AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 Records: 8 ಸಿಕ್ಸ್, 1 ಫೋರ್: ಒಂದೇ ಓವರ್​ನಲ್ಲಿ 55 ರನ್​..!

IPL Records: ಆರ್​ಸಿಬಿ (RCB) ವಿರುದ್ದದ ಪಂದ್ಯದಲ್ಲಿ ಸಿಎಸ್​ಕೆ (CSK) ಆಟಗಾರ ರವೀಂದ್ರ ಜಡೇಜಾ (Ravindra Jadeja) ಹರ್ಷಲ್ ಪಟೇಲ್ ಅವರ ಒಂದೇ ಓವರ್​ನಲ್ಲಿ 37 ರನ್​ ಸಿಡಿಸಿ ಈ ದಾಖಲೆಯನ್ನು ಸರಿಗಟ್ಟಿದ್ದರು.

T20 Records: 8 ಸಿಕ್ಸ್, 1 ಫೋರ್: ಒಂದೇ ಓವರ್​ನಲ್ಲಿ 55 ರನ್​..!
Alex Hales
TV9 Web
| Edited By: |

Updated on:May 01, 2022 | 11:16 PM

Share

ಐಪಿಎಲ್​ನಲ್ಲಿ (IPL 2022) ಒಂದೇ ಓವರ್​ನಲ್ಲಿ ಮೂಡಿಬಂದ ಅತ್ಯಧಿಕ ರನ್ ಎಂದರೆ 37. ಈ ದಾಖಲೆ ಬರೆದ ಮೊದಲ ಬ್ಯಾಟ್ಸ್​ಮನ್ ಕ್ರಿಸ್ ಗೇಲ್ (Chris Gayle). 2011 ರಲ್ಲಿ ಆರ್​ಸಿಬಿ ಪರ ಆಡಿದ್ದ ಗೇಲ್ ಕೊಚ್ಚಿ ಟಸ್ಕರ್ಸ್​ ತಂಡದ ವೇಗಿ ಪ್ರಶಾಂತ್ ಪರಮೇಶ್ವರನ್ ಓವರ್​ನಲ್ಲಿ ನೋಬಾಲ್​ ಸೇರಿದಂತೆ 37 ರನ್ ಬಾರಿಸಿದ್ದರು. ಇದಾದ ಬಳಿಕ 2021 ರಲ್ಲಿ ಆರ್​ಸಿಬಿ (RCB) ವಿರುದ್ದದ ಪಂದ್ಯದಲ್ಲಿ ಸಿಎಸ್​ಕೆ (CSK) ಆಟಗಾರ ರವೀಂದ್ರ ಜಡೇಜಾ (Ravindra Jadeja) ಹರ್ಷಲ್ ಪಟೇಲ್ ಅವರ ಒಂದೇ ಓವರ್​ನಲ್ಲಿ 37 ರನ್​ ಸಿಡಿಸಿ ಈ ದಾಖಲೆಯನ್ನು ಸರಿಗಟ್ಟಿದ್ದರು. ಇದು ಐಪಿಎಲ್​ನ ಓವರ್​ ಒಂದರ ಗರಿಷ್ಠ ಸ್ಕೋರ್. ಇದಾಗ್ಯೂ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಓವರ್​ನಲ್ಲಿ 55 ರನ್ ಬಾರಿಸಿದ ದಾಖಲೆ ಕೂಡ ಇದೆ. ಈ ದಾಖಲೆಯು ಪ್ರಸ್ತುತ ಕ್ರಿಕೆಟ್ ಆಡುತ್ತಿರುವ ಆಟಗಾರನ ಹೆಸರಿನಲ್ಲಿರುವುದು ವಿಶೇಷ.

ಹೌದು, ನಿಮಗೆ ಅಲೆಕ್ಸ್ ಹೇಲ್ಸ್ (Alex Hales)​ ಗೊತ್ತಿರಬಹುದು. ಇಂಗ್ಲೆಂಡ್ ತಂಡದ ಸ್ಪೋಟಕ ಆರಂಭಿಕ ಆಟಗಾರ. ಈ ಹಿಂದೆ ಐಪಿಎಲ್​ನಲ್ಲೂ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಈ ಸಲ ಐಪಿಎಲ್​ನಲ್ಲಿ ಕೆಕೆಆರ್ (KKR)​ ತಂಡಕ್ಕೂ ಆಯ್ಕೆಯಾಗಿದ್ದರು. ಆದರೆ ಬಯೋಬಬಲ್ ಕಾರಣ ಅಲೆಕ್ಸ್ ಹೇಲ್ಸ್​ ಐಪಿಎಲ್​ನಿಂದ ಹಿಂದೆ ಸರಿದ್ದಿದ್ದರು. ಇದೇ ಅಲೆಕ್ಸ್ ಹೇಲ್ಸ್​ ಹೆಸರಿನಲ್ಲಿದೆ ಓವರ್​ವೊಂದರಲ್ಲಿ 55 ರನ್ ಬಾರಿಸಿದ ದಾಖಲೆ. ಅದು ಕೂಡ ತಮ್ಮ 16ನೇ ವಯಸ್ಸಿನಲ್ಲಿ ಎಂಬುದು ವಿಶೇಷ.

