ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಐಪಿಎಲ್-15 ಸೀಸನ್‌ನಲ್ಲಿ ಕಪ್ ಗೆಲ್ಲುವ ಕನಸಿನೊಂದಿಗೆ ಅಖಾಡಕ್ಕಿಳಿದಿತ್ತು. ಆದರೆ ಶುಕ್ರವಾರ ಅಹಮದಾಬಾದ್‌ನಲ್ಲಿ ರಾಜಸ್ಥಾನ ವಿರುದ್ಧದ ಕ್ವಾಲಿಫೈಯರ್-2 ಪಂದ್ಯದಲ್ಲಿ ಫಾಫ್ ಸೇನೆ ಸೋಲನುಭವಿಸಿತು. ಇದರಿಂದಾಗಿ 2022ರಲ್ಲಿ RCB ಪಯಣ ಅಂತ್ಯಗೊಂಡಿತು. ಹೇಗಾದರೂ ಪ್ರಶಸ್ತಿ ಗೆಲ್ಲುತ್ತೇವೆ ಎಂದುಕೊಂಡಿದ್ದ RCB ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆಯಾಗಿದೆ. ಈ ಸಂದರ್ಭದಲ್ಲಿ ಆರ್‌ಸಿಬಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ. “ಕೆಲವೊಮ್ಮೆ ನಾವು ಯಶಸ್ವಿಯಾಗುತ್ತೇವೆ. ಕೆಲವೊಮ್ಮೆ ನಾವು ಯಶಸ್ವಿಯಾಗುವುದಿಲ್ಲ. ಆದರೆ ಅಭಿಮಾನಿಗಳು ಯಾವಾಗಲೂ ನಮಗೆ ಬೆಂಬಲ ನೀಡುತ್ತಿದ್ದಾರೆ. ಈ ಅದ್ಭುತ ಫ್ರಾಂಚೈಸ್‌ನಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ಮ್ಯಾನೇಜ್‌ಮೆಂಟ್, ಬೆಂಬಲ ಸಿಬ್ಬಂದಿ ಮತ್ತು ಅಭಿಮಾನಿಗಳಿಗೆ ನನ್ನ ಧನ್ಯವಾದಗಳು. ಮುಂದಿನ ಸೀಸನ್‌ನಲ್ಲಿ ನಿಮ್ಮನ್ನು ಭೇಟಿಯಾಉಗುತ್ತೇನೆ ಎಂದು ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆದರೆ, ಕಳೆದ 15 ವರ್ಷಗಳಲ್ಲಿ ಆರ್‌ಸಿಬಿ ಐಪಿಎಲ್ ಪ್ರಶಸ್ತಿ ಗೆದ್ದಿಲ್ಲ. ಇದರೊಂದಿಗೆ ಕೊಹ್ಲಿ ನಿರೀಕ್ಷೆ ಸರಿಯಾಗಿತ್ತು. ಐಪಿಎಲ್ ಟ್ರೋಫಿ ಗೆಲ್ಲಬೇಕೆಂಬ ಕೊಹ್ಲಿ ಆಸೆ ಇನ್ನೂ ಜೀವಂತವಾಗಿದೆ. ಬೆಂಗಳೂರು ಮುಂದಿನ ವರ್ಷ ಮತ್ತೊಮ್ಮೆ ಕಪ್‌ಗಾಗಿ ಪ್ರಯತ್ನಿಸಲಿದೆ. ಆದಾಗ್ಯೂ, ಆರ್‌ಸಿಬಿ ಸತತ ಮೂರನೇ ವರ್ಷ ಪ್ಲೇ-ಆಫ್‌ಗೆ ತಲುಪಿದೆ. ಅದೃಷ್ಟವು ಪ್ಲೇ ಆಫ್ ತಲುಪುವಲ್ಲಿ ಸಂಪೂರ್ಣ ಬೆಂಬಲವನ್ನು ನೀಡಿತು. ಆದರೆ ವಿರಾಟ್ ಕೊಹ್ಲಿಯ ದುರದೃಷ್ಟವು ತಂಡದ ಭವಿಷ್ಯವನ್ನು ನಿರ್ದೇಶಿಸಿದಂತಿದೆ. ಇದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರಿನಿಂದ ಕೇವಲ ಎರಡೇ ಅಡಿ ಅಂತರದಲ್ಲಿ ಪ್ರಶಸ್ತಿ ಕಳೆದುಕೊಂಡಿತು.
Sometimes you win, and sometimes you don’t, but the 12th Man Army, you have been fantastic, always backing us throughout our campaign. You make cricket special. The learning never stops. (1/2) pic.twitter.com/mRx4rslWFK
— Virat Kohli (@imVkohli) May 28, 2022
ಈ ಐಪಿಎಲ್ನಲ್ಲಿ ಆರ್ಸಿಬಿಗೆ ಸಿಕ್ಕ ಹಣ
ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು ಕಾಣುವ ಮೂಲಕ ಆರ್‌ಸಿಬಿ ಪಾಯಿಂಟ್ ಟೇಬಲ್ನಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು. ಈ ಮೂಲಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕಡೆಯಿಂದ ಮೂರನೇ ರನ್ನರ್ ಅಪ್ ಆರ್ಸಿಬಿಗೆ 7 ಕೋಟಿ ರೂಪಾಯಿ ನೀಡಲಾಗುತ್ತದೆ. ಅಂತೆಯೆ ಆರ್‌ಸಿಬಿ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ಸೋತ ಲಖನೌ ಸೂಪರ್ ಜೇಂಟ್ಸ್ ತಂಡಕ್ಕೆ 6.50 ಕೋಟಿ ರೂಪಾಯಿ ನೀಡಲಾಗುತ್ತಿದೆ.
ಇದನ್ನೂ ಓದಿ:IPL 2022 Final: ಐಪಿಎಲ್ ಫೈನಲ್ನಲ್ಲಿ ಇಬ್ಬರು ಕೆರಿಬಿಯನ್ ದೈತ್ಯರ ದಾಖಲೆ ಮುರಿಯುವತ್ತಾ ಬಟ್ಲರ್ ಚಿತ್ತ..!
ಬಿಸಿಸಿಐ 2018 ವರ್ಷದಿಂದ, ತಂಡಗಳಿಗೆ ನೀಡಲಾದ ಮೊತ್ತವು ನಿರಂತರವಾಗಿ ಹೆಚ್ಚುತ್ತಲೇ ಇತ್ತು. ಆದರೀಗ ಕೊರೊನಾ ಆಗಮನದ ನಂತರ ಬಹುಮಾನದ ಹಣವನ್ನು ಕಡಿತಗೊಳಿಸಲಾಗಿದೆ. ಐಪಿಎಲ್ 2020 ರ ವಿಜೇತ ಮತ್ತು ರನ್ನರ್ ಅಪ್ ತಂಡದ ಬಹುಮಾನದ ಮೊತ್ತವನ್ನು 50 ಪ್ರತಿಶತದಷ್ಟು ಕಡಿತಗೊಳಿಸಿತ್ತು. ಅಂದು ವಿಜೇತ ಮುಂಬೈ ಇಂಡಿಯನ್ಸ್‌ಗೆ 10 ಕೋಟಿ ರೂ., ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್‌ಗೆ 6.25 ಕೋಡ್ ನೀಡಲಾಗಿತ್ತು. ಪ್ಲೇಆಫ್‌ನಲ್ಲಿ ಆಡುವ ತಂಡಗಳಿಗೆ 4.375 ಕೋಟಿ ಹಂಚಿತ್ತು.