Virat Kohli: ವೀಲ್​ಚೇರ್​ನಲ್ಲಿ ಬಂದ ಪಾಕಿಸ್ತಾನ ಅಭಿಮಾನಿಯ ಕನಸು ಈಡೇರಿಸಿದ ವಿರಾಟ್ ಕೊಹ್ಲಿ

Asia Cup 2022: ವಿರಾಟ್ ಕೊಹ್ಲಿ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದರೆ ಇತ್ತ ಇವರನ್ನು ಬೇಟಿಯಾಗಲು ಪಾಕಿಸ್ತಾನದ ವಿಶೇಷ ಚೇತನ ಮಹಿಳಾ ಅಭಿಮಾನಿಯೊಬ್ಬರು ಕಾದುಕುಳಿತಿದ್ದರು. ಇದರ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

Virat Kohli: ವೀಲ್​ಚೇರ್​ನಲ್ಲಿ ಬಂದ ಪಾಕಿಸ್ತಾನ ಅಭಿಮಾನಿಯ ಕನಸು ಈಡೇರಿಸಿದ ವಿರಾಟ್ ಕೊಹ್ಲಿ
Virat Kohli Fan
Follow us
TV9 Web
| Updated By: Vinay Bhat

Updated on: Aug 26, 2022 | 10:37 AM

ಭಾರತ ಕ್ರಿಕೆಟ್ ತಂಡ ಸದ್ಯ ಯುಎಇನಲ್ಲಿ ಬೀಡುಬಿಟ್ಟಿದ್ದು ಏಷ್ಯಾಕಪ್​ 2022ಕ್ಕಾಗಿ (Asia Cup 2022) ಭರ್ಜರಿ ಅಭ್ಯಾಸ ನಡೆಸುತ್ತಿದೆ. ಆಗಸ್ಟ್ 27 ರಂದು ಈ ಟೂರ್ನಿಗೆ ಚಾಲನೆ ಸಿಗಲಿದೆ. ಭಾರತ ಭಾನುವಾರದಂದು ಪಾಕಿಸ್ತಾನ (India vs Pakistan) ವಿರುದ್ಧ ಮೊದಲ ಪಂದ್ಯವನ್ನು ಆಡಲಿದೆ. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಸೇರಿದಂತೆ ಪಾಕಿಸ್ತಾನ, ಅಫ್ಘಾನಿಸ್ತಾನ ತಂಡದ ಆಟಗಾರರು ಪ್ರ್ಯಾಕ್ಟೀಸ್ ನಡೆಸುತ್ತಿದ್ದಾರೆ. ವಿರಾಟ್ ಕೊಹ್ಲಿ (Virat Kohli) ಕೂಡ ತಡರಾತ್ರಿಯ ವರೆಗೆ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಯುಎಇನಲ್ಲಿ ಕೂಡ ಕೊಹ್ಲಿಗೆ ಸಾಕಷ್ಟು ಅಭಿಮಾನಿಗಳಿದ್ದು ಗ್ರೌಂಡ್​ನಲ್ಲಿ ಸೆಲ್ಫೀಗಾಗಿ ಕಾದು ಕುಳಿತು ಫೋಟೋ ಕ್ಲಿಕ್ಕಿಸಿದ್ದಾರೆ. ಇದರಲ್ಲಿ ಮುಖ್ಯವಾಗಿ ಪಾಕಿಸ್ತಾನದ ಅಭಿಮಾನಿಯೊಬ್ಬರ ಸುದ್ದಿ ವೈರಲ್ ಆಗುತ್ತಿದೆ.

ವಿರಾಟ್ ಕೊಹ್ಲಿ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದರೆ ಇತ್ತ ಇವರನ್ನು ಬೇಟಿಯಾಗಲು ಪಾಕಿಸ್ತಾನದ ವಿಶೇಷ ಚೇತನ ಮಹಿಳಾ ಅಭಿಮಾನಿಯೊಬ್ಬರು ಕಾದುಕುಳಿತಿದ್ದರು. ಕೊಹ್ಲಿಯನ್ನು ಬೇಟಿ ಮಾಡಿಯೇ ತೆರಳುವುದು ಎಂದು ಪಟ್ಟುಹಿಡಿದಿದ್ದ ಮಹಿಳೆಯ ಆಸೆಯನ್ನು ಕೊಹ್ಲಿ ಈಡೇರಿಸಿದರು. ಅಭ್ಯಾಸ ಮುಗಿಸಿ ತೆರಳುವ ಸಂದರ್ಭ ಕೊಹ್ಲಿ ವೀಲ್​ಚೇರ್​ನಲ್ಲಿ ಕೂತಿದ್ದ ಮಹಿಳಾ ಅಭಿಮಾನಿ ಕಡೆ ತೆರಳಿ ಮಾತನಾಡಿದ್ದಾರೆ. ಇದರಿಂದ ಖುಷಿ ಆಗಿರುವ ಅಭಿಮಾನಿ ನನ್ನ ಕನಸು ನನಸಾಯಿತು ಎಂದು ಹೇಳಿದ್ದಾರೆ.