2005 ರಲ್ಲಿ ಇಂಗ್ಲೆಂಡ್​ನಲ್ಲಿ ನಡೆದ ಐಡಲ್ ಟಿ20 ಟೂರ್ನಿಯಲ್ಲಿ ಅಲೆಕ್ಸ್ ಹೇಲ್ಸ್ ಈ ದಾಖಲೆ ಬರೆದಿದ್ದರು. ಲಾರ್ಡ್ಸ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಕಣಕ್ಕಿಳಿದಿದ್ದ 16 ವರ್ಷದ ಅಲೆಕ್ಸ್ ಹೇಲ್ಸ್ ಒಂದೇ ಓವರ್​ನಲ್ಲಿ 8 ಸಿಕ್ಸ್ ಸಿಡಿಸಿದ್ದರು. ಜೊತೆಗೆ 1 ಫೋರ್​ನೊಂದಿಗೆ ಅರ್ಧಶತಕ ಪೂರೈಸಿದ್ದರು. ಅಂದರೆ ಈ ಓವರ್​ನಲ್ಲಿ 3 ನೋ ಬಾಲ್ ಎಸೆಯಲಾಗಿತ್ತು. ಇದರ ಲಾಭ ಪಡೆದ ಅಲೆಕ್ಸ್ ಹೇಲ್ಸ್ 8 ಸಿಕ್ಸ್ ಹಾಗೂ 1 ಫೋರ್ ಬಾರಿಸುವ ಮೂಲಕ ಒಟ್ಟು 52 ರನ್ ಬಾರಿಸಿದ್ದರು. ನೋ ಬಾಲ್ ಸೇರಿದಂತೆ ಆ ಓವರ್​ನಲ್ಲಿ ಒಟ್ಟು 55 ರನ್​ಗಳು ಮೂಡಿಬಂದಿತ್ತು. ಇದಾಗ್ಯೂ ಇದು ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯವಾಗಿರದ ಕಾರಣ ಈ ದಾಖಲೆಯನ್ನು ಐಸಿಸಿ ರೆಕಾರ್ಡ್ ಬುಕ್​​ನಲ್ಲಿ ಪರಿಗಣಿಸಲಾಗಿಲ್ಲ.

ಇದಾಗ್ಯೂ 16 ವರ್ಷದ ಅಲೆಕ್ಸ್ ಹೇಲ್ಸ್ 2005 ರಲ್ಲೇ ತಮ್ಮ ಸ್ಪೋಟಕ ಬ್ಯಾಟಿಂಗ್ ಅನ್ನು ವಿಶ್ವದ ಮುಂದೆ ತೆರೆದಿಟ್ಟಿದ್ದರು. ಆ ಬಳಿಕ ಇಂಗ್ಲೆಂಡ್ ತಂಡದಲ್ಲೂ ಕಾಣಿಸಿಕೊಂಡಿದ್ದ ಹೇಲ್ಸ್, ಟಿ20 ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ಪರ ಮೊದಲ ಶತಕ ಬಾರಿಸಿದ ಬ್ಯಾಟ್ಸ್​ಮನ್ ಎಂಬ ದಾಖಲೆಯನ್ನೂ ಕೂಡ ಬರೆದಿದ್ದರು.

ಇನ್ನು ಅಲೆಕ್ಸ್ ಹೇಲ್ಸ್ ಈ ಹಿಂದೆ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಸನ್​ರೈಸರ್ಸ್​ ಹೈದರಾಬಾದ್ ತಂಡದಲ್ಲೂ ಕಾಣಿಸಿಕೊಂಡಿದ್ದರು. ಆದರೆ ಆಡಿದ್ದು ಕೇವಲ 6 ಪಂದ್ಯಗಳನ್ನು ಮಾತ್ರ. 2018 ರಲ್ಲಿ ಎಸ್​ಆರ್​ಹೆಚ್ ಪರ ಪಾದರ್ಪಣೆ ಮಾಡಿದ್ದ ಹೇಲ್ಸ್ ಐಪಿಎಲ್​ನಲ್ಲಿ​ 6 ಪಂದ್ಯಗಳಿಂದ 148 ರನ್​ ಕಲೆಹಾಕಿದ್ದರು. ಈ ವೇಳೆ ಅಲೆಕ್ಸ್ ಹೇಲ್ಸ್​ ಬ್ಯಾಟ್​ನಿಂದ 13 ಬೌಂಡರಿ ಹಾಗೂ 6 ಸಿಕ್ಸ್​ಗಳು ಮೂಡಿಬಂದಿರುವುದು ವಿಶೇಷ. ಇದೀಗ ಟಿ20 ವಿಶ್ವಕಪ್​ಗಾಗಿ ಅಲೆಕ್ಸ್ ಹೇಲ್ಸ್ ಮತ್ತೆ ಇಂಗ್ಲೆಂಡ್​ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:03 pm, Sun, 1 May 22

ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