Duleep Trophy: ಸೆಮಿಫೈನಲ್ ಪಂದ್ಯಕ್ಕೂ ಮುನ್ನ ತಂಡದಿಂದ ಹೊರಬಿದ್ದ ನಾಯಕ ತಿಲಕ್ ವರ್ಮಾ
Duleep Trophy Semifinals: ದುಲೀಪ್ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯಗಳು ಮುಕ್ತಾಯಗೊಂಡಿದ್ದು, ಸೆಮಿಫೈನಲ್ ಪಂದ್ಯಗಳು ಸೆಪ್ಟೆಂಬರ್ 4 ರಿಂದ ಆರಂಭವಾಗಲಿವೆ. ಆದರೆ, ದಕ್ಷಿಣ ವಲಯದ ನಾಯಕ ತಿಲಕ್ ವರ್ಮಾ ಅವರು 2025ರ ಏಷ್ಯಾಕಪ್‌ಗಾಗಿ ಭಾರತ ತಂಡಕ್ಕೆ ಆಯ್ಕೆಯಾಗಿರುವುದರಿಂದ ದುಲೀಪ್ ಟ್ರೋಫಿಯಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ಮೊಹಮ್ಮದ್ ಅಜರುದ್ದೀನ್ ಅವರನ್ನು ನಾಯಕನಾಗಿ ನೇಮಿಸಲಾಗಿದೆ. ತಂಡಕ್ಕೆ ಇಬ್ಬರು ಹೊಸ ಆಟಗಾರರನ್ನು ಸೇರಿಸಿಕೊಳ್ಳಲಾಗಿದೆ.

ದುಲೀಪ್ ಟ್ರೋಫಿಯಲ್ಲಿ (Duleep Trophy) ಕ್ವಾರ್ಟರ್ ಫೈನಲ್ ಪಂದ್ಯಗಳು ಮುಕ್ತಾಯಗೊಂಡಿವೆ. ಇದೀಗ ಈ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯಗಳು ಸೆಪ್ಟೆಂಬರ್ 4 ರಿಂದ ನಡೆಯಲಿವೆ. ಆದರೆ ಈ ಸುತ್ತು ಆರಂಭವಾಗುವುದಕ್ಕೂ ಮುನ್ನವೇ ದಕ್ಷಿಣ ವಲಯ ತಂಡದ ನಾಯಕನಾಗಿದ್ದ ತಿಲಕ್ ವರ್ಮಾ ಈ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ವಾಸ್ತವವಾಗಿ, ತಿಲಕ್ ವರ್ಮಾ (Tilak Varma) ಅವರನ್ನು 2025 ರ ಏಷ್ಯಾಕಪ್‌ಗಾಗಿ ಭಾರತ ತಂಡದಲ್ಲಿ ಆಯ್ಕೆ ಮಾಡಲಾಗಿದೆ. ಇದರಿಂದಾಗಿ ಅವರು ದುಲೀಪ್ ಟ್ರೋಫಿಯಿಂದ ಹೊರದಿದ್ದು, ಅವರ ಬದಲಿಗೆ ಕೇರಳದ ಬ್ಯಾಟ್ಸ್‌ಮನ್ ಮೊಹಮ್ಮದ್ ಅಜರುದ್ದೀನ್ (Mohammad Azharuddeen) ಅವರನ್ನು ನಾಯಕನನ್ನಾಗಿ ನೇಮಿಸಿದೆ.
ಹೊರಬಿದ್ದ ತಿಲಕ್ ವರ್ಮಾ
ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಅವರನ್ನು ದುಲೀಪ್ ಟ್ರೋಫಿಯಿಂದ ಹೊರಗಿಡಲಾಗಿದೆ. ಅವರ ಸ್ಥಾನದಲ್ಲಿ, ಕೇರಳದ ಬ್ಯಾಟ್ಸ್‌ಮನ್ ಮೊಹಮ್ಮದ್ ಅಜರುದ್ದೀನ್ ಅವರನ್ನು ದುಲೀಪ್ ಟ್ರೋಫಿಯ ಸೆಮಿಫೈನಲ್‌ನಲ್ಲಿ ದಕ್ಷಿಣ ವಲಯದ ಹೊಸ ನಾಯಕರನ್ನಾಗಿ ನೇಮಿಸಲಾಗಿದೆ. ತಿಲಕ್ ವರ್ಮಾ ಅವರನ್ನು ಮುಂಬರುವ ಏಷ್ಯಾಕಪ್‌ಗಾಗಿ ಭಾರತ ತಂಡದಲ್ಲಿ ಆಯ್ಕೆಮಾಡಲಾಗಿದೆ, ಇದರಿಂದಾಗಿ ಅವರು ದುಲೀಪ್ ಟ್ರೋಫಿಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ತಿಲಕ್ ಅನುಪಸ್ಥಿತಿಯಲ್ಲಿ ದಕ್ಷಿಣ ವಲಯ ತಂಡದ ನಾಯಕತ್ವವಹಿಸಿಕೊಂಡಿರುವ ಅಜರುದ್ದೀನ್, ಸೆಪ್ಟೆಂಬರ್ 4 ರಿಂದ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆಯಲ್ಲಿರುವ ಸೆಮಿಫೈನಲ್ ಪಂದ್ಯದಲ್ಲಿ ಉತ್ತರ ವಲಯ ತಂಡದ ವಿರುದ್ಧ ತಂಡವನ್ನು ಮುನ್ನಡೆಸಲಿದ್ದಾರೆ.
