Virat Kohli: ವಿರಾಟ್ ಕೊಹ್ಲಿ ಶತಕ ಸಿಡಿಸಿ ಪೆವಿಲಿಯನ್​ಗೆ ಬಂದಾಗ ರೋಹಿತ್ ಶರ್ಮಾ ಏನು ಮಾಡಿದ್ರು ನೋಡಿ

| Updated By: Vinay Bhat

Updated on: Sep 09, 2022 | 8:30 AM

India vs Afghanistan, Asia Cup 2022: 1021 ದಿನಗಳ ಬಳಿಕ ಕೊನೆಗೂ ವಿರಾಟ್ ಕೊಹ್ಲಿ ಬ್ಯಾಟ್​ನಿಂದ ಶತಕ ಮೂಡಿಬಂತು. ಇದರ ನಡುವ ಭಾರತದ ಬ್ಯಾಟಿಂಗ್ ಇನ್ನಿಂಗ್ಸ್​ ಮುಗಿಸಿ ಕೊಹ್ಲಿ ಪೆವಿಲಿಯನ್​ಗೆ ಬಂದಾಗ ರೋಹಿತ್ ಶರ್ಮಾ ಏನು ಮಾಡಿದರು ನೋಡಿ.

Virat Kohli: ವಿರಾಟ್ ಕೊಹ್ಲಿ ಶತಕ ಸಿಡಿಸಿ ಪೆವಿಲಿಯನ್​ಗೆ ಬಂದಾಗ ರೋಹಿತ್ ಶರ್ಮಾ ಏನು ಮಾಡಿದ್ರು ನೋಡಿ
Virat Kohli Century
Follow us on

ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸೆಪ್ಟಂಬರ್ 8, 2022 ತಾರೀಕರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಯಾಕೆಂದರೆ 1021 ದಿನಗಳ ಬಳಿಕ ವಿರಾಟ್ ಕೊಹ್ಲಿ (Virat Kohli) ಬ್ಯಾಟ್​ನಿಂದ ಬಂದ ಶತಕದ ದಿನವಿದು. ಹದಿನೈದನೇ ಏಷ್ಯಾಕಪ್​ನ ಅಫ್ಘಾನಿಸ್ತಾನ (India vs Afghanistan) ವಿರುದ್ಧದ ಕೊನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಕ್ಷರಶಃ ಅಬ್ಬರಿಸಿದರು. ಕಳಪೆ ಫಾರ್ಮ್, ಸಾಕಷ್ಟು ಟೀಕೆ, ಸತತ ಅಭ್ಯಾಸದ ಬಳಿಕ ಕೊಹ್ಲಿ ಬ್ಯಾಟ್​ನಿಂದ ಸೆಂಚುರಿ ಬಂದಿದ್ದು ಒಂದು ಕ್ಷಣ ಸ್ವತಃ ಅವರಿಗೇ ಸಂತಸ ವ್ಯಕ್ತಪಡಿಸಲು ಸಾಧ್ಯವಾಗದೆ ಮೈದಾನದಲ್ಲಿ ನಕ್ಕರು. ಇದರ ಜೊತೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 71ನೇ ಶತಕ ದಾಖಲಿಸುವ ಮೂಲಕ ಕೊಹ್ಲಿ ಹಲವು ದಾಖಲೆಗಳನ್ನು ಕೂಡ ನಿರ್ಮಾಣ ಮಾಡಿದರು. ಇದರ ನಡುವೆ ಭಾರತದ ಬ್ಯಾಟಿಂಗ್ ಇನ್ನಿಂಗ್ಸ್​ ಮುಗಿಸಿ ಕೊಹ್ಲಿ ಪೆವಿಲಿಯನ್​ಗೆ ಬಂದಾಗ ರೋಹಿತ್ ಶರ್ಮಾ (Rohit Sharma) ಏನು ಮಾಡಿದರು ನೋಡಿ.

