
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತೀ ಕಡಿಮೆ ಎಸೆತಗಳಲ್ಲಿ 1000 ರನ್ ಪೂರೈಸಿದ ಬ್ಯಾಟರ್ ಯಾರು? ಈ ಪ್ರಶ್ನೆಗೆ ಇನ್ಮುಂದೆ ಒಂದೇ ಉತ್ತರ ವೈಭವ್ ಸೂರ್ಯವಂಶಿ. ಮುಲ್ಲನ್ಪುರ್ನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ 47 ಎಸೆತಗಳನ್ನು ಎದುರಿಸಿದ ವೈಭವ್ 96 ರನ್ ಸಿಡಿಸಿದ್ದರು.
ಈ 97 ರನ್ಗಳೊಂದಿಗೆ ವೈಭವ್ ಸೂರ್ಯವಂಶಿ ಐಪಿಎಲ್ನಲ್ಲಿ 1000 ರನ್ಗಳನ್ನು ಪೂರೈಸಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಸಾವಿರ ರನ್ ಪೂರೈಸಿದ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಅತೀ ಕಡಿಮೆ ಎಸೆತಗಳಲ್ಲಿ ಸಾವಿರ ರನ್ ಕಲೆಹಾಕಿದ ಸಾರ್ವಕಾಲಿಕ ದಾಖಲೆಯನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಆ್ಯಂಡ್ರೆ ರಸೆಲ್ ಹೆಸರಿನಲ್ಲಿತ್ತು.
ಇದೀಗ ಇವರಿಬ್ಬರನ್ಣೂ ಹಿಂದಿಕ್ಕಿ ವೈಭವ್ ಸೂರ್ಯವಂಶಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಕೇವಲ 440 ಎಸೆತಗಳಲ್ಲಿ. ಅಂದರೆ ಐಪಿಎಲ್ ಇತಿಹಾಸದಲ್ಲಿ 500 ಕ್ಕಿಂತ ಕಡಿಮೆ ಎಸೆತಗಳಲ್ಲಿ 1000 ರನ್ ಕಲೆಹಾಕಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಐಪಿಎಲ್ನಲ್ಲಿ ಅತೀ ಕಡಿಮೆ ಎಸೆತಗಳ ಮೂಲಕ 1000 ರನ್ ಪೂರೈಸಿದ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಈ ಮೂಲಕ ಕೇವಲ 23 ಇನಿಂಗ್ಸ್ಗಳಲ್ಲಿ 1029 ರನ್ ಕಲೆಹಾಕಿದ್ದಾರೆ. ಇನ್ನು 1029 ರನ್ ಕಲೆಹಾಕಲು ವೈಭವ್ ಸೂರ್ಯವಂಶಿ ತೆಗೆದುಕೊಂಡಿರುವುದು ಕೇವಲ 449 ಎಸೆತಗಳನ್ನು ಮಾತ್ರ. ಅಂದರೆ 228.95ರ ಸ್ಟ್ರೈಕ್ ರೇಟ್ನಲ್ಲಿ ಯುವ ಎಡಗೈ ದಾಂಡಿಗ ಈ ಸಾಧನೆ ಮಾಡಿದ್ದಾರೆ.
ಇದರ ಜೊತೆಗೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ 200+ ಸ್ಟ್ರೈಕ್ ರೇಟ್ನಲ್ಲಿ 700+ ರನ್ ಕಲೆಹಾಕಿದ ವಿಶೇಷ ವಿಶ್ವ ದಾಖಲೆಯನ್ನು ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ. ಅಂದರೆ ಟಿ20 ಟೂರ್ನಿಯಲ್ಲಿ ಯಾವುದೇ ಬ್ಯಾಟರ್ 200+ ಸ್ಟ್ರೈಕ್ ರೇಟ್ನಲ್ಲಿ ಈವರೆಗೆ 700 ರನ್ಗಳ ಗಡಿ ದಾಟಿರಲಿಲ್ಲ.