Asia Cup 2022: ಅರ್ಧದಷ್ಟು ಅಫ್ಘಾನ್ ತಂಡವನ್ನು ಏಕಾಂಗಿಯಾಗಿ ಪೆವಿಲಿಯನ್​ಗಟ್ಟಿದ ಭುವನೇಶ್ವರ್..!

Asia Cup 2022: ಟೀಂ ಇಂಡಿಯಾದ ಹಿರಿಯ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಲಯಕ್ಕೆ ಮರಳಿ, ಅಫ್ಘಾನ್ ಬ್ಯಾಟಿಂಗ್ ಬೆನ್ನೇಲುವು ಮುರಿದು ಏಕಾಂಗಿಯಾಗಿ ಅರ್ಧ ತಂಡವನ್ನು ಪೆವಿಲಿಯನ್​ಗೆ ಕಳುಹಿಳಿಸಿದರು.

Asia Cup 2022: ಅರ್ಧದಷ್ಟು ಅಫ್ಘಾನ್ ತಂಡವನ್ನು ಏಕಾಂಗಿಯಾಗಿ ಪೆವಿಲಿಯನ್​ಗಟ್ಟಿದ ಭುವನೇಶ್ವರ್..!
Bhuvneshwar Kumar
Follow us
| Updated By: ಪೃಥ್ವಿಶಂಕರ

Updated on:Sep 09, 2022 | 2:43 PM

ಏಷ್ಯಾಕಪ್‌ನ (Asia Cup 2022) ಕೊನೆಯ ಪಂದ್ಯ ಟೀಂ ಇಂಡಿಯಾದ ಇಬ್ಬರು ಅನುಭವಿಗಳಿಗೆ ಅದ್ಭುತ ಪಂದ್ಯವಾಗಿ ಮಾರ್ಪಟ್ಟಿದೆ. ಮೊದಲನೆಯದಾಗಿ ವಿರಾಟ್ ಕೊಹ್ಲಿ (Virat Kohli) ಸುಮಾರು 3 ವರ್ಷಗಳಿಂದ ಇದ್ದ ಶತಕಗಳ ಬರವನ್ನು ನೀಗಿಸಿದರು. ಕೊಹ್ಲಿ ಶತಕದ ಆಧಾರದ ಮೇಲೆ ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧ 212 ರನ್‌ಗಳ ದೊಡ್ಡ ಸ್ಕೋರ್ ಗಳಿಸಿತು. ನಂತರ ಈ ಸ್ಕೋರ್ ರಕ್ಷಣೆಯಲ್ಲಿ ಟೀಂ ಇಂಡಿಯಾದ ಹಿರಿಯ ವೇಗದ ಬೌಲರ್ ಭುವನೇಶ್ವರ್ ಕುಮಾರ್ (Bhuvneshwar Kumar) ಲಯಕ್ಕೆ ಮರಳಿ, ಅಫ್ಘಾನ್ ಬ್ಯಾಟಿಂಗ್ ಬೆನ್ನೇಲುವು ಮುರಿದು ಏಕಾಂಗಿಯಾಗಿ ಅರ್ಧ ತಂಡವನ್ನು ಪೆವಿಲಿಯನ್​ಗೆ ಕಳುಹಿಳಿಸಿದರು.

ದುಬೈ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 8 ರ ಗುರುವಾರ ಸಂಜೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. ಭಾರತದ ಮಾಜಿ ನಾಯಕ 1021 ದಿನಗಳ ನಂತರ ತಮ್ಮ ಮೊದಲ ಅಂತರರಾಷ್ಟ್ರೀಯ ಶತಕವನ್ನು ಗಳಿಸಿದರು. ಇದರ ಜೊತೆಗೆ ಅವರ 71 ನೇ ಶತಕದ ನಿರೀಕ್ಷೆಯನ್ನು ಕೊಹ್ಲಿ ಕೊನೆಗೊಳಿಸಿದರು. ಕೊಹ್ಲಿಯ ಸ್ಫೋಟಕ ಬ್ಯಾಟಿಂಗ್ ನಂತರ, ಭುವನೇಶ್ವರ್ ಕುಮಾರ್ ಅವರ ಸರದಿ ಎದುರಾಯಿತು. ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧದ ಎರಡು ಸತತ ಪಂದ್ಯಗಳಲ್ಲಿ 19 ನೇ ಓವರ್‌ನಲ್ಲಿ ದುಬಾರಿಯಾಗಿದ್ದ ಭುವನೇಶ್ವರ್, ಈ ಪಂದ್ಯದಲ್ಲಿ ತಮ್ಮ ಹಳೆಯ ಲಯಕ್ಕೆ ಮರಳಿದರು.

