Hardik Pandya: ಉಮ್ರಾನ್ ಮಲಿಕ್​ಗೆ ನೀಡಿದ್ದು ಕೇವಲ 1 ಓವರ್: ಇದಕ್ಕೆ ಹಾರ್ದಿಕ್ ಕೊಟ್ಟ ಕಾರಣವೇನು ಗೊತ್ತೇ?

| Updated By: Vinay Bhat

Updated on: Jun 27, 2022 | 10:29 AM

IRE vs IND: ಜಮ್ಮು ಕಾಶ್ಮೀರದ ಯುವ ವೇಗಿ ಉಮ್ರಾನ್ ಮಲಿಕ್ (Umran Malik) ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿದರು. ಆದರೆ, ಮಲಿಕ್ ಬೌಲಿಂಗ್ ಮಾಡಿದ್ದು ಕೇವಲ ಒಂದು ಓವರ್ ಮಾತ್ರ. ಇದರಲ್ಲಿ 14 ರನ್ ನೀಡಿದರು. ಈ ಬಗ್ಗೆ ಮಾತನಾಡಿದ ಹಾರ್ದಿಕ್ ಪಾಂಡ್ಯ ಸ್ಪಷ್ಟನೆ ನೀಡಿದ್ದಾರೆ.

Hardik Pandya: ಉಮ್ರಾನ್ ಮಲಿಕ್​ಗೆ ನೀಡಿದ್ದು ಕೇವಲ 1 ಓವರ್: ಇದಕ್ಕೆ ಹಾರ್ದಿಕ್ ಕೊಟ್ಟ ಕಾರಣವೇನು ಗೊತ್ತೇ?
Umran Malik and Hardik Pandya IRE vs IND
Follow us on

ಡಬ್ಲಿನ್​ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಟೀಮ್ ಇಂಡಿಯಾ (IRE vs IND) 7 ವಿಕೆಟ್​​ಗಳಿಂದ ಗೆದ್ದು ಬೀಗಿದೆ. ನೂತನ ಕೋಚ್, ನೂತನ ನಾಯಕರೊಂದಿಗೆ ಕಣಕ್ಕಿಳಿದ ಯಂಗ್ ಇಂಡಿಯಾ ಬೊಂಬಾಟ್ ಪ್ರದರ್ಶನ ತೋರಿತು. ದೀಪಕ್ ಹೂಡ (Deepak Hooda) ಅಜೇಯ 47 ರನ್ ಸಿಡಿಸಿ ಬ್ಯಾಟಿಂಗ್​ನಲ್ಲಿ ಮಿಂಚಿದರೆ, ಭುವನೇಶ್ವರ್ ಕುಮಾರ್ ಮತ್ತು ಯುಜ್ವೇಂದ್ರ ಚಹಲ್ ಬೌಲಿಂಗ್​ನಲ್ಲಿ ಮಾರಕ ದಾಳಿ ಸಂಘಟಿಸಿದರು. ಈ ಪಂದ್ಯದ ಮೂಲಕ ಜಮ್ಮು ಕಾಶ್ಮೀರದ ಯುವ ವೇಗಿ ಉಮ್ರಾನ್ ಮಲಿಕ್ (Umran Malik) ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿದರು. ಕಳೆದ ದ. ಆಫ್ರಿಕಾ ವಿರುದ್ದದ ಸರಣಿಗೆ ಆಯ್ಕೆಯಾಗಿದ್ದರೂ ಇವರಿಗೆ ಆಡುವ ಬಳಗದಲ್ಲಿ ಅವಕಾಶ ದೊರೆತಿರಲಿಲ್ಲ. ಐರ್ಲೆಂಡ್ ವಿರುದ್ದ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಪಡೆದು ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟರು.

