IND vs SA: ಕೇಪ್ ಟೌನ್ ಟೆಸ್ಟ್​ನಲ್ಲಿ ಶತಕ ಸಿಡಿಸಿದ ಕೊಹ್ಲಿ..! ಈ ಸಾಧನೆ ಮಾಡಿದ 6ನೇ ಭಾರತೀಯ

IND vs SA:ಟೀಂ ಇಂಡಿಯಾದ ಪ್ರಸ್ತುತ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಭಾರತದ ಪರ ಗರಿಷ್ಠ 209 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಇವರಲ್ಲದೆ ವಿವಿಎಸ್ ಲಕ್ಷ್ಮಣ್, ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್ ಮತ್ತು ಮೊಹಮ್ಮದ್ ಅಜರುದ್ದೀನ್ ಕೂಡ 100ಕ್ಕೂ ಹೆಚ್ಚು ಕ್ಯಾಚ್‌ಗಳನ್ನು ಹಿಡಿದಿದ್ದಾರೆ.

IND vs SA: ಕೇಪ್ ಟೌನ್ ಟೆಸ್ಟ್​ನಲ್ಲಿ ಶತಕ ಸಿಡಿಸಿದ ಕೊಹ್ಲಿ..! ಈ ಸಾಧನೆ ಮಾಡಿದ 6ನೇ ಭಾರತೀಯ
ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ (Virat Kohli) ಕಳೆದ 2 ವರ್ಷಗಳಲ್ಲಿ ಶತಕ ಬಾರಸದೆ ಟೀಕಕಾರರಿಗೆ ಗುರಿಯಾಗಿದ್ದಾರೆ. ಆದರೆ ಕೇಪ್ ಟೌನ್ ಟೆಸ್ಟ್​ನಲ್ಲಿ ಇಂದು ವಿಶಿಷ್ಟ ಶತಕ ಸಿಡಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 100 ಕ್ಯಾಚ್‌ ಹಿಡಿದ ಸಾಧನೆ ಮಾಡಿದ್ದಾರೆ. ಈ ಪಂದ್ಯದ ಆರಂಭಕ್ಕೂ ಮುನ್ನ ಅವರು ತಮ್ಮ ಹೆಸರಿಗೆ 98 ಕ್ಯಾಚ್‌ಗಳನ್ನು ಹೊಂದಿದ್ದರು. ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ವೇಳೆ ವಿರಾಟ್ ಕೊಹ್ಲಿ ರೆಸಿ ವ್ಯಾನ್ ಡೆರ್ ಡಸ್ಸೆ ಮತ್ತು ಟೆಂಬಾ ಬವುಮಾ ಅವರ ಕ್ಯಾಚ್‌ಗಳನ್ನು ಹಿಡಿಯುವ ಮೂಲಕ ತಮ್ಮ ಕ್ಯಾಚ್‌ಗಳ ಶತಕವನ್ನು ಪೂರ್ಣಗೊಳಿಸಿದರು. ವಿರಾಟ್ ಕೊಹ್ಲಿ ಈ ಮೈಲಿಗಲ್ಲನ್ನು ತಲುಪಿದ ಆರನೇ ಭಾರತೀಯ ಆಟಗಾರರಾಗಿದ್ದಾರೆ.

ಟೀಂ ಇಂಡಿಯಾದ ಪ್ರಸ್ತುತ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಭಾರತದ ಪರ ಗರಿಷ್ಠ 209 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಇವರಲ್ಲದೆ ವಿವಿಎಸ್ ಲಕ್ಷ್ಮಣ್, ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್ ಮತ್ತು ಮೊಹಮ್ಮದ್ ಅಜರುದ್ದೀನ್ ಕೂಡ 100ಕ್ಕೂ ಹೆಚ್ಚು ಕ್ಯಾಚ್‌ಗಳನ್ನು ಹಿಡಿದಿದ್ದಾರೆ. ರಾಹುಲ್ ದ್ರಾವಿಡ್ 163 ಟೆಸ್ಟ್‌ಗಳಲ್ಲಿ 209 ಕ್ಯಾಚ್‌ಗಳನ್ನು ಪಡೆದಿದ್ದಾರೆ. ವಿವಿಎಸ್ ಲಕ್ಷ್ಮಣ್ 134 ಟೆಸ್ಟ್‌ಗಳಲ್ಲಿ 135 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಸಚಿನ್ ತೆಂಡೂಲ್ಕರ್ 200 ಟೆಸ್ಟ್‌ಗಳಲ್ಲಿ 115 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಸುನಿಲ್ ಗವಾಸ್ಕರ್ 125 ಟೆಸ್ಟ್‌ಗಳಲ್ಲಿ 108 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಮೊಹಮ್ಮದ್ ಅಜರುದ್ದೀನ್ 99 ಟೆಸ್ಟ್‌ಗಳಲ್ಲಿ 105 ಕ್ಯಾಚ್‌ಗಳನ್ನು ಪಡೆದಿದ್ದಾರೆ. ವಿರಾಟ್ 99ನೇ ಟೆಸ್ಟ್ ನಲ್ಲಿ 100 ಕ್ಯಾಚ್ ಪಡೆದ ಸಾಧನೆ ಮಾಡಿದರು.

