AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

UP T20: ರಿಝ್ವಿ ಧಮಾಕಾ: ಸೂಪರ್ ಸ್ಟಾರ್ಸ್​ ತಂಡಕ್ಕೆ ರೋಚಕ ಗೆಲುವು

Sameer Rizvi: ಉತ್ತರ ಪ್ರದೇಶ ಟಿ20 ಲೀಗ್​ನಲ್ಲಿ ಸಮೀರ್ ರಿಝ್ವಿ ಅಬ್ಬರ ಶುರುವಾಗಿದೆ. ಮೊದಲ ಪಂದ್ಯದಲ್ಲೇ ಭರ್ಜರಿ ಅರ್ಧಶತಕ ಸಿಡಿಸುವ ಮೂಲಕ ರಿಝ್ವಿ ಕಾನ್ಪುರ್ ಸೂಪರ್​ ಸ್ಟಾರ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಕಳೆದ ಸೀಸನ್​ ಐಪಿಎಲ್​ನಲ್ಲಿ ಸಿಎಸ್​ಕೆ ತಂಡದ ಪರ ಕಣಕ್ಕಿಳಿದಿದ್ದ ರಿಝ್ವಿ ಈ ಬಾರಿಯ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

UP T20: ರಿಝ್ವಿ ಧಮಾಕಾ: ಸೂಪರ್ ಸ್ಟಾರ್ಸ್​ ತಂಡಕ್ಕೆ ರೋಚಕ ಗೆಲುವು
Sameer Rizvi
ಝಾಹಿರ್ ಯೂಸುಫ್
|

Updated on: Aug 27, 2024 | 10:34 AM

Share

ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಉತ್ತರ ಪ್ರದೇಶ ಟಿ20 ಲೀಗ್​ನ 3ನೇ ಪಂದ್ಯದಲ್ಲಿ ಸಮೀರ್ ರಿಝ್ವಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ಫಾಲ್ಕನ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಕಾನ್ಪುರ್ ಸೂಪರ್ ಸ್ಟಾರ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.

50 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಕಾನ್ಪುರ್ ಸೂಪರ್ ಸ್ಟಾರ್ಸ್ ತಂಡಕ್ಕೆ ನಾಯಕ ಸಮೀರ್ ರಿಝ್ವಿ ಆಸರೆಯಾಗಿ ನಿಂತರು. ಅಲ್ಲದೆ ಕೆಚ್ಚೆದೆಯ ಬ್ಯಾಟಿಂಗ್​ನೊಂದಿಗೆ ಅಬ್ಬರಿಸಿದ ಯುವ ದಾಂಡಿಗ ಲಕ್ನೋ ಫಾಲ್ಕನ್ಸ್ ಬೌಲರ್​ಗಳ ಬೆಂಡೆತ್ತಿದರು.

ಪರಿಣಾಮ ಸಮೀರ್ ರಿಝ್ವಿ ಬ್ಯಾಟ್​ನಿಂದ 6 ಭರ್ಜರಿ ಸಿಕ್ಸ್ ಹಾಗೂ 8 ಫೋರ್​ಗಳು ಮೂಡಿಬಂತು. ಈ ಮೂಲಕ 51 ಎಸೆತಗಳಲ್ಲಿ 89 ರನ್​ ಚಚ್ಚಿದರು. ರಿಝ್ವಿಯ ಈ ಭರ್ಜರಿ ಬ್ಯಾಟಿಂಗ್​ ನೆರವಿನಿಂದ ಕಾನ್ಪುರ್ ಸೂಪರ್ ಸ್ಟಾರ್ಸ್ ತಂಡವು 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 156 ರನ್ ಕಲೆಹಾಕಿತು.

ಕಾನ್ಪುರ್ ತಂಡಕ್ಕೆ ರೋಚಕ ಜಯ:

157 ರನ್​ಗಳ ಸುಲಭ ಗುರಿಯನ್ನು ಬೆನ್ನತ್ತಿದ ಲಕ್ನೋ ಫಾಲ್ಕನ್ಸ್ ಪರ ನಾಯಕ ಪ್ರಿಯಮ್ ಗರ್ಗ್ 31 ರನ್ ಬಾರಿಸಿದರೆ, ಸಮರ್ಥ್ ಸಿಂಗ್ 29 ರನ್​ಗಳ ಕಾಣಿಕೆ ನೀಡಿದರು. ಇನ್ನು ವಿಕೆಟ್ ಕೀಪರ್ ಬ್ಯಾಟರ್ ಆರಾಧ್ಯ ಯಾದವ್ 22 ರನ್ ಬಾರಿಸಿದರು.

ಆದರೆ ನಿರ್ಣಾಯಕ ಹಂತದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ಕಾನ್ಪುರ್ ಸೂಪರ್ ಸ್ಟಾರ್ಸ್ ಬೌಲರ್​ಗಳು ಮಧ್ಯಮ ಕ್ರಮಾಂಕದ ಬ್ಯಾಟರ್​ಗಳನ್ನು ಬ್ಯಾಕ್ ಟು ಬ್ಯಾಕ್ ಪೆವಿಲಿಯನ್​ಗೆ ಕಳುಹಿಸಿದರು. ಪರಿಣಾಮ ಕೊನೆಯ ಓವರ್​ನಲ್ಲಿ ಲಕ್ನೋ ಫಾಲ್ಕನ್ಸ್ ತಂಡಕ್ಕೆ 12 ರನ್​ಗಳ ಅವಶ್ಯಕತೆಯಿತ್ತು.

