ವಿರಾಟ್ ಕೊಹ್ಲಿ (Virat Kohli) ಭಾರತ ಟೆಸ್ಟ್ ನಾಯಕತ್ವದಿಂದ ಹಠಾತ್ ಕೇಳಗಿಳಿದು ಎರಡು ದಿನಗಳಾಗುತ್ತಾ ಬರುತ್ತಿದ್ದರೂ ಈ ಸುದ್ದಿ ತಣ್ಣಗಾಗುತ್ತಿಲ್ಲ. ಕೊಹ್ಲಿ ಬಗ್ಗೆ ಪರ- ವಿರೋಧದ ಮಾತುಗಳು ಕೇಳಿಬರುತ್ತಲೇ ಇವೆ. ಕಿಂಗ್ ಕೊಹ್ಲಿಯ ಈ ನಡೆ ಇನ್ನೂ ನಿಗೂಢವಾಗಿಯೇ ಇದೆ. ಭಾರತದ ಸಕ್ಸಸ್ ಫುಲ್ ನಾಯಕ ಎಂಬ ಪಟ್ಟಕ್ಕೆ ಇವರ ದಾಖಲೆಗಳೇ ಸಾಕ್ಷಿ. ತಂಡ ಗೆದ್ದಾಗ ಅಥವಾ ಸೋತಾಗ ಅವರ ವರ್ತನೆಗಳು ಅಭಿಮಾನಿ ಬಳಗವನ್ನ ಹೆಚ್ಚು ಮಾಡಿದೆ. ಕೊಹ್ಲಿ ತನ್ನ ಆಕ್ರಮಣಶೀಲತೆಯಿಂದಲೇ ಹೆಸರಾಗಿದ್ರು ತಂಡ ಒಂದೊಂದು ವಿಕೆಟ್ ಗಳಿಸಿದಾಗಲು ಸಂಭ್ರಮಿಸಿದ ರೀತಿ ಆಟಗಾರರನ್ನು ಮತ್ತಷ್ಟು ಹುರಿದುಂಬಿಸಿತ್ತು. ಇವರ ನಾಯಕತ್ವದ ಅಡಿಯಲ್ಲಿ ಅದೆಷ್ಟೊ ಆಟಗಾರರು ಕ್ರಿಕೆಟ್ ಲೋಕಕ್ಕೆ ಕಾಲಿಟ್ಟಿದ್ದಾರೆ. ಪ್ರತಿಭಾನ್ವಿತರಿಗೆ ಕೊಹ್ಲಿ ತನ್ನ ಸ್ಥಾನವನ್ನೇ ಬಿಟ್ಟುಕೊಟ್ಟು ಮುನ್ನಡೆಸಿದ ಉದಾಹರಣೆಗಳಿವೆ. ಹಾಗಾದ್ರೆ ವಿರಾಟ್ ನಾಯಕತ್ವದ ಅಡಿಯಲ್ಲಿ ಭಾರತ (India) ಪರ ಏಕದಿನ, ಟಿ20 ಮತ್ತು ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಆಟಗಾರರು ಯಾರೆಲ್ಲ ಎಂಬುದನ್ನು ನೋಡೋಣ.
ಕೊಹ್ಲಿ ನಾಯಕತ್ವದ ಅಡಿಯಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದವರು 13 ಆಟಗಾರರು:
ಕರ್ಣ್ ಶರ್ಮಾ, ನಮನ್ ಓಜಾ, ಜಯಂತ್ ಯಾದವ್,ಕರುಣ್ ನಾಯರ್, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ರಿಷಭ್ ಪಂತ್, ಹನುಮಾ ವಿಹಾರಿ, ಪೃಥ್ವಿ ಶಾ, ಶಾರ್ದೂಲ್ ಥಾಕೂರ್, ಮಯಾಂಕ್ ಅಗರ್ವಾಲ್, ಶಹ್ಬಾಜ್ ನದೀಂ, ಅಕ್ಷರ್ ಪಟೇಲ್.