ಕೇವಲ ಇವರು ಮಾತ್ರವಲ್ಲದೆ ಕೊಹ್ಲಿ ಜೊತೆ ಫೋಟೋ ಕ್ಲಿಕ್ಕಿಸಲು ಅನೇಕ ಅಭಿಮಾನಿಗಳು ಗ್ರೌಂಡ್​ ಬಳಿ ಬರುತ್ತಿರುವುದು ಕಂಡುಬಂದಿದೆ. ಇದರಲ್ಲಿ ಬಹುಪಾಲು ಪಾಕಿಸ್ತಾನದ ಅಭಿಮಾನಿಗಳೇ ಆಗಿದ್ದಾರೆ. ವಿಶೇಷ ಚೇತನ ಮಹಿಳೆ ಕೊಹ್ಲಿ ಬೇಟಿಗೆ ಕಾದುಕುಳಿತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಕೊಹ್ಲಿಯ ನಡೆಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದೆ.

ಇದನ್ನೂ ಓದಿ
Image
Virat Kohli: ಅದು ನನ್ನ ವೃತ್ತಿಜೀವನದ ಅತ್ಯಂತ ಖುಷಿಯ ಅವಧಿ: ಧೋನಿ ನೆನೆದು ಭಾವುಕರಾದ ವಿರಾಟ್ ಕೊಹ್ಲಿ
Image
Deepak Chahar: ಏಷ್ಯಾಕಪ್​ಗೆ ಟೀಮ್ ಇಂಡಿಯಾದಲ್ಲಿ ದಿಢೀರ್ ಬದಲಾವಣೆ: ತಂಡ ಸೇರಿದ ಹೊಸ ಆಟಗಾರ
Image
Asia Cup 2022: ಏಷ್ಯಾಕಪ್​ನಲ್ಲಿ ಸಚಿನ್, ಗಪ್ಟಿಲ್ ಜೊತೆಗೆ ಕೊಹ್ಲಿ ದಾಖಲೆಯನ್ನು ಮುರಿಯಲಿದ್ದಾರೆ ರೋಹಿತ್..!
Image
Asia Cup 2022: ಪಾಕ್ ತಂಡಕ್ಕೆ ಆಘಾತದ ಮೇಲೆ ಆಘಾತ; ತಂಡದ ಮತ್ತೊಬ್ಬ ವೇಗದ ಬೌಲರ್​ಗೆ ಇಂಜುರಿ..!

ವಿರಾಟ್ ಕೊಹ್ಲಿ ಆಗಸ್ಟ್ 28 ರಂದು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಖಾಡಕ್ಕಿಳಿದ ತಕ್ಷಣ ಕ್ರಿಕೆಟ್‌ನ ಎಲ್ಲಾ ಮೂರು ಮಾದರಿಗಳಲ್ಲಿ 100 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ವಿಶೇಷ ದಾಖಲೆ ಮಾಡಲಿದ್ದಾರೆ. ಅಲ್ಲದೆ ಸತತ ಕಳಪೆ ಫಾರ್ಮ್​ನಿಂದ ತತ್ತರಿಸುವ ಕೊಹ್ಲಿ ಯಾವರೀತಿ ಪ್ರದರ್ಶನ ತೋರುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ಧೋನಿಯನ್ನು ನೆನೆದ ಕೊಹ್ಲಿ:

ಕೊಹ್ಲಿ ತಮ್ಮ ಟ್ವಿಟರ್ ಖಾತೆಯಲ್ಲಿ ವಿಶೇಷವಾದ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ತನ್ನ ವೃತ್ತಿಜೀವನದ ಅತ್ಯಂತ ಖುಷಿಯ ಅವಧಿಯ ಬಗ್ಗೆ ವಿವರಿಸಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಜೊತೆ ಆಡಿರುವುದು ನನ್ನ ಜೀವನದಲ್ಲೇ ಅತ್ಯಂತ ಸ್ಮರಣೀಯ ಕ್ಷಣ ಎಂಬಂತೆ ಬರೆದುಕೊಂಡಿರುವ ಕೊಹ್ಲಿ, ಇದಕ್ಕೆ ಬಲದವಾದ ಕಾರಣ ಕೂಡ ನೀಡಿದ್ದಾರೆ. ”ಈ ವ್ಯಕ್ತಿಯ ವಿಶ್ವಾಸಾರ್ಹ ಉಪನಾಯಕನಾಗಿರುವುದು ನನ್ನ ವೃತ್ತಿಜೀವನದಲ್ಲಿ ಅತ್ಯಂತ ಆನಂದದಾಯಕವಾದ ಅವಧಿಯಾಗಿದೆ. ನಮ್ಮ ಪಾಲುದಾರಿಕೆ ಎಂದೆಂದಿಗೂ ವಿಶೇಷವಾಗಿರುತ್ತದೆ. 7+18,” ಎಂದು ಬರೆದುಕೊಂಡಿದ್ದಾರೆ. ಇಲ್ಲಿ ಧೋನಿಯ ಜೆರ್ಸಿ ನಂಬರ್ 7 ಮತ್ತು ಕೊಹ್ಲಿಯದ್ದು 18 ಆಗಿದೆ. ಇದನ್ನು ಕೂಡಿಸಿದಾಗ 25 ಆಗುತ್ತದೆ. ನಿನ್ನೆ ಆಗಸ್ಟ್ 25 ಆಗಿರುವುದರಿಂದ ಕೊಹ್ಲಿ ಈ ಫೋಸ್ಟ್ ಮಾಡಿದ್ದಾರೆ.

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