
ತಿಲಕ್ ವರ್ಮಾ ನಾಯಕತ್ವದ ಭಾರತ ಎ ತಂಡವು ಭಾನುವಾರ ನಡೆಯಲಿರುವ ಏಕದಿನ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಎ (India A vs Sri Lanka A) ತಂಡವನ್ನು ಎದುರಿಸುತ್ತಿದೆ. ಈ ಸರಣಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಿರುವುದು ಇದು ಮೂರನೇ ಬಾರಿ. ಮೊದಲ ಮುಖಾಮುಖಿಯಲ್ಲಿ ಭಾರತ ಗೆದ್ದಿದ್ದರೆ, ಎರಡನೇ ಮುಖಾಮುಖಿಯಲ್ಲಿ ಶ್ರೀಲಂಕಾ ತಂಡ ಗೆಲುವು ಸಾಧಿಸಿತ್ತು. ಇದೀಗ ಮೂರನೇ ಮುಖಾಮುಖಿಯಲ್ಲಿ ಗೆದ್ದ ತಂಡಕ್ಕೆ ಟ್ರೋಫಿ ಕೂಡ ಸಿಗಲಿದೆ. ಇದರ ಜೊತೆಗೆ ಕಳೆದ ಮುಖಾಮುಖಿಯಲ್ಲಿ ವೈಭವ್ ಸೂರ್ಯವಂಶಿ (Vaibhav Sooryavanshi) ಹಾಗೂ ಶ್ರೀಲಂಕಾದ ಆಟಗಾರರ ನಡುವೆ ಏರ್ಪಟ್ಟಿದ್ದ ವಾಗ್ವಾದದಿಂದಾಗಿ ದೊಡ್ಡ ವಿವಾದ ಹುಟ್ಟಕೊಂಡಿತ್ತು. ಹೀಗಾಗಿ ತನ್ನನ್ನು ಕೆಣಕ್ಕಿದ್ದ ಲಂಕಾ ಆಟಗಾರರು ವಿರುದ್ಧ ವೈಭವ್ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಭಾರತ ಎ ಹಾಗೂ ಶ್ರೀಲಂಕಾ ಎ ನಡುವಿನ ತ್ರಿಕೋನ ಸರಣಿಯ ಫೈನಲ್ ಪಂದ್ಯ ಜೂನ್ 21 ರ ಭಾನುವಾರದಂದು ನಡೆಯಲಿದೆ.
ಭಾರತ ಎ ಹಾಗೂ ಶ್ರೀಲಂಕಾ ಎ ನಡುವಿನ ತ್ರಿಕೋನ ಸರಣಿಯ ಫೈನಲ್ ಪಂದ್ಯ ದಂಬುಲ್ಲಾದಲ್ಲಿ ನಡೆಯಲಿದೆ.
ಭಾರತ ಎ ಹಾಗೂ ಶ್ರೀಲಂಕಾ ಎ ನಡುವಿನ ತ್ರಿಕೋನ ಸರಣಿಯ ಫೈನಲ್ ಪಂದ್ಯ ಭಾರತೀಯ ಕಾಲಮಾನ ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿದೆ.
ಭಾರತ ಎ ಹಾಗೂ ಶ್ರೀಲಂಕಾ ಎ ನಡುವಿನ ತ್ರಿಕೋನ ಸರಣಿಯ ಫೈನಲ್ ಪಂದ್ಯವನ್ನು ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ನ ವಿವಿದ ಚಾನೆಲ್ಗಳಲ್ಲಿ ವೀಕ್ಷಿಸಬಹುದು.
ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ ಎಂದ ಟೀಂ ಇಂಡಿಯಾದ ಮಾಜಿ ನಾಯಕ
ಭಾರತ ಎ ತಂಡ: ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ(ಸಿ), ಕುಮಾರ್ ಕುಶಾಗ್ರಾ(ಡಬ್ಲ್ಯೂ), ಸೂರ್ಯಾಂಶ್ ಶೆಡ್ಗೆ, ನಿಶಾಂತ್ ಸಿಂಧು, ವಿಪ್ರಜ್ ನಿಗಮ್, ಅನುಕುಲ್ ರಾಯ್, ಅನ್ಶುಲ್ ಕಾಂಬೋಜ್, ಯಶ್ ಠಾಕೂರ್, ಆಯುಷ್ ಬದೋನಿ, ಪ್ರಭ್‌ಸಿಮ್ರನ್ ಸಿಂಗ್, ಯುದ್ಧವೀರ್ ಸಿಂಗ್ ಚರಕ್, ಅರ್ಷದ್ ಖಾನ್, ಅಶೋಕ್ ಶರ್ಮಾ.
ಶ್ರೀಲಂಕಾ ಎ ತಂಡ: ನಿರೋಶನ್ ಡಿಕ್ವೆಲ್ಲಾ(ಡಬ್ಲ್ಯೂ), ಅವಿಷ್ಕಾ ಫೆರ್ನಾಂಡೊ, ನುವಾನಿಡು ಫೆರ್ನಾಂಡೊ, ಸದೀರ ಸಮರವಿಕ್ರಮ, ಸಹನ್ ಅರಾಚ್ಚಿಗೆ(ಸಿ), ಅಹಾನ್ ವಿಕ್ರಮಸಿಂಘೆ, ರವಿಂದು ಫೆರ್ನಾಂಡೊ, ವನುಜಾ ಸಹನ್, ವಿಜಯಕಾಂತ್ ವಿಯಸ್ಕಂತ್, ದುಲಾಜ್ ಸಮುದಿತ, ಕುಗತಸ್ ಮಾಥುಲನ್, ವಿಶೇನ್ ಹಲಂಬಗೆ, ಗರುಕ ಸಂಕೇತ್, ಚಾಮಿಕ ಗುಣಶೇಖರ, ಮೊಹಮ್ಮದ್ ಶಿರಾಜ್, ಚಾಮಿಕ ಕರುಣಾರತ್ನ.