲಿ 19 ನೇ ಓವರ್‌ನಲ್ಲಿ ರೌಫ್ ಮೇಲೆ ಸತತ ಎರಡು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಟೀಂ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದ್ದರು.
Pakistan and India players meet up ahead of Saturday's #PAKvIND match in Kandy ✨#AsiaCup2023 pic.twitter.com/iP94wjsX6G
— Pakistan Cricket (@TheRealPCB) September 1, 2023
ಶಾದಾಬ್-ಶಹೀನ್ ಜೊತೆ ನಕ್ಕು ತಮಾಷೆ ಮಾಡಿದ ಕೊಹ್ಲಿ
ರೌಫ್ ಅವರನ್ನು ಭೇಟಿ ಮಾಡಿದ ನಂತರ, ಕೊಹ್ಲಿ ಪಾಕಿಸ್ತಾನದ ಇತರ ಆಟಗಾರರೊಂದಿಗೆ ಮಾತನಾಡಿದರು. ಮಳೆಯಿಂದಾಗಿ ಅಭ್ಯಾಸ ಸ್ಥಗಿತಗೊಂಡ ನಂತರ, ಕೊಹ್ಲಿ ಪಾಕಿಸ್ತಾನದ ಸ್ಪಿನ್ ಆಲ್‌ರೌಂಡರ್ ಶಾದಾಬ್ ಖಾನ್ ಅವರೊಂದಿಗೆ ಸುದೀರ್ಘ ಚರ್ಚೆಯಲ್ಲಿ ನಿರತರಾಗಿದ್ದರು. ಇಬ್ಬರೂ ತುಂಬಾ ನಗುತ್ತಾ ತಮಾಷೆ ಮಾಡುತ್ತಿರುವುದು ಕಂಡುಬಂತು. ಅಲ್ಲಿ ರೌಫ್ ಕೂಡ ಇದ್ದರು, ಸ್ವಲ್ಪ ಸಮಯದ ನಂತರ ಶಾಹೀನ್ ಶಾ ಆಫ್ರಿದಿ ಕೂಡ ಅಲ್ಲಿಗೆ ಬಂದರು ಮತ್ತು ಕೊಹ್ಲಿ ಅವರು ಮೂವರೊಂದಿಗೆ ಮಾತನಾಡಲು ಪ್ರಾರಂಭಿಸಿದರು. ಈ ವೇಳೆ ಕೊಹ್ಲಿ ಶಾದಾಬ್ ಅವರ ಬ್ಯಾಟ್ ಹಿಡಿದು ಶಾಡೋ ಬ್ಯಾಟಿಂಗ್ ಮಾಡಿದರು.
A good fun chat between Virat Kohli, Sheheen Afridi, Shadab Khan,Haris Rauf and M Rizwan #AsiaCup2023 #AsiaCup #AsiaCup23 #PAKvIND #INDvsPAK #SAVAUS #ENGvNZ pic.twitter.com/wX2EUdpwvD
— Shoaib Awan (@shoaibawan365) September 1, 2023
Environment set for India and Pakistan's practice session. Weather looking clear so far.#INDvPAK#AsiaCup23pic.twitter.com/iLGSaN5zFJ
— Himanshu Pareek (@Sports_Himanshu) September 1, 2023
ಅಭಿಮಾನಿಗಳು ಮತ್ತು ತಜ್ಞರು ಹೇಳುವ ಮಾತಿಗೆ ವ್ಯತಿರಿಕ್ತವಾಗಿ, ಎರಡೂ ತಂಡಗಳ ಆಟಗಾರರಲ್ಲಿ ಒಬ್ಬರಿಗೊಬ್ಬರು ಸಾಕಷ್ಟು ಆತ್ಮಿಯತೆಯಿಂದ ಇರುವುದು ಕಂಡು ಬಂತು. ಪಂದ್ಯಕ್ಕೂ ಮುನ್ನ ಈ ದೃಶ್ಯ ಅಭಿಮಾನಿಗಳ ಮನ ಗೆಲ್ಲುವಂತಿತ್ತು. ಆದರೆ ಪಂದ್ಯ ನಡೆಯುವ ವೇಳೆ ಇದೇ ರೀತಿಯ ಮನಸ್ಥಿತಿ ಇರುವುದಂತೂ ಸುಳ್ಳು. ಏಕೆಂದರೆ ಈ ಪಂದ್ಯದಲ್ಲಿನ ಗೆಲುವು ಉಭಯ ತಂಡಗಳ ಆಟಗಾರರು ಅತ್ಯವಶ್ಯಕ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:17 am, Sat, 2 September 23
