AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vidhwath Kaverappa: ದೇಶೀಯ ಅಂಗಳದಲ್ಲಿ ಕನ್ನಡಿಗ ಕಾವೇರಪ್ಪನ ಕರಾಮತ್ತು

Vidhwath Kaverappa: ದುಲೀಪ್​ ಟ್ರೋಫಿ ಫೈನಲ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ದಕ್ಷಿಣ ವಲಯ ತಂಡವು ಕೇವಲ 213 ರನ್​ಗಳಿಗೆ ಆಲೌಟ್ ಆಗಿತ್ತು. ಇತ್ತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದ್ದ ಸೌತ್ ಝೋನ್​ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ದೇ ವಿಧ್ವತ್ ಕಾವೇರಪ್ಪ.

Vidhwath Kaverappa: ದೇಶೀಯ ಅಂಗಳದಲ್ಲಿ ಕನ್ನಡಿಗ ಕಾವೇರಪ್ಪನ ಕರಾಮತ್ತು
Vidhwath Kaverappa
TV9 Web
| Updated By: ಝಾಹಿರ್ ಯೂಸುಫ್|

Updated on:Jul 16, 2023 | 6:13 PM

Share

Duleep Trophy 2023: ಈ ಬಾರಿಯ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಶ್ಚಿಮ ವಲಯಕ್ಕೆ ಸೋಲುಣಿಸಿ ದಕ್ಷಿಣ ವಲಯ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಸೌತ್ ಝೋನ್ ತಂಡದ ಭರ್ಜರಿ ಗೆಲುವಿನ ಹಿಂದಿರುವುದು ಕರ್ನಾಟಕದ ಯುವ ವೇಗಿ ವಿಧ್ವತ್ ಕಾವೇರಪ್ಪ ಎಂಬುದು ವಿಶೇಷ. ಸೆಮಿಫೈನಲ್ ಹಾಗೂ ಫೈನಲ್​ನಲ್ಲಿ ಕರಾರುವಾಕ್ ದಾಳಿ ಸಂಘಟಿಸಿದ ಕಾವೇರಪ್ಪ ಉರುಳಿಸಿದ್ದು ಬರೋಬ್ಬರಿ 15 ವಿಕೆಟ್​ಗಳು.

ಈ ಬಾರಿಯ ದುಲೀಪ್ ಟ್ರೋಫಿ ನಾಕೌಟ್ ಪಂದ್ಯಗಳಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ಸೌರಭ್ ಕುಮಾರ್ ಅಗ್ರಸ್ಥಾನದಲ್ಲಿದ್ದಾರೆ. ಕೇಂದ್ರ ವಲಯ ಪರ ಕಣಕ್ಕಿಳಿದಿದ್ದ ಎಡಗೈ ಸ್ಪಿನ್ನರ್ ಸೌರಭ್ ಒಟ್ಟು 16 ವಿಕೆಟ್ ಪಡೆದಿದ್ದರು. ಆದರೆ ಇಲ್ಲಿ ಒಟ್ಟಾರೆ ಪ್ರದರ್ಶನವನ್ನು ಗಣನೆಗೆ ತೆಗೆದುಕೊಂಡರೆ ವೇಗದ ಅಸ್ತ್ರದ ಮೂಲಕ ಕಾವೇರಪ್ಪ ಕಮಾಲ್ ಮಾಡಿರುವುದು ಸ್ಪಷ್ಟವಾಗುತ್ತದೆ.

ಅಂದರೆ ಸೌರಭ್ ಕುಮಾರ್ 4 ಇನಿಂಗ್ಸ್​ಗಳಲ್ಲಿ ಒಟ್ಟು 86.2 ಓವರ್​ಗಳನ್ನು ಬೌಲ್ ಮಾಡಿದ್ದಾರೆ. ಈ ವೇಳೆ 2.99 ಎಕಾನಮಿ ರೇಟ್​ನಲ್ಲಿ ಒಟ್ಟು 258 ರನ್​ ನೀಡಿ 16 ವಿಕೆಟ್ ಕಬಳಿಸಿದ್ದಾರೆ.

