AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​​ಬಾಸ್: ರನ್ನರ್ ಅಪ್ ಆದರೂ ವಿನ್ನರ್​​ಗಿಂತ ಹೆಚ್ಚು ಹಣ ಪಡೆದ ತನುಜಾ

Bigg Boss Telugu season 09: ಅಕ್ಕಿನೇನಿ ನಾಗಾರ್ಜುನ ನಡೆಸಿಕೊಡುವ ತೆಲುಗು ಬಿಗ್​​ಬಾಸ್​ನ ಒಂಬತ್ತನೇ ಸೀಸನ್ ಇದೇ ಭಾನುವಾರ ಮುಕ್ತಾಯಗೊಂಡಿದೆ. ಫಿನಾಲೆಗೆ ಕನ್ನಡತಿಯರಾದ ತನುಜಾ ಪುಟ್ಟಸ್ವಾಮಿ ಮತ್ತು ಸಂಜನಾ ಗಲ್ರಾನಿ ಎಂಟ್ರಿ ಕೊಟ್ಟಿದ್ದರು. ಆದರೆ ಅದೃಷ್ಟ ಅವರ ಕಡೆ ಇರಲಿಲ್ಲ. ತನುಜಾ ಮೊದಲ ರನ್ನರ್ ಅಪ್ ಆದರು. ಆದರೆ ವಿನ್ನರ್​​ಗಿಂತಲೂ ಹೆಚ್ಚು ಮೊತ್ತವನ್ನು ತನುಜಾ ಪಡೆದುಕೊಂಡಿದ್ದಾರೆ. ಹೇಗದು?

ಬಿಗ್​​ಬಾಸ್: ರನ್ನರ್ ಅಪ್ ಆದರೂ ವಿನ್ನರ್​​ಗಿಂತ ಹೆಚ್ಚು ಹಣ ಪಡೆದ ತನುಜಾ
Tanuja Puttaswamy
ಮಂಜುನಾಥ ಸಿ.
|

Updated on:Dec 23, 2025 | 12:30 PM

Share

ಬಿಗ್​​ಬಾಸ್ (Bigg Boss) ಸೀಸನ್ ಮುಗಿಯುತ್ತಾ ಬಂದಿದೆ. ಈಗಾಗಲೇ ಹಿಂದಿ, ಮಲಯಾಳಂ ಬಿಗ್​​ಬಾಸ್ ಮುಗಿದಿವೆ. ಇದೇ ಭಾನುವಾರ ತೆಲುಗು ಬಿಗ್​​ಬಾಸ್ ಸೀಸನ್ 09 ಸಹ ಮುಗಿದಿದೆ. ಈ ಬಾರಿಯ ತೆಲುಗು ಬಿಗ್​​ಬಾಸ್ ಕೆಲವು ಕಾರಣಗಳಿಗೆ ಕನ್ನಡ ಪ್ರೇಕ್ಷಕರ ಗಮನವನ್ನೂ ಸೆಳೆದಿತ್ತು. ಈ ಬಾರಿ ತೆಲುಗು ಬಿಗ್​​ಬಾಸ್​​ನಲ್ಲಿ ಇಬ್ಬರು ಕನ್ನಡತಿಯರು ಭಾಗವಹಿಸಿದ್ದರು, ಮಾತ್ರವಲ್ಲದೆ ಅದ್ಭುತವಾಗಿ ಆಡಿ ಫಿನಾಲೆ ಸಹ ತಲುಪಿದ್ದರು. ನಟಿ ಸಂಜನಾ ಗಲ್ರಾನಿ ಮತ್ತು ತನುಜಾ ಪುಟ್ಟಸ್ವಾಮಿ ಇಬ್ಬರೂ ಸಹ ತೆಲುಗು ಬಿಗ್​​ಬಾಸ್​​ನಲ್ಲಿ ಭಾಗವಹಿಸಿದ್ದರು. ಅದ್ಭುತವಾಗಿ ಆಡಿ ಫಿನಾಲೆ ವರೆಗೆ ಹೋಗಿದ್ದರು. ಆದರೆ ಫಿನಾಲೆಯಲ್ಲಿ ಗೆಲುವು ಅವರದ್ದಾಗಲಿಲ್ಲ.

ಗೆಲುವಿನ ಭರವಸೆ ಮೂಡಿಸಿದ್ದ ತನುಜಾ ಪುಟ್ಟಸ್ವಾಮಿ ಮೊದಲ ರನ್ನರ್ ಅಪ್ ಆದರೆ, ಸಂಜನಾ ಗಲ್ರಾನಿ ನಾಲ್ಕನೇ ರನ್ನರ್ ಅಪ್ ಆದರು. ಕಾಮನರ್ ಆಗಿ ಮನೆಗೆ ಎಂಟ್ರಿ ಕೊಟ್ಟ ಕಲ್ಯಾಣ್ ಅವರು ವಿನ್ನರ್ ಆಗಿ ಇತಿಹಾಸ ಬರೆದರು. ವಿನ್ನರ್ ಆದ ಕಲ್ಯಾಣ್​​ಗೆ 35 ಲಕ್ಷ ರೂಪಾಯಿ ಬಹುಮಾನದ ಮೊತ್ತದ ಜೊತೆಗೆ ಟ್ರೋಫಿ ಮತ್ತು ಮಾರುತಿಯ ಹೊಸ ಕಾರೊಂದನ್ನು ನೀಡಲಾಯ್ತು. ವಿಶೇಷವೆಂದರೆ ವಿನ್ನರ್ ಆದವರಿಗಿಂತಲೂ ಹೆಚ್ಚಿನ ಮೊತ್ತ ಗಳಿಸಿದ್ದು ರನ್ನರ್ ಅಪ್ ಆದ ತನುಜಾ ಪುಟ್ಟಸ್ವಾಮಿ.