ಆದರೆ, ಉಮ್ರಾನ್ ಮಲಿಕ್ ಬೌಲಿಂಗ್ ಮಾಡಿದ್ದು ಕೇವಲ ಒಂದು ಓವರ್ ಮಾತ್ರ. ಇದರಲ್ಲಿ 14 ರನ್ ನೀಡಿದರು. ನಾಯಕ ಹಾರ್ದಿಕ್ ಪಾಂಡ್ಯ ಚೊಚ್ಚಲ ಪಂದ್ಯದಲ್ಲಿ ಮಲಿಕ್​ಗೆ ಕೇವಲ ಒಂದು ಓವರ್ ಬೌಲಿಂಗ್ ಮಾಡಲು ಕೊಟ್ಟಿದ್ದು ಅನೇಕರ ಕೆಂಗಣ್ಣಿಗೆ ಗುರಿಯಾಯಿತು. ಈ ಬಗ್ಗೆ ಪಂದ್ಯ ಮುಗಿದ ಬಳಿಕ ಮಾತನಾಡಿದ ಪಾಂಡ್ಯ ಸ್ಪಷ್ಟನೆ ನೀಡಿದ್ದಾರೆ. “ಐಪಿಎಲ್​ನಲ್ಲಿ ಉಮ್ರಾನ್ ಮಲಿಕ್ ತನ್ನ ಫ್ರಾಂಚೈಸಿ ಪರ ಅದ್ಭುತ ಪ್ರದರ್ಶನ ಕೊಟ್ಟಿದ್ದಾರೆ. ಆದರೆ, ನಾನು ಈ ಪಂದ್ಯ ಆರಂಭವಾದಾಗ ಅವರ ಜೊತೆ ಮಾತನಾಡಿದೆ. ಮಲಿಕ್​ಗೆ ಹಳೆಯ ಚೆಂಡಿನಲ್ಲಿ ಬಾಲ್ ಮಾಡಲು ತುಂಬಾ ಸುಲಭವಾಗುತ್ತದೆ. ಮತ್ತು ಅದರಲ್ಲಿ ಪರಿಣಿತರು. ಐರ್ಲೆಂಡ್ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿತ್ತು. ಹೀಗಾಗಿ ನಾನು ನಮ್ಮ ಮೈನ್ ಬೌಲರ್​ಗಳಿಗೆ ಬೌಲಿಂಗ್ ನೀಡಿದೆ. ಮುಂದಿನ ಪಂದ್ಯದಲ್ಲಿ ಅವರು ಖಂಡಿತ ಪೂರ್ಣ ಓವರ್ ಮಾಡಲಿದ್ದಾರೆ,” ಎಂದು ಹಾರ್ದಿಕ್ ಹೇಳಿದ್ದಾರೆ.

Hardik Pandya: ಐರ್ಲೆಂಡ್ ವಿರುದ್ಧ ಕೇವಲ ಒಂದು ವಿಕೆಟ್ ಕಿತ್ತು ಇತಿಹಾಸ ನಿರ್ಮಿಸಿದ ಹಾರ್ದಿಕ್ ಪಾಂಡ್ಯ

ಇದನ್ನೂ ಓದಿ
IND vs IRE: ಕೋಚ್ ಲಕ್ಷ್ಮಣ್ ಮಾಡಿದ ಮಾಸ್ಟರ್ ಪ್ಲಾನ್​ಗೆ ಮಕಾಡೆ ಮಲಗಿದ ಐರ್ಲೆಂಡ್: ಏನದು ಗೊತ್ತೇ?
Umran Malik: ಭಾರತದ ಪರ ಆಡಿದ ಜಮ್ಮು-ಕಾಶ್ಮೀರದ 2ನೇ ಆಟಗಾರ ಉಮ್ರಾನ್ ಮಲಿಕ್: ಹಾಗಿದ್ರೆ ಮೊದಲಿಗ ಯಾರು?
India vs Ireland 1st T20 Playing 11: ಮೊದಲ ಟಿ20 ಪಂದ್ಯಕ್ಕೆ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
IND vs IRE: ಟೀಂ ಇಂಡಿಯಾಕ್ಕೆ ಜಮ್ಮು ಎಕ್ಸ್‌ಪ್ರೆಸ್ ಪ್ರವೇಶ; ಉಮ್ರಾನ್ ಮಲಿಕ್‌ಗೆ ಚೊಚ್ಚಲ ಅವಕಾಶ