ಇದೇ ವೇಳೆ ವಿಧ್ವತ್ ಕಾವೇರಪ್ಪ 4 ಇನಿಂಗ್ಸ್​ಗಳಲ್ಲಿ ಕೇವಲ 72.3 ಓವರ್ ಮಾತ್ರ ಬೌಲಿಂಗ್ ಮಾಡಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ. ಈ ವೇಳೆ ನೀಡಿರುವುದು ಕೇವಲ 179 ರನ್​ಗಳು ಮಾತ್ರ. ಅಂದರೆ ಪ್ರತಿ ಓವರ್​ಗೆ 2.47 ಎಕಾನಮಿ ರೇಟ್​ನಲ್ಲಿ ರನ್ ನೀಡಿ 15 ವಿಕೆಟ್​ಗಳನ್ನು ಉರುಳಿಸಿದ್ದಾರೆ.

ಅದರಲ್ಲೂ ದುಲೀಪ್​ ಟ್ರೋಫಿ ಫೈನಲ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ದಕ್ಷಿಣ ವಲಯ ತಂಡವು ಕೇವಲ 213 ರನ್​ಗಳಿಗೆ ಆಲೌಟ್ ಆಗಿತ್ತು. ಇತ್ತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದ್ದ ಸೌತ್ ಝೋನ್​ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ದೇ ವಿಧ್ವತ್ ಕಾವೇರಪ್ಪ. ಭರ್ಜರಿ ಬೌಲಿಂಗ್ ಸಂಘಟಿಸಿದ್ದ ಕರ್ನಾಟಕ ವೇಗಿ ಮೊದಲ ಇನಿಂಗ್ಸ್​ನಲ್ಲಿ ಪಶ್ಚಿಮ ವಲಯಕ್ಕೆ ಆಘಾತ ನೀಡಿದ್ದರು.

ಪಶ್ಚಿಮ ವಲಯ ತಂಡದ ಪರ ಕಣಕ್ಕಿಳಿದಿದ್ದ ಅನುಭವಿ ಬ್ಯಾಟರ್​ಗಳಾದ ಚೇತೇಶ್ವರ ಪೂಜಾರ, ಸೂರ್ಯಕುಮಾರ್ ಯಾದವ್, ಸರ್ಫರಾಝ್ ಖಾನ್, ಅತಿತ್ ಶೇತ್ ಅವರನ್ನು ಕ್ರೀಸ್ ಕಚ್ಚಿ ನಿಲ್ಲುವ ಮುನ್ನವೇ ಕಾವೇರಪ್ಪ ಪೆವಿಲಿಯನ್​ಗೆ ಕಳುಹಿಸಿದ್ದರು. ಅಲ್ಲದೆ 19 ಓವರ್​ಗಳಲ್ಲಿ ಕೇವಲ 53 ರನ್​ ನೀಡಿ 7 ವಿಕೆಟ್ ಉರುಳಿಸಿ ಪಶ್ಚಿಮ ವಲಯನ್ನು ಕೇವಲ 146 ರನ್​ಗಳಿಗೆ ಆಲೌಟ್ ಮಾಡಿದ್ದರು.

ಇದರಿಂದ ದಕ್ಷಿಣ ವಲಯ ತಂಡವು ಮೊದಲ ಇನಿಂಗ್ಸ್​ನಲ್ಲಿ 98 ರನ್​ಗಳ ಮುನ್ನಡೆ ಪಡೆಯಿತು. ಅಂತಿಮವಾಗಿ ದಕ್ಷಿಣ ವಲಯ ತಂಡ ಪಂದ್ಯವನ್ನು ಗೆದ್ದಿರುವುದು ಅದೇ ಮುನ್ನಡೆ ಪಡೆದ 75 ರನ್​ಗಳಿಂದ ಎಂಬುದು ಇಲ್ಲಿ ಉಲ್ಲೇಖಾರ್ಹ. ಇತ್ತ ಎರಡು ಇನಿಂಗ್ಸ್​ ಮೂಲಕ 8 ವಿಕೆಟ್ ಉರುಳಿಸಿ ಮಿಂಚಿದ್ದ ವಿಧ್ವತ್ ಕಾವೇರಪ್ಪ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಪಂಜಾಬ್ ತಂಡದಲ್ಲಿ ಕನ್ನಡಿಗ:

24 ವರ್ಷದ ಯುವ ವೇಗಿ ವಿಧ್ವತ್ ಕಾವೇರಪ್ಪ ಇದುವರೆಗೆ ಐಪಿಎಲ್ ಆಡಿಲ್ಲ. ಆದರೆ ಐಪಿಎಲ್​ನಲ್ಲಿ ಅವಕಾಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಂದರೆ ಕಳೆದ ಬಾರಿ ನಡೆದ ಐಪಿಎಲ್ ಹರಾಜಿನಲ್ಲಿ ಕೊಡಗಿನ ಕುವರನನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ 20 ಲಕ್ಷ ರೂ. ಮೂಲಬೆಲೆಗೆ ಖರೀದಿಸಿದೆ. ಇದಾಗ್ಯೂ ಅವರಿಗೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಚಾನ್ಸ್ ಸಿಕ್ಕಿರಲಿಲ್ಲ. ಹೀಗಾಗಿ ಮುಂಬರುವ ಐಪಿಎಲ್​ನಲ್ಲಿ ಅವಕಾಶ ಸಿಗಲಿದೆಯಾ ಕಾದು ನೋಡಬೇಕಿದೆ.

ದೇಶೀಯ ಅಂಗಳದಲ್ಲಿ ಕನ್ನಡಿಗನ ಕಮಾಲ್:

ದೇಶೀಯ ಅಂಗಳದಲ್ಲಿ ಇದುವರೆಗೆ 12 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ವಿಧ್ವತ್ ಕಾವೇರಪ್ಪ ಇದುವರೆಗೆ 49 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಹಾಗೆಯೇ ಲೀಸ್ಟ್​ ಎ ಕ್ರಿಕೆಟ್​ನಲ್ಲಿ 8 ಪಂದ್ಯಗಳಿಂದ 17 ವಿಕೆಟ್ ಪಡೆದಿದ್ದಾರೆ. ಹಾಗೆಯೇ ಟಿ20 ಕ್ರಿಕೆಟ್​ನಲ್ಲಿ 8 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ಕಾವೇರಪ್ಪ 18 ವಿಕೆಟ್​ಗಳನ್ನು ಕಬಳಿಸಿ ಮಿಂಚಿದ್ದಾರೆ.

ಇದನ್ನೂ ಓದಿ: India T20 Squad: ಟೀಮ್ ಇಂಡಿಯಾದಲ್ಲಿ ಇಬ್ಬರೇ ಆಲ್​ರೌಂಡರ್​ಗಳು..!

ಸದ್ಯ ದೇಶೀಯ ಅಂಗಳದಲ್ಲಿ ಕರಾರುವಾಕ್ ದಾಳಿ ಮುಂದೆ ಸಂಚಲನ ಸೃಷ್ಟಿಸಿರುವ ವಿಧ್ವತ್ ಕಾವೇರಪ್ಪ ಆಯ್ಕೆಗಾರರ ಗಮನ ಸೆಳೆಯುವಲ್ಲಿಯೂ ಯಶಸ್ವಿಯಾಗುತ್ತಿದ್ದಾರೆ. ಹೀಗಾಗಿ ಆದಷ್ಟು ಬೇಗನೆ ಟೀಮ್ ಇಂಡಿಯಾ ಪರ ಕಣಕ್ಕಿಳಿಯುವಂತಾಗಲಿ ಎಂದು ಆಶಿಸೋಣ.

Published On - 6:08 pm, Sun, 16 July 23

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