- Kannada News Photo gallery Cricket photos Mohammed Shami's Poor Duleep Trophy Show: West Indies Test Spot in Doubt?
Duleep Trophy: 204 ಎಸೆತಗಳನ್ನು ಎಸೆದು ಏಕೈಕ ವಿಕೆಟ್ ಪಡೆದ ಮೊಹಮ್ಮದ್ ಶಮಿ
Mohammed Shami's Disappointing Duleep Trophy Performance: ಏಷ್ಯಾಕಪ್‌ಗೆ ಆಯ್ಕೆಯಾಗದ ಮೊಹಮ್ಮದ್ ಶಮಿ, ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಸ್ಥಾನ ಪಡೆಯಲು ದುಲೀಪ್ ಟ್ರೋಫಿಯಲ್ಲಿ ಆಡಿದರು. ಆದರೆ ನಿರಾಶಾದಾಯಕ ಪ್ರದರ್ಶನ ನೀಡಿದರು. ಕೇವಲ ಒಂದು ವಿಕೆಟ್ ಪಡೆದರು. ಇದರಿಂದ ವೆಸ್ಟ್ ಇಂಡೀಸ್ ಟೆಸ್ಟ್ ತಂಡದಲ್ಲಿ ಅವರಿಗೆ ಸ್ಥಾನ ಸಿಗುವುದು ಅನುಮಾನ.
Updated on:Aug 31, 2025 | 7:51 PM

ಏಷ್ಯಾಕಪ್‌ಗೆ ಭಾರತ ತಂಡವನ್ನು ಆಯ್ಕೆ ಮಾಡಿದಾಗ ಅನುಭವಿ ಮೊಹಮ್ಮದ್ ಶಮಿಗೆ ಸ್ಥಾನ ನೀಡದಿರುವುದು ಅವರ ಅಭಿಮಾನಿಗಳನ್ನು ಕೋಪಗೊಳ್ಳುವಂತೆ ಮಾಡಿತ್ತು. ಆದಾಗ್ಯೂ ಏಷ್ಯಾಕಪ್‌ನಲ್ಲಿ ಅವಕಾಶ ಸಿಗದಿದ್ದರೂ, ಆ ಬಳಿಕ ನಡೆಯಲ್ಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸ್ಥಾನ ಪಡೆಯಲು ಮೊಹಮ್ಮದ್ ಶಮಿ ದುಲೀಪ್ ಟ್ರೋಫಿಯಲ್ಲಿ ಕಣಕ್ಕಿಳಿದಿದ್ದರು.

ಮೊಹಮ್ಮದ್ ಶಮಿ ಅವರ ಅನುಭವವನ್ನು ನೋಡಿದರೆ, ಈ ಟೂರ್ನಿಯಲ್ಲಿ ಅವರಿಂದ ಒಳ್ಳೆಯ ಪ್ರದರ್ಶನವನ್ನು ನಿರೀಕ್ಷಿಸಲಾಗಿತ್ತು. ಆದರೆ ದುಲೀಪ್ ಟ್ರೋಫಿಯಲ್ಲಿ ಪೂರ್ವ ವಲಯ ತಂಡದ ಪರ ಕಣಕ್ಕಿಳಿದಿದ್ದ ಶಮಿ ನಿರಾಸದಾಯಕ ಪ್ರದರ್ಶನ ನೀಡಿದರು. ತಂಡದ ಪರ ಎರಡೂ ಇನ್ನಿಂಗ್ಸ್‌ಗಳಲ್ಲಿ 34 ಓವರ್ ಬೌಲ್ ಮಾಡಿದ ಶಮಿ ಕೇವಲ ಒಂದು ವಿಕೆಟ್ ಮಾತ್ರ ಪಡೆದರು.

ಉತ್ತರ ವಲಯ ತಂಡದ ವಿರುದ್ಧದ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಒಟ್ಟು 23 ಓವರ್‌ಗಳನ್ನು ಬೌಲ್ ಮಾಡಿದರು, ಅದರಲ್ಲಿ ಅವರು 100 ರನ್‌ಗಳನ್ನು ಬಿಟ್ಟುಕೊಟ್ಟು ಕೇವಲ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಎರಡನೇ ಇನ್ನಿಂಗ್ಸ್‌ನಲ್ಲಿ 11 ಓವರ್ ಬೌಲ್ ಮಾಡಿದ ಶಮಿ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗದೆ ಒಟ್ಟು 36 ರನ್‌ಗಳನ್ನು ಬಿಟ್ಟುಕೊಟ್ಟರು.

ಈ ಪಂದ್ಯದಲ್ಲಿ ಶಮಿ ಒಟ್ಟು 34 ಓವರ್‌ಗಳನ್ನು ಬೌಲಿಂಗ್ ಮಾಡುವ ಮೂಲಕ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಿದರಾದರೂ ತಮ್ಮ ಪ್ರದರ್ಶನದಿಂದ ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಾಗಲಿಲ್ಲ. 2025 ರ ಏಷ್ಯಾಕಪ್ ನಂತರ, ಭಾರತ ತಂಡವು ಅಕ್ಟೋಬರ್ 2 ರಿಂದ ವೆಸ್ಟ್ ಇಂಡೀಸ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ತವರಿನಲ್ಲಿ ಆಡಬೇಕಾಗಿದೆ. ಶಮಿ ಅವರ ಪ್ರದರ್ಶನವನ್ನು ನೋಡಿದರೆ ಅವರಿಗೆ ತಂಡದಲ್ಲಿ ಸ್ಥಾನ ಸಿಗುವುದು ಅನುಮಾನವಾಗಿದೆ.

ಪಂದ್ಯದ ಬಗ್ಗೆ ಹೇಳುವುದಾದರೆ.. ಪೂರ್ವ ವಲಯದ ವಿರುದ್ಧದ ಪಂದ್ಯದಲ್ಲಿ, ಉತ್ತರ ವಲಯವು ಎರಡೂ ಇನ್ನಿಂಗ್ಸ್‌ಗಳಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ 405 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 658 ರನ್‌ಗಳನ್ನು ಬಾರಿಸಿತು. ಆದರೆ ಪೂರ್ವ ವಲಯವು ಈ ಪಂದ್ಯದಲ್ಲಿ ಕೇವಲ ಒಂದು ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು.

ಇದರಲ್ಲಿ ಕೇವಲ 230 ರನ್‌ಗಳಿಗೆ ಆಲ್ ಔಟ್ ಆಯಿತು. ಈ ರೀತಿಯಾಗಿ, ಮೊದಲ ಇನ್ನಿಂಗ್ಸ್‌ನಲ್ಲಿ ಪಡೆದ ಮುನ್ನಡೆಯ ಆಧಾರದ ಮೇಲೆ ಉತ್ತರ ವಲಯ ತಂಡವು ಸೆಮಿಫೈನಲ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಈಗ ಸೆಪ್ಟೆಂಬರ್ 4 ರಂದು ನಡೆಯುವ ಸೆಮಿಫೈನಲ್‌ನಲ್ಲಿ ಉತ್ತರ ವಲಯವು ದಕ್ಷಿಣ ವಲಯವನ್ನು ಎದುರಿಸಲಿದೆ.
Published On - 7:51 pm, Sun, 31 August 25
