TNPL 2023: w,w,w,w,w! ಟಿಎನ್ಪಿಎಲ್ನಲ್ಲಿ ದಾಖಲೆ ಬರೆದ ಯುವ ವೇಗಿ; ವಿಡಿಯೋ ನೋಡಿ
TNPL 2023: ಈ ಪಂದ್ಯದಲ್ಲಿ ಐಡ್ರೀಮ್ ತಿರುಪ್ಪೂರ್ ತಂಡದ ಪರ ಕಣಕ್ಕಿಳಿದಿದ್ದ 29 ವರ್ಷದ ಭುವನೇಶ್ವರನ್ ತಮ್ಮ ಖೋಟಾದ 4 ಓವರ್‌ಗಳಲ್ಲಿ ಕೇವಲ 17 ರನ್ ನೀಡಿ ಎದುರಾಳಿಯ ಅರ್ಧದಷ್ಟು ತಂಡವನ್ನು ಪೆವಿಲಿಯನ್ಗಟ್ಟಿದರು.
ಈ ಬಾರಿಯ ಟಿಎನ್‌ಪಿಎಲ್ (TNPL 2023) ಅಂದರೆ ತಮಿಳುನಾಡು ಪ್ರೀಮಿಯರ್ ಲೀಗ್ ಹಿಂದಿಗಿಂತಲ್ಲೂ ಹೆಚ್ಚು ಸದ್ದು ಮಾಡುತ್ತಿದೆ. ಒಂದರ ಹಿಂದೆ ಒಂದರಂತೆ ಶತಕಗಳು ಸಿಡಿಯುವುದರೊಂದಿಗೆ ಟೂರ್ನಿಗೆ ಹೆಚ್ಚಿನ ಕಳೆಬಂದಿದೆ. ಹಾಗೆಯೇ ಡಿಆರ್ಎಸ್ ವಿರುದ್ಧವೇ ಇನ್ನೊಂದು ಡಿಆರ್ಎಸ್ (DRS) ತೆಗೆದುಕೊಂಡಿದ್ದ ಟೀಂ ಇಂಡಿಯಾದ (Team India) ಅನುಭವಿ ಆಟಗಾರ ಆರ್. ಅಶ್ವಿನ್ (Ravichandran Ashwin), ಟೂರ್ನಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದರು. ಇದೀಗ 29ರ ಹರೆಯದ ಬೌಲರ್ ಭುವನೇಶ್ವರನ್ (Bhuvaneswaran) ಕೇವಲ 17 ರನ್ ನೀಡಿ 5 ವಿಕೆಟ್ ಪಡೆದು ಲೀಗ್ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ನೆಲ್ಲೈ ರಾಯಲ್ ಕಿಂಗ್ಸ್ ಮತ್ತು ಐಡ್ರೀಮ್ ತಿರುಪ್ಪೂರ್ ನಡುವಿನ ಪಂದ್ಯ ಈ ದಾಖಲೆಗೆ ಸಾಕ್ಷಿಯಾಗಿದೆ. ಈ ಪಂದ್ಯದಲ್ಲಿ ಐಡ್ರೀಮ್ ತಿರುಪ್ಪೂರ್ ತಂಡದ ಪರ ಕಣಕ್ಕಿಳಿದಿದ್ದ 29 ವರ್ಷದ ಭುವನೇಶ್ವರನ್ ತಮ್ಮ ಖೋಟಾದ 4 ಓವರ್‌ಗಳಲ್ಲಿ ಕೇವಲ 17 ರನ್ ನೀಡಿ ಎದುರಾಳಿಯ ಅರ್ಧದಷ್ಟು ತಂಡವನ್ನು ಪೆವಿಲಿಯನ್ಗಟ್ಟಿದರು. ಅಂದರೆ ಭುವನೇಶ್ವರನ್ ಒಬ್ಬರೆ ತಿರುಪ್ಪೂರ್ ತಂಡದ 5 ವಿಕೆಟ್ ಕಬಳಿಸಿದರು. ಇದರೊಂದಿಗೆ ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ಭುವನೇಶ್ವರನ್ ಇತಿಹಾಸ ಸೃಷ್ಟಿಸಿದರು.
R Ashwin DRS in TNPL: ಒಂದು ಎಸೆತಕ್ಕೆ ಎರಡೆರಡು ಡಿಆರ್ಎಸ್; ಅಚ್ಚರಿ ಮೂಡಿಸಿದ ಅಶ್ವಿನ್ ನಿರ್ಧಾರ..!
