
ಅಂತಾರಾಷ್ಟ್ರೀಯ ಕ್ರಿಕೆಟ್‌ನ ಒತ್ತಡ ಮತ್ತು ಸವಾಲುಗಳನ್ನು ಎದುರಿಸಲು ಅಪಾರ ಅನುಭವ ಬೇಕು. ಆದರೆ, ಕ್ರಿಕೆಟ್ ಇತಿಹಾಸದಲ್ಲಿ ಕೆಲವೇ ಕೆಲವು ಅದ್ಭುತ ಪ್ರತಿಭೆಗಳು ತಮ್ಮ ಬಾಲ್ಯದಲ್ಲೇ ದೇಶವನ್ನು ಪ್ರತಿನಿಧಿಸಿ ಜಗತ್ತನ್ನು ಆಶ್ಚರ್ಯಚಕಿತಗೊಳಿಸಿದ್ದಾರೆ. ಅಂತಹ ಕಿರಿಯ ವಯಸ್ಸಿನ ಸಾಧಕರ ಪಟ್ಟಿಗೆ ಸೇರ್ಪಡೆಯಾಗಲು ಇದೀಗ ವೈಭವ್ ಸೂರ್ಯವಂಶಿ (Vaibhav Sooryavanshi) ಸಜ್ಜಾಗಿದ್ದಾರೆ.
ಅಂದರೆ ಐರ್ಲೆಂಡ್, ಇಂಗ್ಲೆಂಡ್ ಟಿ20 ಸರಣಿಗೆ ಹಾಗೂ ಏಷ್ಯನ್ ಗೇಮ್ಸ್ ಟಿ20 ಟೂರ್ನಿಗೆ ಆಯ್ಕೆ ಮಾಡಲಾದ ಟೀಮ್ ಇಂಡಿಯಾದಲ್ಲಿ ವೈಭವ್ ಸೂರ್ಯವಂಶಿ ಸ್ಥಾನ ಪಡೆದಿದ್ದಾರೆ. ಈ ಸರಣಿಗಳಲ್ಲಿ ಕಣಕ್ಕಿಳಿದರೆ ವೈಭವ್ ಸೂರ್ಯವಂಶಿ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಪಂದ್ಯವಾಡಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಸದ್ಯ ಈ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. 1989 ರಲ್ಲಿ ಸಚಿನ್ ಭಾರತದ ಪರ ಮೊದಲ ಪಂದ್ಯವಾಡುವಾಗ ಅವರ ವಯಸ್ಸು 16 ವರ್ಷ 205 ದಿನಗಳು.
ಇದೀಗ ವೈಭವ್ ಸೂರ್ಯವಂಶಿ ವಯಸ್ಸು 15 ವರ್ಷ. ಅಂದರೆ ಐರ್ಲೆಂಡ್ ಅಥವಾ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ವೈಭವ್ ಕಣಕ್ಕಿಳಿದರೆ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿಯಲಿದ್ದಾರೆ. ಇದಾಗ್ಯೂ ವೈಭವ್ ಸೂರ್ಯವಂಶಿಗೆ ವಿಶ್ವ ದಾಖಲೆ ನಿರ್ಮಿಸಲು ಸಾಧ್ಯವಾಗುವುದಿಲ್ಲ.
ಏಕೆಂದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 14 ವರ್ಷಕ್ಕೆ ಪಂದ್ಯವಾಡಿದ ಆಟಗಾರರಿದ್ದಾರೆ. ಈ ಸಾಧನೆ ಮಾಡಿದ ಮೊದಲ ಆಟಗಾರನ ಹೆಸರು ಹಸನ್ ರಾಝ.
ಪುರುಷರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕಣಕ್ಕಿಳಿದ ಕಿರಿಯ ಆಟಗಾರ ಎಂಬ ರೊಮೇನಿಯಾದ ಮೇರಿಯನ್ ಗೆರಾಸಿಮ್ ಹೆಸರಿನಲ್ಲಿದೆ.
ಅಂದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕಣಕ್ಕಿಳಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ರೊಮೇನಿಯಾದ ಮೇರಿಯನ್ ಗೆರಾಸಿಮ್ ಹೆಸರಿನಲ್ಲಿದೆ. ಈ ದಾಖಲೆಯನ್ನು ಮುರಿಯಲು ಯಾರಿಗೂ ಸಾಧ್ಯವಿಲ್ಲ.
ಇದನ್ನೂ ಓದಿ: ಇದೆಂತಾ ಅನ್ಯಾಯ… ಈ ಮೂವರ ಬದಲಿಗೆ ಆ ಮೂವರಿಗೆ ಸ್ಥಾನ..!
ಏಕೆಂದರೆ ಐಸಿಸಿ (ICC) ಈಗ ಅಂತರರಾಷ್ಟ್ರೀಯ ಕ್ರಿಕೆಟ್ ಆಡಲು ಕನಿಷ್ಠ 15 ವರ್ಷ ವಯಸ್ಸಾಗಿರಬೇಕು ಎಂಬ ನಿಯಮವನ್ನು ತಂದಿದೆ. ಹೀಗಾಗಿ, ಮೇರಿಯನ್ ಗೆರಾಸಿಮ್ ಹಾಗೂ ಹಸನ್ ರಾಝ ಹೆಸರಿನಲ್ಲಿರುವ ದಾಖಲೆಗಳು ಕ್ರಿಕೆಟ್ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯಲಿದೆ ಎನ್ನಬಹುದು.