ಇನ್ನು ಪಂದ್ಯದ ಬಗ್ಗೆ ಮಾತನಾಡಿದ ಹಾರ್ದಿಕ್, “ಗೆಲುವಿನ ಮೂಲಕ ಸರಣಿಯನ್ನು ಆರಂಭಿಸಿದ್ದು ಖುಷಿ ನೀಡಿದೆ. ನಮ್ಮ ತಂಡಕ್ಕೆ ಗೆಲುವಿನ ಆರಂಭ ತುಂಬಾ ಅಗತ್ಯವಿತ್ತು. ಇದರಿಂದ ಸಂತಸವಾಗಿದೆ. ಎದುರಾಳಿ ತಂಡದ ಬ್ಯಾಟಿಂಗ್ ಅದ್ಭುತವಾಗಿತ್ತು,” ಎಂದಿದ್ದಾರೆ. ಇದೇವೇಳೆ ಮಾತನಾಡಿದ ಯುಜ್ವೇಂದ್ರ ಚಹಲ್, “ಈರೀತಿಯ ತಂಪಾದ ವಾತಾವರಣದಲ್ಲಿ ಬ್ಯಾಟಿಂಗ್ – ಬೌಲಿಂಗ್ ಮಾಡುವುದು ತುಂಬಾ ಕಷ್ಟವಾಯಿತು. ಆದರೆ, ನಾವು ಯಾವುದೇ ವಾತಾವರಣಕ್ಕೆ ಹೊಂದಿಕೊಂಡು ಹೋಗಬೇಕು. ಹಾರ್ದಿಕ್ ನನಗೆ ಹೇಗೆಬೇಕೋ ಹಾಗೆ ಬೌಲಿಂಗ್ ಮಾಡಲು ಕೊಟ್ಟರು,” ಎಂದು ಹೇಳಿದರು.

12 ಓವರ್​ಗಳ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಹ್ಯಾರಿ ಟೆಕ್ಟರ್‌ ಅವರು ಬಾರಿಸಿದ ಅರ್ಧಶತಕ ತಂಡಕ್ಕೆ ನೆರವಾಯಿತು. ಏಕಾಂಗಿ ಹೋರಾಟ ನಡೆಸಿದ ಟೆಕ್ಟರ್‌ 33 ಎಸೆತಗಳಲ್ಲಿ 6 ಫೋರ್‌ ಮತ್ತು 3 ಸಿಕ್ಸರ್‌ಗಳನ್ನು ಒಳಗೊಂಡ ಅಜೇಯ 64 ರನ್‌ಗಳ ಕೊಡುಗೆ ಕೊಟ್ಟರು. ಪರಿಣಾಮ ಐರ್ಲೆಂಡ್ 12 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 108 ರನ್‌ಗಳ ಸವಾಲಿನ ಮೊತ್ತವನ್ನೇ ದಾಖಲಿಸಿತು.

ಟಾರ್ಗೆಟ್ ಬೆನ್ನಟ್ಟಿ ಭಾರತ ಸ್ಫೋಟಕ ಆರಂಭ ಪಡೆದುಕೊಂಡಿತು. ಇಶಾನ್ ಕಿಶನ್ ಜೊತೆ ಆಲ್‌ರೌಂಡರ್‌ ದೀಪಕ್‌ ಹೂಡ ಕಣಕ್ಕಿಳಿದರು. ಇದರಿಂದ ಐರ್ಲೆಂಡ್ ಯೋಜನೆಯಲ್ಲ ತಲೆಕೆಳಗಾಯಿತು. ಹೂಡ ಎದುರಿಸಿದ 29 ಎಸೆತಗಳಲ್ಲಿ 6 ಫೋರ್ ಮತ್ತು 2 ಸಿಕ್ಸರ್‌ಗಳೊಂದಿಗೆ ಅಜೇಯ 47 ರನ್‌ ಸಿಡಿಸಿ ತಂಡವನ್ನು ಸುಲಭವಾಗಿ ಗುರಿ ಮುಟ್ಟುವಂತೆ ಮಾಡಿದರು. ಮತ್ತೊಬ್ಬ ಓಪನರ್‌ ಇಶಾನ್ ಕಿಶನ್‌ 11 ಎಸೆತಗಳಲ್ಲಿ 26 ರನ್‌ ಕೊಡುಗೆ ಸಲ್ಲಿಸಿದರೆ, ಕ್ಯಾಪ್ಟನ್‌ ಹಾರ್ದಿಕ್ ಪಾಂಡ್ಯ 12 ಎಸೆತಗಳಲ್ಲಿ 24 ರನ್‌ ಸಿಡಿಸಿದರು. ಭಾರತ 9.2 ಓವರ್​ನಲ್ಲೇ ಗೆಲುವು ಸಾಧಿಸಿತು.

India vs Leicestershire: ವಿರಾಟ್ ಕೊಹ್ಲಿ, ಪಂತ್ ಮಿಂಚಿನ ಪ್ರದರ್ಶನ: ಅಭ್ಯಾಸ ಪಂದ್ಯ ಡ್ರಾನಲ್ಲಿ ಅಂತ್ಯ

Published On - 10:28 am, Mon, 27 June 22