ಅದರಂತೆ ಕೊನೆಯ ಓವರ್​ನಲ್ಲಿ ಬೌಲಿಂಗ್ ಮಾಡಿದ ಮೊಹ್ಸಿನ್ ಖಾನ್ 1, 2, 1, 2, 2 ರನ್ ಮಾತ್ರ ಬಿಟ್ಟುಕೊಟ್ಟರು. ಅಲ್ಲದೆ ಕೊನೆಯ ಎಸೆತದಲ್ಲಿ ವಿಕೆಟ್ ಕಬಳಿಸುವ ಮೂಲಕ ಕಾನ್ಪುರ್ ಸೂಪರ್ ಸ್ಟಾರ್ಸ್ ತಂಡಕ್ಕೆ 3 ರನ್​ಗಳ ರೋಚಕ ಜಯ ತಂದುಕೊಟ್ಟರು. ಈ ಜಯದೊಂದಿಗೆ ಉತ್ತರ ಪ್ರದೇಶ ಟಿ20 ಲೀಗ್​ನಲ್ಲಿ ಕಾನ್ಪುರ್ ಸೂಪರ್ ಸ್ಟಾರ್ಸ್ ತಂಡವು ಗೆಲುವಿನ ಖಾತೆ ತೆರೆದಿದೆ.

ಲಕ್ನೋ ಫಾಲ್ಕನ್ಸ್ ತಂಡ: ಅಲಿ ಜಾಫರ್, ಕಮಿಲ್ ಖಾನ್, ಪಾರ್ಥ್ ಪಲಾವತ್, ಪ್ರಿಯಮ್ ಗರ್ಗ್ (ನಾಯಕ), ಸಮರ್ಥ್ ಸಿಂಗ್, ಸಮೀರ್ ಚೌಧರಿ, ಶುಭಾಂಗ್ ರಾಜ್, ಅಭಯ್ ಚೌಹಾಣ್, ಅಕ್ಷು ಬಾಜ್ವಾ, ಕೃತಜ್ಞ ಸಿಂಗ್, ಮೊಹಮ್ಮದ್ ಶಿಬ್ಲಿ, ನವನೀತ್, ವಿಪ್ರಜ್ ನಿಗಮ್, ಆರಾಧ್ಯ ಯಾದವ್ (ವಿಕೆಟ್-ವಿಕೆಟ್), ಉಪಾಧ್ಯಾಯ (ವಿಕೆಟ್-ಕೀಪರ್), ಪ್ರಾಂಜಲ್ ಸೈನಿ (ವಿಕೆಟ್-ಕೀಪರ್), ಅಭಿನಂದನ್ ಸಿಂಗ್, ಆದಿತ್ಯ ಕುಮಾರ್ ಸಿಂಗ್, ಅಂಕುರ್ ಚೌಹಾಣ್, ಭುವನೇಶ್ವರ್ ಕುಮಾರ್, ಹರ್ಷ್ ತ್ಯಾಗಿ, ಕಾರ್ತಿಕೇಯ ಜೈಸ್ವಾಲ್, ಕಿಶನ್ ಕುಮಾರ್ ಸಿಂಗ್, ಪರ್ವ್ ಸಿಂಗ್, ಪ್ರಶಾಂತ್ ಚೌಧರಿ.

ಇದನ್ನೂ ಓದಿ: IPL 2025: ಕುತೂಹಲ ಮೂಡಿಸಿದ ಕೆಎಲ್ ರಾಹುಲ್ ನಡೆ..!

ಕಾನ್ಪುರ್ ಸೂಪರ್‌ ಸ್ಟಾರ್ಸ್​: ಆದರ್ಶ್ ಸಿಂಗ್, ಕುಲ್ದೀಪ್ ಕುಮಾರ್, ಮುಖೇಶ್ ಕುಮಾರ್, ಓಶೋ ಮೋಹನ್, ಸಮೀರ್ ರಿಝ್ವಿ (ನಾಯಕ), ಸುಧಾಂಶು ಸೋಂಕರ್, ಸುಮಿತ್ ಅಗರ್ವಾಲ್, ಯುವರಾಜ್ ಪಾಂಡೆ, ಅಭಿಷೇಕ್ ಸಿಂಗ್ ಯಾದವ್, ಅಂಕುರ್ ಮಲಿಕ್, ಫೈಜ್ ಅಹ್ಮದ್, ಮೊಹಮ್ಮದ್ ಆಶಿಯಾನ್, ಸೌಭಾಗ್ಯ ಮಿಶ್ರಾ, ಶೌರ್ಯ ಸಿಂಗ್, ಶೋಯೆಬ್ ಸಿದ್ದಿಕಿ (ವಿಕೆಟ್-ಕೀಪರ್), ಆಕಿಬ್ ಖಾನ್, ಆಸಿಫ್ ಅಲಿ, ಮೊಹ್ಸಿನ್ ಖಾನ್, ನದೀಮ್, ಪಂಕಜ್ ಕುಮಾರ್, ರಿಷಭ್ ರಜಪೂತ್, ಶುಭಂ ಮಿಶ್ರಾ, ವಿನೀತ್ ಪನ್ವಾರ್.

ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