ಈ ಪಂದ್ಯದಲ್ಲಿ ಅಚ್ಚರಿ ಎಂಬಂತೆ ಕೊಹ್ಲಿ ಆರಂಭಿಕನಾಗಿ ಕಣಕ್ಕಿಳಿದರು. ನಿಧಾನ ಗತಿಯಿಂದಲೇ ಇನ್ನಿಂಗ್ಸ್ ಶುರುಮಾಡಿದ ಕೊಹ್ಲಿ ಸೆಟಲ್ ಆಗುತ್ತಿದ್ದಂತೆ ತಮ್ಮ ಹಳೆಯ ಖದರ್​ಗೆ ಮರಳಿದರು. ಭರ್ಜರಿ ಬೌಂಡರಿ, ಸಿಕ್ಸರ್​ಗಳ ಮೂಲಕ ಅಫ್ಘಾನ್ ಬೌಲರ್​ಗಳ ಬೆವರಿಳಿಸಿದ ಕೊಹ್ಲಿ ಮನಬಂದಂತೆ ಬ್ಯಾಟ್ ಬೀಸಿದರು. 61 ಎಸೆತಗಳಲ್ಲಿ 12 ಬೌಂಡರಿ, 6 ಅಮೋಘ ಸಿಕ್ಸರ್ ಸಹಿತ ಅಜೇಯ 122 ರನ್ ಚಚ್ಚಿದರು. 200 ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತು.

ಇದನ್ನೂ ಓದಿ
Neeraj Chopra: ಡೈಮಂಡ್ ಲೀಗ್​ನಲ್ಲಿ ಇತಿಹಾಸ ನಿರ್ಮಿಸಿದ ಗೋಲ್ಡನ್ ಬಾಯ್: ನೀರಜ್ ಚೋಪ್ರಾ ಐತಿಹಾಸಿಕ ಸಾಧನೆ
IND vs AFG: ಕೊಹ್ಲಿಯ ಶತಕ, ಭುವಿಯ ಮಾರಕ ದಾಳಿ; ಗೆಲುವಿನೊಂದಿಗೆ ಏಷ್ಯಾಕಪ್ ಪಯಣ ಮುಗಿಸಿದ ಭಾರತ
Asia Cup 2022: ‘ನಿನ್ನೆ ಮಾತನಾಡಿದಾಗಲೇ ಅಂದುಕೊಂಡಿದ್ದೆ’; ಕೊಹ್ಲಿಯ ಶತಕದ ಸುಳಿವು ಡಿವಿಲಿಯರ್ಸ್​ಗೆ ಮುಂಚಿಯೇ ಸಿಕ್ಕಿತ್ತಾ?
Asia Cup 2022: ಅರ್ಧದಷ್ಟು ಅಫ್ಘಾನ್ ತಂಡವನ್ನು ಏಕಾಂಗಿಯಾಗಿ ಪೆವಿಲಿಯನ್​ಗಟ್ಟಿದ ಭುವನೇಶ್ವರ್..!

ಕೊಹ್ಲಿ ಸಿಕ್ಸ್ ಸಿಡಿಸಿ ಶತಕ ಬಾರಿಸುತ್ತಿದ್ದಂತೆ ಇಡೀ ಕ್ರೀಡಾಂಗಣವೇ ಎದ್ದು ನಿಂತು ಗೌರವ ಸೂಚಿಸಿತು. ಇನ್ನಿಂಗ್ಸ್​ ಮುಗಿಸಿ ಪೆವಿಲಿಯನ್​ಗೆ ಬಂದಾಗ ಬೌಂಡರಿ ಲೈನ್ ಬಳಿಕ ಭಾರತೀಯ ಆಟಗಾರರು ಕೊಹ್ಲಿಗೆ ಶುಭಾಷಯ ತಿಳಿಸಲು ಕಾದುಕುಳಿತಿದ್ದರು. ಅದರಲ್ಲೂ ನಾಯಕ ರೋಹಿತ್ ಶರ್ಮಾ ಅವರು ಕೊಹ್ಲಿ ಆಗಮಿಸುತ್ತಿದ್ದಂತೆ ನಗುತ್ತಾ ಕೈಕೊಟ್ಟು ತಬ್ಬಿಕೊಂಡು ವಿಶ್ ಮಾಡಿ ಸಂಭ್ರಮ ಹಂಚಿಕೊಂಡರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

