Rishabh Pant: ವಿಶೇಷ ಉಡುಗೊರೆಯನ್ನು ಮಾಜಿ ಕೋಚ್​ಗೆ ನೀಡಿದ ಪಂತ್

| Updated By: ಝಾಹಿರ್ ಯೂಸುಫ್

Updated on: Jul 18, 2022 | 1:55 PM

Ravi Shastri: ಗೆಲುವಿನ ಶ್ರೇಯಸ್ಸನ್ನು ಬೌಲರ್​ ಗೆ ಸಲ್ಲಿಸಿದ ರಿಷಭ್ ಪಂತ್, ಪಿಚ್​ ಬ್ಯಾಟ್ ಮಾಡಲು ಉತ್ತಮವಾಗಿತ್ತು. ಇದಾಗ್ಯೂ ನಮ್ಮ ಬೌಲರ್‌ಗಳು ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದರು.

Rishabh Pant: ವಿಶೇಷ ಉಡುಗೊರೆಯನ್ನು ಮಾಜಿ ಕೋಚ್​ಗೆ ನೀಡಿದ ಪಂತ್
Rishabh Pant
Follow us on

ಮ್ಯಾಂಚೆಸ್ಟರ್‌ನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ (India vs England) ತಂಡವನ್ನು ಸೋಲಿಸಿ ಭಾರತ ತಂಡವು 2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ. ಟೀಮ್ ಇಂಡಿಯಾದ ಈ ಗೆಲುವಿನಲ್ಲಿ ರಿಷಬ್ ಪಂತ್ (Rishabh Pant) ಪ್ರಮುಖ ಪಾತ್ರ ವಹಿಸಿದ್ದರು. 125 ರನ್​ ಗಳ ಅಜೇಯ ಇನಿಂಗ್ಸ್ ಆಡಿದ್ದ ಪಂತ್ ತಂಡಕ್ಕೆ ಸುಲಭ ಜಯ ತಂದುಕೊಟ್ಟಿದ್ದರು. ಅಲ್ಲದೆ ನಿರೀಕ್ಷೆಯಂತೆ ರಿಷಭ್ ಪಂತ್ ಅವರಿಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಕೂಡ ಲಭಿಸಿದೆ. ಪ್ರಶಸ್ತಿ ಮೊತ್ತದೊಂದಿಗೆ ಶಾಂಪೇನ್ ಪಡೆದ ಬಾಟಲಿಯನ್ನು ಪಂತ್ ಡ್ರೆಸ್ಸಿಂಗ್ ರೂಮ್​ ಗೆ ತೆಗೆದುಕೊಂಡು ಹೋಗಿರಲಿಲ್ಲ ಎಂಬುದು ವಿಶೇಷ.

ಹೌದು, ತನಗೆ ಸಿಕ್ಕ ಶಾಂಪೇನ್ ಬಾಟಲ್​ ಅನ್ನು ರಿಷಭ್ ಪಂತ್ ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ಅವರಿಗೆ ನೀಡಿದ್ದಾರೆ. ಡ್ರೆಸ್ಸಿಂಗ್ ರೂಮ್​ ಗೆ ತೆರಳುವ ಮುನ್ನ ಮೈದಾನದಲ್ಲಿ ಕಾಮೇಂಟೇಟರ್ ಆಗಿ ಕಾಣಿಸಿಕೊಂಡಿದ್ದ ಶಾಸ್ತ್ರಿಯನ್ನು ಭೇಟಿ ಮಾಡಿದ ಪಂತ್ ಅವರನ್ನು ತಬ್ಬಿಕೊಂಡರು. ಅಲ್ಲದೆ ಇಬ್ಬರೂ ಸ್ವಲ್ಪ ಹೊತ್ತು ಕುಶಲೋಪರಿ ನಡೆಸಿದರು.

