U19 World Cup 2026: ಮೊದಲ ದಿನವೇ ಟೀಂ ಇಂಡಿಯಾ ಕಣಕ್ಕೆ; ಎದುರಾಳಿ ಯಾರು? ಎಷ್ಟು ಗಂಟೆಗೆ ಪಂದ್ಯ ಆರಂಭ?
U19 World Cup 2026: 2026ರ ಅಂಡರ್-19 ವಿಶ್ವಕಪ್ ಜನವರಿ 15 ರಿಂದ ಜಿಂಬಾಬ್ವೆಯಲ್ಲಿ ಆರಂಭವಾಗುತ್ತಿದೆ. ಮೊದಲ ಪಂದ್ಯದಲ್ಲಿ ಭಾರತ ಯುಎಸ್‌ಎ ವಿರುದ್ಧ ಕಣಕ್ಕಿಳಿಯಲಿದೆ. ಆಯುಷ್ ಮ್ಹಾತ್ರೆ ನಾಯಕತ್ವದ ಭಾರತ ತಂಡವು ಎ ಗುಂಪಿನಲ್ಲಿದೆ. ಪಂದ್ಯ ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ಮತ್ತು ಜಿಯೋ ಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರವಾಗಲಿದೆ. ತಂಡಗಳ ಪೂರ್ಣ ಮಾಹಿತಿ ಇಲ್ಲಿ ಲಭ್ಯ.

2026 ರ ಅಂಡರ್ 19 ವಿಶ್ವಕಪ್ (U19 World Cup 2026) ಜನವರಿ 15 ರ ಗುರುವಾರದಿಂದ ಅಂದರೆ ನಾಳೆಯಿಂದ ಪ್ರಾರಂಭವಾಗುತ್ತಿದೆ. ಪಂದ್ಯಾವಳಿಯ ಮೊದಲ ಪಂದ್ಯದಲ್ಲೇ ಭಾರತ ಕಣಕ್ಕಿಳಿಯುತ್ತಿದ್ದು ಅಮೆರಿಕ ತಂಡವನ್ನು ಎದುರಿಸುತ್ತಿದೆ. ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ಈ ಅಂಡರ್-19 ವಿಶ್ವಕಪ್‌ನಲ್ಲಿ ಹದಿನಾರು ತಂಡಗಳು ಭಾಗವಹಿಸುತ್ತಿವೆ . ಭಾರತ ತಂಡವು ಯುಎಸ್ಎ, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ಜೊತೆಗೆ ಎ ಗುಂಪಿನಲ್ಲಿದೆ. ಪ್ರತಿ ಗುಂಪಿನಲ್ಲಿ ನಾಲ್ಕು ತಂಡಗಳಿವೆ. ಆಯುಷ್ ಮ್ಹಾತ್ರೆ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಭಾರತ ತಂಡವು ಟೂರ್ನಮೆಂಟ್‌ಗೆ ಮೊದಲು ನಡೆದ ಅಭ್ಯಾಸ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವನ್ನು ಸೋಲಿಸಿದರೆ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋತಿತು.
ಭಾರತ ಹಾಗೂ ಯುಎಸ್ಎ ನಡುವಿನ ಅಂಡರ್-19 ವಿಶ್ವಕಪ್ ಪಂದ್ಯ ಯಾವಾಗ ನಡೆಯಲಿದೆ?
ಭಾರತ ಹಾಗೂ ಯುಎಸ್ಎ ನಡುವಿನ ಅಂಡರ್-19 ವಿಶ್ವಕಪ್ ಪಂದ್ಯ ಜನವರಿ 15 ರಂದು ನಡೆಯಲಿದೆ
ಭಾರತ ಹಾಗೂ ಯುಎಸ್ಎ ನಡುವಿನ ಅಂಡರ್-19 ವಿಶ್ವಕಪ್ ಪಂದ್ಯ ಎಲ್ಲಿ ನಡೆಯಲಿದೆ?
ಭಾರತ ಹಾಗೂ ಯುಎಸ್ಎ ನಡುವಿನ ಅಂಡರ್-19 ವಿಶ್ವಕಪ್ ಪಂದ್ಯ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊದಲ್ಲಿ ನಡೆಯಲಿದೆ
ಭಾರತ ಹಾಗೂ ಯುಎಸ್ಎ ನಡುವಿನ ಅಂಡರ್-19 ವಿಶ್ವಕಪ್ ಪಂದ್ಯ ಎಷ್ಟು ಗಂಟೆಗೆ ಆರಂಭ?