17 ರನ್ ನೀಡಿ 5 ವಿಕೆಟ್
ಈ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ನೆಲ್ಲೈ ರಾಯಲ್ ಕಿಂಗ್ಸ್ ತಂಡಕ್ಕೆ ಉತ್ತಮ ಆರಂಭ ಪಡೆಯಲು ಭುವನೇಶ್ವರನ್ ಅವಕಾಶ ನೀಡಲಿಲ್ಲ. ರಾಯಲ್ ಕಿಂಗ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಇಬ್ಬರೂ ಆರಂಭಿಕರನ್ನು ಭುವನೇಶ್ವರನ್ ಬೇಟೆಯಾಡಿದರು. ನಂತರ ಇದಾದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ನೆಲ್ಲೈ ರಾಯಲ್ ಕಿಂಗ್ಸ್ ನಾಯಕ ಅರುಣ್ ಕಾರ್ತಿಕ್ ಕೂಡ ಭುವನೇಶ್ವರನ್ಗೆ ವಿಕೆಟ್ ಒಪ್ಪಿಸಿದರು. ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಭುವನೇಶ್ವರನ್ ಅವರ 2 ಎಸೆತಗಳಲ್ಲಿ 2 ವಿಕೆಟ್ ಒಪ್ಪಿಸುವ ಮೂಲಕ ರಾಯಲ್ ಕಿಂಗ್ಸ್ ಇನ್ನಿಂಗ್ಸ್ಗೆ ಅಂತ್ಯ ಹಾಡಿದ್ದರು.
Raise your hands for this TNPL’s first 5-fer! Bhuvaneswaran writes himself into the record books! ? #TNPLonFanCode pic.twitter.com/ofGrB7tZYa
— FanCode (@FanCode) June 20, 2023
ಈ ಮೂಲಕ ಬಲಗೈ ವೇಗದ ಬೌಲರ್ ಭುವನೇಶ್ವರನ್ ಕೇವಲ 3.2 ಓವರ್‌ಗಳನ್ನು ಹಾಕುವ ಮೂಲಕ ನೆಲ್ಲೈ ರಾಯಲ್ ಕಿಂಗ್ಸ್ ತಂಡದ 5 ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್ಗಟ್ಟುವಲ್ಲಿ ಯಶಸ್ವಿಯಾದರು. ಭುವನೇಶ್ವರನ್ ದಾಳಿಗೆ ನಲುಗಿದ ನೆಲ್ಲೈ ರಾಯಲ್ ಕಿಂಗ್ಸ್ ಪೂರ್ಣ 20 ಓವರ್‌ಗಳನ್ನು ಸಹ ಆಡಲು ಸಾಧ್ಯವಾಗದೆ ಕೇವಲ 18.2 ಓವರ್‌ಗಳಲ್ಲಿ 124 ರನ್ ಗಳಿಸಿ ಆಲೌಟ್ ಆಯಿತು.
7 ವಿಕೆಟ್ಗಳಿಂದ ಗೆಲುವು
ಇದಕ್ಕೆ ಉತ್ತರವಾಗಿ ತಿರುಪ್ಪೂರು ತಂಡ 18.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 125 ರನ್‌ಗಳ ಗುರಿ ತಲುಪಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ತುಷಾರ್ ರಹೇಜಾ 43 ಎಸೆತಗಳಲ್ಲಿ 4 ಬೌಂಡರಿ, ಹಾಗೂ 3 ಸಿಕ್ಸರ್ ಸಹಿತ 49 ರನ್ ಸಿಡಿಸಿದರೆ, ಮತ್ತೊಬ್ಬ ಆರಂಭಿಕ ರಾಧಾಕೃಷ್ಣನ್ 30 ಎಸೆತಗಳಲ್ಲಿ 34 ರನ್ ಸಿಡಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಈ ಇಬ್ಬರ ಅರ್ಧಶತಕದ ಜೊತೆಯಾಟದಿಂದಾಗಿ ಐಡ್ರೀಮ್ ತಿರುಪ್ಪೂರ್ ತಂಡ ಪಂದ್ಯವನ್ನು 7 ವಿಕೆಟ್ಗಳಿಂದ ಗೆದ್ದು ಬೀಗಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:11 am, Wed, 21 June 23