Dawid Malan: 9 ಭರ್ಜರಿ ಸಿಕ್ಸ್ನೊಂದಿಗೆ ಸಿಡಿದ ಮಲಾನ್: ದಾಖಲೆಯ ಮೊತ್ತ ಚೇಸಿಂಗ್..!
The Hundred: ಕೇವಲ 25 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 3 ಫೋರ್ನೊಂದಿಗೆ 41 ರನ್ ಚಚ್ಚುವ ಮೂಲಕ ಜೋಸ್ ಬಟ್ಲರ್ ಬಿರುಸಿನ ಆರಂಭ ಒದಗಿಸಿದ್ದರು.
ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಲೀಗ್ನಲ್ಲಿ ಡೇವಿಡ್ ಮಲಾನ್ (Dawid Malan) ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ. ಶನಿವಾರ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮ್ಯಾಚೆಂಸ್ಟರ್ ಒರಿಜಿನಲ್ಸ್ ಹಾಗೂ ಟ್ರೆಂಟ್ ರಾಕೆಟ್ಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಜೋಸ್ ಬಟ್ಲರ್ ನಾಯಕತ್ವದ ಮ್ಯಾಚೆಂಸ್ಟರ್ ಒರಿಜಿನಲ್ಸ್ ತಂಡವು ಉತ್ತಮ ಆರಂಭ ಪಡೆಯಿತು.
ಕೇವಲ 25 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 3 ಫೋರ್ನೊಂದಿಗೆ 41 ರನ್ ಚಚ್ಚುವ ಮೂಲಕ ಜೋಸ್ ಬಟ್ಲರ್ ಬಿರುಸಿನ ಆರಂಭ ಒದಗಿಸಿದ್ದರು. ಮತ್ತೊಂದೆಡೆ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಫಿಲಿಪ್ ಸಾಲ್ಟ್ 46 ಎಸೆತಗಳಲ್ಲಿ 6 ಫೋರ್ ಹಾಗೂ 2 ಸಿಕ್ಸ್ನೊಂದಿಗೆ ಅಜೇಯ 70 ರನ್ ಬಾರಿಸಿದರು. ಪರಿಣಾಮ ಮ್ಯಾಚೆಂಸ್ಟರ್ ಒರಿಜಿನಲ್ಸ್ ತಂಡವು ನಿಗದಿತ 100 ಎಸೆತಗಳಲ್ಲಿ 3 ವಿಕೆಟ್ ನಷ್ಟಕ್ಕೆ 183 ರನ್ ಕಲೆಹಾಕಿತು.
ಈ ಬೃಹತ್ ಗುರಿ ಬೆನ್ನತ್ತಿದ ಟ್ರೆಂಟ್ ರಾಕೆಟ್ಸ್ ತಂಡವು ಡೇವಿಡ್ ಮಲಾನ್ ಅವರ ಅಬ್ಬರದೊಂದಿಗೆ ಶುಭಾರಂಭ ಮಾಡಿತು. ಅಲೆಕ್ಸ್ ಹೇಲ್ಸ್ ಜೊತೆಗೂಡಿ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಮಲಾನ್ ಮ್ಯಾಚೆಂಸ್ಟರ್ ಒರಿಜಿನಲ್ಸ್ ಬೌಲರ್ಗಳ ಲಯ ತಪ್ಪಿಸಿದರು. ಇದೇ ವೇಳೆ 20 ಎಸೆತಗಳಲ್ಲಿ 2 ಸಿಕ್ಸ್ 5 ಫೋರ್ನೊಂದಿಗೆ 38 ರನ್ ಬಾರಿಸಿದ್ದ ಹೇಲ್ಸ್ ವಿಕೆಟ್ ಒಪ್ಪಿಸಿ ಹೊರನಡೆದರು. ಆದರೆ ಈ ವೇಳೆಗಾಗಲೇ ಟ್ರೆಂಟ್ ರಾಕೆಟ್ಸ್ ತಂಡವು 85 ರನ್ ಕಲೆಹಾಕಿತ್ತು.
Malan on a mission! ?
The Rockets were set a mammoth run chase by Manchester Originals – but they’re coming…#TheHundred @dmalan29 pic.twitter.com/XGPwKRM42V
— The Hundred (@thehundred) August 13, 2022
ಮೊದಲ ವಿಕೆಟ್ ಪತನದ ಬಳಿಕವೂ ಸಿಡಿಲಬ್ಬರ ಮುಂದುವರೆಸಿದ ಡೇವಿಡ್ ಮಲಾನ್ 9 ಭರ್ಜರಿ ಸಿಕ್ಸ್ ಹಾಗೂ 3 ಫೋರ್ ಬಾರಿಸಿ ಅಬ್ಬರಿದ್ದರು. ಪರಿಣಾಮ 94 ಎಸೆತಗಳಲ್ಲಿ ಟ್ರೆಂಟ್ ರಾಕೆಟ್ಸ್ ತಂಡವು 2 ವಿಕೆಟ್ ನಷ್ಟಕ್ಕೆ 193 ರನ್ಗಳಿಸಿ ಭರ್ಜರಿ ಜಯ ಸಾಧಿಸಿತು. ಇದರೊಂದಿಗೆ ದಿ ಹಂಡ್ರೆಡ್ ಲೀಗ್ನಲ್ಲಿ ಅತ್ಯಧಿಕ ಮೊತ್ತವನ್ನು ಚೇಸ್ ಮಾಡಿದ ವಿಶೇಷ ದಾಖಲೆಯೊಂದು ಟ್ರೆಂಟ್ ರಾಕೆಟ್ಸ್ ತಂಡದ ಪಾಲಾಯಿತು.
ಇನ್ನು ಕೇವಲ 44 ಎಸೆತಗಳಲ್ಲಿ ಅಜೇಯ 98 ರನ್ ಬಾರಿಸಿದ ಡೇವಿಡ್ ಮಲಾನ್ ಕೇವಲ 2 ರನ್ಗಳಿಂದ ಶತಕ ವಂಚಿತರಾದರೂ, ಈ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
Published On - 10:46 am, Sun, 14 August 22