ಕಲ್ಯಾಣ್ ಅವರು ಕಾಮನರ್ ಆಗಿ ಬಿಗ್​​ಬಾಸ್ ಮನೆಗೆ ಹೋಗಿದ್ದರು. ಈ ಹಿಂದೆ ಸೈನ್ಯದಲ್ಲಿದ್ದ ಕಲ್ಯಾಣ್, ಜನರ ಓಟಿನ ಮೂಲಕ ಬಿಗ್​​ಬಾಸ್ ಮನೆಗೆ ಆಯ್ಕೆ ಆಗಿ ಹೋಗಿದ್ದರು. ಮನರಂಜನಾ ಕ್ಷೇತ್ರದ ಹಿನ್ನೆಲೆ ಅವರಿಗೆ ಇರಲಿಲ್ಲ. ಆದರೆ ತನುಜಾ ಪುಟ್ಟಸ್ವಾಮಿ ತೆಲುಗು ಟಿವಿ ಲೋಕದ ಜನಪ್ರಿಯ ನಟಿ. ಈಗಾಗಲೇ ಹಲವು ಧಾರಾವಾಹಿಗಳಲ್ಲಿ ತನುಜಾ ನಟಿಸಿ, ತೆಲುಗು ಪ್ರೇಕ್ಷಕರ ಮನ ಗೆದ್ದಿದ್ದಾರೆ. ಹಾಗಾಗಿ ಭಾರಿ ಮೊತ್ತದ ಸಂಭಾವನೆಯನ್ನೇ ತನುಜಾ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:ಬಿಗ್​​ಬಾಸ್ ಮನೆಯ ‘ಕಬಾಲಿ’ ತನುಜಾ ಪುಟ್ಟಸ್ವಾಮಿ: ವಿಡಿಯೋ

ತೆಲುಗು ಮಾಧ್ಯಮಗಳು ವರದಿ ಮಾಡಿರುವಂತೆ ತನುಜಾ ಅವರ ಸಂಭಾವನೆ ದಿನದ ಲೆಕ್ಕದಲ್ಲಿತ್ತಂತೆ. ಪ್ರತಿ ದಿನ 35 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ತನುಜಾ ಅವರು ಒಟ್ಟು 105 ದಿನಗಳ ಕಾಲ ಬಿಗ್​​ಬಾಸ್​​ ಮನೆಯಲ್ಲಿದ್ದರು, ಇದರಿಂದ ಅವರು ಪಡೆದ ಒಟ್ಟು ಸಂಭಾವನೆ 36.75 ಲಕ್ಷ ರೂಪಾಯಿಗಳು. ತೆಲುಗು ಬಿಗ್​​ಬಾಸ್ ಸೀಸನ್ 09ರಲ್ಲಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ಪ್ರಥಮ ಬಹುಮಾನ ಗೆದ್ದ ಕಲ್ಯಾಣ್, ಕಾಮನರ್ ಆಗಿದ್ದ ಕಾರಣ ಅವರಿಗೆ ಸಂಭಾವನೆಯೇ ಇರಲಿಲ್ಲ ಎಂದು ಸಹ ಕೆಲ ಮಾಧ್ಯಮಗಳು ವರದಿ ಮಾಡಿವೆ. ಪ್ರಥಮ ಬಹುಮಾನ ಗೆದ್ದ ಕಲ್ಯಾಣ್ ಅವರಿಗೆ ಸಿಕ್ಕ ನಗದು ಬಹುಮಾನಕ್ಕಿಂತಲೂ ಹೆಚ್ಚಿನ ಸಂಭಾವನೆಯನ್ನು ತನುಜಾ ಪುಟ್ಟಸ್ವಾಮಿ ಪಡೆದುಕೊಂಡಿದ್ದಾರೆ.

ತನುಜಾ ಪುಟ್ಟಸ್ವಾಮಿ ಅವರು ಕನ್ನಡದ ಸೂಪರ್ ಹಿಟ್ ಸಿನಿಮಾ ‘6-5=3’, ‘ದಂಧೆ ಬಾಯ್ಸ್’ ಇನ್ನೂ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಳ್ಳೆಯ ನಟಿಯಾಗಿರುವ ಅವರು ತೆಲುಗು ಕಿರುತೆರೆ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದಾರೆ. ತೆಲುಗಿನಲ್ಲಿ ಕೆಲ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:27 pm, Tue, 23 December 25

ಮನ್​ ಕಿ ಬಾತ್​ , ಪ್ರಧಾನಿ ದೇಶದ ಜನತೆಯೊಂದಿಗೆ ನಡೆಸುವ ಸಾಮೂಹಿಕ ಸಂವಾದ
ಮನ್​ ಕಿ ಬಾತ್​ , ಪ್ರಧಾನಿ ದೇಶದ ಜನತೆಯೊಂದಿಗೆ ನಡೆಸುವ ಸಾಮೂಹಿಕ ಸಂವಾದ
ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