 

ಕೊಹ್ಲಿ ದಾಖಲೆ:

ವಿರಾಟ್ ಕೊಹ್ಲಿ ಈಗ ಅತಿ ಹೆಚ್ಚು ಅಂತರರಾಷ್ಟ್ರೀಯ ಶತಕಗಳನ್ನು ಗಳಿಸಿದ ವಿಚಾರದಲ್ಲಿ ರಿಕಿ ಪಾಂಟಿಂಗ್‌ ದಾಖಲೆಯನ್ನು ಸರಿಗಟ್ಟಿದ್ದಾರೆ. ಕೊಹ್ಲಿ 522 ಇನ್ನಿಂಗ್ಸ್‌ಗಳಲ್ಲಿ 71 ಶತಕಗಳನ್ನು ಪೂರ್ಣಗೊಳಿಸಿದರೆ ಪಾಂಟಿಂಗ್ ಇದಕ್ಕಾಗಿ 668 ಇನ್ನಿಂಗ್ಸ್‌ಗಳನ್ನು ಆಡಿದ್ದರು. ಇನ್ನು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಪರ ಅತಿ ದೊಡ್ಡ ಇನ್ನಿಂಗ್ಸ್ ಆಡಿದ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ರೋಹಿತ್ ಶರ್ಮಾ ಗಳಿಸಿದ್ದ 118 ರನ್ ದಾಖಲೆಯಾಗಿತ್ತು. ಅಂತೆಯೆ ಅಂತರರಾಷ್ಟ್ರೀಯ ಟಿ20ಯಲ್ಲಿ ಶತಕ ಸಿಡಿಸಿದ ಅತಿ ಹಿರಿಯ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಿದ್ದಾರೆ.

ಈ ಶತಕ ಅನುಷ್ಕಾಗೆ ಅರ್ಪಣೆ:

ಪಂದ್ಯ ಮುಗಿದ ಬಳಿಕ ಮಾತನಾಡಿದ ವಿರಾಟ್, ನಾನು ಈ ಶತಕವನ್ನು ಅನುಷ್ಕಾ ಮತ್ತು ನನ್ನ ಮುದ್ದು ಮಗಳು ವಾಮಿಕಾಗೆ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ. ”ಇಂದು ನಾನು ಫೀಲ್ಡಿನಲ್ಲಿದ್ದರೆ ಅದಕ್ಕೆ ಅನುಷ್ಕಾ ಕಾರಣ. ನಾನು ಇಂದು ಇಲ್ಲಿ ನಿಂತಿರುವುದು ಕೇವಲ ಒಬ್ಬ ವ್ಯಕ್ತಿಯಿಂದಾಗಿ, ಆ ವ್ಯಕ್ತಿ ಬೇರ್ಯಾರು ಅಲ್ಲ, ಅವರೇ ಅನುಷ್ಕಾ. ಈ ಶತಕ ಅವರಿಗೆ ಅರ್ಪಣೆ. ಟಿ20 ಮಾದರಿಯಲ್ಲಿ ಶತಕ ಬಂದಿರುವುದು ನನಗೆ ಆಶ್ಚರ್ಯ ತಂದಿದೆ. ಈ ಶತಕಕ್ಕೆ ನನ್ನ ತಂಡ ನನಗೆ ಸಾಕಷ್ಟು ಸಹಾಯ ಮಾಡಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ನಾನು ಸಾಕಷ್ಟು ಕಲಿತಿದ್ದೇನೆ,” ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

Published On - 8:30 am, Fri, 9 September 22