ಈ ಹಿಂದೆ ದಕ್ಷಿಣ ವಲಯದ ಉಪನಾಯಕನಾಗಿದ್ದ ಅಜರುದ್ದೀನ್ ಈಗ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಅವರ ಸ್ಥಾನದಲ್ಲಿ ತಮಿಳುನಾಡಿನ ಎನ್. ಜಗದೀಶನ್ ಅವರಿಗೆ ಉಪನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಇದಲ್ಲದೆ, ತಮಿಳುನಾಡಿನ ಎಡಗೈ ಸ್ಪಿನ್ನರ್ ಆರ್. ಸಾಯಿ ಕಿಶೋರ್ ಗಾಯದಿಂದಾಗಿ ಸೆಮಿಫೈನಲ್‌ನಿಂದ ಹೊರಗುಳಿದಿರುವುದರಿಂದ ದಕ್ಷಿಣ ವಲಯ ಮತ್ತೊಂದು ಹಿನ್ನಡೆ ಅನುಭವಿಸಿದೆ. ಸಾಯಿ ಕಿಶೋರ್ ಅವರ ಕೈ ಗಾಯ ಇನ್ನೂ ಸಂಪೂರ್ಣವಾಗಿ ಗುಣವಾಗದ ಕಾರಣ ಇತ್ತೀಚೆಗೆ ನಡೆದ ಬುಚಿ ಬಾಬು ಟ್ರೋಫಿಯಲ್ಲಿ ಆಡಲು ಸಾಧ್ಯವಾಗಿರಲಿಲ್ಲ.
ತಂಡಕ್ಕೆ ಹೊಸ ಆಟಗಾರರ ಪ್ರವೇಶ
ದಕ್ಷಿಣ ವಲಯವು ತನ್ನ ತಂಡದಲ್ಲಿ ಇಬ್ಬರು ಹೊಸ ಆಟಗಾರರನ್ನು ಸೇರಿಸಿಕೊಂಡಿದೆ. ಪುದುಚೇರಿಯ ಎಡಗೈ ಸ್ಪಿನ್ನರ್ ಅಂಕಿತ್ ಶರ್ಮಾ ಮತ್ತು ಆಂಧ್ರಪ್ರದೇಶದ ಯುವ ಬ್ಯಾಟ್ಸ್‌ಮನ್ ಶೇಖ್ ರಶೀದ್ ಅವರಿಗೆ ಸ್ಟ್ಯಾಂಡ್‌ಬೈ ಪಟ್ಟಿಯಿಂದ ಮುಖ್ಯ ತಂಡದಲ್ಲಿ ಸ್ಥಾನ ನೀಡಲಾಗಿದೆ.
ದಕ್ಷಿಣ ವಲಯ ತಂಡ: ಮೊಹಮ್ಮದ್ ಅಜರುದ್ದೀನ್ (ನಾಯಕ), ತನ್ಮಯ್ ಅಗರ್ವಾಲ್, ದೇವದತ್ ಪಡಿಕ್ಕಲ್, ಮೋಹಿತ್ ಕಾಳೆ, ಸಲ್ಮಾನ್ ನಿಜಾರ್, ನಾರಾಯಣಕರ್ ಜಗದೀಸನ್, ತ್ರಿಪುರಾಣ ವಿಜಯ್, ತನಯ್ ತ್ಯಾಗರಾಜನ್, ವಿಜಯ್‌ಕುಮಾರ್ ವೈಶಾಕ್, ನಿಧಿಶ್ ಎಂಡಿ, ರಿಕಿ ಸಿಂಘೆತ್, ಬಸಿಲ್ ಎನ್‌ಪಿ ಭುಯಿ, ಎಸ್. ಅಂಕಿತ್ ಶರ್ಮಾ, ಶೇಖ್ ರಶೀದ್.
ಸ್ಟ್ಯಾಂಡ್‌ಬೈ ಆಟಗಾರರು: ಮೋಹಿತ್ ರೆಡ್ಕರ್, ಆರ್. ಸ್ಮರಣ್, ಏಡೆನ್ ಆಪಲ್ ಟಾಮ್, ಆಂಡ್ರೆ ಸಿದ್ಧಾರ್ಥ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