ಭಾರತ ಹಾಗೂ ಯುಎಸ್ಎ ನಡುವಿನ ಅಂಡರ್-19 ವಿಶ್ವಕಪ್ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 1 ಗಂಟೆಗೆ ಆರಂಭವಾಗಲಿದೆ. ಟಾಸ್ ಮಧ್ಯಾಹ್ನ 12:30 ಕ್ಕೆ ನಡೆಯಲಿದೆ.
ಭಾರತ ಹಾಗೂ ಯುಎಸ್ಎ ನಡುವಿನ ಅಂಡರ್-19 ವಿಶ್ವಕಪ್ ಪಂದ್ಯದ ನೇರ ಪ್ರಸಾರವನ್ನು ಎಲ್ಲಿ ವೀಕ್ಷಿಸಬಹುದು?
ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಅಂಡರ್-19 ಕ್ರಿಕೆಟ್ ವಿಶ್ವಕಪ್ ಪಂದ್ಯಗಳ ನೇರ ಪ್ರಸಾರವನ್ನು ವೀಕ್ಷಿಸಬಹುದು. ಈ ಪಂದ್ಯಗಳ ನೇರ ಪ್ರಸಾರವು ಜಿಯೋ ಹಾಟ್‌ಸ್ಟಾರ್‌ನಲ್ಲಿಯೂ ಲಭ್ಯವಿರುತ್ತದೆ.
T20 World Cup 2026: ಟಿ20 ವಿಶ್ವಕಪ್ನಿಂದ ಬಾಂಗ್ಲಾ ಹಿಂದೆ ಸರಿದರೆ ಯಾವ ತಂಡಕ್ಕೆ ಅವಕಾಶ?
ಉಭಯ ತಂಡಗಳು
ಭಾರತ ಅಂಡರ್-19 ತಂಡ: ಆಯುಷ್ ಮ್ಹಾತ್ರೆ (ನಾಯಕ), ಆರ್.ಎಸ್. ಅಂಬರೀಶ್, ಕಾನಿಷ್ಕ್ ಚೌಹಾಣ್, ಡಿ.ದೀಪೇಶ್, ಮೊಹಮ್ಮದ್ ಅನನ್, ಆರನ್ ಜಾರ್ಜ್, ಅಭಿಜ್ಞಾನ್ ಕುಂದು, ಕಿಶನ್ ಕುಮಾರ್ ಸಿಂಗ್, ವಿಹಾನ್ ಮಲ್ಹೋತ್ರಾ, ಉದ್ಧವ್ ಮೋಹನ್, ಹೆನಿಲ್ ಪಟೇಲ್, ಖಿಲಾನ್ ಪಟೇಲ್, ಹರ್ವಂಶ್ ಸಿಂಗ್, ವೈಭವ್ ಸೂರ್ಯವಂಶಿ , ವೇದಾಂತ್ ತ್ರಿವೇದಿ.
ಯುಎಸ್ಎ ಅಂಡರ್ 19 ತಂಡ: ಉತ್ಕರ್ಷ್ ಶ್ರೀವಾಸ್ತವ (ನಾಯಕ), ಅದ್ನೀತ್ ಜಾಂಬ್, ಶಿವ ಶಾನಿ, ನಿತೀಶ್ ಸುದಿನಿ, ಅದ್ವೈತ್ ಕೃಷ್ಣ, ಸಾಹಿರ್ ಭಾಟಿಯಾ, ಅರ್ಜುನ್ ಮಹೇಶ್, ಅಮರಿಂದರ್ ಗಿಲ್, ಸಬರೀಶ್ ಪ್ರಸಾದ್, ಆದಿತ್ ಕಪ್ಪಾ, ಸಾಹಿಲ್ ಗಾರ್ಗ್, ಅಮೋಘ್ ರೆಡ್ಡಿ ಅರೆಪಲ್ಲಿ, ರಿತ್ವಿಕ್ ಅಪ್ಪಿಡಿ, ರಯಾನ್ ತಾಜ್, ರಿಷಬ್ ಶಿಂಪಿ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