2 ಓವರ್‌ಗಳಲ್ಲಿ ಆಟ ಅಂತ್ಯ

ಭಾರತದಿಂದ ಪಡೆದ 213 ರನ್‌ಗಳ ಗುರಿ ಅಫ್ಘಾನಿಸ್ತಾನಕ್ಕೆ ಕಷ್ಟಕರವಾಗಿತ್ತು. ಇದಕ್ಕೆ ಪೂರಕವೆಂಬಂತೆ ದಾಳಿ ಆರಂಭಿಸಿದ ಭುವನೇಶ್ವರ್ ಕುಮಾರ್ ತಮ್ಮ ಮೊದಲ ಎರಡು ಓವರ್‌ಗಳಲ್ಲಿ ಅದನ್ನು ಅಸಾಧ್ಯವಾಗಿಸಿದರು. ಈ ಎರಡು ಓವರ್​ಗಳಲ್ಲಿ ಭುವನೇಶ್ವರ್ ತಲಾ 2 ವಿಕೆಟ್ ಪಡೆದು ಅಫ್ಘಾನಿಸ್ತಾನ ಇನ್ನಿಂಗ್ಸ್​ನಲ್ಲಿ 9 ರನ್ ನೀಡಿ 4 ವಿಕೆಟ್ ಉರುಳಿಸಿದರು. ಭುವನೇಶ್ವರ್ ಅವರ ಇನ್ಸ್ವಿಂಗ್ ಮತ್ತು ಔಟ್ಸ್ವಿಂಗ್ ಬೌಲಿಂಗ್ ಅಫ್ಘಾನ್ ಬ್ಯಾಟ್ಸ್‌ಮನ್‌ಗಳಿಗೆ ಕ್ರೀಸ್‌ನಲ್ಲಿ ಉಳಿಯಲು ಕಷ್ಟಕರವಾಯಿತು.

ತಮ್ಮ ಮೂರನೇ ಓವರ್‌ ಎಸೆದ ಭುವನೇಶ್ವರ್ ಬರಿಗೈಯಲ್ಲಿ ಹಿಂತಿರುಗಬೇಕಾಯಿತು. ಆದರೆ ಅವರು ಕೊನೆಯ ಓವರ್‌ನಲ್ಲಿ ಮತ್ತೊಮ್ಮೆ ಒಂದು ವಿಕೆಟ್ ಪಡೆದರು. ಹೀಗೆ ಭುವನೇಶ್ವರ್ 4 ಓವರ್‌ಗಳಲ್ಲಿ ಕೇವಲ 14 ರನ್ ನೀಡಿ 5 ವಿಕೆಟ್ ಪಡೆದರು.

ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ

ಈ ರೀತಿಯಾಗಿ, ತಮ್ಮ T20 ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಎರಡನೇ ಬಾರಿಗೆ, ಭುವನೇಶ್ವರ್ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗಳನ್ನು ಪಡೆದ ಅದ್ಭುತ ದಾಖಲೆ ಮಾಡಿದರು. ಭುವನೇಶ್ವರ್ ಅವರ ಈ ಮಾರಕ ಬೌಲಿಂಗ್‌ನ ಆಧಾರದ ಮೇಲೆ ಭಾರತ ತಂಡ ಏಳನೇ ಓವರ್‌ವರೆಗೆ ಕೇವಲ 19 ರನ್‌ಗಳಿಗೆ ಅಫ್ಘಾನಿಸ್ತಾನದ 6 ವಿಕೆಟ್‌ಗಳನ್ನು ಉರುಳಿಸಿತು. ಭುವನೇಶ್ವರ್ ಹೊರತಾಗಿ ಅರ್ಷದೀಪ್ ಸಿಂಗ್, ರವಿಚಂದ್ರನ್ ಅಶ್ವಿನ್ ಮತ್ತು ದೀಪಕ್ ಹೂಡಾ ತಲಾ 1 ವಿಕೆಟ್ ಪಡೆದರು. ಅಫ್ಘಾನಿಸ್ತಾನದ ಪರವಾಗಿ, ಇಬ್ರಾಹಿಂ ಜದ್ರಾನ್ 62 ರನ್‌ಗಳ ಅಜೇಯ ಇನ್ನಿಂಗ್ಸ್‌ಗಳನ್ನು ಆಡಿದರು.

Published On - 10:23 pm, Thu, 8 September 22

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