KL Rahul: ಸಿಕ್ಸರ್ ಕಿಂಗ್: ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದ ಕೆಎಲ್ ರಾಹುಲ್
IPL 2022: ಐಪಿಎಲ್‌ನಲ್ಲಿ ಕೆಎಲ್ ರಾಹುಲ್ ಬ್ಯಾಟಿಂಗ್ ಆರ್ಭಟ ಈ ಬಾರಿ ಕೂಡ ಮುಂದುವರೆದಿದೆ. ಏಕೆಂದರೆ ಕೇವಲ 10 ಪಂದ್ಯಗಳ ಮೂಲಕ ಈಗಾಗಲೇ ಕೆಎಲ್ ರಾಹುಲ್ 400 ಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ.

IPL 2022: ಐಪಿಎಲ್ನ 45ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC vs LSG) ವಿರುದ್ದ ಕೆಎಲ್ ರಾಹುಲ್ (KL Rahul) ಅರ್ಧಶತಕ ಬಾರಿಸಿ ಮಿಂಚಿದ್ದರು. ಈ ಪಂದ್ಯದಲ್ಲಿ 51 ಎಸೆತಗಳನ್ನು ಎದುರಿಸಿದ್ದ ರಾಹುಲ್ 77 ರನ್ ಬಾರಿಸಿದ್ದರು. ಈ ಭರ್ಜರಿ ಇನಿಂಗ್ಸ್ನಲ್ಲಿ ಕೆಎಲ್ಆರ್ ಬ್ಯಾಟ್ನಿಂದ 5 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳು ಮೂಡಿಬಂದಿತ್ತು. ವಿಶೇಷ ಎಂದರೆ ಈ ಐದು ಭರ್ಜರಿ ಸಿಕ್ಸ್ಗಳೊಂದಿಗೆ ಕೆಎಲ್ ರಾಹುಲ್ ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಹೌದು, ಈ ಐದು ಸಿಕ್ಸ್ಗಳೊಂದಿಗೆ ಕೆಎಲ್ ರಾಹುಲ್ ಐಪಿಎಲ್‌ನಲ್ಲಿ 150 ಸಿಕ್ಸ್ಗಳನ್ನು ಪೂರೈಸಿದ್ದಾರೆ. ಇದರೊಂದಿಗೆ ಐಪಿಎಲ್‌ನಲ್ಲಿ ಅತೀ ವೇಗವಾಗಿ 150 ಸಿಕ್ಸ್ ಪೂರೈಸಿದ ಭಾರತೀಯ ಬ್ಯಾಟ್ಸ್ಮನ್ ಎಂಬ ದಾಖಲೆ ಕೂಡ ಕೆಎಲ್ ರಾಹುಲ್ ಪಾಲಾಗಿದೆ. ಈ ಹಿಂದೆ ಈ ದಾಖಲೆ ಸಂಜು ಸ್ಯಾಮ್ಸನ್ ಹೆಸರಿನಲ್ಲಿತ್ತು.
ಸಂಜು ಸ್ಯಾಮ್ಸನ್ ಐಪಿಎಲ್‌ನಲ್ಲಿ 125 ಇನಿಂಗ್ಸ್ಗಳಲ್ಲಿ 150 ಸಿಕ್ಸ್ ಬಾರಿಸಿದ್ದರು. ಇದೀಗ ಕೆಎಲ್ ರಾಹುಲ್ ಕೇವಲ 95 ಇನಿಂಗ್ಸ್ ಮೂಲಕ 150 ಸಿಕ್ಸ್ಗಳನ್ನು ಪೂರೈಸಿದ್ದಾರೆ. ಈ ಮೂಲಕ ಐಪಿಎಲ್‌ನಲ್ಲಿ ಅತೀ ವೇಗವಾಗಿ 150 ಸಿಕ್ಸ್ ಬಾರಿಸಿದ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಅಲ್ಲದೆ 100 ಕ್ಕಿಂತ ಕಡಿಮೆ ಇನಿಂಗ್ಸ್ನಲ್ಲಿ ಐಪಿಎಲ್‌ನಲ್ಲಿ 100 ಸಿಕ್ಸ್ ಪೂರೈಸಿದ ಭಾರತೀಯ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನೂ ಕೂಡ ಕೆಎಲ್ ರಾಹುಲ್ ಬರೆದಿದ್ದಾರೆ. ಏಕೆಂದರೆ ಇಷ್ಟೊಂದು ಕಡಿಮೆ ಇನಿಂಗ್ಸ್ ಭಾರತ ಯಾವುದೇ ಬ್ಯಾಟ್ಸ್ಮನ್ 150 ಸಿಕ್ಸ್ ಬಾರಿಸಿಲ್ಲ. ಸಂಜು ಸ್ಯಾಮ್ಸನ್ 125 ಇನಿಂಗ್ಸ್ ಮೂಲಕ ಈ ದಾಖಲೆ ಬರೆದರೆ, ರೋಹಿತ್ ಶರ್ಮಾ 129 ಇನ್ನಿಂಗ್ಸ್ ಮತ್ತು ವಿರಾಟ್ ಕೊಹ್ಲಿ 132 ಇನ್ನಿಂಗ್ಸ್‌ಗಳಲ್ಲಿ ಐಪಿಎಲ್‌ನಲ್ಲಿ 150 ಸಿಕ್ಸರ್ ಬಾರಿಸಿದ್ದರು.
ಇನ್ನು ಐಪಿಎಲ್ ಇತಿಹಾಸದಲ್ಲೇ ಅತೀ ವೇಗವಾಗಿ 150 ಸಿಕ್ಸ್ ಬಾರಿಸಿದ ದಾಖಲೆ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್ ಕೇವಲ 50 ಇನಿಂಗ್ಸ್ ಮೂಲಕ ಐಪಿಎಲ್‌ನಲ್ಲಿ 150 ಸಿಕ್ಸ್ ಬಾರಿಸಿ ಇತಿಹಾಸ ಬರೆದಿದ್ದಾರೆ. ಇನ್ನು 2ನೇ ಸ್ಥಾನದಲ್ಲಿ ಮತ್ತೋರ್ವ ದಾಂಡಿಗ ಆಂಡ್ರೆ ರಸೆಲ್ ಇದ್ದು, ರಸೆಲ್ 72 ಇನಿಂಗ್ಸ್ ಮೂಲಕ ಈ ಸಾಧನೆ ಮಾಡಿದ್ದರು. ಇದೀಗ ಕೆಎಲ್ ರಾಹುಲ್ 95 ಇನಿಂಗ್ಸ್ ಮೂಲಕ 150 ಸಿಕ್ಸ್ ಪೂರೈಸಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಅಲಂಕರಿಸಿದ್ದಾರೆ.
ಮುಂದುವರೆದ ರಾಹುಲ್ ಆರ್ಭಟ:
ಐಪಿಎಲ್‌ನಲ್ಲಿ ಕೆಎಲ್ ರಾಹುಲ್ ಬ್ಯಾಟಿಂಗ್ ಆರ್ಭಟ ಈ ಬಾರಿ ಕೂಡ ಮುಂದುವರೆದಿದೆ. ಏಕೆಂದರೆ ಕೇವಲ 10 ಪಂದ್ಯಗಳ ಮೂಲಕ ಈಗಾಗಲೇ ಕೆಎಲ್ ರಾಹುಲ್ 400 ಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ. ವಿಶೇಷ ಎಂದರೆ ರಾಹುಲ್ ಸತತ ಐದನೇ ಬಾರಿಗೆ ಐಪಿಎಲ್‌ನಲ್ಲಿ 400 ಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ. ಅಂದರೆ ಕಳೆದ 5 ಐಪಿಎಲ್ ಸೀಸನ್ನಲ್ಲೂ ರಾಹುಲ್ 400+ ರನ್ ಗಳಿಸುತ್ತಾ ಬಂದಿದ್ದಾರೆ.
2018ರ ಐಪಿಎಲ್‌ನಲ್ಲಿ ಕೆಎಲ್ ರಾಹುಲ್ 6 ಅರ್ಧಶತಕಗಳೊಂದಿಗೆ 659 ರನ್ ಗಳಿಸಿದ್ದರು. ಹಾಗೆಯೇ 2019 ರಲ್ಲಿ 593 ರನ್ ಬಾರಿಸಿ ಮಿಂಚಿದ್ದರು. ಈ ವೇಳೆ ಒಂದು ಶತಕ ಮತ್ತು 6 ಅರ್ಧ ಶತಕಗಳನ್ನು ಬಾರಿಸಿದ್ದರು. ಇನ್ನು ಐಪಿಎಲ್ 2020 ರಲ್ಲಿ 670 ರನ್ ಗಳಿಸಿದ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು. ಈ ವೇಳೆ ಒಂದು ಶತಕ ಮತ್ತು 5 ಅರ್ಧ ಶತಕಗಳನ್ನು ಬಾರಿಸಿದ್ದರು. ಇನ್ನು ಕಳೆದ ಸೀಸನ್ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದ ರಾಹುಲ್ 626 ರನ್ ಬಾರಿಸಿ ಮಿಂಚಿದ್ದರು. ಇದೀಗ 10 ಪಂದ್ಯಗಳಿಂದ 451 ರನ್ ಕಲೆಹಾಕಿದ್ದಾರೆ. ಈ ಮೂಲಕ ಐಪಿಎಲ್ನ 5 ಸೀಸನ್ಗಳಲ್ಲಿ ಬ್ಯಾಕ್ ಟು ಬ್ಯಾಕ್ 400+ ರನ್ಗಳಿಸಿ ಆಟಗಾರ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ 95 ಇನಿಂಗ್ಸ್ ಮೂಲಕ 4 ಶತಕ ಹಾಗೂ 29 ಅರ್ಧಶತಕಗಳೊಂದಿಗೆ ಐಪಿಎಲ್‌ನಲ್ಲಿ 3724 ರನ್ ಕಲೆಹಾಕಿದ್ದಾರೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




