ಕಾವ್ಯಾ ವಿಚಾರದಲ್ಲಿ ಅತಿ ಆಯ್ತು ಗಿಲ್ಲಿ ವರ್ತನೆ: ಸುದೀಪ್ ಹೇಳಿದರೂ ಬುದ್ಧಿ ಕಲಿತಿಲ್ಲ
ಪ್ರತಿ ಬಾರಿ ತಪ್ಪು ಮಾಡುವುದು, ನಂತರ ಕ್ಷಮೆ ಕೇಳುವುದನ್ನೇ ಗಿಲ್ಲಿ ನಟ ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ ಅವರಲ್ಲಿ ಬದಲಾವಣೆ ಕಾಣುತ್ತಿಲ್ಲ. ಇದರಿಂದ ಕಾವ್ಯಾ ಶೈವ ಅವರಿಗೆ ವಿಪರೀಪ ಕೋಪ ಬಂದಿದೆ. ಸ್ನೇಹದ ವಿಚಾರದಲ್ಲಿ ಕಿಚ್ಚ ಸುದೀಪ್ ಅವರು ಈ ಮೊದಲ ನೀಡಿದ್ದ ಕಿವಿಮಾತನ್ನು ಗಿಲ್ಲಿ ನಟ ಅರ್ಥ ಮಾಡಿಕೊಂಡಂತೆ ಕಾಣುತ್ತಿಲ್ಲ.

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋನಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಅವರು ಆತ್ಮೀಯರಾಗಿದ್ದಾರೆ. ಶೋ ಆರಂಭದಿಂದಲೂ ಕೂಡ ಅವರು ಒಟ್ಟಿಗೆ ಇದ್ದಾರೆ. ಇದರಿಂದಾಗಿ ಕಾವ್ಯ ಅವರ ಆಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದನ್ನು ಕಿಚ್ಚ ಸುದೀಪ್ ಅವರು ಈಗಾಗಲೇ ಹೇಳಿದ್ದಾರೆ. ಆದರೂ ಕೂಡ ಗಿಲ್ಲಿ ನಟ ಅವರು ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ಡಿಸೆಂಬರ್ 22ರ ಸಂಚಿಕೆಯಲ್ಲಿ ಗಿಲ್ಲಿ ನಟ (Gilli Nata) ಅವರು ಹಳೇ ಚಾಳಿಯನ್ನೇ ಮುಂದುವರಿಸಿದ್ದಾರೆ. ಕಾವ್ಯಾ (Kavya Shaiva) ಬೇಡ ಎಂದರೂ ಕೂಡ ಗಿಲ್ಲಿ ನಟ ಅವರು ಮುಗಿಬಿದ್ದು ಮಾತನಾಡಲು ಬಂದಿದ್ದಾರೆ.
ಗಿಲ್ಲಿ ನಟ ಅವರ ವರ್ತನೆಯಿಂದ ಈಗಾಗಲೇ ಹಲವು ಬಾರಿ ಕಾವ್ಯಾ ಅವರಿಗೆ ಕಿರಿಕಿರಿ ಆಗಿದೆ. ಅದನ್ನು ಅವರು ನೇರವಾಗಿಯೇ ಹೇಳಿದ್ದಾರೆ. ‘ನಿನಗೆ ನಾಚಿಕೆ, ಮಾನ, ಮರ್ಯಾದೆ ಇಲ್ಲ’ ಎಂದು ಕಾವ್ಯಾ ಅವರು ಮುಲಾಜಿಲ್ಲದೇ ಹೇಳಿದರೂ ಕೂಡ ಗಿಲ್ಲಿ ನಟ ಅರ್ಥ ಮಾಡಿಕೊಂಡಿಲ್ಲ. ಕಾವ್ಯಾಗೆ ಕಿರಿಕಿರಿ ಆಗುವ ರೀತಿಯಲ್ಲಿ ಗಿಲ್ಲಿ ನಡೆದುಕೊಂಡಿದ್ದಾರೆ.
86ನೇ ಸಂಚಿಕೆಯಲ್ಲಿ ಕಾವ್ಯ ಅವರು ಅಡುಗೆ ಮನೆಯಲ್ಲಿ ದಾಳಿಂಬೆ ಹಣ್ಣು ಬಿಡಿಸುತ್ತಿದ್ದರು. ಆಗ ಗಿಲ್ಲಿ ಬಂದು ತಮಾಷೆ ಮಾಡಲು ಆರಂಭಿಸಿದರು. ಕತ್ತರಿ ಹಿಡಿದುಕೊಂಡು ಕಾವ್ಯಾ ಅವರ ಕೂದಲು ಕತ್ತರಿಸುವ ರೀತಿಯಲ್ಲಿ ನಟಿಸಿದರು. ಇದರಿಂದ ಕಾವ್ಯ ಅವರಿಗೆ ತುಂಬಾ ಕೋಪ ಬಂತು. ಕೋಪ ವ್ಯಕ್ತಪಡಿಸಿದರೂ ಸಹ ಗಿಲ್ಲಿ ಅರ್ಥ ಮಾಡಿಕೊಳ್ಳಲಿಲ್ಲ.
ಕಾವ್ಯಾ ಬಿಡಿಸುತ್ತಿದ್ದ ದಾಳಿಂಬೆ ಹಣ್ಣನ್ನು ಬಲವಂತಾವಾಗಿ ತೆಗೆದುಕೊಂಡು ತಿನ್ನಲು ಗಿಲ್ಲಿ ಮುಂದಾದರು. ಅದು ಕೂಡ ಕಾವ್ಯಾ ಅವರಿಗೆ ಹಿಡಿಸಲಿಲ್ಲ. ದಾಳಿಂಬೆ ಹಣ್ಣನ್ನು ಅಲ್ಲಿಯೇ ಬಿಟ್ಟು ಕ್ಯಾಪ್ಟನ್ ರೂಮ್ಗೆ ತೆರಳಿದರು. ಅವರು ತುಂಬಾ ಬೇಸರ ಮಾಡಿಕೊಂಡಿದ್ದು ಕಾಣಿಸಿತು. ಅಷ್ಟರನಂತರ ಅವರನ್ನು ಸಮಾಧಾನ ಮಾಡಲು ಗಿಲ್ಲಿ ಪ್ರಯತ್ನಿಸಿದರು.
ಇದನ್ನೂ ಓದಿ: ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಈ ವಾರ ಕಾವ್ಯ ಶೈವ ಅವರು ಕ್ಯಾಪ್ಟನ್ ಆಗಿದ್ದಾರೆ. ಹಾಗಾಗಿ ಅವರು ನಾಮಿನೇಷನ್ನಿಂದ ಬಚಾವ್ ಆಗಿದ್ದಾರೆ. ಆದರೆ ಗಿಲ್ಲಿ ನಟ ಅವರು ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ಆಗಿರುವ ಕಾವ್ಯ ಅವರು ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿಯನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಆಟದ ಪೈಪೋಟಿ ಜೋರಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