ಇದನ್ನೂ ಓದಿ
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್
Steve Smith: ಬರೋಬ್ಬರಿ 30 ಕೋಟಿ ಲಾಭ ಪಡೆದ ಸ್ಟೀವ್ ಸ್ಮಿತ್..!
Cricket Records: ಕ್ರಿಕೆಟ್ ಇತಿಹಾಸದ ಈ ಅದ್ಭುತ ದಾಖಲೆಗಳನ್ನು ಎಂದಿಗೂ ಮುರಿಯಲಾಗುವುದಿಲ್ಲ!
Team India: 1 ವರ್ಷದೊಳಗೆ 8 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ..!

ಆ ಬಳಿಕ ಶಾಂಪೇನ್ ಬಾಟಲಿಯನ್ನು ಶಾಸ್ತ್ರಿ ಅವರಿಗೆ ನೀಡುವ ಮೂಲಕ ರಿಷಭ್ ಪಂತ್ ತೆರಳಿದರು. ಇತ್ತ ಸ್ಟೇಡಿಯಂನಲ್ಲಿ ಕುಳಿತಿದ್ದ ಪ್ರೇಕ್ಷಕರು ಕೂಡ ಈ ಕ್ಷಣವನ್ನು ಆನಂದಿಸಿದರು. ಅಲ್ಲದೆ ಪಂತ್ ಶಾಂಪೇನ್ ಬಾಟಲಿಯನ್ನು ನೀಡುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಘಾತ ಮುಗಿಲು ಮುಟ್ಟಿತ್ತು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇನ್ನು ಈ ಪಂದ್ಯದ ಬಳಿಕ ಮಾತನಾಡಿದ ಪಂತ್, ಈ ಇನಿಂಗ್ಸ್​ ಅನ್ನು ನಾನು ನನ್ನ ಜೀವನದುದ್ದಕ್ಕೂ ನೆನಪಿಟ್ಟುಕೊಳ್ಳುತ್ತೇನೆ. ತಂಡವು ಒತ್ತಡದಲ್ಲಿರುವಾಗ ಮತ್ತು ಈ ರೀತಿಯಾಗಿ ಬ್ಯಾಟ್ ಮಾಡುವುದು ಒಳ್ಳೆಯದು. ನಾನು ಯಾವಾಗಲೂ ಬಿರುಸಿನ ಬ್ಯಾಟಿಂಗ್ ಮಾಡಬೇಕೆಂದು ಯೋಚಿಸಿದ್ದೆ. ಹೀಗಾಗಿ ಉತ್ತಮ ಇನಿಂಗ್ಸ್ ಮೂಡಿಬಂತು. ಇನ್ನು ನಾನು ಯಾವಾಗಲೂ ಇಂಗ್ಲೆಂಡ್‌ನಲ್ಲಿ ಆಡುವುದನ್ನು ಆನಂದಿಸುತ್ತೇನೆ ಎಂದು ಪಂತ್ ಹೇಳಿದರು.

ಇನ್ನು ಗೆಲುವಿನ ಶ್ರೇಯಸ್ಸನ್ನು ಬೌಲರ್​ ಗೆ ಸಲ್ಲಿಸಿದ ರಿಷಭ್ ಪಂತ್, ಪಿಚ್​ ಬ್ಯಾಟ್ ಮಾಡಲು ಉತ್ತಮವಾಗಿತ್ತು. ಇದಾಗ್ಯೂ ನಮ್ಮ ಬೌಲರ್‌ಗಳು ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದರು. ಇಂಗ್ಲೆಂಡ್ ಅನ್ನು ಕಡಿಮೆ ಸ್ಕೋರ್‌ಗೆ ನಿರ್ಬಂಧಿಸಿದ್ದರು. ಕೇವಲ ಮೂರನೇ ಪಂದ್ಯದಲ್ಲಿ ಮಾತ್ರವಲ್ಲದೆ ಸರಣಿಯುದ್ದಕ್ಕೂ ನಮ್ಮ ಬೌಲಿಂಗ್ ಉತ್ತಮವಾಗಿತ್ತು ಎಂದು ರಿಷಭ್ ಪಂತ್ ಬೌಲರ್​​ ಗಳ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

 

 

Published On - 1:55 pm, Mon, 18 July 22