Suryakumar Yadav: ಸ್ಫೋಟಕ ಬ್ಯಾಟಿಂಗ್ ನಡೆಸಿದ ಸೂರ್ಯಕುಮಾರ್​ಗೆ ವಿರಾಟ್ ಕೊಹ್ಲಿ ಏನು ಮಾಡಿದ್ರು ನೋಡಿ

| Updated By: Vinay Bhat

Updated on: Sep 01, 2022 | 12:24 PM

India vs Hong Kong, Asia Cup 2022: ಹಾಂಗ್ ಕಾಂಗ್ ವಿರುದ್ಧ ಭಾರತ 192 ರನ್ ಗಳಿಸಿ ಪೆವಿಲಿಯನ್​ಗೆ ಸಾಗುತ್ತಿರುವ ವೇಳೆ ಸೂರ್ಯಕುಮಾರ್ ಅವರಿಗೆ ವಿರಾಟ್ ಕೊಹ್ಲಿ ಶಿರಬಾಗಿ ನಮಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

Suryakumar Yadav: ಸ್ಫೋಟಕ ಬ್ಯಾಟಿಂಗ್ ನಡೆಸಿದ ಸೂರ್ಯಕುಮಾರ್​ಗೆ ವಿರಾಟ್ ಕೊಹ್ಲಿ ಏನು ಮಾಡಿದ್ರು ನೋಡಿ
Suryakumar Yadav and Virat Kohli
Follow us on

ಏಷ್ಯಾಕಪ್ 2022ರ (Asia Cup 2022) ಗ್ರೂಪ್ ಎ ನಲ್ಲಿ ನಡೆದ ಪಂದ್ಯದಲ್ಲಿ ಹಾಂಗ್ ಕಾಂಗ್ ವಿರುದ್ಧ ಭಾರತ (India vs Hong Kong) ಭರ್ಜರಿ ಜಯ ಸಾಧಿಸಿ ಸೂಪರ್ 4 ಹಂತಕ್ಕೇರಿದೆ. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ರನ್ ಮಳೆಯನ್ನೇ ಸುರಿಸಿತು. ಈ ಮೈದಾನದಲ್ಲಿ ಹಿಂದಿನ ದಾಖಲೆಗಳನ್ನು ನೋಡಿದರೆ ಮೊದಲು ಬ್ಯಾಟಿಂಗ್ ಮಾಡಿದ ತಂಡ ರನ್ ಗಳಿಸಲು ಪರದಾಡಿದ್ದೇ ಹೆಚ್ಚು. ಆದರೆ, ಈ ಬಾರಿ ಎಲ್ಲವೂ ಉಲ್ಟಾ ಆಯಿತು. ಅದರಲ್ಲೂ ಸೂರ್ಯಕುಮಾರ್ ಯಾದವ್ (Suryakumar Yadav) ಹಾಂಗ್ ಕಾಂಗ್ ಬೌಲರ್​ಗಳನ್ನು ಮನಬಂದಂತೆ ದಂಡಿಸಿದರು. ಕೇವಲ 22 ಎಸೆತಗಳಲ್ಲೇ ಅರ್ಧಶತಕದ ಗಡಿ ಮುಟ್ಟಿದ ಸೂರ್ಯ ಒಟ್ಟು 26 ಎಸೆತಗಳಲ್ಲಿ ತಲಾ 6 ಫೋರ್‌ ಮತ್ತು ಸಿಕ್ಸರ್‌ಗಳೊಂದಿಗೆ ಅಜೇಯ 68 ರನ್‌ಗಳ ಕೊಡುಗೆ ಕೊಟ್ಟರು.

ಭಾರತದ ಆರಂಭ ಸ್ಫೋಟಕವಾಗಿತ್ತಾದರು ರೋಹಿತ್ ಶರ್ಮಾ ನಿರ್ಗಮನದ ಬಳಿಕ ರನ್ ವೇಗ ಕುಸಿಯಿತು. ರೋಹಿತ್‌ ಶರ್ಮಾ 13 ಎಸೆತಗಳಲ್ಲಿ 21 ರನ್ ಬಾರಿಸಿ ಔಟಾದರು. ಕೆಎಲ್ ರಾಹುಲ್ ಆಮೆಗತಿಯ ಬ್ಯಾಟಿಂಗ್‌ನಿಂದ ಭಾರತ ಮಧ್ಯಮ ಓವರ್​ನಲ್ಲಿ ರನ್‌ ಗಳಿಸಲು ಪರದಾಡಿತು. ರಾಹುಲ್ 39 ಎಸೆಗಳಲ್ಲಿ 36 ರನ್ ಗಳಿಸಿದರು. ಈ ಸಂದರ್ಭ ಕ್ರೀಸ್​ಗೆ ಬಂದ ಸೂರ್ಯಕುಮಾರ್ ಅವರು ವಿರಾಟ್ ಕೊಹ್ಲಿ ಜೊತೆಗೂಡಿ ಅಮೋಘ ಆಟವಾಡಿದರು.