ವಿರಾಟ್ ಎಡಬದಿಯಲ್ಲಿ ಅದ್ಭುತ ಕ್ಯಾಚ್ ಎರಡನೇ ಸ್ಲಿಪ್‌ನಲ್ಲಿ ವಿರಾಟ್ ಕೊಹ್ಲಿ 100ನೇ ಕ್ಯಾಚ್ ಪಡೆದರು. ವಿರಾಟ್ ಕೊಹ್ಲಿ ಬಲಗೈ ಆಟಗಾರ ಆದರೆ ಅವರು ತಮ್ಮ 100 ನೇ ಟೆಸ್ಟ್ ಕ್ಯಾಚ್ ಅನ್ನು ತಮ್ಮ ಎಡಭಾಗದಲ್ಲಿ ತೆಗೆದುಕೊಂಡರು. ಚೆಂಡು ಬಾವುಮಾ ಅವರ ಬ್ಯಾಟ್‌ನ ಹೊರ ಅಂಚನ್ನು ತಾಗಿತು. ಅದು ಸ್ಲಿಪ್ ಫೀಲ್ಡರ್‌ಗಳನ್ನು ತಲುಪುವ ಹೊತ್ತಿಗೆ ಅದು ತುಂಬಾ ಕೆಳಕ್ಕೆ ಹೋಯಿತು. ಆದರೆ ವಿರಾಟ್ ಕೊಹ್ಲಿ ಚೆಂಡನ್ನು ಹಿಡಿಯುವಲ್ಲಿ ಯಶಸ್ವಿಯಾದರು. ವಿರಾಟ್ ಅವರ ಈ ಕ್ಯಾಚ್‌ನಿಂದಾಗಿ ಟೀಂ ಇಂಡಿಯಾ 42 ರನ್‌ಗಳ ಬಾವುಮಾ ಮತ್ತು ಕೀಗನ್ ಪೀಟರ್ಸನ್ ಜೋಡಿಯನ್ನು ಮುರಿದಿದೆ. ಈ ಜೋಡಿ ಮುರಿದುಬಿದ್ದ ನಂತರ ಟೀಂ ಇಂಡಿಯಾ 2 ವಿಕೆಟ್‌ಗಳನ್ನು ಬೇಗನೆ ಪಡೆದುಕೊಂಡಿತು.

ಕೇಪ್ ಟೌನ್ ಟೆಸ್ಟ್‌ನಲ್ಲಿ ಭಾರತದ ನಾಯಕ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು ಬ್ಯಾಟಿಂಗ್‌ನಲ್ಲಿ 79 ರನ್‌ಗಳ ಕೊಡುಗೆ ನೀಡಿದರು. ಇದರ ಆಧಾರದ ಮೇಲೆ ಟೀಂ ಇಂಡಿಯಾ 223 ರನ್ ಗಳಿಸಿತು. ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 28 ನೇ ಅರ್ಧಶತಕವನ್ನು ಪೂರ್ಣಗೊಳಿಸಿದರು, ಆದರೂ ಮತ್ತೊಮ್ಮೆ ಅವರು ಶತಕವನ್ನು ತಲುಪಲು ಸಾಧ್ಯವಾಗಲಿಲ್ಲ.

Published On - 8:13 pm, Wed, 12 January 22

Click on your DTH Provider to Add TV9 Kannada