U19 Asia Cup: ಹರ್ನೂರ್ ಸಿಂಗ್ ಶತಕ; ಆತಿಥೇಯ ಯುಎಇ ವಿರುದ್ಧ ಭಾರತಕ್ಕೆ ಭರ್ಜರಿ ಜಯ

U19 Asia Cup: ಹರ್ನೂರ್ ಸಿಂಗ್ ಶತಕ; ಆತಿಥೇಯ ಯುಎಇ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಯಶ್‌ ಧುಲ್‌

U19 Asia Cup: ಯುಎಇಯಲ್ಲಿ ನಡೆಯುತ್ತಿರುವ ಅಂಡರ್-19 ಏಷ್ಯಾಕಪ್​ನಲ್ಲಿ ಭಾರತ ತಂಡ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಯಶ್ ಧುಲ್ ನಾಯಕತ್ವದ ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಆತಿಥೇಯರನ್ನು ಸೋಲಿಸಿತು.

TV9kannada Web Team

| Edited By: Apurva Kumar Balegere

Dec 24, 2021 | 9:57 AM

ಯುಎಇಯಲ್ಲಿ ನಡೆಯುತ್ತಿರುವ ಅಂಡರ್-19 ಏಷ್ಯಾಕಪ್​ನಲ್ಲಿ ಭಾರತ ತಂಡ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಯಶ್ ಧುಲ್ ನಾಯಕತ್ವದ ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಆತಿಥೇಯರನ್ನು ಸೋಲಿಸಿತು. ಹರ್ನೂರ್ ಸಿಂಗ್ ಅವರ ಶತಕ ಮತ್ತು ಬೌಲರ್‌ಗಳ ಅದ್ಭುತ ಪ್ರದರ್ಶನದ ಆಧಾರದ ಮೇಲೆ ಭಾರತ ಯುನೈಟೆಡ್ ಅರಬ್ ಎಮಿರೇಟ್ಸ್ ಅನ್ನು 154 ರನ್‌ಗಳಿಂದ ಸೋಲಿಸಿತು. ಯುಎಇ ನಾಯಕ ಅಲಿಶನ್ ಶರ್ಮಾ ಟಾಸ್ ಗೆದ್ದು ಟೀಂ ಇಂಡಿಯಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಭಾರತ ಐದು ವಿಕೆಟ್‌ಗೆ 282 ರನ್ ಗಳಿಸಿತು. ಅದೇ ಹೊತ್ತಿಗೆ ಉತ್ತರವಾಗಿ ಆತಿಥೇಯ ತಂಡ 34.3 ಓವರ್‌ಗಳಲ್ಲಿ 128 ರನ್‌ಗಳಿಗೆ ಆಲೌಟ್ ಆಯಿತು. ಇತರ ಪಂದ್ಯಗಳಲ್ಲಿ ಪಾಕಿಸ್ತಾನವು ಅಫ್ಘಾನಿಸ್ತಾನವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು ಮತ್ತು ಶ್ರೀಲಂಕಾ 274 ರನ್‌ಗಳಿಂದ ಕುವೈತ್ ಅನ್ನು ಸೋಲಿಸಿತು. ಹರ್ನೂರ್ 130 ಎಸೆತಗಳಲ್ಲಿ 120 ರನ್ ಗಳಿಸಿದರೆ, ನಾಯಕ ಯಶ್ ಧುಲ್ 68 ಎಸೆತಗಳಲ್ಲಿ 63 ರನ್ ಸೇರಿಸಿದರು. ರಾಜವರ್ಧನ್ ಹಂಗರ್ಗೇಕರ್ 23 ಎಸೆತಗಳಲ್ಲಿ ಅಜೇಯ 48 ರನ್ ಗಳಿಸಿದರು.

