Asia Cup 2022: ‘ಸಾಕಷ್ಟು ಕಲಿತಿದ್ದೇನೆ’; 71ನೇ ಶತಕ ಸಿಡಿಸಿದ ಬಳಿಕ ಕೊಹ್ಲಿ ಹೇಳಿದ್ದೇನು ಗೊತ್ತಾ?

Virat Kohli: ನಾನು ಇಂದು ಇಲ್ಲಿ ನಿಂತಿರುವುದು ಕೇವಲ ಒಬ್ಬ ವ್ಯಕ್ತಿಯಿಂದಾಗಿ, ಆ ವ್ಯಕ್ತಿ ಬೇರ್ಯಾರು ಅಲ್ಲ, ಅವರೇ ಅನುಷ್ಕಾ. ಈ ಶತಕ ಅನುಷ್ಕಾ ಮತ್ತು ನನ್ನ ಮುದ್ದು ಮಗಳು ವಾಮಿಕಾಗೆ ಅರ್ಪಿಸುತ್ತೇನೆ ಎಂದು ಕೊಹ್ಲಿ ಭಾವುಕವಾಗಿ ನುಡಿದಿದ್ದಾರೆ.

Asia Cup 2022: ‘ಸಾಕಷ್ಟು ಕಲಿತಿದ್ದೇನೆ’; 71ನೇ ಶತಕ ಸಿಡಿಸಿದ ಬಳಿಕ ಕೊಹ್ಲಿ ಹೇಳಿದ್ದೇನು ಗೊತ್ತಾ?
Virat Kohli
Follow us
| Updated By: ಪೃಥ್ವಿಶಂಕರ

Updated on:Sep 08, 2022 | 9:59 PM

ವಿರಾಟ್ ಕೊಹ್ಲಿ (Virat Kohli) ಅವರ ಶತಕಗಳ ಬರ ಕೊನೆಗೂ ಅಂತ್ಯಗೊಂಡಿದೆ, 71 ನೇ ಅಂತಾರಾಷ್ಟ್ರೀಯ ಶತಕ ಕಿಂಗ್ ಬ್ಯಾಟ್‌ನಿಂದ ಹೊರಬಂದಿದೆ. ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟ್ ಮತ್ತೊಮ್ಮೆ ರನ್ ಮಳೆ ಸುರಿಸಿದೆ. ಕೊಹ್ಲಿ ಪೂರ್ಣ 1021 ದಿನಗಳ ನಂತರ ಅಂತಾರಾಷ್ಟ್ರೀಯ ಶತಕವನ್ನು ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿರಾಟ್ ಕೊಹ್ಲಿ, ಏಷ್ಯಾಕಪ್​ನ (ASIA CUP 2022) ಅಂತಿಮ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 61 ಎಸೆತಗಳಲ್ಲಿ 122 ರನ್ ಗಳಿಸಿ, ಕೊನೆಯವರೆಗೂ ಅಜೇಯರಾಗಿ ಉಳಿದರು. ತಮ್ಮ ಶತಕದ ನಂತರ ಮಾತನಾಡಿದ ವಿರಾಟ್ ಕೊಹ್ಲಿ, ಮತ್ತೆ ರನ್ ಬಾರಿಸುವಲ್ಲಿ ಹೇಗೆ ಯಶಸ್ವಿಯಾದೆ ಎಂಬುದನ್ನು ವಿವರಿಸಿದ್ದಾರೆ.

ವಿರಾಮದ ಲಾಭ ಪಡೆದ ವಿರಾಟ್ ಕೊಹ್ಲಿ

ಇಂಗ್ಲೆಂಡ್ ಪ್ರವಾಸದ ನಂತರ ತೆಗೆದುಕೊಂಡ 6 ವಾರಗಳ ವಿರಾಮ ನನಗೆ ತುಂಬಾ ಸಹಾಯ ಮಾಡಿತು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ವಿರಾಟ್ ಕೊಹ್ಲಿ, ವಿರಾಮದ ಬಳಿಕ ಕ್ರಿಕೆಟ್​ಗೆ ವಾಪಸ್ಸಾದ ನನಗೆ ರನ್​ ಗಳಿಸಬೇಕೆಂಬ ಯಾವುದೇ ಆತುರವಿರಲಿಲ್ಲ. 6 ವಾರಗಳ ವಿರಾಮದ ನಂತರ ಇಂದು ನಾನು ತುಂಬಾ ಖುಷಿಯಾಗಿದ್ದೇನೆ. ವಿರಾಮದ ಅವದಿಯಲ್ಲಿ ಎಷ್ಟು ದಣಿದಿದ್ದೇನೆ ಎಂಬುದನ್ನು ನಾನು ಅರಿತುಕೊಂಡೆ. ಜೊತೆಗೆ ಈ ಬ್ರೇಕ್ ನನಗೆ ಮತ್ತೆ ಆಟವನ್ನು ಆನಂದಿಸಲು ಅವಕಾಶ ಮಾಡಿಕೊಟ್ಟಿತು.

ಕೆಟ್ಟ ಸಮಯದಿಂದ ಪಾಠ ಕಲಿತಿದ್ದೇನ- ವಿರಾಟ್ ಕೊಹ್ಲಿ

ಕಳೆದ ಎರಡೂವರೆ ವರ್ಷಗಳಲ್ಲಿ ಸಾಕಷ್ಟು ಕಲಿತಿದ್ದೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಕಳೆದ ಎರಡೂವರೆ ವರ್ಷಗಳಲ್ಲಿ ನಾನು ಸಾಕಷ್ಟು ಕಲಿತಿದ್ದೇನೆ. ನಾನು ಈಗ 34 ವರ್ಷಕ್ಕೆ ಕಾಲಿಡುತ್ತಿದ್ದು, ನನ್ನ ಆಚರಣೆಯ ವಿಧಾನ ಬದಲಾಗಿದೆ. ಟಿ20 ಮಾದರಿಯಲ್ಲಿ ನನ್ನ ಶತಕ ಬಂದಿರುವುದು ನನಗೆ ಆಶ್ಚರ್ಯ ತಂದಿದೆ. ಈ ಶತಕಕ್ಕೆ ನನ್ನ ತಂಡ ನನಗೆ ಸಾಕಷ್ಟು ಸಹಾಯ ಮಾಡಿದೆ.

ನನ್ನ ಈ ಯಶಸ್ಸಿಗೆ ಅನುಷ್ಕಾ ಕಾರಣ – ವಿರಾಟ್

ಇಂದು ನಾನು ಫೀಲ್ಡಿನಲ್ಲಿದ್ದರೆ ಅದಕ್ಕೆ ಅನುಷ್ಕಾ ಕಾರಣ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ವಿರಾಟ್ ಕೊಹ್ಲಿ, ‘ನಾನು ಇಂದು ಇಲ್ಲಿ ನಿಂತಿರುವುದು ಕೇವಲ ಒಬ್ಬ ವ್ಯಕ್ತಿಯಿಂದಾಗಿ, ಆ ವ್ಯಕ್ತಿ ಬೇರ್ಯಾರು ಅಲ್ಲ, ಅವರೇ ಅನುಷ್ಕಾ. ಈ ಶತಕ ಅನುಷ್ಕಾ ಮತ್ತು ನನ್ನ ಮುದ್ದು ಮಗಳು ವಾಮಿಕಾಗೆ ಅರ್ಪಿಸುತ್ತೇನೆ ಎಂದು ಕೊಹ್ಲಿ ಭಾವುಕವಾಗಿ ನುಡಿದಿದ್ದಾರೆ.

Published On - 9:54 pm, Thu, 8 September 22

Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು