Virat Kohli: ನಾಯಕತ್ವಕ್ಕಾಗಿ ನಿವೃತ್ತಿಯ ಅಸ್ತ್ರ ಪ್ರಯೋಗಿಸಿದ್ರಾ ವಿರಾಟ್ ಕೊಹ್ಲಿ?

Virat Kohli: ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡವನ್ನು 68 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಈ ವೇಳೆ ಟೀಮ್ ಇಂಡಿಯಾ 40 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಕೇವಲ 17 ಮ್ಯಾಚ್​ಗಳಲ್ಲಿ ಮಾತ್ರ ಸೋಲನುಭವಿಸಿದೆ. ಇನ್ನು 11 ಪಂದ್ಯಗಳಲ್ಲಿ ಭಾರತ ತಂಡವು ಡ್ರಾ ಸಾಧಿಸಿದೆ. ಈ ಮೂಲಕ ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ.

Virat Kohli: ನಾಯಕತ್ವಕ್ಕಾಗಿ ನಿವೃತ್ತಿಯ ಅಸ್ತ್ರ ಪ್ರಯೋಗಿಸಿದ್ರಾ ವಿರಾಟ್ ಕೊಹ್ಲಿ?
Virat Kohli

Updated on: May 10, 2025 | 12:53 PM

ಜನವರಿ 3, 2025… ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಅಂತಿಮ ಪಂದ್ಯ. ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆದ ಈ ಪಂದ್ಯದಿಂದ ಟೀಮ್ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) ಹೊರಗುಳಿದಿದ್ದರು. ಹಿಟ್​ಮ್ಯಾನ್ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಉಪನಾಯಕ ಜಸ್​ಪ್ರೀತ್ ಬುಮ್ರಾ ಮುನ್ನಡೆಸಿದರು. ರೋಹಿತ್ ಶರ್ಮಾ ಅವರ ಈ ಹೊರಗುಳಿಯುವಿಕೆಯ ಬೆನ್ನಲ್ಲೇ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಬಳಿಕ ಹಿಟ್​ಮ್ಯಾನ್ ಟೆಸ್ಟ್ ಕೆರಿಯರ್ ಕೊನೆಗೊಳ್ಳುವುದು ಸಹ ಕನ್ಫರ್ಮ್ ಆಗಿತ್ತು. ಇದರ ನಡುವೆ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್​ನಿಂದ ಹೊರಬಿದ್ದ ಸುದ್ದಿ ಎಂದರೆ ನಾಯಕತ್ವಕ್ಕಾಗಿ ತೆರೆಮರೆಯ ಪ್ರಯತ್ನ.

ಹೀಗೆ ತೆರೆಮರೆಯ ಪ್ರಯತ್ನ ನಡೆಸಿದವರು ಯಾರೆಂಬುದು ಬಹಿರಂಗವಾಗದಿದ್ದರೂ, ಮಿಸ್ಟರ್ ಫಿಕ್ಸ್-ಇಟ್ ಹೆಸರಿನಲ್ಲಿ ಆಟಗಾರನ ಹೆಸರೊಂದು ಚಾಲ್ತಿಯಲ್ಲಿತ್ತು. ಹೀಗೆ ಚಾಲ್ತಿಯಲ್ಲಿದ್ದ ಹೆಸರೇ ವಿರಾಟ್ ಕೊಹ್ಲಿ..!

ತಮ್ಮನ್ನು ‘ಮಿಸ್ಟರ್ ಫಿಕ್ಸ್-ಇಟ್’ ಎಂದು ಬಿಂಬಿಸಿಕೊಳ್ಳುತ್ತಿರುವ ಹಿರಿಯ ಆಟಗಾರ, ಭಾರತ ತಂಡದಲ್ಲಿನ ಯುವ ಆಟಗಾರರು ಇನ್ನೂ ನಾಯಕತ್ವದ ಪಾತ್ರವನ್ನು ವಹಿಸಿಕೊಳ್ಳಲು ಸಿದ್ಧರಾಗಿಲ್ಲ ಎಂದು ಮನವರಿಕೆ ಮಾಡಿದ್ದಾರೆ. ಅಲ್ಲದೆ ಮಧ್ಯಂತರ ಆಯ್ಕೆಯಾಗಿ ನಾನು ಭಾರತ ತಂಡವನ್ನು ಮುನ್ನಡೆಸಲು ಸಿದ್ಧವಿದ್ದೇನೆ ತಿಳಿಸಿದ್ದಾರೆ ಎಂದು ವರದಿಯಾಗಿತ್ತು.

ಇದನ್ನೂ ಓದಿ
ಬೋಲ್ಡ್ ಫೋಟೋಗೆ ಬೌಲ್ಡ್ ಆಗಿ ಸ್ಪಷ್ಟನೆ ನೀಡಿದ ವಿರಾಟ್ ಕೊಹ್ಲಿ
IPL 2025: ಪ್ಲೇಆಫ್​ ಆಡಲಿರುವ 4 ತಂಡಗಳನ್ನು ಹೆಸರಿಸಿದ ಅಂಬಾಟಿ ರಾಯುಡು
IPL 2025: ಕರುಣ್ ನಾಯರ್ ಡಕೌಟ್: ಈ ಬಾರಿ ಮುಂಬೈ ಇಂಡಿಯನ್ಸ್ ಚಾಂಪಿಯನ್ಸ್?
IPL ನಲ್ಲಿ ಬದಲಾವಣೆ: ರೌಂಡ್ ರಾಬಿನ್ ಸ್ವರೂಪ, ಒಂದು ತಂಡಕ್ಕೆ 18 ಪಂದ್ಯ

ಇದರ ಬೆನ್ನಲ್ಲೇ ಆ ಮಿಸ್ಟರ್ ಫಿಕ್ಸ್-ಇಟ್ ಯಾರೆಂಬ ಚರ್ಚೆಗಳು ಶುರುವಾಗಿದ್ದವು. ಈ ಚರ್ಚೆಯ ನಡುವೆ ಕೇಳಿ ಬಂದ ಹೆಸರು ವಿರಾಟ್ ಕೊಹ್ಲಿ ಅವರದ್ದು. ಈ ಹಿಂದೆ ಅನಿರೀಕ್ಷಿತವಾಗಿ ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿದಿದ್ದ ಕಿಂಗ್ ಕೊಹ್ಲಿ ಮತ್ತೆ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಳ್ಳಲು ಆಸಕ್ತಿ ತೋರಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದಾದ ಬಳಿಕ ಈ ಬಗ್ಗೆ ಯಾವುದೇ ಅಪ್​ಡೇಟ್ ಹೊರಬಿದ್ದಿರಲಿಲ್ಲ.

ಆದರೆ ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕಾಗಿ ಹಿರಿಯ ಆಟಗಾರರೊಬ್ಬರು ತೆರೆಮರೆಯ ಪ್ರಯತ್ನದಲ್ಲಿದ್ದಾರೆ ಎಂಬ ಸುದ್ದಿಯೊಂದು ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಈ ಸುದ್ದಿ ವೈರಲ್ ಆದ ಬೆನ್ನಲ್ಲೇ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿದ್ದರು.

ಅಂದರೆ ರೋಹಿತ್ ಶರ್ಮಾ ಬಳಿಕ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸಲು ಹಿರಿಯ ಆಟಗಾರರೊಬ್ಬರು ಆಸಕ್ತಿ ತೋರಿದ್ದಾರೆ. ಇದಾಗ್ಯೂ ಭವಿಷ್ಯದ ದೃಷ್ಟಿಯಿಂದ ಹಿರಿಯ ಆಟಗಾರನ ಕೋರಿಕೆಯನ್ನು ಬಿಸಿಸಿಐ ತಿರಸ್ಕರಿಸಿದೆ ಎಂದು ವರದಿಯಾಗಿತ್ತು. ಈ ತಿರಸ್ಕಾರದ ಬಳಿಕ ಅಪ್ಪಳಿಸಿದ ಸುದ್ದಿಯೇ ವಿರಾಟ್ ಕೊಹ್ಲಿಯ ಟೆಸ್ಟ್ ನಿವೃತ್ತಿ.

ಹೌದು, ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಲು ನಿರ್ಧರಿಸಿದ್ದು, ಈಗಾಗಲೇ ಬಿಸಿಸಿಐಗೆ ಈ ವಿಚಾರವನ್ನು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನು ಪುಷ್ಠೀಕರಿಸುವಂತೆ ಕೊಹ್ಲಿಯ ನಿರ್ಧಾರವನ್ನು ಮರುಪರಿಶೀಲಿಸಲು ತಿಳಿಸಿದ್ದೇವೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಂದರೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಲು ಮುಂದಾಗಿರುವುದಂತು ಸತ್ಯ. ಇದರ ಬೆನ್ನಲ್ಲೇ ಕೊಹ್ಲಿಯ ಈ ದಿಢೀರ್ ನಿರ್ಧಾರಕ್ಕೆ ಕಾರಣವೇನು? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಸದ್ಯ ಸಿಗುತ್ತಿರುವ ಉತ್ತರ ಅದೇ ಮಿಸ್ಟರ್ ಫಿಕ್ಸ್​-ಇಟ್.

ಇದನ್ನೂ ಓದಿ: IPL 2025: ಐಪಿಎಲ್ ತಡವಾದ್ರೆ, RCB ತಂಡದ ನಾಲ್ವರು ಅಲಭ್ಯ

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ವೇಳೆ ನಾಯಕತ್ವಕ್ಕಾಗಿ ಡಿಮ್ಯಾಂಡ್ ಮಾಡಿದ್ದ ಮಿಸ್ಟರ್ ಫಿಕ್ಸ್​-ಇಟ್​ಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕ್ಯಾಪ್ಟನ್ಸಿ ಸಿಗುವುದಿಲ್ಲ ಎಂದು ಖಚಿತವಾಗಿದೆ. ಹೀಗಾಗಿಯೇ ಮಿಸ್ಟರ್ ಫಿಕ್ಸ್ – ಇಟ್ ಹೆಸರಿನಿಂದ ಗುರುತಿಸಿಕೊಳ್ಳುತ್ತಿರುವ ವಿರಾಟ್ ಕೊಹ್ಲಿ ನಾಯಕತ್ವಕ್ಕಾಗಿ ನಿವೃತ್ತಿಯ ಅಸ್ತ್ರ ಪ್ರಯೋಗಿಸಿದ್ರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.