ಕೊಹ್ಲಿ ನಾಯಕತ್ವದ ಅಡಿಯಲ್ಲಿ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದವರು 19 ಆಟಗಾರರು:
ಅಂಬಟಿ ರಾಯುಡು, ಜಯ್ದೇವ್ ಉನಾದ್ಕಟ್, ಚೇತೇಶ್ವರ್ ಪೂಜಾರ, ಮೋಹಿತ್ ಶರ್ಮಾ, ಕರ್ಣ್ ಶರ್ಮಾ, ಕೇದರ್ ಜಾಧವ್, ಕುಲ್ದೀಪ್ ಯಾದವ್, ಶಾರ್ದೂಲ್ ಥಾಕೂರ್, ಸಿದ್ಧಾರ್ಥ್ ಕೌಲ್, ರಿಷಭ್ ಪಂತ್, ಮೊಹಮ್ಮದ್ ಸಿರಾಜ್, ವಿಜಯ್ ಶಂಕರ್, ಶಿವಂ ದುಬೆ, ನವ್ದೀಪ್ ಸೈನಿ, ಮಯಾಂಕ್ ಅಗರ್ವಾಲ್, ಪೃಥ್ವಿ ಶಾ, ಟಟಿ. ನಟರಾಜನ್, ಕ್ರುನಾಲ್ ಪಾಂಡ್ಯ, ಪ್ರಸಿದ್ಧ್ ಕೃಷ್ಣ.
ಕೊಹ್ಲಿ ನಾಯಕತ್ವದ ಅಡಿಯಲ್ಲಿ ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡಿದವರು 14 ಆಟಗಾರರು:
ಪರ್ವೇಜ್ ರಸೂಲ್, ರಿಷಭ್ ಪಂತ್, ಕುಲ್ದೀಪ್ ಯಾದವ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಥಾಕೂರ್, ಸಿದ್ಧಾರ್ಥ್ ಕೌಲ್, ದೀಪಕ್ ಚಹಾರ್, ಮಯಾಂಕ್ ಮಾರ್ಕಂಡೆ, ನವ್ದೀಪ್ ಸೈನಿ, ರಾಹುಲ್ ಚಹಾರ್, ಟಟಿ. ನಟಟರಾಜನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್.
ರಿಷಭ್ ಪಂತ್ ಮತ್ತು ಶಾರ್ದೂಲ್ ಥಾಕೂರ್ ಇಬ್ಬರು ಆಟಗಾರರು ಮಾತ್ರ ಕೊಹ್ಲಿ ನಾಯಕತ್ವದಡಿಯಲ್ಲಿ ಟೆಸ್ಟ್, ಏಕದಿನ ಮತ್ತು ಟಿ20 ಮೂರು ಮಾದರಿಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಆಟಗಾರರಾಗಿದ್ದಾರೆ.
2015 ರಿಂದ ನಾಯಕನಾಗಿ 68 ಟೆಸ್ಟ್ ಗಳಲ್ಲಿ, ವಿರಾಟ್ ಕೊಹ್ಲಿ ಶೇ. 58.82 ಗೆಲುವನ್ನು ಸಾಧಿಸಿದ್ದಾರೆ, ಆಸ್ಟ್ರೇಲಿಯಾದ ಸ್ಟೀವ್ ವಾ (71.92%) ಮತ್ತು ರಿಕಿ ಪಾಂಟಿಂಗ್ (62.33%) ನಂತರ ವಿರಾಟ್ ಕೊಹ್ಲಿ ಬಿಟ್ಟರೆ ಮತ್ತೊಬ್ಬ ನಾಯಕನಿಲ್ಲ. ಕೊಹ್ಲಿ ನಾಯಕತ್ವದಲ್ಲಿ ಭಾರತ 40 ಟೆಸ್ಟ್ ಗಳನ್ನು ಗೆದ್ದುಕೊಂಡಿದೆ. 17 ಮ್ಯಾಚ್ ಸೋತ್ತಿದ್ರೆ ಮತ್ತು 11 ಮ್ಯಾಚ್ ಡ್ರಾ ಆಗಿದೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ತಂಡವು ವಿದೇಶಗಳಲ್ಲಿ 16 ಟೆಸ್ಟ್ಗಳನ್ನು ಗೆದ್ದಿರುವುದು ದೊಡ್ಡ ಸಾಧನೆ.
PKL 8: ರೋಚಕ ಟೈನಲ್ಲಿ ಅಂತ್ಯಕಂಡ ತಮಿಳ್ ತಲೈವಾಸ್-ಜೈಪುರ್ ಪಿಂಕ್ ಪ್ಯಾಂಥರ್ಸ್ ಪಂದ್ಯ