ಇದನ್ನೂ ಓದಿ
IND vs HK: ಒಂದೇ ಓವರ್​ನಲ್ಲಿ 6, 6, 6, 0, 6: ಸೂರ್ಯಕುಮಾರ್ ಸ್ಫೋಟಕ ಬ್ಯಾಟಿಂಗ್​ಗೆ ದಾಖಲೆ ಪುಡಿಪುಡಿ
Asia Cup 2022: 6 ತಿಂಗಳು, 11 ಇನ್ನಿಂಗ್ಸ್​ ಬಳಿಕ ಅರ್ಧಶತಕ ಸಿಡಿಸಿ ಮಿಂಚಿದ ಕಿಂಗ್ ಕೊಹ್ಲಿ..!
Asia Cup 2022: 2 ಬೌಂಡರಿ, 1 ಸಿಕ್ಸರ್‌ ಸಿಡಿಸಿ ಟಿ20 ಕ್ರಿಕೆಟ್​ನಲ್ಲಿ ವಿಶ್ವ ದಾಖಲೆ ಬರೆದ ಹಿಟ್​ಮ್ಯಾನ್..!
PCB: ಖರೀದಿಸುವವರೇ ಇಲ್ಲ; ಪಾಕ್ ಕ್ರಿಕೆಟ್ ಮಂಡಳಿಗೆ ಇದೆಂಥಾ ಅವಮಾನ..!

ಸಿಕ್ಸರ್‌ಗಳ ಸುರಿಮಳೆಗೈದ ಸೂರ್ಯಕುಮಾರ್ ಅಬ್ಬರದ ಆಟ ಪ್ರದರ್ಶಿಸಿದರು. ಕೊನೆಯವರೆಗೂ ಅಜೇಯವಾಗಿ ಉಳಿದ ಈ ಜೋಡಿ 98 ರನ್​ಗಳ ಕಾಣಿಕೆ ನೀಡಿತು. ಇದರಲ್ಲಿ ಸೂರ್ಯಕುಮಾರ್ ಪಾಲೇ ಹೆಚ್ಚು. ಕೊನೆಯ 20ನೇ ಓವರ್​ನಲ್ಲಂತು ಸೂರ್ಯ ಬರೋಬ್ಬರಿ 26 ರನ್ ಕಲೆಹಾಕಿದರು. ಈ ಓವರ್​ನಲ್ಲಿ ಬರೋಬ್ಬರಿ 4 ಸಿಕ್ಸರ್ ಸಿಡಿಸಿ ಪರಾಕ್ರಮ ಮೆರೆದರು. 20 ಓವರ್ ಪೂರ್ಣಗೊಂಡು ಭಾರತ 192 ರನ್ ಗಳಿಸಿ ಪೆವಿಲಿಯನ್​ಗೆ ಸಾಗುತ್ತಿರುವ ವೇಳೆ ಸೂರ್ಯ ಅವರಿಗೆ ವಿರಾಟ್ ಕೊಹ್ಲಿ ಶಿರಬಾಗಿ ನಮಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

 

ಟಾರ್ಗೆಟ್ ಬೆನ್ನತ್ತಿದ್ದ ಹಾಂಗ್ ಕಾಂಗ್ ತಂಡ ಕೂಡ ಸ್ಪೋಟಕ ಆರಂಭ ಪಡೆದುಕೊಳ್ಳುವ ಜೊತೆ ವಿಕೆಟ್ ಕಳೆದುಕೊಂಡಿತು. ನಾಯಕ ನಿಜಕತ್ ಖಾನ್ 10 ರನ್ ಗಳಿಸಿದ್ದಾಗ ಜಡೇಜಾ ಅವರ ರನೌಟ್​ಗೆ ಬಲಿಯಾದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ ಬಾಬರ್‌ ಹಯಾತ್‌, 33 ಎಸೆತಗಳಲ್ಲಿ 3 ಫೋರ್‌ ಮತ್ತು 2 ಸಿಕ್ಸರ್‌ನೊಂದಿಗೆ 41 ರನ್‌ ಬಾರಿಸಿದರೂ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಹಾಂಗ್ ಕಾಂಗ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 152 ರನ್‌ ಗಳಿಸಿತಷ್ಟೆ.

 

ಈ ಮೂಲಕ ಟೀಮ್ ಇಂಡಿಯಾ 40 ರನ್​ಗಳ ಭರ್ಜರಿ ಗೆಲುವು ಕಂಡಿತು. ಭಾರತ ಪರ ಭುವನೇಶ್ವರ್‌ ಕುಮಾರ್‌, ರವೀಂದ್ರ ಜಡೇಜಾ, ಅರ್ಷದೀಪ್‌ ಸಿಂಗ್ ಮತ್ತು ಅವೇಶ್‌ ಖಾನ್‌ ತಲಾ 1 ವಿಕೆಟ್‌ ಪಡೆದರು. ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯಕುಮಾರ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

Published On - 9:16 am, Thu, 1 September 22