ಹರ್ನೂರ್ ಸಿಂಗ್ ಶತಕ ಭಾರತ ತಂಡ ಬ್ಯಾಟಿಂಗ್‌ಗೆ ಇಳಿದಾಗ ಆರಂಭ ಉತ್ತಮವಾಗಿರಲಿಲ್ಲ. ಕೇವಲ ಎರಡು ರನ್ ಗಳಿಸಿದ್ದಾಗ ಆಂಗ್ಕ್ರಿಶ್ ರಘುವಂಶಿ ರನೌಟ್ ಆದರು. ನಂತರ ಓಪನರ್ ಹರ್ನೂರ್ ಸಿಂಗ್ ಶೇಕ್ ರಶೀದ್ ಜೊತೆ 90 ರನ್ ಜೊತೆಯಾಟ ನಡೆಸಿದರು. ರಶೀದ್ 35 ರನ್ ಗಳಿಸಿ ಅಫ್ಜಲ್ ಖಾನ್​ಗೆ ಬಲಿಯಾದರು. ಇದಾದ ಬಳಿಕ ಬ್ಯಾಟಿಂಗ್‌ಗೆ ಇಳಿದ ನಾಯಕ ಯಶ್‌ ಧುಲ್‌ ಅವರು ಹರ್ನೂರ್‌ ಸಿಂಗ್‌ ಜತೆಗೂಡಿ ತಂಡದ ಸ್ಕೋರ್‌ ಅನ್ನು 95ರಿಂದ 215ಕ್ಕೆ ಕೊಂಡೊಯ್ದರು.ಹರ್ನೂರ್ ಸಿಂಗ್ 120 ರನ್ ಗಳಿಸುವ ಮೂಲಕ ಆಲಿಶನ್‌ಗೆ ಬಲಿಯಾದರು. ಖಾತೆ ತೆರೆಯದೇ ನಿಶಾಂತ್ ರನ್ ಔಟ್ ಆದರು. ರಾಜ್ಯವರ್ಧನ್ ಹಂಗರ್ಗೇಕರ್ ಅಜೇಯ 48 ಮತ್ತು ಕೌಶಲ್ ತಾಂಬೆ 6 ರನ್ ಗಳಿಸಿದರು. ಯುಎಇ ಒಂಬತ್ತು ಬೌಲರ್‌ಗಳನ್ನು ಪ್ರಯತ್ನಿಸಿತು ಆದರೆ ಭಾರತ ದೊಡ್ಡ ಸ್ಕೋರ್ ಮಾಡುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ಹಂಗರ್ಗೇಕರ್ ಮೂರು ವಿಕೆಟ್ ಪಡೆದರೆ, ಗಾರ್ವ್ ಸಾಂಗ್ವಾನ್, ವಿಕ್ಕಿ ಓಸ್ವಾಲ್ ಮತ್ತು ಕೌಶಲ್ ತಾಂಬಲ್ ತಲಾ ಎರಡು ವಿಕೆಟ್ ಪಡೆದರು.

ಆಗಾಗಲೇ ಅಂತರದಲ್ಲಿ ವಿಕೆಟ್ ಕಳೆದುಕೊಂಡ ತಂಡ 34.3 ಓವರ್​ಗಳಲ್ಲಿ 128 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತ ಪರ ರಾಜ್ಯವರ್ಧನ್ ಹಂಗರ್ಗೇಕರ್ ಮೂರು, ಗರ್ವ್ ಸಾಂಗ್ವಾನ್ ಎರಡು, ವಿಕ್ಕಿ ಓಸ್ವಾಲ್ ಎರಡು ಮತ್ತು ಕೌಶಲ್ ತಾಂಬೆ ಕೂಡ ಎರಡು ವಿಕೆಟ್ ಪಡೆದರು. ಭಾರತ ಈಗ ಶನಿವಾರ ಪಾಕಿಸ್ತಾನವನ್ನು ಎದುರಿಸಬೇಕಾಗಿದೆ. ದಿನದ ಇತರ ಪಂದ್ಯಗಳಲ್ಲಿ ಪಾಕಿಸ್ತಾನ ನಾಲ್ಕು ವಿಕೆಟ್‌ಗಳಿಂದ ಅಫ್ಘಾನಿಸ್ತಾನವನ್ನು ಮಣಿಸಿತು. ಮತ್ತೊಂದೆಡೆ, ಶ್ರೀಲಂಕಾ 274 ರನ್‌ಗಳಿಂದ ಕುವೈತ್ ಅನ್ನು ಸೋಲಿಸಿತು. ಶನಿವಾರದಂದು ಕೇವಲ ಒಂದು ಪಂದ್ಯ ಮಾತ್ರ ನಡೆಯಲಿದ್ದು, ಇದರಲ್ಲಿ ಬಾಂಗ್ಲಾದೇಶ ನೇಪಾಳವನ್ನು ಎದುರಿಸಲಿದೆ.

Follow us on

Most Read Stories

Click on your DTH Provider to Add TV9 Kannada